ಪ್ರಧಾನ ಮಂತ್ರಿಯವರ ಕಛೇರಿ
ದಂತಕಥೆ ರಾಜ್ ಕಪೂರ್ ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕಪೂರ್ ಕುಟುಂಬದೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಸಾಫ್ಟ್ ಪವರ್ ಎಂಬ ಪರಿಕಲ್ಪನೆ ಪ್ರಚಲಿತಕ್ಕೆ ಬರುವ ಮುನ್ನವೇ ರಾಜ್ ಕಪೂರ್ ಭಾರತದ ಸಾಫ್ಟ್ ಪವರ್ ಅನ್ನು ಪರಿಚಯಿಸಿದ್ದರು: ಪ್ರಧಾನಮಂತ್ರಿ
ಮಧ್ಯ ಏಷ್ಯಾದಲ್ಲಿ ಭಾರತೀಯ ಚಿತ್ರರಂಗಕ್ಕೆ ಅಪಾರ ಸಾಮರ್ಥ್ಯವಿದೆ, ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ, ಮಧ್ಯ ಏಷ್ಯಾದ ಹೊಸ ಪೀಳಿಗೆಯನ್ನು ತಲುಪಲು ಪ್ರಯತ್ನಗಳನ್ನು ಮಾಡಬೇಕು: ಪ್ರಧಾನಮಂತ್ರಿ
Posted On:
11 DEC 2024 8:47PM by PIB Bengaluru
ನಾವು ದಂತಕಥೆ ರಾಜ್ ಕಪೂರ್ ಅವರ 100ನೇ ವರ್ಷವನ್ನು ಆಚರಿಸುತ್ತಿರುವಾಗ, ಕಪೂರ್ ಕುಟುಂಬವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಹೃದಯಸ್ಪರ್ಶಿ ಸಂವಾದವನ್ನು ನಡೆಸಿತು. ಈ ವಿಶೇಷ ಸಭೆಯು ಭಾರತೀಯ ಚಿತ್ರರಂಗಕ್ಕೆ ರಾಜ್ ಕಪೂರ್ ಅವರ ಅಪ್ರತಿಮ ಕೊಡುಗೆ ಮತ್ತು ಅವರ ಶಾಶ್ವತ ಪರಂಪರೆಯನ್ನು ಗೌರವಿಸಿತು. ಪ್ರಧಾನಮಂತ್ರಿಯವರು ಕಪೂರ್ ಕುಟುಂಬದೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದರು.
ಶ್ರೀ ರಾಜ್ ಕಪೂರ್ ಅವರ ಪುತ್ರಿ ಶ್ರೀಮತಿ ರೀಮಾ ಕಪೂರ್ ಅವರು, ರಾಜ್ ಕಪೂರ್ ಅವರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಕಪೂರ್ ಕುಟುಂಬವನ್ನು ಭೇಟಿಯಾಗಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದರು. ಶ್ರೀಮತಿ ಕಪೂರ್ ಅವರು ರಾಜ್ ಕಪೂರ್ ಅವರ ಚಿತ್ರದ ಒಂದು ಹಾಡಿನ ಕೆಲವು ಸಾಲುಗಳನ್ನು ಹಾಡಿದರು ಮತ್ತು ಭೇಟಿಯ ಸಮಯದಲ್ಲಿ ಶ್ರೀ ಮೋದಿ ಅವರು ಕಪೂರ್ ಕುಟುಂಬಕ್ಕೆ ನೀಡಿದ ಪ್ರೀತಿ, ಗೌರವವನ್ನು ಇಡೀ ಭಾರತವು ಕಾಣುತ್ತದೆ ಎಂದು ಹೇಳಿದರು. ಶ್ರೀ ರಾಜ್ ಕಪೂರ್ ಅವರ ಮಹತ್ತರ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಿ, ಕಪೂರ್ ಕುಟುಂಬವನ್ನು ಸ್ವಾಗತಿಸಿದರು.
ರಾಜ್ ಕಪೂರ್ ಅವರ 100ನೇ ಜನ್ಮ ವಾರ್ಷಿಕೋತ್ಸವವು ಭಾರತೀಯ ಚಲನಚಿತ್ರೋದ್ಯಮದ ಸುವರ್ಣಯುಗದ ಸಾಧನೆಯ ಸಂಕೇತವಾಗಿದೆ ಎಂದು ಶ್ರೀ ಮೋದಿ ಹೇಳಿದರು. 'ನೀಲ್ ಕಮಲ್' ಚಲನಚಿತ್ರವನ್ನು 1947ರಲ್ಲಿ ನಿರ್ಮಿಸಲಾಯಿತು ಮತ್ತು ಈಗ ನಾವು 2047ಕ್ಕೆ ಹೋಗುತ್ತಿದ್ದೇವೆ ಮತ್ತು ಈ 100 ವರ್ಷಗಳ ಕೊಡುಗೆ ಸ್ಮರಣೀಯವಾಗಿದೆ ಎಂದು ಅವರು ಹೇಳಿದರು. ರಾಜತಾಂತ್ರಿಕತೆಯ ಸಂದರ್ಭದಲ್ಲಿ ಬಳಸಲಾಗುವ 'ಸಾಫ್ಟ್ ಪವರ್' ಪದವನ್ನು ಉಲ್ಲೇಖಿಸುತ್ತಾ, ಶ್ರೀ ಮೋದಿ ಅವರು, ಈ ಪದವು ಸೃಷ್ಟಿಯಾಗುವ ಮೊದಲೇ ರಾಜ್ ಕಪೂರ್ ಭಾರತದ ಸಾಫ್ಟ್ ಪವರ್ ಅನ್ನು ಪರಿಚಯಿಸಿದ್ದರು ಹೇಳಿದರು. ಇದು ಭಾರತದ ಸೇವೆಯಲ್ಲಿ ರಾಜ್ ಕಪೂರ್ ಅವರ ಅಪಾರ ಕೊಡುಗೆಯಾಗಿದೆ ಎಂದು ಅವರು ಹೇಳಿದರು.
ಮಧ್ಯ ಏಷ್ಯಾವನ್ನು ಗಮನದಲ್ಲಿಟ್ಟುಕೊಂಡು ಚಲನಚಿತ್ರವೊಂದನ್ನು ನಿರ್ಮಿಸುವಂತೆ ಪ್ರಧಾನ ಮಂತ್ರಿಯವರು ಕಪೂರ್ ಕುಟುಂಬವನ್ನು ಒತ್ತಾಯಿಸಿದರು. ಅವರು ಇಷ್ಟು ವರ್ಷಗಳ ನಂತರವೂ ಅಲ್ಲಿನ ಜನರನ್ನು ಮೋಡಿ ಮಾಡುತ್ತಿದ್ದಾರೆ. ರಾಜ್ ಕಪೂರ್ ಅವರ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ ಎಂದು ಅವರು ಹೇಳಿದರು. ಮಧ್ಯ ಏಷ್ಯಾದಲ್ಲಿ ಭಾರತೀಯ ಚಿತ್ರರಂಗಕ್ಕೆ ಅಪಾರ ಸಾಮರ್ಥ್ಯವಿದೆ ಮತ್ತು ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ಶ್ರೀ ಮೋದಿ ಕುಟುಂಬವನ್ನು ಒತ್ತಿ ಹೇಳಿದರು. ಮಧ್ಯ ಏಷ್ಯಾದ ಮಧ್ಯ ಏಷ್ಯಾದ ಹೊಸ ಪೀಳಿಗೆಯನ್ನು ತಲುಪಲು ನಾವು ಪ್ರಯತ್ನಿಸಬೇಕು ಮತ್ತು ಕೊಂಡಿಯಾಗಿ ಕಾರ್ಯನಿರ್ವಹಿಸುವ ಚಲನಚಿತ್ರವನ್ನು ರಚಿಸಲು ಕುಟುಂಬವನ್ನು ಒತ್ತಾಯಿಸಿದರು.
ವಿಶ್ವಾದ್ಯಂತ ಪಡೆದ ಪ್ರೀತಿ ಮತ್ತು ಖ್ಯಾತಿಯನ್ನು ಸ್ಮರಿಸುತ್ತಾ, ಶ್ರೀಮತಿ ರೀಮಾ ಕಪೂರ್ ಅವರು ಶ್ರೀ ರಾಜ್ ಕಪೂರ್ ಅವರನ್ನು 'ಸಾಂಸ್ಕೃತಿಕ ರಾಯಭಾರಿ' ಎಂದು ಕರೆಯಬಹುದು ಎಂದು ಹೇಳಿದರು ಮತ್ತು ಪ್ರಧಾನ ಮಂತ್ರಿಯವರು ಭಾರತದ 'ಜಾಗತಿಕ ರಾಯಭಾರಿ' ಆಗಿರುವುದಕ್ಕೆ ಅವರನ್ನು ಶ್ಲಾಘಿಸಿದರು. ಇಡೀ ಕಪೂರ್ ಕುಟುಂಬವು ಪ್ರಧಾನ ಮಂತ್ರಿಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದರು. ಇಂದು ದೇಶದ ಪ್ರತಿಷ್ಠೆ ಉತ್ತುಂಗಕ್ಕೇರಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು ಮತ್ತು ವಿಶ್ವಾದ್ಯಂತ ಚರ್ಚಿಸಲ್ಪಡುವ ಯೋಗವನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಇತರ ರಾಷ್ಟ್ರಗಳ ನಾಯಕರೊಂದಿಗೆ ಅವರ ಭೇಟಿಯ ಸಮಯದಲ್ಲಿ ಯೋಗ ಮತ್ತು ಅದರ ಮಹತ್ವದ ಬಗ್ಗೆ ಚರ್ಚಿಸಿದ್ದಾಗಿ ಅವರು ಹೇಳಿದರು.
