ಪ್ರಧಾನ ಮಂತ್ರಿಯವರ ಕಛೇರಿ
ಜಾಗತಿಕ ನಾವಿನ್ಯತಾ ಸೂಚ್ಯಂಕ 2024 ರಲ್ಲಿ 39ನೇ ಸ್ಥಾನಕ್ಕೆ ಜಿಗಿದ ಭಾರತ – ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘನೆ
ಪ್ರಕಟಣಾ ದಿನಾಂಕ:
27 SEP 2024 10:50PM by PIB Bengaluru
ಜಾಗತಿಕ ನಾವಿನ್ಯತಾ ಸೂಚ್ಯಂಕ 2024 ರಲ್ಲಿ 133 ಜಾಗತಿಕ ಆರ್ಥಿಕತೆಗಳ ಪೈಕಿ ಭಾರತ 39ನೇ ಸ್ಥಾನಕ್ಕೆ ಜಿಗಿದಿದ್ದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಶ್ರೀ ಮೋದಿ ಅವರು ಈ ಸಾಧನೆಯನ್ನು ‘ಅಸಾಧಾರಣ ಯಶಸ್ಸು’ ಎಂದು ಬಣ್ಣಿಸುತ್ತಾ ರಾಷ್ಟ್ರದ ಯುವ ಸಮೂಹಕ್ಕೆ ಅವಕಾಶಗಳನ್ನು ರೂಪಾಂತರಿಸಬಲ್ಲ ರೋಮಾಂಚಕ ನಾವಿನ್ಯತಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಎಕ್ಸ್ ಪೋಸ್ಟ್ ಹಂಚಿಕೊಂಡು, ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ:
“ಗುರುತರ ಯಶಸ್ಸು! ಯುವಜನರ ಜೀವನವನ್ನು ಪರಿವರ್ತಿಸಬಲ್ಲ ರೋಮಾಂಚಕ ನಾವಿನ್ಯತಾ ಪರಿಸರ ವ್ಯವಸ್ಥೆಯನ್ನು ಖಾತರಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ.”
*****
(ಪ್ರಕಟಣೆ ಐ.ಡಿ.: 2060611)
ವಿಸಿಟರ್ ಕೌಂಟರ್ : 115
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam