ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 5

“ಪ್ರೇಕ್ಷಕರ ಸಿಳ್ಳೆ ಮತ್ತು ಚಪ್ಪಾಳೆಗಳೇ ನನ್ನ ಥೆರಪಿ" - 55ನೇ ಐ ಎಫ್ ಎಫ್ ಐ ನಲ್ಲಿ ಖುಷ್ಬು ಸುಂದರ್ ಅವರೊಂದಿಗಿನ ಸಂವಾದದಲ್ಲಿ ತಮಿಳು ನಟ ಶಿವಕಾರ್ತಿಕೇಯನ್


ಶ್ರದ್ಧೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯ ಪ್ರಯಾಣ- ಐ ಎಫ್ ಎಫ್ ಐನಲ್ಲಿ ತಮಿಳು ನಟ ಹಂಚಿಕೊಂಡ ಜೀವನ ಪಾಠಗಳು

"ಸ್ವತಂತ್ರ ಹಕ್ಕಿಯಂತೆ ಹಾರಿ, ಆದರೆ ನಿಮ್ಮ ಗೂಡಿಗೆ ಮರಳಲು ಮರೆಯಬೇಡಿ" - ಯುವಜನತೆಗೆ ನಟನ ಕರೆ

ಅವರು ಕಿಕ್ಕಿರಿದು ತುಂಬಿದ್ದ ಸಭಾಂಗಣವನ್ನು ತಲುಪಿದಾಗ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು ಮತ್ತು ಗೋವಾದ ಅಕಾಡೆಮಿ ಆಫ್ ಆರ್ಟ್ಸ್ನ ಸಭಾಂಗಣವು ಚಪ್ಪಾಳೆ ಮತ್ತು ಶಿಳ್ಳೆಗಳಿಂದ ಪ್ರತಿಧ್ವನಿಸಿತು. ತಮಿಳಿನ ಸೂಪರ್ ಸ್ಟಾರ್ ಶಿವಕಾರ್ತಿಕೇಯನ್ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಎರಡರಲ್ಲೂ ಅಂತಹ ಜನಪ್ರಿಯತೆಯನ್ನು ಹೊಂದಿದ್ದಾರೆ.

ಸರಳ ಹಿನ್ನೆಲೆಯಿಂದ ತಮಿಳು ಸಿನಿಮಾ ರಂಗದ ಅತ್ಯಂತ ಪ್ರಕಾಶಮಾನ ಸ್ಟಾರ್‌ ಗಳಲ್ಲಿ ಒಬ್ಬರಾಗುವವರೆಗೆ ಬೆಳೆದ ಶಿವಕಾರ್ತಿಕೇಯನ್ ಅವರ ಪಯಣವು ಧೈರ್ಯ, ಉತ್ಸಾಹ ಮತ್ತು ಪರಿಶ್ರಮದ ಕಥೆಯಾಗಿದೆ. 55ನೇ ಭಾರತೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ, ಶಿವಕಾರ್ತಿಕೇಯನ್ ನಟಿ ಮತ್ತು  ರಾಜಕಾರಣಿ ಖುಷ್ಬೂ ಸುಂದರ್ ಅವರೊಂದಿಗೆ ತಮ್ಮ ಚಲನಚಿತ್ರ ಪ್ರಯಾಣ ,  ಅವರ ಜೀವನ ಮತ್ತು ನಟನಾಗಿ ಬೆಳೆಯುತ್ತಿರುವ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದರು.

"ಪ್ರಾರಂಭದಿಂದಲೂ, ಸಿನಿಮಾ ನನ್ನ ಹುಚ್ಚು ಆಗಿತ್ತು ಮತ್ತು ನಾನು ಯಾವಾಗಲೂ ಪ್ರೇಕ್ಷಕರನ್ನು ಮನರಂಜಿಸಬೇಕೆಂದು ಬಯಸಿದ್ದೆ" ಎಂದು ಶಿವಕಾರ್ತಿಕೇಯನ್ ಹಂಚಿಕೊಂಡರು. "ಆದ್ದರಿಂದ, ನಾನು ಟಿವಿ ನಿರೂಪಕನಿಂದ ಪ್ರಾರಂಭಿಸಿದೆ, ಇದು ನನಗೆ ಮನರಂಜನಾ ಕ್ಷೇತ್ರದಲ್ಲಿ ವೃತ್ತಿಯನ್ನು ಪ್ರಾರಂಭಿಸಲು ಅವಕಾಶ ನೀಡಿತು ಮತ್ತು ನಾನು ಅತ್ಯಂತ ಆಸಕ್ತಿಯಿಂದ ಅನುಸರಿಸಿದೆ."