ಪ್ರಧಾನಮಂತ್ರಿಯವರು, ಸಂಶೋಧನೆಯು ಒಂದು ಆಸಕ್ತಿದಾಯಕ ಚಟುವಟಿಕೆಯಾಗಿದ್ದು, ಅದು ಕಲಿಕೆಯ ಮೂಲಕ ಪ್ರಕ್ರಿಯೆಯನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ರಾಜ್ ಕಪೂರ್ ಅವರ ಬಗ್ಗೆ ಸಂಶೋಧನೆ ನಡೆಸಿ ಚಲನಚಿತ್ರ ನಿರ್ಮಿಸಿದ್ದಕ್ಕಾಗಿ ಶ್ರೀ ರಾಜ್ ಕಪೂರ್ ಅವರ ಮೊಮ್ಮಗ ಶ್ರೀ ಅರ್ಮಾನ್ ಜೈನ್ ಅವರನ್ನು ಅವರು ಅಭಿನಂದಿಸಿದರು, ಇದು ಅವರ ಅಜ್ಜನ ಜೀವನ ಯಾನವನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಸಿನೆಮಾದ ಶಕ್ತಿಯನ್ನು ಸ್ಮರಿಸಿದ ಶ್ರೀ ಮೋದಿ, ಹಿಂದಿನ ಜನಸಂಘ ಪಕ್ಷವು ದೆಹಲಿಯಲ್ಲಿ ಚುನಾವಣೆಯಲ್ಲಿ ಸೋತಿದ್ದ ಒಂದು ಘಟನೆಯನ್ನು ಉಲ್ಲೇಖಿಸಿದರು. ಆ ಕಠಿಣ ಕ್ಷಣಗಳಲ್ಲಿ ಪಕ್ಷದ ನಾಯಕರು ರಾಜ್ ಕಪೂರ್ ಅವರ 'ಫಿರ್ ಸುಬಾ ಹೋಗಿ' ಚಲನಚಿತ್ರವನ್ನು ನೋಡಲು ನಿರ್ಧರಿಸಿದರು. ಅಂದರೆ ಮತ್ತೆ ಒಂದು ಸೂರ್ಯೋದಯ ಆಗುತ್ತದೆ. ಪಕ್ಷವು ಈಗ ಮತ್ತೆ ಸೂರ್ಯೋದಯವನ್ನು ಕಂಡಿದೆ ಎಂದು ಅವರು ಹೇಳಿದರು. ಶ್ರೀ ರಿಷಿ ಕಪೂರ್ ಅವರಿಗೆ ಚೀನಾದಲ್ಲಿ ಹಾಡಲಾಗುತ್ತಿದ್ದ ಹಾಡಿನ ಧ್ವನಿಮುದ್ರಣವನ್ನು ಕಳುಹಿಸಿದ ಘಟನೆಯೊಂದನ್ನು ಶ್ರೀ ಮೋದಿ ನೆನಪಿಸಿಕೊಂಡರು.
ಶ್ರೀ ರಣಬೀರ್ ಕಪೂರ್ ಅವರು ಪ್ರಧಾನ ಮಂತ್ರಿಯವರಿಗೆ, ಕಪೂರ್ ಕುಟುಂಬವು ಡಿಸೆಂಬರ್ 13, 14 ಮತ್ತು 15, 2024 ರಂದು ರಾಜ್ ಕಪೂರ್ ಅವರ ಚಲನಚಿತ್ರಗಳ ಪುನರ್ಪ್ರದರ್ಶನವನ್ನು ಮಾಡುತ್ತಿದೆ ಎಂದು ತಿಳಿಸಿದರು. ಅವರು ಭಾರತ ಸರ್ಕಾರ, NFDC ಮತ್ತು NFAI ಗೆ ಅವರ ಸಹಾಯಕ್ಕಾಗಿ ಧನ್ಯವಾದ ಅರ್ಪಿಸಿದರು. ಅವರ ಕುಟುಂಬವು ಅವರ 10 ಚಲನಚಿತ್ರಗಳನ್ನು ನೀಡಿ, ಅವುಗಳ ಆಡಿಯೋ ಮತ್ತು ವಿಡಿಯೋವನ್ನು ಪುನಃಸ್ಥಾಪಿಸಿದೆ. ಇವುಗಳನ್ನು ಭಾರತದಾದ್ಯಂತ 40 ನಗರಗಳಲ್ಲಿ ಸುಮಾರು 160 ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು. ಡಿಸೆಂಬರ್ 13 ರಂದು ಮುಂಬೈನಲ್ಲಿ ಪ್ರೀಮಿಯರ್ ಶೋ ನಡೆಯಲಿದ್ದು, ಇಡೀ ಚಲನಚಿತ್ರೋದ್ಯಮವನ್ನು ಆಹ್ವಾನಿಸಲಾಗಿದೆ ಎಂದು ಶ್ರೀ ಕಪೂರ್ ಅವರು ಪ್ರಧಾನ ಮಂತ್ರಿಯವರಿಗೆ ತಿಳಿಸಿದರು.
*****
(Release ID: 2083586)
Visitor Counter : 8