ಪ್ರಧಾನ ಮಂತ್ರಿಯವರ ಕಛೇರಿ
ಬಾರ್ಬಡೋಸ್ ನ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
Posted On:
22 NOV 2024 3:18AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವೆಂಬರ್ 20ರಂದು ಗಯಾನಾದ ಜಾರ್ಜ್ ಟೌನ್ ನಲ್ಲಿ ನಡೆದ ಭಾರತ-ಕ್ಯಾರಿಕಾಮ್ ಶೃಂಗಸಭೆಯ ಸಂದರ್ಭದಲ್ಲಿ ಬಾರ್ಬಡೋಸ್ ಪ್ರಧಾನಿಯವರಾದ ಘನತೆವೆತ್ತ ಶ್ರೀಮತಿ ಮಿಯಾ ಅಮೋರ್ ಮೊಟ್ಲೆಯವರನ್ನು ಭೇಟಿಯಾದರು. ಈ ಉನ್ನತ ಮಟ್ಟದ ಭೇಟಿಯು ಭಾರತ ಮತ್ತು ಬಾರ್ಬಡೋಸ್ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಉಭಯ ನಾಯಕರಿಗೆ ಸದವಕಾಶವನ್ನು ಒದಗಿಸಿತು.
ಆರೋಗ್ಯ, ಔಷಧ, ಹವಾಮಾನ ಬದಲಾವಣೆ, ಸಂಸ್ಕೃತಿ ಮತ್ತು ಪ್ರಜೆಗಳೊಂದಿಗೆ ಸಂಬಂಧ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳ ಸಹಕಾರವನ್ನು ನಾಯಕರು ಪರಿಶೀಲಿಸಿದರು.
ಜಾಗತಿಕ ದಕ್ಷಿಣದಲ್ಲಿ ಭಾರತದ ನಾಯಕತ್ವಕ್ಕೆ ಪ್ರಧಾನಿ ಮೊಟ್ಲೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಭಯ ನಾಯಕರು ಜಾಗತಿಕ ಸಂಸ್ಥೆಗಳ ಸುಧಾರಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
*****
(Release ID: 2079038)
Visitor Counter : 27
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam