ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ರತನ್ ಟಾಟಾ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪ್ರಾಣಿ ಕಲ್ಯಾಣದಂತಹ ಕಾಳಜಿಗಾಗಿ ಶ್ರಮಿಸುವಲ್ಲಿ ಶ್ರೀ ಟಾಟಾ ಮುಂಚೂಣಿಯಲ್ಲಿದ್ದರು: ಪ್ರಧಾನಮಂತ್ರಿ
ದೊಡ್ಡ ಕನಸುಗಳನ್ನು ಕಾಣುವ ಮತ್ತು ಸಮಾಜಕ್ಕೆ ಹಿಂದಿರುಗಿಸುವ ಶ್ರೀ ಟಾಟಾ ಅವರ ಉತ್ಸಾಹ ವಿಶಿಷ್ಟವಾಗಿತ್ತು: ಪ್ರಧಾನಮಂತ್ರಿ
प्रविष्टि तिथि:
10 OCT 2024 5:38AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಟಾಟಾ ಅವರು ದೂರದೃಷ್ಟಿಯ ಉದ್ಯಮ ನಾಯಕ, ಸಹಾನುಭೂತಿಯುಳ್ಳ ಮನಸ್ಸು ಮತ್ತು ಅಸಾಧಾರಣ ವ್ಯಕ್ತಿಯಾಗಿದ್ದರು, ತಮ್ಮ ನಮ್ರತೆ, ದಯೆ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸುವ ಅಚಲ ಬದ್ಧತೆಯಿಂದ ಹಲವಾರು ಜನರಿಗೆ ಪ್ರೀತಿಪಾತ್ರರಾಗಿದ್ದರು ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಈ ಸಂಬಂಧ ಶ್ರೀ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:
"ಶ್ರೀ ರತನ್ ಟಾಟಾ ಜೀ ಅವರು ದೂರದೃಷ್ಟಿಯ ಉದ್ಯಮ ನಾಯಕ, ಸಹಾನುಭೂತಿಯುಳ್ಳ ಮನಸ್ಸು ಮತ್ತು ಅಸಾಧಾರಣ ವ್ಯಕ್ತಿಯಾಗಿದ್ದರು. ಅವರು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಕ್ಕೆ ಸ್ಥಿರ ನಾಯಕತ್ವವನ್ನು ನೀಡಿದವರು. ಅದೇ ಸಮಯದಲ್ಲಿ, ಅವರ ಕೊಡುಗೆ ಉದ್ಯಮ ಬೆಳವಣಿಗೆಯಿಂದ ಆಚೆಗೂ ಮೀರಿದೆ. ಅವರ ನಮ್ರತೆ, ದಯೆ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸುವ ಅಚಲ ಬದ್ಧತೆಗೆ ಧನ್ಯವಾದಗಳು.
"ಶ್ರೀ ರತನ್ ಟಾಟಾ ಜೀ ಅವರ ಅತ್ಯಂತ ವಿಶಿಷ್ಟ ಅಂಶವೆಂದರೆ ದೊಡ್ಡ ಕನಸು ಕಾಣುವ ಮತ್ತು ಸಮಾಜಕ್ಕೆ ಹಿಂತಿರುಗಿಸುವ ಅವರ ಉತ್ಸಾಹ. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪ್ರಾಣಿ ಕಲ್ಯಾಣ ಮುಂತಾದ ಕ್ಷೇತ್ರಗಳಲ್ಲಿ ಯಶಸ್ವಿಗಾಗಿ ಶ್ರಮಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದರು.
"ಶ್ರೀ ರತನ್ ಟಾಟಾ ಜೀ ಅವರೊಂದಿಗಿನ ಅಸಂಖ್ಯಾತ ಸಂವಾದಗಳಿಂದ ನನ್ನ ಮನಸ್ಸು ತುಂಬಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ನಲ್ಲಿ ಅವರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದೆ. ನಾವು ವೈವಿಧ್ಯಮಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೇವು. ಅವರ ದೃಷ್ಟಿಕೋನಗಳು ತುಂಬಾ ಸಮೃದ್ಧವಾಗಿವೆ ಎಂದು ನಾನು ಕಂಡುಕೊಂಡೆ. ನಾನು ದೆಹಲಿಗೆ ಬಂದಾಗ ಈ ಸಂವಾದಗಳು ಮುಂದುವರೆದವು. ಅವರ ನಿಧನದಿಂದ ತೀವ್ರ ನೋವಾಗಿದೆ. ಈ ದುಃಖದ ಸಮಯದಲ್ಲಿ ನನ್ನ ಭಾವನೆಗಳು ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಇರಲಿವೆ. ಓಂ ಶಾಂತಿ," ಎಂದು ಹೇಳಿದ್ದಾರೆ.
*****
(रिलीज़ आईडी: 2063792)
आगंतुक पटल : 68
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam