ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರಪತಿ ನಿಲಯದಲ್ಲಿ ಡಿಸೆಂಬರ್ 29 ರಿಂದ 15 ದಿನಗಳ ಕಾಲ ಪುಷ್ಪ ಮತ್ತು ತೋಟಗಾರಿಕೆ ಉತ್ಸವ

Posted On: 18 DEC 2024 2:25PM by PIB Bengaluru

ಸಿಕಂದರಾಬಾದ್‌ನ ಬೊಲಾರಂನಲ್ಲಿರುವ  ರಾಷ್ಟ್ರಪತಿ ನಿಲಯಂನಲ್ಲಿ ಡಿಸೆಂಬರ್ 29, 2024 ರಿಂದ 15 ದಿನಗಳ ಹೂ ಮತ್ತು ತೋಟಗಾರಿಕೆ ಉತ್ಸವ 'ಉದ್ಯಾನ ಉತ್ಸವ' ನಡೆಯಲಿದೆ. ಉದ್ಯಾನ ಉತ್ಸವ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಹೈದರಾಬಾದ್ (MANAGE) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಸಹಯೋಗದಲ್ಲಿ ಇದನ್ನು ಆಯೋಜಿಸಲಾಗಿದೆ. ಈ ಮೂಲಕ ಪ್ರಕೃತಿ, ಜನರ ಸಹಭಾಗಿತ್ವದ ಮೂಲಕ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುತ್ತದೆ. ವಿಷಯಾಧಾರಿತ ಮಳಿಗೆಗಳಿಗೆ ಭೇಟಿ ನೀಡುವ ಮೂಲಕ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಜನರು ಕೃಷಿ ಮತ್ತು ತೋಟಗಾರಿಕೆಯಲ್ಲಿನ ಆವಿಷ್ಕಾರ ಮತ್ತು ತಾಂತ್ರಿಕ ಅಭಿವೃದ್ಧಿಯ ಬಗ್ಗೆ ಅರಿವು ಮೂಡಿಸಬಹುದು.

ಇಂದು (ಡಿಸೆಂಬರ್ 18, 2024), ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಉದ್ಯಾನ ಉತ್ಸವದ ಪ್ರಾರಂಭದ ಸಿದ್ಧತೆ ಮತ್ತು ಸಂದರ್ಶಕರಿಗೆ ಒದಗಿಸುತ್ತಿರುವ  ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅವರು ಮಿಟ್ಟಿ ಕೆಫೆಯ ಉಪಾಹಾರ ಗೃಹವನ್ನು ಮತ್ತು ರಾಷ್ಟ್ರಪತಿ ನಿಲಯದ ವಿಸಿಟರ್ ಫೆಸಿಲಿಟೇಶನ್ ಸೆಂಟರ್‌ನಲ್ಲಿ ಸ್ಮರಣಿಕೆಗಳ ಮಳಿಗೆಯನ್ನು ಉದ್ಘಾಟಿಸಿದರು. ಕಾಂಪೋಸ್ಟ್ ತಯಾರಿಕೆಯ ಪ್ರಕ್ರಿಯೆಯನ್ನು ವೀಕ್ಷಿಸಲು ಅವರು ಕ್ಯಾಂಪಸ್‌ನಲ್ಲಿರುವ ಕಾಂಪೋಸ್ಟ್ ಘಟಕಕ್ಕೆ ಭೇಟಿ ನೀಡಿದರು. ತೋಟದ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಿ ಈ ಕಾಂಪೋಸ್ಟಿಂಗ್ ಘಟಕ ಮಾದರಿಯಾಗಲಿದೆ ಎಂದು ತಿಳಿಸಿದರು.  

ರಾಷ್ಟ್ರಪತಿಗಳ ದಕ್ಷಿಣ ಪ್ರವಾಸದ ಅವಧಿಯನ್ನು ಹೊರತುಪಡಿಸಿ, ರಾಷ್ಟ್ರಪತಿ ನಿಲಯವು ವರ್ಷವಿಡೀ ಸಾರ್ವಜನಿಕರಿಗೆ ತೆರೆದಿರುತ್ತದೆ. ಸಂದರ್ಶಕರು ತಮ್ಮ ಸ್ಲಾಟ್ ಅನ್ನು ಆನ್‌ಲೈನ್‌ನಲ್ಲಿ  https://rashtrapatibhavan.gov.inಗೆ ಭೇಟಿ ನೀಡಿ ಬುಕ್ ಮಾಡಬಹುದು.

 

*****


(Release ID: 2085936) Visitor Counter : 5