ಪ್ರಧಾನ ಮಂತ್ರಿಯವರ ಕಛೇರಿ
ಇಸ್ರೇಲ್ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತುಕತೆ
ಪ್ರಧಾನಮಂತ್ರಿ ನೆತನ್ಯಾಹು ಅವರಿಂದ ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಧಾನಮಂತ್ರಿಗಳಿಗೆ ಸಂಕ್ಷಿಪ್ತ ವಿವರ
ಯಾವುದೇ ವಿಧದ ಮತ್ತು ರೂಪದ ಭಯೋತ್ಪಾದನೆಗೆ ಅವಕಾಶವಿಲ್ಲ – ಪ್ರಧಾನಮಂತ್ರಿ
ಎಲ್ಲಾ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ ಹಾಗೂ ಪ್ರಾದೇಶಿಕ ಉಲ್ಬಣವನ್ನು ತಡೆಗಟ್ಟುವ ತುರ್ತು ಅಗತ್ಯಕ್ಕೆ ಪ್ರಧಾನಮಂತ್ರಿ ಒತ್ತು
ಶಾಂತಿ ಮತ್ತು ಸ್ಥಿರತೆಯ ಶೀಘ್ರ ಮರುಸ್ಥಾಪನೆಗೆ ಭಾರತದ ಬೆಂಬಲ – ಪ್ರಧಾನಮಂತ್ರಿ ಮೋದಿ
ಭಾರತ – ಇಸ್ರೇಲ್ ತಾಂತ್ರಿಕ ಪಾಲುದಾರಿಕೆ ಬಲವರ್ಧನೆಗೆ ಕುರಿತು ಉಭಯ ನಾಯಕರ ಚರ್ಚೆ
ರೋಶ್ ಹಶಾನಾ ಅಂಗವಾಗಿ ಪ್ರಧಾನಿ ನೆತನ್ಯಾಹು ಮತ್ತು ವಿಶ್ವಾದ್ಯಂತ ಇರುವ ಯಹೂದಿಗಳಿಗೆ ಪ್ರಧಾನಮಂತ್ರಿ ಶುಭಾಶಯ
Posted On:
30 SEP 2024 11:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಇಸ್ರೇಲ್ ಪ್ರಧಾನಿ ಶ್ರೀ ಬೆಂಜಮಿನ್ ನೆತನ್ಯಾಹು ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.
ಪ್ರಧಾನಮಂತ್ರಿ ನೆತನ್ಯಾಹು ಅವರು ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಯಾವುದೇ ವಿಧದ ಮತ್ತು ಯಾವುದೇ ರೂಪದಲ್ಲಿರುವ ಭಯೋತ್ಪಾದನೆಗೆ ಅವಕಾಶವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಪ್ರಾದೇಶಿಕ ಉಲ್ಬಣ ನಿಯಂತ್ರಣ ಮತ್ತು ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಕಾರ್ಯನಿರ್ವಹಿಸುವ ತುರ್ತು ಅಗತ್ಯದ ಬಗ್ಗೆ ಒತ್ತಿ ಹೇಳಿದ್ದಾರೆ.
ಶಾಂತಿ ಮತ್ತು ಸ್ಥಿರತೆಯ ಶೀಘ್ರ ಮರುಸ್ಥಾಪನೆಗೆ ಬೆಂಬಲ ನೀಡಲು ಭಾರತ ಸಿದ್ಧವಿದೆ ಎಂಬ ಸಂದೇಶವನ್ನು ಪ್ರಧಾನಮಂತ್ರಿಗಳು ರವಾನಿಸಿದ್ದಾರೆ.
ಭಾರತ – ಇಸ್ರೇಲ್ ತಾಂತ್ರಿಕ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ವಿವಿಧ ದ್ವಿಪಕ್ಷೀಯ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
ರೋಶ್ ಹಶನಾ ಪ್ರಯುಕ್ತ ಪ್ರಧಾನಮಂತ್ರಿ ನೆತನ್ಯಾಹು ಮತ್ತು ಪ್ರಪಂಚದಾದ್ಯಂತ ಇರುವ ಯಹೂದಿಗಳಿಗೆ ಪ್ರಧಾನಮಂತ್ರಿ ಶುಭ ಕೋರಿದ್ದಾರೆ.
ಉಭಯ ನಾಯಕರು ಪರಸ್ಪರ ಸಂಪರ್ಕದಲ್ಲಿರಲು ಸಮ್ಮತಿಸಿದ್ದಾರೆ.
*****
(Release ID: 2062331)
Visitor Counter : 27
Read this release in:
Telugu
,
English
,
Urdu
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam