ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನರಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯ ಖಚಿತಪಡಿಸಲು ಮತ್ತು ಸಂಪರ್ಕದ ಶಕ್ತಿಯ ಸಮರ್ಥ ಬಳಕೆ ಮೂಲಕ ಸಮೃದ್ಧಿ ವೃದ್ಧಿಗೆ ನಮ್ಮ ಸರ್ಕಾರದಿಂದ ಹಲವು ಕ್ರಮ: ಪ್ರಧಾನಮಂತ್ರಿ

Posted On: 09 DEC 2024 10:08PM by PIB Bengaluru

ಜನರಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಖಚಿತಪಡಿಸಲು ಮತ್ತು ಸಮೃದ್ಧಿ ವೃದ್ಧಿಗೆ ಸಂಪರ್ಕದ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುನರುಚ್ಚರಿಸಿದ್ದಾರೆ. ಶೀಘ್ರದಲ್ಲೇ ಕಾರ್ಯಾಚರಣೆ ಆರಂಭ ಮಾಡಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಷ್ಟ್ರ ರಾಜಧಾನಿ ಪ್ರದೇಶ (ಎನ್ ಸಿ ಆರ್) ಮತ್ತು ಉತ್ತರ ಪ್ರದೇಶದ ನಡುವಣ ಸಂಪರ್ಕವನ್ನು ಉತ್ತೇಜಿಸಲಿದೆ ಮತ್ತು ಜೀವನವನ್ನು ಸುಲಲಿತಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವರಾದ ಶ್ರೀ ರಾಮ್ ಮೋಹನ್ ನಾಯ್ಡು ಅವರ ಪೋಸ್ಟ್‌ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:

"ಶೀಘ್ರದಲ್ಲೇ ಆರಂಭವಾಗಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎನ್ ಸಿ  ಆರ್ ಮತ್ತು ಉತ್ತರ ಪ್ರದೇಶದ ನಡುವಣ ಸಂಪರ್ಕ ಮತ್ತು 'ಸುಲಲಿತ ಜೀವನ'ವನ್ನು ವೃದ್ಧಿಸಲಿದೆ. ಜನರಿಗೆ ಉನ್ನತ ಗುಣಮಟ್ಟದ ಮೂಲಸೌಕರ್ಯವನ್ನು ಖಚಿತಪಡಿಸಲು ಮತ್ತು ಸಮೃದ್ಧಿ ವೃದ್ಧಿಗೆ ಸಂಪರ್ಕದ ಶಕ್ತಿಯ ಸಮರ್ಥ ಬಳಕೆಗೆ ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ."

 

 

*****


(Release ID: 2083624) Visitor Counter : 4