ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ 'ರಾಷ್ಟ್ರೀಯ ಏಕತಾ ದಿವಸ್' ರಂದು ನಡೆಯುವ 'ರನ್ ಫಾರ್ ಯೂನಿಟಿ' ಅನ್ನು ಈ ಬಾರಿ ಅಕ್ಟೋಬರ್ 29 ರಂದು ಆಯೋಜಿಸಲಾಗಿದೆ


ಆಕಾಶವಾಣಿಯ ತಮ್ಮ ‘ಮನ್ ಕಿ ಬಾತ್'ನಲ್ಲಿ ಇದನ್ನು ಘೋಷಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ಬಾರಿ ದೀಪಾವಳಿಯ ಪ್ರಯುಕ್ತ ಅಕ್ಟೋಬರ್ 29 ರಂದು ಅಂದರೆ ಮಂಗಳವಾರ 'ಏಕತೆಗಾಗಿ ಓಟ' ನಡೆಯಲಿದೆ ಎಂದು ಹೇಳಿದರು

ದೇಶದ ಜನರು ಇದರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ದೇಶದ ಏಕತೆಯ ಮಂತ್ರದ ಜತೆಗೆ, ಫಿಟ್ ನೆಸ್ ಮಂತ್ರವನ್ನು ಎಲ್ಲೆಡೆ ಹರಡಬೇಕು ಎಂದು ಪ್ರಧಾನಮಂತ್ರಿ ಮನವಿ ಮಾಡಿದರು

ಅಕ್ಟೋಬರ್ 31 ರಂದು 'ರಾಷ್ಟ್ರೀಯ ಏಕತಾ ದಿವಸ್' ದಿನದಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞೆಯನ್ನು ಆಯೋಜಿಸಲಾಗುವುದು

Posted On: 27 OCT 2024 9:04PM by PIB Bengaluru

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ 'ರಾಷ್ಟ್ರೀಯ ಏಕತಾ ದಿವಸ್' ದಿನದಂದು ನಡೆಯುವ 'ರನ್ ಫಾರ್ ಯೂನಿಟಿ' ಅನ್ನು ಈ ಬಾರಿ ಅಕ್ಟೋಬರ್ 29 ರಂದು ಆಯೋಜಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಕಾಶವಾಣಿಯ ತಮ್ಮ 'ಮನ್ ಕಿ ಬಾತ್ ' ಕಾರ್ಯಕ್ರಮದಲ್ಲಿ ಇದನ್ನು ಘೋಷಿಸಿದರು. ಈ ವರ್ಷ ಅಕ್ಟೋಬರ್ 31ರಂದು ಸರ್ದಾರ್ ಪಟೇಲ್ ಅವರ ಜನ್ಮ ಜಯಂತಿ ದೀಪಾವಳಿ ಹಬ್ಬದ ಜೊತೆಜೊತೆಯಲ್ಲಿದೆ ಎಂದು ಪ್ರಧಾನಿ ಹೇಳಿದರು. ಪ್ರತಿ ವರ್ಷ ಅಕ್ಟೋಬರ್ 31ರಂದು ' ರಾಷ್ಟ್ರೀಯ ಏಕತಾ ದಿವಸ್ ' ಸಂದರ್ಭದಲ್ಲಿ ನಾವು 'ರನ್ ಫಾರ್ ಯೂನಿಟಿ'ಯನ್ನು ಆಯೋಜಿಸುತ್ತೇವೆ ಎಂದರು. ಈ ಬಾರಿ ದೀಪಾವಳಿಯ ಕಾರಣ ಅಕ್ಟೋಬರ್ 29 ರಂದು ಅಂದರೆ ಮಂಗಳವಾರ 'ರನ್ ಫಾರ್ ಯೂನಿಟಿ ' ನಡೆಯಲಿದೆ. ದೇಶದ ಜನರು ಇದರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ದೇಶದ ಏಕತೆಯ ಮಂತ್ರದ ಜತೆಗೆ, ಫಿಟ್ ನೆಸ್ ಮಂತ್ರವನ್ನು ಎಲ್ಲೆಡೆ ಹರಡಬೇಕು ಎಂದು ಪ್ರಧಾನಿ ಒತ್ತಾಯಿಸಿದರು.

ಅಕ್ಟೋಬರ್ 31 ರಂದು 'ರಾಷ್ಟ್ರೀಯ ಏಕತಾ ದಿವಸ್ ' ದಿನದಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞೆಯನ್ನು ಆಯೋಜಿಸಲಾಗುವುದು.

 

*****


(Release ID: 2069043) Visitor Counter : 40