ಪ್ರಧಾನ ಮಂತ್ರಿಯವರ ಕಛೇರಿ
ಗಯಾನಾದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯ ಪ್ರವರ್ಧಮಾನಕ್ಕೆ ಬರುತ್ತಿವೆ: ಪ್ರಧಾನಮಂತ್ರಿ
ಸರಸ್ವತಿ ವಿದ್ಯಾನಿಕೇತನ ಶಾಲೆಗೆ ಭೇಟಿ ನೀಡಿದ ಪ್ರಧಾನಮಂತ್ರಿ, ಭಾರತ-ಗಯಾನ ಸಾಂಸ್ಕೃತಿಕ ಸಂಬಂಧ ಬಲವರ್ಧನೆಗೆ ಸ್ವಾಮಿ ಆಕಾಶರಾನಂದಜಿ ಕೈಗೊಂಡಿರುವ ಪ್ರಯತ್ನಗಳ ಶ್ಲಾಘನೆ
Posted On:
22 NOV 2024 3:06AM by PIB Bengaluru
ಭಾರತ-ಗಯಾನ ಸಾಂಸ್ಕೃತಿಕ ಸಂಬಂಧಗಳ ಮತ್ತಷ್ಟು ಬಲವರ್ಧನೆಗೆ ಸ್ವಾಮಿ ಆಕಾಶರಾನಂದಜಿ ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸರಸ್ವತಿ ವಿದ್ಯಾನಿಕೇತನ ಶಾಲೆಗೆ ಭೇಟಿ ನೀಡಿದ್ದರು ಮತ್ತು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯ ಗಯಾನಾದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ಹೇಳಿದರು.
ಅವರು ತಮ್ಮ ಸಾಮಾಜಿಕ ಪೋಸ್ಟ್ X ನಲ್ಲಿ ಹೀಗೆ ಹೇಳಿದ್ದಾರೆ.
“ಗಯಾನಾದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ನನಗೆ ಸಾಂಸ್ಕೃತಿಕ ಮತ್ತು ಜನ-ಜನರ ಸಂಪರ್ಕವನ್ನು ಹೆಚ್ಚಿಸುವಲ್ಲಿ ಮುಂಚೂಣಿಯಲ್ಲಿರುವ ಸರಸ್ವತಿ ವಿದ್ಯಾ ನಿಕೇತನ ಶಾಲೆಯಂತಹ ಒಂದು ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಶಾಲೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರನ್ನು ನಾನು ಶ್ಲಾಘಿಸುತ್ತೇನೆ ಮತ್ತು ಭಾರತ-ಗಯಾನಾ ಸಾಂಸ್ಕೃತಿಕ ಸಂಪರ್ಕವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಪ್ರಯತ್ನದಲ್ಲಿ ತೊಡಗಿರುವ ಸ್ವಾಮಿ ಆಕಾಶರಾನಂದಜಿ ಅವರ ಕೆಲಸವನ್ನು ಶ್ಲಾಘಿಸುತ್ತೇನೆ’’.
*****
(Release ID: 2076694)
Visitor Counter : 4
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam