ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಿಕ್ಷಯ್ ಮಿತ್ರಗಳಂತಹ ಉಪಕ್ರಮಗಳು ಮತ್ತು ಅಲ್ಪಾವಧಿಯ ಪರಿಣಾಮಕಾರಿ ಚಿಕಿತ್ಸೆಗಳು ಕ್ಷಯರೋಗ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಚೇತರಿಕೆ ಪ್ರಮಾಣವನ್ನು ಸುಧಾರಿಸಿವೆ ಮತ್ತು ಕ್ಷಯರೋಗವನ್ನು ನಿಗ್ರಹಿಸುವಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು ಬಲಪಡಿಸಿದೆ: ಪ್ರಧಾನಮಂತ್ರಿ

Posted On: 07 DEC 2024 12:39PM by PIB Bengaluru

ನಿಕ್ಷಯ ಮಿತ್ರದಂತಹ ಉಪಕ್ರಮಗಳು ಮತ್ತು ಅಲ್ಪಾವಧಿಯ ಪರಿಣಾಮಕಾರಿ ಚಿಕಿತ್ಸೆಗಳು ಕ್ಷಯರೋಗದ ಸಂಭಾವ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದು, ಚೇತರಿಕೆ ಪ್ರಮಾಣದಲ್ಲಿ ಸುಧಾರಣೆಯಾಗಿದೆ ಮತ್ತು ಕ್ಷಯ ರೋಗದ ವಿರುದ್ಧದ ಹೋರಾಟದಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು ಬಲಪಡಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದ್ದಾರೆ. 

ಕೇಂದ್ರ ಸಚಿವರಾದ ಶ್ರೀ ಜೆ.ಪಿ.ನಡ್ಡಾ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಅವರು ಹೀಗೆ ಬರೆದಿದ್ದಾರೆ:

“ಕೇಂದ್ರ ಆರೋಗ್ಯ ಸಚಿವರಾದ ಶ್ರೀ @JPNadda ಅವರು ನಿಕ್ಷಯ್ ಪೋಷಣ್ ಯೋಜನೆಯ ಮೂಲಕ ಪೌಷ್ಠಿಕಾಂಶದ ಬೆಂಬಲದೊಂದಿಗೆ ಭಾರತದ ಕ್ಷಯರೋಗ ನಿರ್ಮೂಲನೆ ಪ್ರಯತ್ನಗಳು ಹೇಗೆ ಪರಿವರ್ತನಕಾರಿ ಪ್ರಗತಿ ಕಂಡಿವೆ ಎಂಬ ಬಗ್ಗೆ ವಿಷದವಾಗಿ ತಿಳಿಸಿದ್ದಾರೆ.  ನಿಕ್ಷಯ್ ಮಿತ್ರದಂತಹ ಉಪಕ್ರಮಗಳು ಮತ್ತು ಅಲ್ಪಾವಧಿಯ ಪರಿಣಾಮಕಾರಿ ಚಿಕಿತ್ಸೆಗಳು ಕ್ಷಯರೋಗ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಚೇತರಿಕೆ ಪ್ರಮಾಣವನ್ನು ಸುಧಾರಿಸಿದೆ ಮತ್ತು ಕ್ಷಯರೋಗವನ್ನು ನಿಗ್ರಹಿಸುವಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು ಬಲಪಡಿಸಿದೆ.”

 

 

*****


(Release ID: 2082035) Visitor Counter : 24