ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಾಳೆ ನವದೆಹಲಿಯಲ್ಲಿ ಎನ್.ಐ.ಎ.  ಆಯೋಜಿಸಿರುವ ಎರಡು ದಿನಗಳ 'ಭಯೋತ್ಪಾದನಾ ನಿಗ್ರಹ ಸಮಾವೇಶ-2024' ರ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುವ ಮೂಲಕ ಈ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ಬದ್ಧವಾಗಿದೆ

ಈ ವಾರ್ಷಿಕ ಸಮ್ಮೇಳನವು ಭಯೋತ್ಪಾದನೆಯನ್ನು ನಿಗ್ರಹಿಸುವ ಸಂಸ್ಥೆಗಳಾದ ತಾಂತ್ರಿಕ, ಕಾನೂನು ಮತ್ತು ವಿಧಿ ವಿಜ್ಞಾನ ತಜ್ಞರು ಮತ್ತು ಏಜೆನ್ಸಿಗಳು ರಾಷ್ಟ್ರದ ಭದ್ರತೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಮತ್ತು ಭಯೋತ್ಪಾದನೆಯಿಂದ ಉಂಟಾಗುವ ಬೆದರಿಕೆಗಳ ಬಗ್ಗೆ  ಚರ್ಚಿಸುವ ಸಮನ್ವಯ ಕೇಂದ್ರವಾಯಿತು

ಸಮ್ಮೇಳನದ ಮುಖ್ಯ ಗಮನವು ಭಯೋತ್ಪಾದನೆಯ ಬೆದರಿಕೆಯ ವಿರುದ್ಧ ಸಂಘಟಿತ ಕ್ರಮಕ್ಕಾಗಿ 'ಇಡೀ ಸರ್ಕಾರದ ವಿಧಾನ'ದಲ್ಲಿ ವಾಹಿನಿಗಳನ್ನು ಸ್ಥಾಪಿಸುವ ಮೂಲಕ ವಿವಿಧ ಪಾಲುದಾರರ ನಡುವೆ ಸಮಷ್ಟಿಯನ್ನು ಅಭಿವೃದ್ಧಿ ಪಡಿಸುವುದಾಗಿದೆ

Posted On: 06 NOV 2024 6:21PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುರುವಾರ, 7ನೇ ನವೆಂಬರ್ 2024 ರಂದು ನವದೆಹಲಿಯಲ್ಲಿ 'ಭಯೋತ್ಪಾದನಾ ನಿಗ್ರಹ ಸಮಾವೇಶ-2024' ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ಎರಡು ದಿನಗಳ ಸಮ್ಮೇಳನವನ್ನು ಆಯೋಜಿಸಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಭಯೋತ್ಪಾದನೆಯ ವಿರುದ್ಧ ಶೂನ್ಯ-ಸಹಿಷ್ಣು ನೀತಿಯನ್ನು ಅನುಸರಿಸುವ ಮೂಲಕ ಅದರ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ಬದ್ಧವಾಗಿದೆ.

ಈ ವಾರ್ಷಿಕ ಸಮ್ಮೇಳನವು ಭಯೋತ್ಪಾದನೆಯನ್ನು ನಿಗ್ರಹಿಸುವ ಸಂಸ್ಥೆಗಳಾದ ತಾಂತ್ರಿಕ, ಕಾನೂನು ಮತ್ತು ವಿಧಿವಿಜ್ಞಾನ ತಜ್ಞರು ತಜ್ಞರು ಮತ್ತು ಏಜೆನ್ಸಿಗಳು ರಾಷ್ಟ್ರದ ಭದ್ರತೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಮತ್ತು ಭಯೋತ್ಪಾದನೆಯಿಂದ ಉಂಟಾಗುವ ಬೆದರಿಕೆಗಳ ಬಗ್ಗೆ  ಚರ್ಚಿಸುವ ಸಮನ್ವಯ ಕೇಂದ್ರವಾಗಿದೆ.
 
ಸಮ್ಮೇಳನದ ಮುಖ್ಯ ಗಮನವು ಭಯೋತ್ಪಾದನೆಯ ಬೆದರಿಕೆಯ ವಿರುದ್ಧ ಸಂಘಟಿತ ಕ್ರಮಕ್ಕಾಗಿ 'ಇಡೀ ಸರ್ಕಾರದ ವಿಧಾನ'ದಲ್ಲಿ ವಾಹಿನಿಗಳನ್ನು ಸ್ಥಾಪಿಸುವ ಮೂಲಕ ವಿವಿಧ ಪಾಲುದಾರರ ನಡುವೆ ಸಮಷ್ಟಿಯನ್ನು ಅಭಿವೃದ್ಧಿಪಡಿಸುವುದಾಗಿದೆ ಮತ್ತು ಭವಿಷ್ಯದ ನೀತಿ ನಿರೂಪಣೆಗೆ ವಸ್ತುನಿಷ್ಠ ಮಾಹಿತಿಗಳನ್ನು ಪ್ರಸ್ತುತಪಡಿಸುವುದು.

ಎರಡು ದಿನಗಳ ಸಮ್ಮೇಳನದಲ್ಲಿ ಸಮಾಲೋಚನೆ ಮತ್ತು ಚರ್ಚೆಗಳ ಕೇಂದ್ರಬಿಂದುವು ಭಯೋತ್ಪಾದನಾ ನಿಗ್ರಹ ತನಿಖೆಯಲ್ಲಿ ಕಾನೂನು ಚೌಕಟ್ಟನ್ನು ವಿಕಸನಗೊಳಿಸುವುದು, ಅನುಭವಗಳ ಹಂಚಿಕೆ ಮತ್ತು ಉತ್ತಮ ಅಭ್ಯಾಸಗಳು, ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸವಾಲುಗಳು ಮತ್ತು ಅವಕಾಶಗಳು, ಅಂತರರಾಷ್ಟ್ರೀಯ ಕಾನೂನು ಸಹಕಾರ ಮತ್ತು ವಿವಿಧ ಭಯೋತ್ಪಾದನಾ ನಿಗ್ರಹ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ. ಭಯೋತ್ಪಾಧನಾ ನಿಗ್ರಹ ಪ್ರದೇಶಗಳಲ್ಲಿ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ಕಿತ್ತುಹಾಕುವ ತಂತ್ರಗಳು ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಮೇಲೆ ದೇಶವು ಗಮನಹರಿಸುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಪೊಲೀಸ್ ಅಧಿಕಾರಿಗಳು, ಭಯೋತ್ಪಾದನೆ ನಿಗ್ರಹದ ವಿಷಯಗಳೊಂದಿಗೆ ವ್ಯವಹರಿಸುವ ಕೇಂದ್ರ ಏಜೆನ್ಸಿಗಳು, ಇಲಾಖೆಗಳ ಅಧಿಕಾರಿಗಳು ಹಾಗು ಕಾನೂನು, ವಿಧಿವಿಜ್ಞಾನ, ತಂತ್ರಜ್ಞಾನ ಮುಂತಾದ ಸಂಬಂಧಿತ ಕ್ಷೇತ್ರಗಳ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
 

*****


(Release ID: 2071353) Visitor Counter : 34