ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 4

55ನೇ ಐ ಎಫ್‌ ಎಫ್‌ ಐ: ಪ್ರದರ್ಶನಗೊಳ್ಳುವ ಚಲನಚಿತ್ರಗಳ ಪಟ್ಟಿಯನ್ನು ಭಾರತೀಯ ಪನೋರಮಾ ಪ್ರಕಟಿಸಿದೆ


ಭಾರತೀಯ ಪನೋರಮಾದಲ್ಲಿ 'ಸ್ವಾತಂತ್ರ್ಯ ವೀರ ಸಾವರ್ಕರ್' ಆರಂಭಿಕ ಫೀಚರ್ ಚಲನಚಿತ್ರವಾಗಿದೆ

ಲಡಾಖಿ ಭಾಷೆಯ ಚಿತ್ರ ‘ಘರ್ ಜೈಸಾ ಕುಚ್’ಆರಂಭಿಕ ನಾನ್-ಫೀಚರ್ ಚಿತ್ರವಾಗಿದೆ

55ನೇ ಐ ಎಫ್‌ ಎಫ್‌ ಐ ನಲ್ಲಿ ಭಾರತೀಯ ಪನೋರಮಾದಲ್ಲಿ 25 ಫೀಚರ್ ಚಿತ್ರಗಳು ಮತ್ತು 20 ನಾನ್-ಫೀಚರ್ ಚಿತ್ರಗಳನ್ನು ಪ್ರದರ್ಶಿಸಲಾಗುವುದು

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್‌ ಎಫ್‌ ಐ) ನ ಪ್ರಮುಖ ವಿಭಾಗವಾದ ಇಂಡಿಯನ್ ಪನೋರಮಾ, ಐ ಎಫ್‌ ಎಫ್‌ ಐ ನ 55ನೇ ಆವೃತ್ತಿಯಲ್ಲಿ ಪ್ರದರ್ಶನಗೊಳ್ಳುವ 25 ಫೀಚರ್ ಚಿತ್ರಗಳು ಮತ್ತು 20 ನಾನ್-ಫೀಚರ್ ಚಿತ್ರಗಳ ಆಯ್ಕೆಯನ್ನು ಪ್ರಕಟಿಸಿದೆ. 384 ಸಮಕಾಲೀನ ಭಾರತೀಯ ಚಲನಚಿತ್ರಗಳ ವಿಶಾಲ ವ್ಯಾಪ್ತಿಯಿಂದ ಮುಖ್ಯವಾಹಿನಿಯ ಸಿನಿಮಾದಿಂದ 5 ಚಲನಚಿತ್ರಗಳು ಸೇರಿದಂತೆ 25 ಚಲನಚಿತ್ರಗಳ ಪ್ಯಾಕೇಜ್ ಅನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಪನೋರಮಾ 2024 ರ ಆರಂಭಿಕ ಚಲನಚಿತ್ರವಾಗಿ ಶ್ರೀ ರಣದೀಪ್ ಹೂಡಾ ನಿರ್ದೇಶನದ “ಸ್ವಾತಂತ್ರ್ಯ ವೀರ ಸಾವರ್ಕರ್ (ಹಿಂದಿ)”  ತೀರ್ಪುಗಾರರ ಆಯ್ಕೆಯಾಗಿದೆ.

ಇದಲ್ಲದೆ, 262 ಚಿತ್ರಗಳ ಪೈಕಿ ಆಯ್ಕೆಯಾದ 20 ನಾನ್-ಫೀಚರ್ ಚಿತ್ರಗಳನ್ನು ಭಾರತೀಯ ಪನೋರಮಾದಲ್ಲಿ ಪ್ರದರ್ಶಿಸಲಾಗುತ್ತದೆ. ನಾನ್-ಫೀಚರ್ ಚಿತ್ರಗಳ ಪ್ಯಾಕೇಜ್ ಉದಯೋನ್ಮುಖ ಮತ್ತು ಸ್ಥಾಪಿತ ಚಲನಚಿತ್ರ ನಿರ್ಮಾತೃಗಳ ಸಾಮರ್ಥ್ಯ, ಮನರಂಜನೆ ಮತ್ತು ಸಮಕಾಲೀನ ಭಾರತೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಶ್ರೀ ಹರ್ಷ ಸಂಗನಿ ನಿರ್ದೇಶನದ 'ಘರ್ ಜೈಸಾ ಕುಚ್ (ಲಡಾಖಿ)' ನಾನ್-ಫೀಚರ್ ವಿಭಾಗದಲ್ಲಿ ಆರಂಭಿಕ ಚಿತ್ರವಾಗಿ ತೀರ್ಪುಗಾರರ ಆಯ್ಕೆಯಾಗಿದೆ.

ಫೀಚರ್ ಚಲನಚಿತ್ರ ಜ್ಯೂರಿಯ ನೇತೃತ್ವವನ್ನು ಖ್ಯಾತ ಚಲನಚಿತ್ರ ನಿರ್ದೇಶಕ, ನಟ ಮತ್ತು ಚಿತ್ರಕಥೆಗಾರ ಡಾ. ಚಂದ್ರಪ್ರಕಾಶ್ ದ್ವಿವೇದಿ ನೇತೃತ್ವ ವಹಿಸಿದ್ದರು. ಫೀಚರ್ ಜ್ಯೂರಿಯು ಹನ್ನೆರಡು ಸದಸ್ಯರನ್ನು ಒಳಗೊಂಡಿದೆ, ಅವರು ವೈವಿಧ್ಯಮಯ ಭಾರತೀಯ ಚಲನಚಿತ್ರ ಸಮುದಾಯವನ್ನು ಪ್ರತಿನಿಧಿಸುತ್ತಾರೆ.

ಭಾರತೀಯ ಪನೋರಮಾ ಫೀಚರ್ ಫಿಲ್ಮ್ಸ್ ಜ್ಯೂರಿ ಸದಸ್ಯರು:

1. ಶ್ರೀ ಮನೋಜ್ ಜೋಶಿ, ನಟ

2.ಶ್ರೀಮತಿ ಸುಸ್ಮಿತಾ ಮುಖರ್ಜಿ, ನಟಿ

3. ಶ್ರೀ ಹಿಮಾಂಶು ಶೇಖರ್ ಖತುವಾ, ಚಲನಚಿತ್ರ ನಿರ್ದೇಶಕ

4. ಶ್ರೀ ಓನಮ್ ಗೌತಮ್ ಸಿಂಗ್, ಚಲನಚಿತ್ರ ನಿರ್ದೇಶಕ

5. ಶ್ರೀ ಅಶು ತ್ರಿಖಾ, ಚಲನಚಿತ್ರ ನಿರ್ದೇಶಕ

6. ಶ್ರೀ ಎಸ್.ಎಂ. ಪಾಟೀಲ್, ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ

7. ಶ್ರೀ ನೀಲಭ್ ಕೌಲ್, ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ದೇಶಕ

8. ಶ್ರೀ ಸುಸಂತ್ ಮಿಶ್ರಾ, ಚಲನಚಿತ್ರ ನಿರ್ದೇಶಕ

9. ಶ್ರೀ ಅರುಣ್ ಕುಮಾರ್ ಬೋಸ್, ಪ್ರಸಾದ್ ಇನ್‌ಸ್ಟಿಟ್ಯೂಟ್‌ ನ ಮಾಜಿ ಎಚ್‌ ಒ ಡಿ ಮತ್ತು ಸೌಂಡ್ ಇಂಜಿನಿಯರ್

10. ಶ್ರೀಮತಿ ರತ್ನೋತ್ತಮ ಸೆಂಗುಪ್ತಾ, ಬರಹಗಾರರು ಮತ್ತು ಸಂಕಲನಕಾರರು

11. ಶ್ರೀ ಸಮೀರ್ ಹಂಚಾಟೆ, ಚಲನಚಿತ್ರ ನಿರ್ದೇಶಕ

12. ಶ್ರೀಮತಿ ಪ್ರಿಯಾ ಕೃಷ್ಣಸ್ವಾಮಿ, ಚಲನಚಿತ್ರ ನಿರ್ದೇಶಕಿ

ಭಾರತೀಯ ಪನೋರಮಾ 2024 ರಲ್ಲಿ ಆಯ್ಕೆಯಾದ 25 ಫೀಚರ್ ಚಲನಚಿತ್ರಗಳು:

ಕ್ರ.ಸಂ.

ಚಿತ್ರದ ಶೀರ್ಷಿಕೆ

ಭಾಷೆ

ನಿರ್ದೇಶಕರು

  1.  

ಸ್ವಾತಂತ್ರ್ಯ ವೀರ ಸಾವರ್ಕರ್

ಹಿಂದಿ

ರಣದೀಪ್ ಹೂಡಾ

  1.  

ಕೆರೆಬೇಟೆ

ಕನ್ನಡ

ಗುರುರಾಜ್ ಬಿ

  1.  

ವೆಂಕ್ಯ

ಕನ್ನಡ

ಸಾಗರ್ ಪುರಾಣಿಕ್

  1.  

ಜುಯ್ಫೂಲ್

ಅಸ್ಸಾಮಿ

ಜಾದುಮೋನಿ ದತ್ತಾ

  1.  

ಮಹಾವತಾರ ನರಸಿಂಹ

ಹಿಂದಿ

ಅಶ್ವಿನ್ ಕುಮಾರ್

  1.  

ಜಿಗರ್ತಂಡ ಡಬಲ್ ಎಕ್ಸ್

ತಮಿಳು

ಕಾರ್ತಿಕ್ ಸುಬ್ಬರಾಜ್

  1.  

ಆಡುಜೀವಿತಂ (ವಿಯಾತಕಾಪ್ರೇ, ದಿ ಗೋಟ್‌ಲೈಫ್)

ಮಲಯಾಳಂ

ಬ್ಲೆಸ್ಸಿ    

  1.  

ಆರ್ಟಿಕಲ್ 370

ಹಿಂದಿ

ಆದಿತ್ಯ ಸುಹಾಸ್ ಜಂಬಾಳೆ

  1.  

ಜಿಪ್ಸಿ

ಮರಾಠಿ

ಶಶಿ ಚಂದ್ರಕಾಂತ ಖಂಡಾರೆ

  1.  

ಶ್ರೀಕಾಂತ್

ಹಿಂದಿ

ತುಷಾರ್ ಹಿರಾನಂದಾನಿ

  1.  

ಆಮರ್ ಬಾಸ್

ಬೆಂಗಾಲಿ

ನಂದಿತಾ ರಾಯ್, ಶಿವಪ್ರಸಾದ್ ಮುಖರ್ಜಿ

  1.  

ಭ್ರಮಾಯುಗಂ

ಮಲಯಾಳಂ

ರಾಹುಲ್ ಸದಾಶಿವನ್

  1.  

ಚಿನ್ನ ಕಥಾ ಕಾದು

ತೆಲುಗು

ನಂದ ಕಿಶೋರ್ ಎಮಾನಿ

  1.  

ರೇಡಾರ್ ಪಾಖಿ

ಅಸ್ಸಾಮಿ

ಡಾ. ಬಾಬಿ ಶರ್ಮಾ ಬರುವಾ

  1.  

ಘರತ್ ಗಣಪತಿ

ಮರಾಠಿ

ನವಜ್ಯೋತ್ ನರೇಂದ್ರ ಬಂಡಿವಾಡೇಕರ್

  1.  

ರಾವಸಾಹೇಬ್

ಮರಾಠಿ

ನಿಖಿಲ್ ಮಹಾಜನ್

  1.  

ಲೆವೆಲ್ ಕ್ರಾಸ್

ಮಲಯಾಳಂ

ಅರ್ಫಾಜ್ ಅಯೂಬ್

  1.  

ಕಾರ್ಕೆನ್

ಗಾಲೊ

ನೆಂಡಿಂಗ್ ಲೋಡರ್

  1.  

ಭೂತಪುರಿ

ಬೆಂಗಾಲಿ

ಸೌಕರ್ಯ ಘೋಷಾಲ್

  1.  

ಓಂಕೋ ಕಿ ಕೋಥಿನ್

ಬೆಂಗಾಲಿ

ಸೌರವ್ ಪಲೋಂಧಿ

ಮುಖ್ಯವಾಹಿನಿಯ ಸಿನಿಮಾ ವಿಭಾಗ:

ಕ್ರ.ಸಂ.

