ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024 ನಾಳೆಯ ಸೃಜನಶೀಲ ಮನಸ್ಸುಗಳ ವಿಸ್ತೃತ ಪ್ರತಿಭಾ ಕೇಂದ್ರವಾಗಿ ಹೊರಹೊಮ್ಮಲು ಸಿದ್ಧವಾಗಿವೆ
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದರ ಪರಿಕಲ್ಪನೆಯು "ಯುವ ಚಲನಚಿತ್ರ ನಿರ್ಮಾಪಕರು"ಗಳ ಮೇಲೆ ಕೇಂದ್ರೀಕೃತವಾಗಿದೆ: ಇಲ್ಲಿದೆ ಭವಿಷ್ಯ
"ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ"ಯು ಹಿಂದಿನ ಆವೃತ್ತಿಗಳಲ್ಲಿ 75 ರಿಂದ 100 ಯುವ ಪ್ರತಿಭೆಗಳನ್ನು ಬೆಂಬಲಿಸಿ ಅವರನ್ನು ಬೆಂಬಲಿಸಿದೆ
ಅತ್ಯುತ್ತಮ ಚಲನಚಿತ್ರ ಸಾಧನೆಗಾಗಿ 5 ಸಿಮೊಟ್ ಚಾಂಪಿಯನ್ ಗಳನ್ನು ಗುರುತಿಸಲಾಗುವುದು
2024ರ ನವೆಂಬರ್ 18 ರಿಂದ 26 ರವರೆಗೆ ನಡೆಯಲಿರುವ 55 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ನಲ್ಲಿ ಪರಿವರ್ತಕ "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ (ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್)" ಉಪಕ್ರಮದೊಂದಿಗೆ ಭಾರತೀಯ ಚಿತ್ರರಂಗದ ಭವಿಷ್ಯವು ಉತ್ತಮ ಹಂತವನ್ನು ಪಡೆಯಲಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು "ಆಜಾದಿ ಕಾ ಅಮೃತ್ ಮಹೋತ್ಸವ" ಆಚರಣೆಯ ಬ್ಯಾನರ್ ಅಡಿಯಲ್ಲಿ ಪ್ರಾರಂಭಿಸಲಾದ ಈ ನೂತನ ಉಪಕ್ರಮ, "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ (ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್)"ಯು ಚಲನಚಿತ್ರ ನಿರ್ಮಾಣದಲ್ಲಿ ಭಾರತದ ಪ್ರಕಾಶಮಾನವಾದ ಯುವ ಪ್ರತಿಭೆಗಳನ್ನು ಪತ್ತೆಹಚ್ಚಲು ಮತ್ತು ಪೋಷಿಸಲು ದಾರಿದೀಪವಾಗಿದೆ.
ಈ ರೀತಿಯ ಸಂಪೂರ್ಣ ಬೆಂಬಲಿತ ವೇದಿಕೆಯಾಗಿ, "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ ( ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )"ಯು ಉದಯೋನ್ಮುಖ ರಚನೆಕಾರರು ಮತ್ತು ಉದ್ಯಮದ ಅನುಭವಿಗಳ ನಡುವೆ ಸಂವಹನ, ಭೇಟಿ, ಒಗ್ಗೂಡಿಸಿಸುವಿಕೆ ಮತ್ತು ಕಲಿಕೆಯನ್ನು ಉತ್ತೇಜಿಸುತ್ತದೆ.
ಈ ವರ್ಷದ "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ ( ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" ಕಾರ್ಯಕ್ರಮವು ಗಮನಾರ್ಹವಾಗಿ ವಿಸ್ತರಣೆಯಾಗಿದೆ. 13 ಚಲನಚಿತ್ರ ನಿರ್ಮಾಣ ವಿಭಾಗಗಳಲ್ಲಿ 100 ಯುವ ಪ್ರತಿಭೆಗಳನ್ನು ಗುರುತಿಸಿದೆ. ಈ ಹಿಂದಿನ ಆವೃತ್ತಿಗಳಲ್ಲಿ , ಒಟ್ಟಾರೆ 10 ಕರಕುಶಲ ವಿಭಾಗಗಳಲ್ಲಿ 75 ಪ್ರತಿಭೆಗಳನ್ನು ಒಳಗೊಂಡಿತ್ತು.
ಚಲನಚಿತ್ರ ಉದ್ಯಮದ ಪ್ರಭಾವ
ಸರಳ ಆರಂಭದಿಂದ ಜಾಗತಿಕ ಮೆಚ್ಚುಗೆಯವರೆಗೆ, "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ ( ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" ಹಳೆಯ ವಿದ್ಯಾರ್ಥಿಗಳು ದೇಶ ಭಾಷೆಗಳ ಗಡಿಯನ್ನು ಮೀರಿ ಪ್ರತಿಧ್ವನಿಸುವ ಯಶಸ್ಸಿನ ಕಥೆಗಳನ್ನು ಬರೆದಿದ್ದಾರೆ. ಡ್ಯೂನ್, ನಿಮೋನಾ ಮತ್ತು ಮೆಗ್ 2 ನಂತಹ ಬಹು-ಮಿಲಿಯನ್ ಡಾಲರ್ ಹಾಲಿವುಡ್ ಬ್ಲಾಕ್ ಬಸ್ಟರ್‌ಗಳಿಗೆ ಕೊಡುಗೆ ನೀಡಿದ್ದಾರೆ. ಕ್ಯಾನೆಸ್, ಟೊರೊಂಟೊ, ಬರ್ಲಿನೇಲ್ ಮತ್ತು ಇಂಟರ್‌ನ್ಯಾಶನಲ್ ಎಮ್ಮಿ ಅವಾರ್ಡ್ ಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ದಾರ್ಶನಿಕರು ಸೃಜನಶೀಲ ಚಲನಚಿತ್ರ ಚೌಕಟ್ಟಿನಲ್ಲಿ ಅಳಿಸಲಾಗದ ತಮ್ಮದೇಯಾದ ಗುರುತು ಮೂಡಿಸಿದ್ದಾರೆ, ಜಾಗತಿಕ ವೇದಿಕೆಯಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿದ್ದಾರೆ.
ಈ ವರ್ಷ, ಐ.ಎಫ್.ಎಫ್.ಐ. ಐದು ಅತ್ಯುತ್ತಮ "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ ( ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" ಚಾಂಪಿಯನ್‌ಗಳಿಗೆ ಗೌರವ ಸಲ್ಲಿಸುತ್ತದೆ. ಇದು ಅವರ ಚಲನಚಿತ್ರ ಪ್ರಯಾಣಗಳು, ನಿರ್ಣಯಗಳು, ಸೃಜನಶೀಲತೆ ಮತ್ತು ಶ್ರೇಷ್ಠತೆಗೆ ಉದಾಹರಣೆಯಾಗಿದೆ:
ಚಿದಾನಂದ ಎಸ್. ನಾಯ್ಕ್ - ಕೇನ್ಸ್‌ನಲ್ಲಿ ಪ್ರಶಸ್ತಿ.
ಸುವರ್ಣ ದಾಸ್ - ಪ್ರಾಜೆಕ್ಟ್‌ಗಳು ಟಿಫ್, ಎಸ್.ಎಕ್ಸ್.ಎಸ್.ಡಬ್ಲ್ಯೂ ಮತ್ತು ಬರ್ಲಿನೇಲ್ ನಲ್ಲಿ ಪ್ರಥಮ ಪ್ರದರ್ಶನಗೊಂಡವು.
ಅಕ್ಷಿತಾ ವೋಹ್ರಾ - ಪ್ರಶಸ್ತಿ ವಿಜೇತ ಯೋಜನೆಗಳಿಗಾಗಿ ಮೆಚ್ಚುಗೆ ಪಡೆದಿದ್ದಾರೆ.
ಅಖಿಲ್ ದಾಮೋದರ್ ಲೋಟ್ಲಿಕರ್ - ಅಂತಾರಾಷ್ಟ್ರೀಯ ಬಹು ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿದ್ದಾರೆ.
ಕೃಷ್ಣ ದುಸಾನೆ - ಅಂತಾರಾಷ್ಟ್ರೀಯ ಯಶಸ್ಸಿನ ಭಾಗವಾಗಿದ್ದಾರೆ.
ಈ ಟ್ರಯಲ್ ಬ್ಲೇಜರ್ ಗಳು ಐ.ಎಫ್.ಎಫ್.ಐ ನಲ್ಲಿ ಕಿರುಚಿತ್ರ ನಿರ್ಮಾಣದ ಸವಾಲಿನ ಸಮಯದಲ್ಲಿ ಐದು "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ ( ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" ತಂಡಗಳಿಗೆ ಮಾರ್ಗದರ್ಶನ ನೀಡುತ್ತದೆ. ಸ್ಪೂರ್ತಿದಾಯಕ ಚಲನಚಿತ್ರ ಪ್ರಯಾಣದ ಒಳನೋಟಗಳನ್ನು ಹಂಚಿಕೊಳ್ಳುತ್ತದೆ.
