ಪ್ರಧಾನ ಮಂತ್ರಿಯವರ ಕಛೇರಿ
ಕುವೈತ್ ವಿದೇಶಾಂಗ ಸಚಿವರನ್ನು ಪ್ರಧಾನಮಂತ್ರಿ ಮೋದಿ ಬರಮಾಡಿಕೊಂಡರು.
ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಕುವೈತ್ ನ ಯುವರಾಜರ ಜತೆಗಿನ ಭೇಟಿಯನ್ನು ಸ್ಮರಿಸಿದ ಪ್ರಧಾನಮಂತ್ರಿ ಮತ್ತು ದ್ವಿಪಕ್ಷೀಯ ಸಂಬಂಧಗಳಲ್ಲಿ ಬೆಳೆಯುತ್ತಿರುವ ಆವೇಗದ ಬಗ್ಗೆ ತೃಪ್ತಿ
ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ ವಲಯಗಳಲ್ಲಿ ಸಹಕಾರ ಮತ್ತು ಸಂಸ್ಕೃತಿ ಹಾಗೂ ಜನರ ನಡುವಿನ ಸಂಬಂಧಗಳ ವೃದ್ಧಿಬಗ್ಗೆ ಉಭಯ ನಾಯಕರು ಚರ್ಚೆ
ಭಾರತೀಯ ಸಮಯದಾಯದ ಬಗ್ಗೆ ಕಾಳಜಿ ವಹಿಸುತ್ತಿರುವುದಕ್ಕಾಗಿ ಕುವೈತ್ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸಿದ ಪ್ರಧಾನಮಂತ್ರಿ
ಭಾರತ ಮತ್ತು ಗಲ್ಫ್ ಸಹಕಾರ ಮಂಡಳಿಯ ನಡುವಿನ ನಿಕಟ ಸಹಕಾರಕ್ಕೆ ಒತ್ತು ನೀಡಿದ ಪ್ರಧಾನಮಂತ್ರಿ
ಆದಷ್ಟು ಬೇಗ ಕುವೈತ್‌ಗೆ ಭೇಟಿ ನೀಡುವ ಆಹ್ವಾನ ಸ್ವೀಕರಿಸಿದ ಪ್ರಧಾನಮಂತ್ರಿ
Posted On:
04 DEC 2024 9:44PM by PIB Bengaluru
ಕುವೈತ್‌ನ ವಿದೇಶಾಂಗ ಸಚಿವ ಗೌರವಾನ್ವಿತ ಅಬ್ದುಲ್ಲಾ ಅಲಿ ಅಲ್-ಯಹ್ಯಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.
ಕಳೆದ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಕುವೈತ್ ನ ಯುವರಾಜ ಗೌರವಾನ್ವಿತ ಶೇಖ್ ಸಬಾ ಖಲೀದ್ ಅಲ್-ಹಮದ್ ಅಲ್-ಸಬಾಹ್ ಅವರೊಂದಿಗಿನ ಭೇಟಿಯನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ದ್ವಿಪಕ್ಷೀಯ ಸಂಬಂಧಗಳಲ್ಲಿ ಬೆಳೆಯುತ್ತಿರುವ ಆವೇಗದ ಬಗ್ಗೆ ತೃಪ್ತಿವ್ಯಕ್ತಪಡಿಸಿದರು.
ಅವರು ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ ವಲಯಗಳಲ್ಲಿ ಸಹಕಾರ ಮತ್ತು ಸಂಸ್ಕೃತಿ ಹಾಗೂ ಜನರ ನಡುವಿನ ಸಂಬಂಧಗಳ ವೃದ್ಧಿಬಗ್ಗೆ ಚರ್ಚೆ ನಡೆಸಿದರು.
ಕುವೈತ್‌ನಲ್ಲಿ ವಾಸಿಸುತ್ತಿರುವ ಒಂದು ಮಿಲಿಯನ್ ಬಲಿಷ್ಠ ಭಾರತೀಯ ಸಮುದಾಯದ ಬಗ್ಗೆ ಕಾಳಜಿ ವಹಿಸುತ್ತಿರುವುದಕ್ಕೆ ಕುವೈತ್‌ನ ನಾಯಕತ್ವಕ್ಕೆ ಪ್ರಧಾನಮಂತ್ರಿ ಧನ್ಯವಾದ ಸಲ್ಲಿಸಿದರು.
ಸದ್ಯ ಕುವೈತ್‌ನ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿಸಿಸಿಯಡಿಯಲ್ಲಿ ಭಾರತ ಮತ್ತು ಗಲ್ಫ್ ಸಹಕಾರ ಮಂಡಳಿಯ ನಡುವಿನ ನಿಕಟ ಸಹಕಾರವು ಮತ್ತಷ್ಟು ಬಲಗೊಳ್ಳಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ವಿಚಾರ ವಿನಿಮಯ ನಡೆಸಿದರು ಮತ್ತು ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆ ಆದಷ್ಟು ಶೀಘ್ರ ಮರಳಲಿ ಎಂಬುದಕ್ಕೆ ಬೆಂಬಲ ವ್ಯಕ್ತಪಡಿಸಿದರು.
ತಮ್ಮ ದೇಶಕ್ಕೆ ಆದಷ್ಟು ಶೀಘ್ರ ಭೇಟಿ ನೀಡುವ ಅವಕಾಶ ಮಾಡಿಕೊಳ್ಳಬೇಕು ಎಂಬ ಕುವೈತ್ ನಾಯಕತ್ವದ ಆಹ್ವಾನವನ್ನು ಪ್ರಧಾನಮಂತ್ರಿ ಸ್ವೀಕರಿಸಿದರು.
*****
(Release ID: 2081075)
Visitor Counter : 15
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam