ಪ್ರಧಾನ ಮಂತ್ರಿಯವರ ಕಛೇರಿ
ಕುವೈತ್‌ನಲ್ಲಿ ನಡೆದ ‘ಹಾಲಾ ಮೋದಿ’ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು
ಕುವೈತ್‌ನಲ್ಲಿರುವ ಭಾರತೀಯರ ಪ್ರೀತಿ ಮತ್ತು ವಾತ್ಸಲ್ಯವು ಅಸಾಧಾರಣವಾದುದು: ಪ್ರಧಾನಮಂತ್ರಿ
43 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಭೇಟಿ ನೀಡುತ್ತಿದ್ದಾರೆ: ಪ್ರಧಾನಮಂತ್ರಿ
ಭಾರತ ಮತ್ತು ಕುವೈತ್ ಮಧ್ಯದ ಸಂಬಂಧ ನಾಗರಿಕತೆಗಳು, ಸಮುದ್ರಗಳು ಮತ್ತು ವಾಣಿಜ್ಯಗಳದ್ದಾಗಿದೆ : ಪ್ರಧಾನಮಂತ್ರಿ
ಭಾರತ ಮತ್ತು ಕುವೈತ್ ನಿರಂತರವಾಗಿ ಪರಸ್ಪರರ ಪರವಾಗಿ ನಿಂತಿವೆ: ಪ್ರಧಾನಮಂತ್ರಿ
ವಿಶ್ವದ ನುರಿತ ಪ್ರತಿಭೆಗಳ ಬೇಡಿಕೆಯನ್ನು ಪೂರೈಸಲು ಭಾರತವು ಸುಸಜ್ಜಿತವಾಗಿದೆ: ಪ್ರಧಾನಮಂತ್ರಿ
ಭಾರತದಲ್ಲಿ, ಸ್ಮಾರ್ಟ್ ಡಿಜಿಟಲ್ ವ್ಯವಸ್ಥೆಗಳು ಐಷಾರಾಮಿ ಪಟ್ಟಿಗೆ ಸೇರುವುದಿಲ್ಲ ಹೊರತಾಗಿ, ಸಾಮಾನ್ಯ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ: ಪ್ರಧಾನಮಂತ್ರಿ
ಭವಿಷ್ಯದ ಭಾರತ ಜಾಗತಿಕ ಅಭಿವೃದ್ಧಿಯ ಕೇಂದ್ರವಾಗಲಿದೆ, ವಿಶ್ವದ ಅಭಿವೃದ್ಧಿಯ ಎಂಜಿನ್ ಆಗಲಿದೆ: ಪ್ರಧಾನಮಂತ್ರಿ
ವಿಶ್ವ ಮಿತ್ರನಾಗಿ ಭಾರತ, ಪ್ರಪಂಚದ ಉತ್ತಮ ಭವಿಷ್ಯದ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ
Posted On:
21 DEC 2024 8:09PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕುವೈತ್‌ನಲ್ಲಿರುವ ಶೇಖ್ ಸಾದ್ ಅಲ್-ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಲಾಗಿದ್ದ ‘ಹಾಲಾ ಮೋದಿ’ ವಿಶೇಷ ಕಾರ್ಯಕ್ರಮದಲ್ಲಿ ಅಲ್ಲಿನ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕುವೈತ್‌ನ ಸಮುದಾಯದ ಹೆಚ್ಚಿನ ಭಾಗವನ್ನು ಪ್ರತಿನಿಧಿಸುವ ಭಾರತೀಯ ಪ್ರಜೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನಮಂತ್ರಿ ಅವರನ್ನು ನೆರೆದ ಸಮುದಾಯವು ಅತ್ಯಂತ ಪ್ರೀತಿ ಮತ್ತು ಉತ್ಸಾಹದಿಂದ ಸ್ವಾಗತಿಸಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತ-ಕುವೈತ್ ಬಾಂಧವ್ಯವನ್ನು ಭಾರತೀಯ ಸಮುದಾಯ ಗಣನೀಯ ಪ್ರಮಾಣದಲ್ಲಿ ಶ್ರೀಮಂತಗೊಳಿಸಿದೆ, ಇದು ಉಭಯ ರಾಷ್ಟ್ರಗಳ ಮಧ್ಯೆ ಬಾಂಧವ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕುವೈತ್ ನ ಅಮೀರ್ ಅವರ ಪ್ರೇಮಪೂರ್ಣ ಆಹ್ವಾನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ ಪ್ರಧಾನಮಂತ್ರಿಯವರು, ಹಳೆಯ ಸ್ನೇಹವನ್ನು ಗಟ್ಟಿಗೊಳಿಸಲು ಹಾಗು ಮತ್ತಷ್ಟು ಬಲ ತುಂಬಲು 43 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಕುವೈತ್ ಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಕುವೈತ್‌ನ ಅಭಿವೃದ್ಧಿಗೆ ಈ ಸಮುದಾಯದ ಶ್ರಮ, ಸಾಧನೆ ಮತ್ತು ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಇದನ್ನು ಸ್ಥಳೀಯ ಸರ್ಕಾರ ಮತ್ತು ಸಮಾಜವು ಸಮರ್ಪಕವಾಗಿ ಗುರುತಿಸಿದೆ ಎಂದು ಹೇಳಿದರು. ಭಾರತೀಯ ಸಮುದಾಯದ ಕಲ್ಯಾಣಕ್ಕಾಗಿ ಕುವೈತ್‌ನ ನಾಯಕತ್ರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಕುವೈತ್ ಮತ್ತು ಗಲ್ಫ್‌ನಲ್ಲಿನ ಭಾರತೀಯ ಕಾರ್ಮಿಕರನ್ನು ಬೆಂಬಲಿಸಲು ಭಾರತದ ಬಲವಾದ ಬದ್ಧತೆಯನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಸರ್ಕಾರ ಕೈಗೊಂಡ ಇ-ಮೈಗ್ರೇಟ್ ಪೋರ್ಟಲ್‌ನಂತಹ ತಂತ್ರಜ್ಞಾನ ಆಧಾರಿತ ಉಪಕ್ರಮಗಳ ಕುರಿತು ಮಾತನಾಡಿದರು.