ಉದಯೋನ್ಮುಖ ಸೃಜನಶೀಲರಿಗೆ ಒಂದು ವೇದಿಕೆ
ಪ್ರಾರಂಭದಿಂದಲೂ, ಈ ಅದ್ಭುತ ಉಪಕ್ರಮವು ಈಶಾನ್ಯ ಭಾರತದ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಪ್ರತಿಯೊಂದು ಮೂಲೆಯಿಂದ 225 ಯುವ ಸೃಜನಶೀಲ ಪ್ರತಿಭೆಗಳನ್ನು ಆಕರ್ಷಿಸಿದೆ. ಈ ರೀತಿಯ ದೊಡ್ಡ ಮಟ್ಟದ ಸಂಪೂರ್ಣ ಬೆಂಬಲಿತ ಜಾಗತಿಕ ವೇದಿಕೆಯಾಗಿ, ಮುಂದಿನ ಪೀಳಿಗೆಯ ಸಿನಿಮಾ ಕಥೆಗಾರರನ್ನು ಪೋಷಿಸುವ ಭಾರತದ ಬದ್ಧತೆಗೆ ಇದು ಪೂರಕವಾಗಿ ವರ್ತಿಸುತ್ತದೆ.
100 ಸೃಜನಾತ್ಮಕ ಮನಸ್ಸುಗಳನ್ನು ಆಯ್ಕೆ ಮಾಡಲಾಗುತ್ತಿದೆ
ಈ ವರ್ಷ, "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ (ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" ಒಟ್ಟಾರೆ 13 ವಿಭಿನ್ನ ಚಲನಚಿತ್ರ ಕರಕುಶಲ ವಿಭಾಗಗಳಲ್ಲಿ ಒರಿಸ್ಸಾ, ಅರುಣಾಚಲ ಪ್ರದೇಶ, ತ್ರಿಪುರಾ, ಜಾರ್ಖಂಡ್, ಮೇಘಾಲಯ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪಾಂಡಿಚೇರಿ, ಲಕ್ಷದ್ವೀಪ ಮತ್ತು ಅಂಡಮಾನ್ & ನಿಕೋಬಾರ್ ದ್ವೀಪಗಳು ಸೇರಿದಂತೆ ಭಾರತದ ಎಲ್ಲಾ ಮೂಲೆಗಳಿಂದ ಸುಮಾರು 1,070 ಮಾದರಿಗಳೊಂದಿಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆಯಿತು.
ಹೆಚ್ಚಿನ ಸಂಖ್ಯೆಯ ಮಾದರಿ ಅರ್ಜಿಗಳು ನಿರ್ದೇಶನ ವಿಭಾಗದಿಂದ ಬಂದವು. ನಂತರ ಹೇರ್ & ಮೇಕಪ್ ಮತ್ತು ಸಿನಿಮಾಟೋಗ್ರಫಿ ವಿಭಾಗಗಳಲ್ಲಿ ಉತ್ತಮ ಸಂಖ್ಯೆಯ ಮಾದರಿ ಅರ್ಜಿಗಳು ಬಂದವು.
ಆಯ್ಕೆ ಪ್ರಕ್ರಿಯೆಯು ಎರಡು-ಹಂತದ ಮೌಲ್ಯಮಾಪನವನ್ನು ಒಳಗೊಂಡಿದೆ:
1. ಆಯ್ಕೆ ಜ್ಯೂರಿ: ಚಲನಚಿತ್ರ ಉದ್ಯಮದ ಪ್ರಶಸ್ತಿ-ವಿಜೇತ ವೃತ್ತಿಪರರು ಚಲನಚಿತ್ರ, ಕಿರುಚಿತ್ರಗಳು, ಶೋ ರೀಲ್ ಗಳು, ಪೋರ್ಟ್ ಫೋಲಿಯೊಗಳು ಮತ್ತು ಸಂಗೀತ ಫೈಲ್ ಗಳು ಸೇರಿದಂತೆ ಬಂದಿರುವ ಎಲ್ಲಾ ನಮೂದು/ಮಾದರಿಗಳನ್ನು ಪರಿಶೀಲಿಸಿದ್ದಾರೆ. ಎಲ್ಲಾ ವಿಭಾಗಗಳಾದ್ಯಂತ ಕೇವಲ 300 ಕ್ಕೂ ಹೆಚ್ಚು ಪ್ರಮುಖ ನಮೂದುಗಳಿಗೆ ಅಂತಿಮವಾಗಿ ಸಂಕುಚಿತಗೊಳಿಸಿದ್ದಾರೆ.
2. ಗ್ರ್ಯಾಂಡ್ ಜ್ಯೂರಿ: ಚಲನಚಿತ್ರೋದ್ಯಮದ ದಿಗ್ಗಜರು ಮತ್ತು ಅನುಭವಿಗಳನ್ನು ಒಳಗೊಂಡಿರುವ ಗ್ರ್ಯಾಂಡ್ ಜ್ಯೂರಿ ತಂಡವು, ವಿಸ್ತರಿಸಿದ ಚಲನಚಿತ್ರ ನಿರ್ಮಾಣ ವ್ಯಾಪಾರ ವ್ಯವಸ್ಥೆಯ ಎಲ್ಲಾ ರೀತಿಯ ಚಲನಚಿತ್ರ ನಿರ್ಮಾಣ ವಹಿವಾಟು ವಿಭಾಗಗಳಲ್ಲಿ ಒಟ್ಟಾಗಿ ಅಂತಿಮ 100 ಭಾಗವಹಿಸುವವರನ್ನು ಆಯ್ಕೆ ಮಾಡಲು ಶಾರ್ಟ್‌ಲಿಸ್ಟ್ ಮಾಡಲಾದ ಅರ್ಜಿ ಗಳನ್ನು ಸೂಕ್ಷ್ಮವಾಗಿ ಮೌಲ್ಯಮಾಪನ ಮಾಡಿದೆ.
ಹೊಸ ನೆಲೆಯನ್ನು ಕಾಣುವ ನಿಟ್ಟಿನಲ್ಲಿ, "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ ( ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" 2024 ಇದರಲ್ಲಿ ಹೊಸದಾಗಿ ಪರಿಚಯಿಸಲಾದ ವಾಯ್ಸ್ ಓವರ್/ ಡಬ್ಬಿಂಗ್ ವಿಭಾಗ ಮತ್ತು ಸ್ವತಂತ್ರ ಹೇರ್ & ಮೇಕಪ್ ವಿಭಾಗವನ್ನು ಒಳಗೊಂಡಂತೆ 13 ಡೈನಾಮಿಕ್ ಫಿಲ್ಮ್ ಮೇಕಿಂಗ್ ಟ್ರೇಡ್ ಗಳ ಮೇಲೆ ಕೂಡಾ ಗಮನ ಕೇಂದ್ರೀಕರಿಸುವ ಮೂಲಕ ತನ್ನ ಪರಿಧಿಯನ್ನು ವಿಸ್ತರಿಸುತ್ತದೆ.
ಕಾರ್ಯಕ್ರಮವು ಈಗ ಈ ಕೆಳಗಿನ ವಿಧಾನಗಳನ್ನು ಒಳಗೊಂಡಿದೆ:
- ನಿರ್ದೇಶನ
- ನಟನೆ
- ಸಿನಿಮಾಟೋಗ್ರಫಿ
- ಸಂಪಾದನೆ ಮತ್ತು ಉಪಶೀರ್ಷಿಕೆ
- ಸ್ಕ್ರಿಪ್ಟ್ ರೈಟಿಂಗ್
- ಹಿನ್ನೆಲೆ ಗಾಯನ
- ಸಂಗೀತ ಸಂಯೋಜನೆ
- ವೇಷಭೂಷಣ ವಿನ್ಯಾಸ
- ಕಲಾ ನಿರ್ದೇಶನ
- ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ (ವಿ.ಎಫ್.ಎಕ್ಸ್), ಆಗ್ಮೆಂಟೆಡ್ ರಿಯಾಲಿಟಿ (ಎಂ.ಆರ್), ಮತ್ತು ವರ್ಚುವಲ್ ರಿಯಾಲಿಟಿ (ವಿ.ಆರ್)
- ಕೂದಲು ಮತ್ತು ಮೇಕಪ್
- ಸೌಂಡ್ ರೆಕಾರ್ಡಿಂಗ್
- ವಾಯ್ಸ್ ಓವರ್/ ಡಬ್ಬಿಂಗ್
- ಪ್ರಾರಂಭಿಕ/ ತೊಡಗಿಸಿಕೊಳ್ಳುವ ಕಾರ್ಯಕ್ರಮಗಳು ಮತ್ತು ಅವಕಾಶಗಳು
"ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ (ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" 2024 ಇದರಲ್ಲಿ ಭಾಗವಹಿಸುವವರಿಗೆ ಕ್ರಿಯಾತ್ಮಕ, ಮನಸೂರೆಗೊಳ್ಳುವ ಹಾಗೂ ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ.
"ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ (ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" ಇದರಲ್ಲಿ ಆಯ್ಕೆಯಾಗಿ ಭಾಗವಹಿಸುವ ,100 ಮಂದಿ ಗೋವಾದಲ್ಲಿ 18 ರಿಂದ 26 ನವೆಂಬರ್ 2024 ರವರೆಗೆ ಸಮೃದ್ಧವಾದ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಈ ಬಾರಿಯ ಚಲನಚಿತ್ರ ಉತ್ಸವದಲ್ಲಿ ಒಳಗೊಂಡಿರುವ ಸಮಗ್ರ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ:
ದಿಗ್ಗಜರೊಂದಿಗೆ ಉನ್ನತ ಪ್ರಶಿಕ್ಷಣ (ಲುಮಿನರಿಗಳೊಂದಿಗೆ ಮಾಸ್ಟರ್‌ಕ್ಲಾಸ್‌ಗಳು): ಈ ವರ್ಷದ "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ ( ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" ಕಾರ್ಯಕ್ರಮವು ಉದ್ಯಮದ ದಿಗ್ಗಜರು ಮತ್ತು ಅಂತರರಾಷ್ಟ್ರೀಯ ತಜ್ಞರ ನೇತೃತ್ವದ ಮಾಸ್ಟರ್ ಕ್ಲಾಸ್ ಗಳಿಗೆ ವಿಶೇಷತೆ ನೀಡುತ್ತದೆ. ಈ ಅಧಿವೇಶನಗಳು ನಟನೆ, ಪಿಚಿಂಗ್, ಬರವಣಿಗೆ ಮತ್ತು ಪೋಸ್ಟ್-ಪ್ರೊಡಕ್ಷನ್ ಸೇರಿದಂತೆ ವಿವಿಧ ಚಲನಚಿತ್ರ ನಿರ್ಮಾಣ ವಿಭಾಗಗಳ ಗುಚ್ಛವನ್ನು ಒಳಗೊಂಡಿದೆ. ಆ ವಿಶೇಷ ವಿಭಾಗಗಳ ಪ್ರಶಿಕ್ಷಣ ವಿಷಯಗಳಲ್ಲಿ ಈ ಕೆಳಗಿನವು ಸೇರಿವೆ:
ಮಾಸ್ಟರಿಂಗ್ ದಿ ಆರ್ಟ್ ಆಫ್ ಆಕ್ಟಿಂಗ್: ಎ ಗೈಡ್ ಟು ಕ್ರಾಫ್ಟಿಂಗ್ ಅಥೆಂಟಿಕ್ ಪರ್ಫಾರ್ಮೆನ್ಸ್, ಮುಖೇಶ್ ಛಾಬ್ರಾ, ಭಾರತದ ಪ್ರಮುಖ ಕಾಸ್ಟಿಂಗ್ ಡೈರೆಕ್ಟರ್.
ದಿ ಆರ್ಟ್ ಆಫ್ ಪಿಚಿಂಗ್: ದಿ ಸ್ಟೋರಿ ಇಂಕ್ ನ ಸಂಸ್ಥಾಪಕ ಸಿದ್ಧಾರ್ಥ್ ಜೈನ್ ಅವರಿಂದ ನಿರ್ಮಾಪಕರು, ವಿತರಕರು ಮತ್ತು ಹೂಡಿಕೆದಾರರಿಗೆ ಪರಿಪೂರ್ಣ ಪಿಚ್ ಅನ್ನು ರಚಿಸುವುದು.
ಕ್ರಾಫ್ಟಿಂಗ್ ಸಿನೆಮ್ಯಾಟಿಕ್ ಹಾರ್ಮನಿ: ದಿ ಆರ್ಟ್ ಆಫ್ ಡಿಐ ಮತ್ತು ಕಲರ್ ಗ್ರೇಡಿಂಗ್ ಅಕ್ರಾಸ್ ಫಿಲ್ಮ್ ಡಿಸಿಪ್ಲೀನ್ಸ್, ಪೃಥ್ವಿ ಬುದ್ಧವರಪು, ಬ್ರಿಡ್ಜ್ ಪೋಸ್ಟ್‌ವರ್ಕ್ಸ್ (ಆನ್‌ಲೈನ್) ನಲ್ಲಿ ಹೆಸರಾಂತ ಪ್ರಸಾದನ ಕಲಾಕಾರ (ಕ್ರಿಸ್ಟಲ್ /ಬಣ್ಣಕಾರ).
ದಿ ರೈಟರ್ಸ್ ಪ್ರೊಸೆಸ್: ಫ್ರಾಮ್ ರಿಸರ್ಚ್ ಟು ರೈಟಿಂಗ್ ವಿಶುವಲ್ ಅವರಿಂದ ಖ್ಯಾತ ಚಿತ್ರಕಥೆಗಾರ ಚಾರುದತ್ತ್ ಆಚಾರ್ಯ.
ಪಾಥ್‌ವೇಸ್ ಟು ಗ್ಲೋಬಲ್ ರೆಕಗ್ನಿಷನ್: ನ್ಯಾವಿಗೇಟಿಂಗ್ ಇಂಟರ್ನ್ಯಾಷನಲ್ ಮಾರ್ಕೆಟ್ಸ್ ಅಂಡ್ ಲ್ಯಾಬ್ಸ್ ಫಾರ್ ಇಂಡಿಪೆಂಡೆಂಟ್ ಫಿಲ್ಮ್ ಮೇಕರ್ಸ್, ಎ ಲಿಟಲ್ ಅನಾರ್ಕಿ ಫಿಲ್ಮ್ಸ್ ನ ಸಂಸ್ಥಾಪಕ ಕೋವಲ್ ಭಾಟಿಯಾ ಅವರಿಂದ.
ರಿಯಲ್ ಟು ರೀಲ್: ದ ಕ್ರಾಫ್ಟ್ ಅಂಡ್ ಸ್ಕೋಪ್ ಆಫ್ ಡಾಕ್ಯುಮೆಂಟರಿ ಫಿಲ್ಮ್ ಮೇಕಿಂಗ್, ಸೈಫ್ ಅಖ್ತರ್, ವೈ.ಆರ್.ಎಫ್. ಸ್ಟುಡಿಯೋಸ್ ನಲ್ಲಿ ಫಿಲ್ಮ್ ಮೇಕರ್.
48-ಗಂಟೆಗಳ ಚಲನಚಿತ್ರ ನಿರ್ಮಾಣದ ಸವಾಲು: ಭಾಗವಹಿಸುವವರನ್ನು, 20 ಸದಸ್ಯರ ಐದು ತಂಡಗಳಾಗಿ ವಿಂಗಡಿಸಲಾಗಿದೆ. ಇವರುಗಳು 48 ಗಂಟೆಗಳ ಒಳಗೆ "ತಂತ್ರಜ್ಞಾನದ ಯುಗದ ಸಂಬಂಧಗಳು" ಎಂಬ ವಿಷಯದ ಮೇಲೆ ಕಿರುಚಿತ್ರಗಳನ್ನು ರಚಿಸುತ್ತಾರೆ. ಪಂಜಿಮ್ ನ 4-ಕಿಲೋಮೀಟರ್ ಪರಿಧಿಯೊಳಗೆ 12 ಸ್ಥಳಗಳಲ್ಲಿ 2024 ರ ನವೆಂಬರ್ 21 ರಿಂದ 23 ರವರೆಗೆ ಚಲನಚಿತ್ರ ನಿರ್ಮಾಣ ಸವಾಲು ನಡೆಯುತ್ತದೆ.
ಅತ್ಯುತ್ತಮ ಚಲನಚಿತ್ರಗಳನ್ನು ಉತ್ಸವದ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಗ್ರೇಟ್ ಗ್ರ್ಯಾಂಡ್ ಜ್ಯೂರಿ ತೀರ್ಪುಗಾರರಿಂದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಚಲನಚಿತ್ರ ನಿರ್ಮಾಣ ಸವಾಲನ್ನು ಶಾರ್ಟ್ಸ್ ಇಂಟರ್‌ನ್ಯಾಶನಲ್ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಇದು ಯುಕೆ ಮೂಲದ ಸಂಸ್ಥೆಯೊಂದರ ಜೊತೆಗೆ ಉತ್ತಮ ನೆಟ್‌ವರ್ಕ್ ಮತ್ತು ಸೃಜನಶೀಲತೆ, ಟೀಮ್‌ವರ್ಕ್ ಮತ್ತು ಕಥೆ ಹೇಳುವಿಕೆಯನ್ನು ಬಿಗಿಯಾದ ಗಡುವಿನ ಅಡಿಯಲ್ಲಿ ಪರೀಕ್ಷಿಸಲು ಒಂದು ಅನನ್ಯ ಅವಕಾಶವಾಗಿದೆ.
