ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು ಸರ್ದಾರ್‌ ಪಟೇಲ್‌ ಅವರ 150ನೇ ಜನ್ಮ ದಿನಾಚರಣೆಯನ್ನು 2024ರಿಂದ 2026ರವರೆಗೆ ಎರಡು ವರ್ಷಗಳ ಕಾಲ ರಾಷ್ಟ್ರವ್ಯಾಪಿ ಆಚರಣೆಯೊಂದಿಗೆ ಆಚರಿಸುತ್ತಿದೆ


ಈ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್‌ ಶಾ, ಈ ಆಚರಣೆಯು ಸರ್ದಾರ್‌ ಪಟೇಲ್‌ ಅವರ ಗಮನಾರ್ಹ ಸಾಧನೆಗಳು ಮತ್ತು ಅವರು ನಿರೂಪಿಸಿದ ಏಕತೆಯ ಮನೋಭಾವಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು

ವಿಶ್ವದ ಅತ್ಯಂತ ದೃಢವಾದ ಪ್ರಜಾಪ್ರಭುತ್ವಗಳಲ್ಲಿ ಒಂದನ್ನು ಸ್ಥಾಪಿಸುವ ಹಿಂದಿನ ದೂರದೃಷ್ಟಿಯ ವ್ಯಕ್ತಿಯಾಗಿ ಸರ್ದಾರ್‌ ಪಟೇಲ್‌ ಜೀ ಅವರ ಶಾಶ್ವತ ಪರಂಪರೆ ಮತ್ತು ಕಾಶ್ಮೀರದಿಂದ ಲಕ್ಷ ದ್ವೀಪದವರೆಗೆ ಭಾರತವನ್ನು ಏಕೀಕರಿಸುವಲ್ಲಿಅವರ ಪ್ರಮುಖ ಪಾತ್ರ ಅಳಿಸಲಾಗದು

Posted On: 23 OCT 2024 3:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಭಾರತ ಸರ್ಕಾರವು ಸರ್ದಾರ್‌ ಪಟೇಲ್‌ ಅವರ 150ನೇ ಜನ್ಮ ದಿನಾಚರಣೆಯನ್ನು 2024ರಿಂದ 2026 ರವರೆಗೆ ಎರಡು ವರ್ಷಗಳ ಕಾಲ ರಾಷ್ಟ್ರವ್ಯಾಪಿ ಆಚರಣೆಯೊಂದಿಗೆ ಆಚರಿಸಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಘೋಷಿಸಿದ್ದಾರೆ.

ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ‘‘ವಿಶ್ವದ ಅತ್ಯಂತ ದೃಢವಾದ ಪ್ರಜಾಪ್ರಭುತ್ವಗಳಲ್ಲಿಒಂದನ್ನು ಸ್ಥಾಪಿಸುವ ಹಿಂದಿನ ದೂರದೃಷ್ಟಿಯ ಸರ್ದಾರ್‌ ಪಟೇಲ್‌ ಜೀ ಅವರ ಶಾಶ್ವತ ಪರಂಪರೆ ಮತ್ತು ಕಾಶ್ಮೀರದಿಂದ ಲಕ್ಷ ದ್ವೀಪದವರೆಗೆ ಭಾರತವನ್ನು ಏಕೀಕರಿಸುವಲ್ಲಿಅವರ ಪ್ರಮುಖ ಪಾತ್ರ ಅಳಿಸಲಾಗದು. ಅವರ ಸ್ಮರಣೀಯ ಕೊಡುಗೆಗಳನ್ನು ಗೌರವಿಸಲು, ಭಾರತ ಸರ್ಕಾರ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ, ಅವರ 150ನೇ ಜನ್ಮ ದಿನಾಚರಣೆಯನ್ನು 2024ರಿಂದ 2026ರವರೆಗೆ ಎರಡು ವರ್ಷಗಳ ಕಾಲ ರಾಷ್ಟ್ರವ್ಯಾಪಿ ಆಚರಣೆಯೊಂದಿಗೆ ಆಚರಿಸಲಿದೆ. ಈ ಆಚರಣೆಯು ಅವರ ಗಮನಾರ್ಹ ಸಾಧನೆಗಳಿಗೆ ಮತ್ತು ಅವರು ನಿರೂಪಿಸಿದ ಏಕತೆಯ ಮನೋಭಾವಕ್ಕೆ ಸಾಕ್ಷಿಯಾಗಿ ಕಾರ್ಯನಿರ್ವಹಿಸುತ್ತದೆ,’’ ಎಂದರು.

 

 

*****




(Release ID: 2067540) Visitor Counter : 15