ಮಿಮಿಕ್ರಿ ಕಲಾವಿದರಾಗಿ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಶಿವಕಾರ್ತಿಕೇಯನ್, "ನಾನು ಎಂಜಿನಿಯರಿಂಗ್ ಕಾಲೇಜಿನಲ್ಲಿ ನನ್ನ ಪ್ರಾಧ್ಯಾಪಕರನ್ನು ಅನುಕರಿಸುತ್ತಿದ್ದೆ. ನಂತರ, ನಾನು ಅವರಲ್ಲಿ ಕ್ಷಮೆಯಾಚಿಸಿದಾಗ, ಅವರು ನನ್ನನ್ನು ಪ್ರೋತ್ಸಾಹಿಸಿದರು. ಈ ಪ್ರತಿಭೆಯನ್ನು ಸರಿಯಾದ ಮಾರ್ಗದಲ್ಲಿ ತೋರಿಸಬೇಕು ಎಂದು ಹೇಳಿದರು ".

"ತಮ್ಮ ತಂದೆಯ ಅಕಾಲಿಕ ನಿಧನವು ತಮ್ಮ ಜೀವನದಲ್ಲಿ ಒಂದು ಮಹತ್ವದ ತಿರುವು ಎಂದು ನಟ ಬಹಿರಂಗಪಡಿಸಿದರು. "ನನ್ನ ತಂದೆ ತೀರಿಕೊಂಡ ನಂತರ, ನಾನು ಖಿನ್ನತೆಗೆ ಒಳಗಾಗುವ ಹಂತದಲ್ಲಿದ್ದೆ. ನನ್ನ ಕೆಲಸ ನನ್ನನ್ನು ಅದರಿಂದ ಹೊರತೆಗೆಯಿತು ಮತ್ತು ನನ್ನ ಪ್ರೇಕ್ಷಕರ ಸಿಟಿ ಮತ್ತು ಚಪ್ಪಾಳೆಗಳು ನನ್ನ ಥೆರಪಿ ಪರಿಣಮಿಸಿತು," ಎಂದು ಅವರು ಹೇಳಿದರು, ತಮ್ಮ ಧೈರ್ಯಕ್ಕೆ ತಮ್ಮ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವೇ ಕಾರಣ ಎಂದು ಹೇಳಿದರು.

ಖುಷ್ಬು ಸುಂದರ್ ಅವರು ಅವನ ದೃಢನಿಶ್ಚಯ ಮತ್ತು ಪ್ರಾಮಾಣಿಕತೆಯನ್ನು ಪ್ರಶಂಸಿಸಿದರು, ಅವುಗಳನ್ನು ಅವರು ಅವನ ಜೀವನದ ಅತಿದೊಡ್ಡ ಆಧಾರಗಳು ಎಂದು ಕರೆದರು. ಇದನ್ನು ಒಪ್ಪಿಕೊಂಡ ಶಿವಕಾರ್ತಿಕೇಯನ್, "ಸಾಮಾನ್ಯ ಮನುಷ್ಯನೊಂದಿಗೆ ಸಂಪರ್ಕ ಹೊಂದಿರುವಾಗಲೂ ದಶಲಕ್ಷಗಟ್ಟಲೆ ಜನರ ನಡುವೆ ಗುರುತಿಸಿಕೊಳ್ಳಬೇಕೆಂಬ ತವಕ ನನ್ನಲ್ಲಿ ಯಾವಾಗಲೂ ಇತ್ತು. ಜೀವನವು ಅಡೆತಡೆಗಳಿಂದ ತುಂಬಿದೆ, ಆದರೆ ನಮ್ಮ ಆಸಕ್ತಿಯನ್ನು ಅನುಸರಿಸುವುದರಿಂದ ಅವುಗಳನ್ನು ಮೀರಿ ಬರಲು ಸಾಧ್ಯವಾಗುತ್ತದೆ. ನಾನು ಎಲ್ಲವನ್ನೂ ಬಿಟ್ಟುಬಿಡಬೇಕೆನಿಸಿದ ಸಮಯವೂ ಇತ್ತು, ಆದರೆ ನನ್ನ ಪ್ರೇಕ್ಷಕರ ಪ್ರೀತಿಯೇ ನನ್ನನ್ನು ಮುಂದೆ ಸಾಗುವಂತೆ ಮಾಡಿತು" ಎಂದು  ಹೇಳಿದರು.

ಮಿಮಿಕ್ರಿ ಕಲಾವಿದನಿಂದ ದೂರದರ್ಶನ ನಿರೂಪಕ ಮತ್ತು ಕೊನೆಗೆ ತಮಿಳು ಸಿನಿಮಾದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಶಿವಕಾರ್ತಿಕೇಯನ್ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಿನ್ನೆಲೆ ಗಾಯಕ, ಗೀತರಚನಕಾರ ಮತ್ತು ನಿರ್ಮಾಪಕರಾಗಿಯೂ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ತಮ್ಮ ವೃತ್ತಿಜೀವನದ ಆಯ್ಕೆಗಳ ಬಗ್ಗೆ ಮಾತನಾಡುತ್ತಾ, "ನನ್ನ ವೃತ್ತಿಜೀವನದ ಆರಂಭದಲ್ಲಿ, ನನ್ನ ಬಳಿಗೆ ಬಂದ ಪ್ರತಿಯೊಂದು ಯೋಜನೆಯನ್ನೂ ನಾನು ಒಪ್ಪಿಕೊಂಡೆ. ಆದರೆ ಈಗ, ಕಥೆಗಳೇ ನನ್ನನ್ನು ಆಯ್ಕೆ ಮಾಡುತ್ತಿವೆ ಎಂದು ಭಾವಿಸುತ್ತೇನೆ" ಎಂದು ವಿವರಿಸಿದರು. ಇತ್ತೀಚೆಗೆ ತಾನು ಅರ್ಥಪೂರ್ಣ ಪಾತ್ರಗಳನ್ನು ಹೇಗೆ ಆಯ್ಕೆ ಮಾಡುತ್ತಿದ್ದೇನೆ ಎನ್ನುವುದಕ್ಕೆ 'ಡಾಕ್ಟರ್', 'ಡಾನ್' ಮತ್ತು ನಿಜ ಜೀವನದ ಯುದ್ಧ ವೀರ ಮುಕುಂದ್ ವರದರಾಜನ್ ಅವರ ಪಾತ್ರವನ್ನು ನಿರ್ವಹಿಸಿದ ಇತ್ತೀಚಿನ 'ಅಮರನ್' ಚಿತ್ರಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.

ತಮ್ಮ ಹಾಸ್ಯದ ಬಳಕೆಯ ಬಗ್ಗೆ ಮಾತನಾಡುತ್ತಾ ಶಿವಕಾರ್ತಿಕೇಯನ್, "ಟಿವಿಯಿಂದ ಸಿನಿಮಾಗೆ ಬದಲಾವಣೆ ಹೊಂದುವುದು ಕಷ್ಟಕರವಾಗಿತ್ತು. ಚಿಕ್ಕ ಪರದೆಯಾಗಲಿ ಅಥವಾ ದೊಡ್ಡ ಪರದೆಯಾಗಲಿ, ಹಾಸ್ಯವು ಪ್ರೇಕ್ಷಕರಿಗೆ ಸಂತಸ ತರುತ್ತದೆ ಎಂಬುದನ್ನು ಅರಿತು, ನಾನು ಹಾಸ್ಯವನ್ನು ನನ್ನ ಕವಚವನ್ನಾಗಿ ಬಳಸಿಕೊಂಡೆ" ಎಂದು ಹೇಳಿದರು.

"ಸ್ವತಂತ್ರ ಹಕ್ಕಿಯಂತೆ ಹಾರಿ , ಆದರೆ ಯಾವಾಗಲೂ ನಿಮ್ಮ ಗೂಡಿಗೆ ಹಿಂತಿರುಗಿ. ನನಗೆ , ನನ್ನ ಕುಟುಂಬ ನನ್ನ ಗೂಡು ಮತ್ತು ಬೇರುಗಳೊಂದಿಗೆ ಸಂಪರ್ಕದಲ್ಲಿರಲು ಇದು ಬಹಳ ಮುಖ್ಯ ಎಂದು ನಾನು ನಂಬುತ್ತೇನೆ. ನಮ್ಮ ಪೋಷಕರು ಯಾವತ್ತೂ ನಮ್ಮ ಶ್ರೇಯಸ್ಸನ್ನೇ ಬಯಸುತ್ತಾರೆ" ಎಂದು ಯುವ ಪೀಳಿಗೆಗೆ ಅವರು ಸರಳವಾಗಿ ಸಂದೇಶವೊಂದನ್ನು ನೀಡಿದರು. ಈ ಸಂವಾದ ಕಾರ್ಯಕ್ರಮವು ಲಕ್ಷಾಂತರ ಜನರ ಹೃದಯ ಮುಟ್ಟುವ ಕಥೆಯೊಂದನ್ನು ಹೊಂದಿರುವ ಅಪ್ರತಿಮ ಪ್ರತಿಭೆಯ ಸಂಭ್ರಮಾಚರಣೆಯಾಗಿ ಪರಿಣಮಿಸಿತು. ಮಧ್ಯಮ ವರ್ಗದ ಕುಟುಂಬದಿಂದ ತಮಿಳು ಚಲನಚಿತ್ರರಂಗದ ತುಂಗಮುಟ್ಟಿದ ಶಿವಕಾರ್ತಿಕೇಯನ್ ಅವರ ಜೀವನ ಪಯಣವು ಛಲ, ದೃಢತೆ ಮತ್ತು ಕನಸುಗಳ ಸಾಧನೆಯ ಸ್ಫೂರ್ತಿದಾಯಕ ಕಥೆಯಾಗಿದೆ.

 

*****

iffi reel

(Release ID: 2076556) Visitor Counter : 6