ಟ್ಯಾಲೆಂಟ್ ಕ್ಯಾಂಪ್: ರಾಯ್ ಕಪೂರ್ ಫಿಲ್ಮ್ಸ್, ಬ್ರಿಡ್ಜ್ ಪೋಸ್ಟ್‌ವರ್ಕ್ಸ್, ವಿ ಆರ್ ಯುವಾ, ಮುಕೇಶ್ ಛಾಬ್ರಾ ಕಾಸ್ಟಿಂಗ್ ಕಂ, ದಿ ಸ್ಟೋರಿ ಇಂಕ್ ಮತ್ತು ಇತ್ಯಾದಿ ಸೇರಿದಂತೆ 11 ಕ್ಕೂ ಹೆಚ್ಚು ಪ್ರಮುಖ ಮಾಧ್ಯಮ ಮತ್ತು ಮನರಂಜನಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ತಮ್ಮ ಕೌಶಲ್ಯಗಳನ್ನು ಪಿಚ್ ಮಾಡಲು ಭಾಗವಹಿಸುವವರಿಗೆ ವಿಶೇಷ ಅವಕಾಶ ಸೃಷ್ಟಿಸಲಾಗಿದೆ.
ಈ ಪ್ರಮುಖ ಕಾರ್ಯಕ್ರಮಗಳು ಅರ್ಥಪೂರ್ಣ ಸಂಭಾಷಣೆಗಳನ್ನು ಮತ್ತು ಸಂಭಾವ್ಯ ಸಹಯೋಗಗಳನ್ನು ಸುಗಮಗೊಳಿಸುತ್ತವೆ ಮತ್ತು ಚಲನಚಿತ್ರ ಉದ್ಯಮದಲ್ಲಿ ಭಾಗವಹಿಸುವವರ ಭವಿಷ್ಯವನ್ನು ಹೆಚ್ಚಿಸುತ್ತದೆ. ಗಮನಾರ್ಹವಾಗಿ, 100 ಕ್ರಿಯೇಟಿವ್ ಮೈಂಡ್‌ಗಳ ಜೊತೆಗೆ, ನಮ್ಮ ಗೌರವಾನ್ವಿತ 225 ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್ ಮತ್ತು ಚಲನಚಿತ್ರ ನಿರ್ಮಾಪಕರು ಉದ್ಯಮದ ಗೌರವಾನ್ವಿತ ಟ್ಯಾಲೆಂಟ್ ಪಾಲುದಾರರೊಂದಿಗೆ ನೆಟ್‌ವರ್ಕ್ ಮಾಡಲು ಅವಕಾಶವನ್ನು ಹೊಂದಿರುತ್ತಾರೆ.
ಐಎಫ್‌ಎಫ್‌ಐ ಮತ್ತು ಫಿಲ್ಮ್ ಬಜಾರ್ ನ ವಿಶೇಷತೆಗಳು: ಭಾಗವಹಿಸುವವರು 55 ನೇ ಐಎಫ್‌ಎಫ್‌ಐ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಫಿಲ್ಮ್ ಬಜಾರ್, ಭಾರತದ ಪ್ರಮುಖ ಸಿನಿ ಮಾರುಕಟ್ಟೆಯನ್ನು ವೀಕ್ಷಿಸುತ್ತಾರೆ. 24ನೇ ನವೆಂಬರ್ 2024 ರಂದು, ಫಿಲ್ಮ್ ಬಜಾರ್ ನ ಮಾರ್ಗದರ್ಶಿ ತಂಡವು ಸಿನಿಮಾರಂಗದ ವ್ಯವಹಾರದ ವಿವಿಧ ವಿಭಾಗಗಳಲ್ಲಿನ ಸನಿಹದ ಒಳನೋಟಗಳನ್ನು ನೀಡಲಿವೆ. ಉತ್ಸವದ ಉದ್ದಕ್ಕೂ ವಿವಿಧ ಚಲನಚಿತ್ರ ಪ್ರದರ್ಶನಗಳಿಂದ ಪೂರಕವಾಗಿದ್ದು, ಭಾಗವಹಿಸುವವರಿಗೆ ಉತ್ತಮ ಅನುಭವ ನೀಡಲಿದೆ.