ಚಿತ್ರದ ಶೀರ್ಷಿಕೆ

ಭಾಷೆ

ನಿರ್ದೇಶಕರು

21

ಕಾರ್ಖಾನು

ಗುಜರಾತಿ

ರಿಷಭ್ ಥ್ಯಾಂಕಿ

22

ಟ್ವೆಲ್ತ್‌ ಫೇಲ್‌

ಹಿಂದಿ

ವಿಧು ವಿನೋದ್ ಚೋಪ್ರಾ

23

ಮಂಜುಮ್ಮೆಲ್ ಬಾಯ್ಸ್‌

ಮಲಯಾಳಂ

ಚಿದಂಬರಂ

24

ಸ್ವರ್ಗರಥ

ಅಸ್ಸಾಮಿ

ರಾಜೇಶ್ ಭುಯಾನ್

25

ಕಲ್ಕಿ 2898 AD (3D)

ತೆಲುಗು

ಸಿಂಗಿರೆಡ್ಡಿ  ನಾಗಸ್ವಿನ್

ಆರು ಸದಸ್ಯರನ್ನೊಳಗೊಂಡ ನಾನ್-ಫೀಚರ್ ಫಿಲ್ಮ್ ಜ್ಯೂರಿಯ ನೇತೃತ್ವವನ್ನು ಖ್ಯಾತ ಸಾಕ್ಷ್ಯಚಿತ್ರ ಮತ್ತು ವನ್ಯಜೀವಿ ಚಲನಚಿತ್ರ ನಿರ್ದೇಶಕ ಮತ್ತು ವಿ.ಶಾಂತಾರಾಂ ಜೀವಮಾನ ಸಾಧನೆ ಪ್ರಶಸ್ತಿ ವಿಜೇತ ಶ್ರೀ ಸುಬ್ಬಯ್ಯ ನಲ್ಲಮುತ್ತು ವಹಿಸಿದ್ದರು.

ಭಾರತೀಯ ಪನೋರಮಾ ನಾನ್ ಫೀಚರ್ ಫಿಲ್ಮ್ಸ್ ಜ್ಯೂರಿ ಸದಸ್ಯರು:

1. ಶ್ರೀ ರಜನಿಕಾಂತ್ ಆಚಾರ್ಯ, ನಿರ್ಮಾಪಕ ಮತ್ತು ಚಲನಚಿತ್ರ ನಿರ್ದೇಶಕ

2. ಶ್ರೀ ರೋನೆಲ್ ಹಾಬಾಮ್, ಚಲನಚಿತ್ರ ನಿರ್ದೇಶಕ

3. ಶ್ರೀಮತಿ ಉಷಾ ದೇಶಪಾಂಡೆ, ಚಲನಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿ

4. ಶ್ರೀಮತಿ ವಂದನಾ ಕೊಹ್ಲಿ, ಚಲನಚಿತ್ರ ನಿರ್ದೇಶಕಿ ಮತ್ತು ಲೇಖಕಿ

5. ಶ್ರೀ ಮಿಥುನಚಂದ್ರ ಚೌಧರಿ, ಚಲನಚಿತ್ರ ನಿರ್ದೇಶಕ

6. ಶ್ರೀಮತಿ ಶಾಲಿನಿ ಶಾ, ಚಲನಚಿತ್ರ ನಿರ್ದೇಶಕಿ

ಭಾರತೀಯ ಪನೋರಮಾ 2024 ರಲ್ಲಿ ಆಯ್ಕೆಯಾದ 20 ನಾನ್ ಫೀಚರ್ ಚಿತ್ರಗಳು:

ಕ್ರ.ಸಂ.

ಚಿತ್ರದ ಶೀರ್ಷಿಕೆ

ಭಾಷೆ

ನಿರ್ದೇಶಕರು

  1.  

ಆಕಾಶಗಂಗಾ

ಹಿಂದಿ

ನಿರ್ಮಲ್ ಚಂದರ್

  1.  

ಅಮರ್ ಆಜ್ ಮರೇಗಾ

ಹಿಂದಿ

ರಜತ್ ಕರಿಯಾ

  1.  

ಅಮ್ಮಾಸ್‌ ಪ್ರೈಡ್

ತಮಿಳು

ಶಿವಕ್ರಿಷ್‌

  1.  

ಬಹಿ – ಟ್ರೇಸಿಂಗ್‌ ಮೈ ಆನ್ಸೆಸ್ಟರ್ಸ್

ಹಿಂದಿ

ರಚಿತಾ ಗೊರೊವಾಲಾ

  1.  

ಬಲ್ಲಾಡ್ ಆಫ್ ದಿ ಮೌಂಟೇನ್

ಹಿಂದಿ

ತರುಣ್ ಜೈನ್

  1.  

ಬಟ್ಟೊ ಕಾ ಬುಲ್‌ಬುಲಾ

ಹರ್ಯಾನ್ವಿ

ಅಕ್ಷಯ್ ಭಾರದ್ವಾಜ್

  1.  

ಚಂಚೈಸ

ಗಾರೋ

ಎಲ್ವಿಶ್ ಚ್ ಸಂಗ್ಮಾ, ದೀಪಂಕರ್ ದಾಸ್

  1.  

ಫ್ಲಾಂಡರ್ಸ್ ಡಿ ಜಮೀನ್‌ ವಿಚ್‌

ಪಂಜಾಬಿ

ಸಚಿನ್

  1.  

ಘರ್‌ ಜೈಸಾ ಕುಚ್

ಲಡಾಖಿ

ಹರ್ಷ್‌ ಸಂಗಾನಿ

  1.  

ಘೋಡೆ ಕಿ ಸವಾರಿ

ಹಿಂದಿ

ದೇವಯಾನಿ ಮುಖರ್ಜಿ

  1.  

ಗೂಗಲ್ ಮ್ಯಾಟ್ರಿಮನಿ

ಇಂಗ್ಲೀಷ್

ಅಭಿನವ್ ಅಥ್ರೇ‌

  1.  

ಮೈ ನಿಡಾ

ಹಿಂದಿ

ಅತುಲ್ ಪಾಂಡೆ

  1.  

ಮೊ ಬುವು,ಮೊ ಗಾನ್

ಒರಿಯಾ

ಸುಭಾಶ್ ಸಾಹೂ‌

  1.  

ಮೊಣಿಹಾರ

ಬೆಂಗಾಲಿ

ಶುಭದೀಪ್ ಬಿಸ್ವಾಸ್

  1.  

ಪಿ ಫಾರ್‌ ಪಾಪರಾಜಿ

ಹಿಂದಿ

ದಿವ್ಯಾ ಖರ್ನಾರೆ

  1.  

ಪಿಲ್ಲರ್ಸ್ ಆಫ್‌ ಪ್ರೊಗ್ರೆಸ್:‌ ದಿ ಎಪಿಕ್‌ ಸ್ಟೋರಿ ಆಫ್‌ ದೆಲ್ಲಿ ಮೆಟ್ರೊ

ಇಂಗ್ಲೀಷ್

ಸತೀಶ್ ಪಾಂಡೆ‌

  1.  

ಪ್ರಾಣ ಪ್ರತಿಷ್ಠಾ

ಮರಾಠಿ

ಪಂಕಜ್ ಸೋನಾವಾನೆ

  1.  

ರೋಟಿ ಕೋನ್ ಬನಾಸಿ?

ರಾಜಸ್ಥಾನ

ಚಂದನ್ ಸಿಂಗ್

  1.  

ಸಾವತ್

ಕೊಂಕಣಿ

ಶಿವಂ ಹರ್ಮಲ್ಕರ್, ಸಂತೋಷ ಶೆಟ್ಕರ್‌

  1.  

ಸಿವಂತ ಮನ್

ತಮಿಳು

ಇನ್ಫಂಟ್

ಭಾರತೀಯ ಪನೋರಮಾ ಬಗ್ಗೆ

ಭಾರತೀಯ ಪನೋರಮಾವನ್ನು 1978 ರಲ್ಲಿ ಐ ಎಫ್‌ ಎಫ್‌ ಐ ಭಾಗವಾಗಿ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಜೊತೆಗೆ ಸಿನಿಮಾ ಕಲೆಯ ಸಹಾಯದಿಂದ ಭಾರತೀಯ ಚಲನಚಿತ್ರಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಅದರ ಪ್ರಾರಂಭದಿಂದಲೂ, ಭಾರತೀಯ ಪನೋರಮಾವು ವರ್ಷದ ಅತ್ಯುತ್ತಮ ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲು ಮೀಸಲಾಗಿದೆ. ಚಲನಚಿತ್ರ ಕಲೆಯ ಉತ್ತೇಜನದ ಉದ್ದೇಶದಿಂದ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾದ ಚಲನಚಿತ್ರಗಳನ್ನು ಭಾರತ ಮತ್ತು ವಿದೇಶಗಳಲ್ಲಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು, ದ್ವಿಪಕ್ಷೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಮತ್ತು ವಿಶೇಷ ಭಾರತೀಯ ಚಲನಚಿತ್ರೋತ್ಸವಗಳ ಅಡಿಯಲ್ಲಿ ನಡೆಯುವ ಭಾರತೀಯ ಚಲನಚಿತ್ರ ಸಪ್ತಾಹಗಳು ಮತ್ತು ಭಾರತದಲ್ಲಿ ವಿಶೇಷ ಭಾರತೀಯ ಪನೋರಮಾ ಉತ್ಸವಗಳಲ್ಲಿ ಲಾಭರಹಿತ ಪ್ರದರ್ಶನಕ್ಕಾಗಿ ಪ್ರದರ್ಶಿಸಲಾಗುತ್ತದೆ.

ಆಯ್ಕೆ ಜ್ಯೂರಿಯು ಭಾರತದಾದ್ಯಂತದ ಪ್ರಸಿದ್ಧ ಸಿನಿಮಾ ವ್ಯಕ್ತಿಗಳನ್ನು ಒಳಗೊಂಡಿತ್ತು. ಫೀಚರ್ ಚಿತ್ರಗಳಿಗಾಗಿ ಒಟ್ಟು ಹನ್ನೆರಡು ಜ್ಯೂರಿ ಸದಸ್ಯರು ಮತ್ತು ನಾನ್-ಫೀಚರ್ ಚಿತ್ರಗಳಿಗಾಗಿ ಆರು ಜ್ಯೂರಿ ಸದಸ್ಯರು ಆಯಾ ಜ್ಯೂರಿ ಅಧ್ಯಕ್ಷರ ನೇತೃತ್ವದಲ್ಲಿ 55 ನೇ ಐ ಎಫ್‌ ಎಫ್‌ ಐ ಗಾಗಿ ಭಾರತೀಯ ಪನೋರೋಮಾ ಚಲನಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ತೀರ್ಪುಗಾರರ ಸಮಿತಿಗಳು ತಮ್ಮ ವೈಯಕ್ತಿಕ ಪರಿಣತಿಯನ್ನು ಬಳಸಿಕೊಂಡು ಎರಡೂ ವಿಭಾಗಗಳಲ್ಲಿ ಭಾರತೀಯ ಪನೋರಮಾ ಚಲನಚಿತ್ರಗಳ ಆಯ್ಕೆಯಲ್ಲಿ ಒಮ್ಮತವನ್ನು ನಿರ್ಮಿಸಲು ಸಮಾನವಾಗಿ ಕೊಡುಗೆ ನೀಡಿವೆ.

ಭಾರತೀಯ ಪನೋರಮಾದ ಪ್ರಾಥಮಿಕ ಗುರಿಯು ಭಾರತೀಯ ಪನೋರಮಾದ ನಿಗದಿತ ನಿಯಮಗಳಲ್ಲಿನ ಷರತ್ತುಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ಚಲನಚಿತ್ರ ಕಲೆಯ ಪ್ರಚಾರಕ್ಕಾಗಿ ಸಿನಿಮೀಯ, ವಿಷಯಾಧಾರಿತ ಮತ್ತು ಸೌಂದರ್ಯದ ಶ್ರೇಷ್ಠತೆಯ ಫೀಚರ್‌ ಮತ್ತು ನಾನ್‌ ಫೀಚರ್ ಚಲನಚಿತ್ರಗಳನ್ನು ಆಯ್ಕೆ ಮಾಡುವುದಾಗಿದೆ.

ಎಫ್ಎಫ್ ಬಗ್ಗೆ

ಐ ಎಫ್‌ ಎಫ್‌ ಐ ಅನ್ನು 2024ರ ನವೆಂಬರ್ 20 ರಿಂದ 28 ರವರೆಗೆ ಗೋವಾದ ಪಣಜಿಯಲ್ಲಿ ಗೋವಾ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಆಯೋಜಿಸಿದೆ.

 

*****

iffi reel

(Release ID: 2067920) Visitor Counter : 57