ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ ವೇದಿಕೆಗಳನ್ನು ನಿಯಂತ್ರಿಸುವ ಮತ್ತು ಸಾಮಾಜಿಕ ಒಮ್ಮತ ನಿರ್ಮಿಸುವ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಲಪಡಿಸುವ ಅಗತ್ಯವಿದೆ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು


ಸಾಮಾಜಿಕ ಜಾಲತಾಣಗಳ ಯುಗದಲ್ಲಿ ನಾಪತ್ತೆಯಾಗಿರುವ ಹೊಣೆಗಾರಿಕೆ ತರುವಲ್ಲಿ ಸಾಂಪ್ರದಾಯಿಕ ಪತ್ರಿಕೆ(ಮುದ್ರಣ ಮಾಧ್ಯಮ)ಗಳಲ್ಲಿನ ಸಂಪಾದಕೀಯ ಪರಿಶೀಲನೆಗಳು ನಿರ್ಣಾಯಕ ಪಾತ್ರ ವಹಿಸಿವೆ: ಶ್ರೀ ಅಶ್ವಿನಿ ವೈಷ್ಣವ್

Posted On: 27 NOV 2024 1:50PM by PIB Bengaluru

ಸಂಸತ್ ಅಧಿವೇಶನದ ಲೋಕಸಭೆ ಕಲಾಪದಲ್ಲಿಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ ವೇದಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಲಪಡಿಸುವ ತುರ್ತು ಅಗತ್ಯವಿದೆ ಎಂದು ತಿಳಿಸಿದರು.

ಸಂಪಾದಕೀಯ ಪರಿಶೀಲನೆಯಿಂದ ಅನಿಯಂತ್ರಿತ ಅಭಿವ್ಯಕ್ತಿಗಳವರೆಗೆ

ಈ ವಿಷಯ ಕುರಿತು ಮಾತನಾಡಿದ ಸಚಿವರು, “ನಾವು ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ ವೇದಿಕೆಗಳ ಯುಗದಲ್ಲಿ ಬದುಕುತ್ತಿದ್ದೇವೆ. ಆದಾಗ್ಯೂ, ಜವಾಬ್ದಾರಯುತ  ಮತ್ತು ವಿಷಯದ ನಿಖರತೆ ಖಚಿತಪಡಿಸಿಕೊಳ್ಳಲು, ಸಂಪಾದಕೀಯ ಪರಿಶೀಲನೆಗಳನ್ನೇ ಒಂದು ಕಾಲದಲ್ಲಿ ಅವಲಂಬಿಸಿದ್ದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಪತ್ರಿಕೆಗಳ ಸಾಂಪ್ರದಾಯಿಕ ರೂಪಗಳಲ್ಲಿ ಕಾಲ ಬದಲಾದಂತೆ, ಈ ಪರಿಶೀಲನೆಗಳು ಕಡಿಮೆಯಾಗುತ್ತಾ ಬಂದಿವೆ. ಅಂತಹ ಸಂಪಾದಕೀಯ ಮೇಲ್ವಿಚಾರಣೆಯ ಕೊರತೆಯಿಂದಾಗಿ, ಸಾಮಾಜಿಕ ಜಾಲತಾಣಗಳೇ ಒಂದೆಡೆ ಪತ್ರಿಕಾ ಸ್ವಾತಂತ್ರ್ಯಕ್ಕೆ ವೇದಿಕೆಯಾಗಿವೆ. ಆದರೆ ಮತ್ತೊಂದೆಡೆ, ಇದು ಅನಿಯಂತ್ರಿತ ಅಭಿವ್ಯಕ್ತಿಗೆ ಸ್ಥಳವಾಗಿ ಮಾರ್ಪಟ್ಟಿದೆ. ಇದು ಆಗಾಗ್ಗೆ ಅಸಭ್ಯ ವಿಷಯವನ್ನು ಒಳಗೊಳ್ಳುತ್ತಿದೆ ಎಂದು ಅವರು ಹೇಳಿದರು.

ಕಠಿಣ ಕಾನೂನುಗಳ ಬಗ್ಗೆ ಒಮ್ಮತಾಭಿಪ್ರಾಯ ಮೂಡಬೇಕಿದೆ

ಭಾರತ ಮತ್ತು ಈ ವೇದಿಕೆಗಳು ಹುಟ್ಟಿಕೊಂಡ ಭೌಗೋಳಿಕತೆಯ ನಡುವಿನ ವಿಭಿನ್ನ ಸಾಂಸ್ಕೃತಿಕ ವ್ಯತ್ಯಾಸಗಳು ಇವೆ ಎಂದು ಒಪ್ಪಿಕೊಂಡ ಸಚಿವರು, “ಭಾರತದ ಸಾಂಸ್ಕೃತಿಕ ಸೂಕ್ಷ್ಮತೆಗಳು ಈ ವೇದಿಕೆಗಳು ಹುಟ್ಟಿಕೊಂಡ ಪ್ರದೇಶಗಳಿಗಿಂತ ಹೆಚ್ಚು ಭಿನ್ನವಾಗಿವೆ. ಭಾರತವು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಹೆಚ್ಚು ಕಠಿಣಗೊಳಿಸುವುದು ಅನಿವಾರ್ಯವಾಗಿದೆ. ಹಾಗಾಗಿ, ಈ ವಿಷಯದಲ್ಲಿ ಎಲ್ಲರೂ ಒಮ್ಮತಾಭಿಪ್ರಾಯಕ್ಕೆ ಬರಬೇಕೆಂದು ಅವರು ಒತ್ತಾಯಿಸಿದರು.

ಸಂಸದೀಯ ಸ್ಥಾಯಿ ಸಮಿತಿಯು ಈ ಮಹತ್ವದ ವಿಷಯವನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದರು. "ಈ ಸವಾಲನ್ನು ಎದುರಿಸಲು ಕಠಿಣ ಕಾನೂನುಗಳ ಜತೆಗೆ, ಸಾಮಾಜಿಕ ಒಮ್ಮತಾಭಿಪ್ರಾಯ ಮೂಡಬೇಕು" ಎಂದು ಅವರು ಹೇಳಿದರು.

 

*****

 


(Release ID: 2078397) Visitor Counter : 24