ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಐ ಎಫ್‌ ಎಫ್‌ ಐ 2024 'ಭಾರತೀಯ ಫೀಚರ್ ಚಲನಚಿತ್ರದ  ಅತ್ಯುತ್ತಮ ಚೊಚ್ಚಲ ನಿರ್ದೇಶಕ' ವರ್ಗಕ್ಕೆ ಅಧಿಕೃತ ಆಯ್ಕೆಯನ್ನು ಪ್ರಕಟಿಸಿದೆ


55ನೇ ಐ ಎಫ್‌ ಎಫ್‌ ಐ ನಲ್ಲಿ ಭಾರತೀಯ ನಿರ್ದೇಶಕರ 5 ಚೊಚ್ಚಲ ಚಲನಚಿತ್ರಗಳು  ಸ್ಪರ್ಧಿಸಲಿವೆ

ದೇಶದಲ್ಲಿ ಹೊಸ ಮತ್ತು ಯುವ ಪ್ರತಿಭೆಗಳನ್ನು ಉತ್ತೇಜಿಸುವ ಉದ್ದೇಶದಿಂದ, ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) 55 ನೇ ಆವೃತ್ತಿಯು ನಿಮಗೆ ಹೊಸ ಪ್ರಶಸ್ತಿ ವಿಭಾಗವನ್ನು ತಂದಿದೆ: 'ಭಾರತೀಯ ಚಲನಚಿತ್ರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ' ವಿಭಾಗವು ಐದು ಗಮನಾರ್ಹ ಚೊಚ್ಚಲ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಇವು ಭಾರತದಾದ್ಯಂತ ತಾಜಾ ದೃಷ್ಟಿಕೋನಗಳು, ವೈವಿಧ್ಯಮಯ ನಿರೂಪಣೆಗಳು ಮತ್ತು ನವೀನ ಸಿನಿಮಾ ಶೈಲಿಗಳನ್ನು ಎತ್ತಿ ತೋರಿಸುತ್ತವೆ. ನವೆಂಬರ್ 20-28, 2024 ರಿಂದ ನಡೆಯಲಿರುವ ಐ ಎಫ್‌ ಎಫ್‌ ಐ, ಭಾರತೀಯ ಫೀಚರ್ ಚಲನಚಿತ್ರ ವಿಭಾಗದಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕನ ಅಧಿಕೃತ ಆಯ್ಕೆಯನ್ನು ಪ್ರಕಟಿಸಿದೆ.

ಭಾರತೀಯ ಫೀಚರ್ ಚಲನಚಿತ್ರ ವಿಭಾಗದ ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಅಧಿಕೃತ ಆಯ್ಕೆ

ಕ್ರ.ಸಂ.

ಚಿತ್ರದ ಮೂಲ ಶೀರ್ಷಿಕೆ

  ನಿರ್ದೇಶಕ

ಭಾಷೆ

1

ಬೂಂಗ್

ಲಕ್ಷ್ಮೀಪ್ರಿಯಾ ದೇವಿ

ಮಣಿಪುರಿ

2

ಘರತ್ ಗಣಪತಿ

ನವಜ್ಯೋತ್ ಬಂಡಿವಾಡೇಕರ್

ಮರಾಠಿ

3

ಮಿಕ್ಕ ಬಣ್ಣದ ಹಕ್ಕಿ (ಬರ್ಡ್‌ ಆಫ್‌ ಎ ಡಿಫರೆಂಟ್‌ ಫೆದರ್)

ಮನೋಹರ ಕೆ

ಕನ್ನಡ

4

ರಜಾಕರ್ (ಸೈಲೆಂಟ್‌ ಜೆನೊಸೈಡ್‌ ಆಫ್‌ ಹೈದರಾಬಾದ್‌)

ಯಥಾ ಸತ್ಯನಾರಾಯಣ

ತೆಲುಗು

5

ಥಾನುಪ್ (ದ ಕೋಲ್ಡ್)

ರಾಗೇಶ್ ನಾರಾಯಣನ್

ಮಲಯಾಳಂ

ಈ ಪ್ರತಿಯೊಂದು ಚಲನಚಿತ್ರವು ವಿಶಿಷ್ಟ ಕಥೆಗಳು ಮತ್ತು ಪ್ರಾದೇಶಿಕ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ಭಾರತದ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತದೆ.

ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

ಗೋವಾದಲ್ಲಿ ನಡೆಯುವ 55 ನೇ ಐ ಎಫ್‌ ಎಫ್‌ ಐ ಸಮಯದಲ್ಲಿ ತೀರ್ಪುಗಾರರ ತಂಡವು ಈ ಪಟ್ಟಿ ಮಾಡಲಾದ ಚಲನಚಿತ್ರಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಭಾರತೀಯ ಫೀಚರ್ ಫಿಲ್ಮ್ ಪ್ರಶಸ್ತಿಯ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ವಿಜೇತರನ್ನು ನವೆಂಬರ್ 28, 2024 ರಂದು ಸಮಾರೋಪ ಸಮಾರಂಭದಲ್ಲಿ ಘೋಷಿಸಲಾಗುತ್ತದೆ.

ಭಾರತದ ಚಲನಚಿತ್ರ ಮತ್ತು ಕಲಾ ಸಮುದಾಯಗಳ ಖ್ಯಾತ ವೃತ್ತಿಪರರನ್ನು ಒಳಗೊಂಡ ಪರಿಶೀಲನಾ ಸಮಿತಿಯು 117 ಅರ್ಹ ಸಲ್ಲಿಕೆಗಳಿಂದ ಈ ಐದು ಚಲನಚಿತ್ರಗಳನ್ನು ಆಯ್ಕೆ ಮಾಡಿದೆ.

ಉದಯೋನ್ಮುಖ ಭಾರತೀಯ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ

ಈ ವರ್ಷ, ಐ ಎಫ್‌ ಎಫ್‌ ಐ ಚಲನಚಿತ್ರೋದ್ಯಮದಲ್ಲಿ ಹೊಸ ದೃಷ್ಟಿಕೋನಗಳನ್ನು ಉತ್ತೇಜಿಸಲು ಮತ್ತು ಸಾಂಪ್ರದಾಯಿಕ ಕಥೆ ಹೇಳುವ ಗಡಿಗಳನ್ನು ಮೀರಿದ ಸೃಜನಶೀಲತೆಯನ್ನು ಉತ್ತೇಜಿಸಲು ಚೊಚ್ಚಲ ಭಾರತೀಯ ಚಲನಚಿತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಚೊಚ್ಚಲ ಚಲನಚಿತ್ರಗಳನ್ನು ಗೌರವಿಸುವ ಮೂಲಕ, ಐ ಎಫ್‌ ಎಫ್‌ ಐ ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಮೆಚ್ಚುಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾತೃಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರೇಕ್ಷಕರನ್ನು ತಲುಪಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಸ್ಪರ್ಧಾತ್ಮಕ ಚಲನಚಿತ್ರಗಳ ವಿಭಾಗದಲ್ಲಿ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ಸ್ (ಎಫ್‌ ಐ ಎ ಪಿ ಎಫ್‌) ವಿಶ್ವಾದ್ಯಂತ ಮಾನ್ಯತೆ ಪಡೆದ 14 ಚಲನಚಿತ್ರೋತ್ಸವಗಳಲ್ಲಿ ಐ ಎಫ್‌ ಎಫ್‌ ಐ ಒಂದಾಗಿದೆ, ಇದು ಭಾರತೀಯ ಚಲನಚಿತ್ರ ನಿರ್ಮಾತೃಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲು ಪ್ರಮುಖ ವೇದಿಕೆಯಾಗಿದೆ.

 

ಹೆಚ್ಚಿನ ಮಾಹಿತಿಗಾಗಿ ಓದಿ: https://pib.gov.in/PressReleaseIframePage.aspx?PRID=2054935

55ನೇ ಐ ಎಫ್‌ ಎಫ್‌ ಐ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ಪ್ರದರ್ಶನಗಳ ಪೂರ್ಣ ವೇಳಾಪಟ್ಟಿಗಾಗಿ, ದಯವಿಟ್ಟು ಅಧಿಕೃತ ಜಾಲತಾಣ  www.iffigoa.org ಗೆ ಭೇಟಿ ನೀಡಿ.

 

*****

iffi reel

(Release ID: 2070709) Visitor Counter : 34