ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಒಂಬತ್ತು ವರ್ಷ ತುಂಬಿದ ಸುಗಮ್ಯ ಭಾರತ ಅಭಿಯಾನವನ್ನು ಆಚರಿಸಿದ ಪ್ರಧಾನಮಂತ್ರಿ


ದಿವ್ಯಾಂಗ ಸಹೋದರಿಯರು ಮತ್ತು ಸಹೋದರರಿಗೆ ಪ್ರವೇಶಾವಕಾಶ, ಸಮಾನತೆ ಮತ್ತು ಅವಕಾಶವನ್ನು ಮತ್ತಷ್ಟು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ

ನಮ್ಮ ದಿವ್ಯಾಂಗ ಸಹೋದರಿಯರು ಮತ್ತು ಸಹೋದರರ ಧೈರ್ಯ ಮತ್ತು ಸಾಧನೆಗಳು ನಮಗೆ ಹೆಮ್ಮೆ ತರುತ್ತವೆ: ಪ್ರಧಾನಮಂತ್ರಿ

Posted On: 03 DEC 2024 4:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸುಗಮ್ಯ ಭಾರತ ಅಭಿಯಾನದ 9ನೇ ವರ್ಷವನ್ನು ಆಚರಿಸಿದರು. ದಿವ್ಯಾಂಗ ಸಹೋದರಿಯರು ಮತ್ತು ಸಹೋದರರಿಗೆ ಪ್ರವೇಶಾವಕಾಶ, ಸಮಾನತೆ ಮತ್ತು ಅವಕಾಶವನ್ನು ಮತ್ತಷ್ಟು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ದಿವ್ಯಾಂಗ ಸಹೋದರಿಯರು ಮತ್ತು ಸಹೋದರರ ಧೈರ್ಯ ಮತ್ತು ಸಾಧನೆಗಳನ್ನು ಶ್ಲಾಘಿಸಿದ ಶ್ರೀ ಮೋದಿಯವರು, ಇದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದರು.

X ನಲ್ಲಿ MyGovIndia ಮತ್ತು ಮೋದಿ ಆರ್ಕೈವ್ ಹ್ಯಾಂಡಲ್ ಗಳ ಸರಣಿ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸುತ್ತಾ ಶ್ರೀ ಮೋದಿಯವರು:

"ಇಂದು, ನಾವು #9YearsOfSugamyaBharat ಆಚರಿಸುತ್ತಿದ್ದೇವೆ. ನಮ್ಮ ದಿವ್ಯಾಂಗ ಸಹೋದರಿಯರು ಮತ್ತು ಸಹೋದರರಿಗೆ ಪ್ರವೇಶ, ಸಮಾನತೆ ಮತ್ತು ಅವಕಾಶವನ್ನು ಮತ್ತಷ್ಟು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.

"ನಮ್ಮ ದಿವ್ಯಾಂಗ ಸಹೋದರಿಯರು ಮತ್ತು ಸಹೋದರರ ಧೈರ್ಯ ಮತ್ತು ಸಾಧನೆಗಳು ನಮಗೆ ಹೆಮ್ಮೆ ತರುತ್ತವೆ. ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಯಶಸ್ಸು ಬಹಳ ರೋಮಾಂಚಕ ಉದಾಹರಣೆಯಾಗಿದೆ. ಇದು ವಿಕಲಚೇತನರ 'ನಾನು ಮಾಡಬಲ್ಲೆ' ಎಂಬ ಮನೋಭಾವವನ್ನು ಚಿತ್ರಿಸುತ್ತದೆ. #9YearsOfSugamyaBharat"

"ನಿಜಕ್ಕೂ ಮರೆಯಲಾಗದ ನೆನಪು! #9YearsOfSugamyaBharat"

"ವಿಕಲಚೇತನರ ಸಬಲೀಕರಣಕ್ಕೆ ನಮ್ಮ ಬದ್ಧತೆಯ ಸ್ಪಷ್ಟ ಸೂಚನೆಯನ್ನು 2016ರ ವಿಕಲಚೇತನರ ಹಕ್ಕುಗಳ ಕಾಯ್ದೆಯ ಐತಿಹಾಸಿಕ ಅಂಗೀಕಾರದಲ್ಲಿ ಕಾಣಬಹುದು. #9YearsOfSugamyaBharat" ಎಂದು ಬರೆದಿದ್ದಾರೆ.

 

 

*****


(Release ID: 2080523) Visitor Counter : 66