ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಕ್ಟೋಬರ್ 30-31 ರಂದು ಗುಜರಾತ್‌ಗೆ ಪ್ರಧಾನಮಂತ್ರಿ ಭೇಟಿ


ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗಿಯಾಗಲಿರುವ ನರೇಂದ್ರ ಮೋದಿ

ಏಕತಾ ನಗರದಲ್ಲಿ 280 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ 

ಆರಂಭ್ 6.0 ರಲ್ಲಿ 99ನೇ ಕಾಮನ್ ಫೌಂಡೇಶನ್ ಕೋರ್ಸ್‌ನ ಆಫೀಸರ್ ಟ್ರೈನಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 29 OCT 2024 3:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 30-31 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 30 ರಂದು ಅವರು ಕೆವಾಡಿಯಾದ ಏಕ್ತಾ ನಗರಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಸಂಜೆ 5:30ರ ಸುಮಾರಿಗೆ ಏಕತಾ ನಗರದಲ್ಲಿ 280 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ, ಸುಮಾರು 6 ಗಂಟೆಗೆ, ಅವರು ಆರಂಭ್ 6.0 ರಲ್ಲಿ 99ನೇ ಕಾಮನ್ ಫೌಂಡೇಶನ್ ಕೋರ್ಸ್‌ನ ತರಬೇತಿದಾರ ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.  ಅಕ್ಟೋಬರ್ 31 ರಂದು, ಬೆಳಿಗ್ಗೆ 7:15ರ ಸುಮಾರಿಗೆ, ಪ್ರಧಾನಮಂತ್ರಿಗಳು ಏಕತೆಯ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ, ನಂತರ ರಾಷ್ಟ್ರೀಯ ಏಕತಾ ದಿವಸ್ ಆಚರಣೆಗಳು ನಡೆಯಲಿವೆ.

ಪ್ರಧಾನಮಂತ್ರಿಯವರು ಏಕತಾ ನಗರದಲ್ಲಿ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಪ್ರವಾಸಿ ಅನುಭವವನ್ನು ಹೆಚ್ಚಿಸಲು, ಸೌಲಭ್ಯಗಳನ್ನು ಸುಧಾರಿಸಲು ಮತ್ತು ಪ್ರದೇಶದಲ್ಲಿ ಸುಸ್ಥಿರತೆಯ ಉಪಕ್ರಮಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿವೆ.

ಪ್ರಾರಂಭ್ 6.0ರಲ್ಲಿ ರಾಷ್ಟ್ರೀಯ ಏಕತಾ ದಿವಸ್‌ನ ಮುನ್ನಾದಿನದಂದು 99ನೇ ಕಾಮನ್ ಫೌಂಡೇಶನ್ ಕೋರ್ಸ್‌ನ ಅಧಿಕಾರಿ ತರಬೇತಿದಾರರನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಲಿದ್ದಾರೆ. ಈ ವರ್ಷದ ಕಾರ್ಯಕ್ರಮದ ಥೀಮ್ “ಆತ್ಮನಿರ್ಭರ್ ಮತ್ತು ವಿಕಸಿತ ಭಾರತಗಾಗಿ ಮಾರ್ಗಸೂಚಿ”. 

99ನೇ ಕಾಮನ್ ಫೌಂಡೇಶನ್ ಕೋರ್ಸ್ - ಆರಂಭ್ 6.0 ನಲ್ಲಿ ಭಾರತದ 16 ನಾಗರಿಕ ಸೇವೆಗಳು ಮತ್ತು ಭೂತಾನ್‌ನ 3 ನಾಗರಿಕ ಸೇವೆಗಳಿಂದ 653 ಆಫೀಸರ್ ಟ್ರೇನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅಕ್ಟೋಬರ್ 31 ರಂದು ಪ್ರಧಾನಮಂತ್ರಿಯವರು ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್‌ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಅವರು ಏಕತಾ ದಿವಸ್ ಪ್ರತಿಜ್ಞೆಯನ್ನು ಸ್ವೀಕರಿಸಲಿದ್ದಾರೆ, ಬೋಧಿಸಲಿದ್ದಾರೆ ಮತ್ತು ಏಕತಾ ದಿವಸ್ ಪರೇಡ್‌ ವೀಕ್ಷಿಸಲಿದ್ದಾರೆ. ಇದರಲ್ಲಿ 9 ರಾಜ್ಯಗಳ 16 ಕವಾಯತು ತಂಡಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ಪೊಲೀಸ್, 4 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಎನ್‌ಸಿಸಿ ಮತ್ತು ಮೆರವಣಿಗೆಯ ಬ್ಯಾಂಡ್ ಇರುತ್ತದೆ. ವಿಶೇಷ ಆಕರ್ಷಣೆಗಳಲ್ಲಿ ಎನ್‌ಎಸ್‌ಜಿಯ ಹೆಲ್ ಮಾರ್ಚ್ ಕಾಂಟಿಜೆಂಟ್, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಮಹಿಳಾ ಮತ್ತು ಪುರುಷ ಬೈಕರ್‌ಗಳ ಡೇರ್‌ಡೆವಿಲ್ ಶೋ, ಬಿಎಸ್‌ಎಫ್‌ನಿಂದ ಭಾರತೀಯ ಮಾರ್ಷಲ್ ಆರ್ಟ್ಸ್ ಸಂಯೋಜನೆಯ ಪ್ರದರ್ಶನ, ಶಾಲಾ ಮಕ್ಕಳಿಂದ ಪೈಪ್ಡ್‌ ಬ್ಯಾಂಡ್ ಶೋ, ಭಾರತೀಯ ವಾಯುಪಡೆಯಿಂದ 'ಸೂರ್ಯ ಕಿರಣ್' ಫ್ಲೈಪಾಸ್ಟ್, ಇತ್ಯಾದಿ ಕಾರ್ಯಕ್ರಮಗಳು ಇರಲಿವೆ.

 

*****




(Release ID: 2069824) Visitor Counter : 4