ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರತಿಯೊಬ್ಬರೂ ಧ್ಯಾನ ವನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳಲು ಪ್ರಧಾನಮಂತ್ರಿ ಕರೆ

प्रविष्टि तिथि: 21 DEC 2024 12:28PM by PIB Bengaluru

ಇಂದು ವಿಶ್ವ ಧ್ಯಾನ ದಿನ. ಈ ಸಂದರ್ಭದಲ್ಲಿ ಧ್ಯಾನವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕರೆ ನೀಡಿದ್ದಾರೆ. ಧ್ಯಾನವು ಒಬ್ಬರ ಜೀವನಕ್ಕೆ, ಹಾಗೆಯೇ ನಮ್ಮ ಸಮಾಜ ಮತ್ತು ಈ ಭೂಮಿಗೆ ಶಾಂತಿ ಮತ್ತು ಸೌಹಾರ್ದತೆಯನ್ನು ತರಲು ಪ್ರಬಲವಾದ ಮಾರ್ಗವಾಗಿದೆ ಎಂದು ಹೇಳಿದ್ದಾರೆ. 

ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು,

"ಇಂದು, ವಿಶ್ವ ಧ್ಯಾನ ದಿನದಂದು, ಈ ದೇಶದ ಪ್ರತಿಯೊಬ್ಬರೂ, ಧ್ಯಾನವನ್ನು ತಮ್ಮ ದಿನಚರಿಯ ಭಾಗವಾಗಿಸಬೇಕೆಂದು ಮತ್ತು ಅದರಿಂದ ಜೀವನದಲ್ಲಿ ಉಂಟಾಗುವ ಪರಿವರ್ತನೆಯ ಸಾಮರ್ಥ್ಯವನ್ನು ಅನುಭವಿಸುವಂತೆ ಕರೆ ನೀಡುತ್ತೇನೆ. ಧ್ಯಾನವು ಒಬ್ಬರ ಜೀವನಕ್ಕೆ ಶಾಂತಿ ಮತ್ತು ಸಾಮರಸ್ಯವನ್ನು ತರಲು ಪ್ರಬಲ ಮಾರ್ಗವಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ, ಆ್ಯಪ್‌ಗಳು ಮತ್ತು ಮಾರ್ಗದರ್ಶನ ಮಾಡುವ ವಿಡಿಯೊಗಳು ಧ್ಯಾನವನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುವ ಮೌಲ್ಯಯುತ ಸಾಧನಗಳಾಗಿವೆ.'' ಎಂದು ತಿಳಿಸಿದ್ದಾರೆ.

 

 

*****


(रिलीज़ आईडी: 2087186) आगंतुक पटल : 47
इस विज्ञप्ति को इन भाषाओं में पढ़ें: Tamil , English , Urdu , हिन्दी , Marathi , Manipuri , Assamese , Bengali , Punjabi , Gujarati , Odia , Telugu , Malayalam