ಪ್ರಧಾನಮಂತ್ರಿಯವರು ಭಾರತದ ನಿಲುವನ್ನು ವಿಶ್ವಕ್ಕೆ ಸ್ನೇಹಿತ "ವಿಶ್ವಬಂಧು" ಎಂದು ವಿವರಿಸಿದರು, ಅವರು ಭಾರತದ ಕ್ಷಿಪ್ರ ಪ್ರಗತಿ ಮತ್ತು ಪರಿವರ್ತನೆಯನ್ನುಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸುಸ್ಥಿರತೆಯ ಕ್ಷೇತ್ರಗಳಲ್ಲಿನ ಪ್ರಗತಿ ಮತ್ತು ಪರಿವರ್ತನೆಯ ಬಗ್ಗೆ ವಿವರಿಸಿದರು. ಜಾಗತಿಕವಾಗಿ ೫ ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತವು ಫಿನ್‌ಟೆಕ್‌ನಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ಪ್ರಸ್ತಾಪಿಸಿದರು. ಅಲ್ಲದೆ ಸ್ಟಾರ್ಟ್-ಅಪ್ ಕ್ಷೇತ್ರದಲ್ಲಿ ಮೂರನೇ ಅತಿದೊಡ್ಡ ಜಾಗತಿಕ ಸ್ಪರ್ಧಾದಾರ ರಾಷ್ಟ್ರವಾಗಿದ್ದು ವಿಶ್ವದಲ್ಲೆ ಹೆಚ್ಚು ಡಿಜಿಟಲ್ ಸಂಪರ್ಕ ಹೊಂದಿದ ಸಮಾಜಗಳಲ್ಲಿ ಒಂದಾಗಿದೆ ಎಂದು ವಿವರಿಸಿದರು. ಆರ್ಥಿಕ ಸೇರ್ಪಡೆ, ಮಹಿಳೆಯರ ಮುಂದಾಳತ್ವದಲ್ಲಿ ಅಭಿವೃದ್ಧಿ ಮತ್ತು ಒಟ್ಟಾರೆ ಬೆಳವಣಿಗೆಯಂತಹ ಸಾಧನೆಗಳನ್ನು ಎತ್ತಿ ತೋರಿಸಿದರು. ಉಭಯ ರಾಷ್ಟ್ರಗಳ ಅಂದರೆ ವಿಕಸಿತ ಭಾರತ ಮತ್ತು ನವ ಕುವೈತ್ ನ ಆಕಾಂಕ್ಷೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಭಾರತ ಮತ್ತು ಕುವೈತ್ ಒಗ್ಗೂಡಿ ಕೆಲಸ ಮಾಡಲು ಬೃಹತ್ ಪ್ರಮಾಣದ ಅವಕಾಶಗಳಿವೆ ಎಂದು ಹೇಳಿದರು. ಭಾರತದ ಕೌಶಲ್ಯ ಸಾಮರ್ಥ್ಯ ಮತ್ತು ಆವಿಷ್ಕಾರಗಳು ಉಭಯ ರಾಷ್ಟ್ರಗಳ ಮಧ್ಯೆ ಹೊಸ ಪಾಲುದಾರಿಕೆಗೆ ನಾಂದಿ ಹಾಡಬಹುದು ಎಂದು ಹೇಳಿದರು.
2025ರ ಜನವರಿಯಲ್ಲಿ ಭಾರತದಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್ ಮತ್ತು ಮಹಾ ಕುಂಭದಲ್ಲಿ ಭಾಗವಹಿಸಲು ಪ್ರಧಾನಮಂತ್ರಿಗಳು ಅನಿವಾಸಿ ಭಾರತೀಯರಿಗೆ ಆಹ್ವಾನ ನೀಡಿದರು.
*****
(Release ID: 2086921)
Visitor Counter : 12