ತೀರ್ಮಾನ:
ಚಲನಚಿತ್ರೋತ್ಸವ ಇದರ ನಾಲ್ಕನೇ ಆವೃತ್ತಿಯಲ್ಲಿ, "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ ( ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ -ಸಿಮೊಟ್ )" ವೇದಿಕೆಯು ಯುವ ಕಲಾವಿದರು, ಚಲನಚಿತ್ರ ನಿರ್ಮಾಪಕರು ಮತ್ತು ರಚನೆಕಾರರ ಪ್ರತಿಭೆಗಳು ಮತ್ತು ಮಹತ್ವಾಕಾಂಕ್ಷೆಯ ಚಲನಚಿತ್ರಗಾರರನ್ನು ಒಂದೆಡೆ ಸೇರಿಸುವ ಒಂದು ರೀತಿಯ ವಿಶೇಷತೆ ಹೊಂದಿದೆ. ಭಾರತೀಯ ಮತ್ತು ಅಂತರಾಷ್ಟ್ರೀಯ ಸಿನೆಮಾ ರಂಗದ ಪ್ರಮುಖ ದಿಗ್ಗಜರಿಂದ ಕಲಿಯಲು ಮತ್ತು ಅವರ ಅನುಭವದೊಂದಿಗೆ ತೊಡಗಿಸಿಕೊಳ್ಳಲು ಸರಿಸಾಟಿಯಿಲ್ಲದ ಅವಕಾಶಗಳನ್ನು ಒದಗಿಸುತ್ತದೆ. "ನಾಳೆಯ ಸೃಜನಾತ್ಮಕ ಮನಸ್ಸುಗಳ ವೇದಿಕೆ ( ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ - ಸಿಮೊಟ್ )" ವೇದಿಕೆಯಲ್ಲಿ ಭಾಗವಹಿಸುವವರಿಗೆ ತಮ್ಮ ಕಲೆಯನ್ನು ಹೆಚ್ಚಿಸಲು, ತಮ್ಮ ಪರಿಧಿಯನ್ನು ವಿಸ್ತರಿಸಲು ಮತ್ತು ಜಾಗತಿಕ ಚಲನಚಿತ್ರೋದ್ಯಮದಲ್ಲಿ ದೀರ್ಘಕಾಲೀನ ಸಂಪರ್ಕಗಳನ್ನು ನಿರ್ಮಿಸಲು ಅವಕಾಶ ಹಾಗೂ ಅಧಿಕಾರ ನೀಡುತ್ತದೆ. ಈ ಉಪಕ್ರಮವು ಅವರ ಸಾಮರ್ಥ್ಯವನ್ನು ಗುರುತಿಸುವುದಲ್ಲದೆ, ಕನಸುಗಳನ್ನು ಅದ್ಭುತ ಸಾಧನೆಗಳಾಗಿ ಪರಿವರ್ತಿಸಲು ಅಗತ್ಯವಾದ ಸಾಧನಗಳು ಮತ್ತು ಮಾರ್ಗದರ್ಶನದೊಂದಿಗೆ ಅವರನ್ನು ಸಜ್ಜುಗೊಳಿಸುತ್ತದೆ. ಜಾಗತಿಕ ಮಟ್ಟದಲ್ಲಿ ಕಥೆ ಹೇಳುವ ಭವಿಷ್ಯವನ್ನು ಕೂಡ ರೂಪಿಸುತ್ತದೆ.
ಉಲ್ಲೇಖಗಳು:
https://pib.gov.in/PressReleseDetail.aspx?PRID=2072918®=3&lang=1
https://iffigoa.org/cmot/about-cmot
https://pib.gov.in/PressReleaseIframePage.aspx?http://PRID=2052589#:~:text=Best%20Debut%20Director%20Award%3A%20A,talent%20in%20the%20film%20industry
https://pib.gov.in/PressReleaseIframePage.aspx?PRID=2071321
*****
(Release ID: 2073973)
Visitor Counter : 16
Read this release in:
English
,
Urdu
,
Marathi
,
Konkani
,
Hindi
,
Bengali-TR
,
Assamese
,
Punjabi
,
Tamil
,
Telugu
,
Malayalam