ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ರಾಂಚಿಯಲ್ಲಿ ನಡೆದ 7ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆಯ ಸಮಾರೋಪ ಸಮಾರಂಭದಲ್ಲಿ 20 ರಾಜ್ಯಗಳ 11 ಸಾವಿರಕ್ಕೂ ಅಧಿಕ ಸಕ್ಷಮ್ ಅಂಗನವಾಡಿ ಕೇಂದ್ರಗಳ ಲೋಕಾರ್ಪಣೆ
ಸಕ್ಷಮ್ ಅಂಗನವಾಡಿಗಳ ಮೂಲಕ ತ್ವರಿತ ವೇಗದೊಂದಿಗೆ ಬಹುವಿಧದ ಬೆಳವಣಿಗೆಗಳು ಭಾರತವನ್ನು ಸಂಪೂರ್ಣ ಪೋಷಣೆಯುಕ್ತ ರಾಷ್ಟ್ರವನ್ನಾಗಿ ಮಾಡಲು ಪೋಶನ್ 2.0 ರ ಉಪಕ್ರಮಗಳಲ್ಲಿ ಭಾಗವಹಿಸಲು, ತೊಡಗಿಸಿಕೊಳ್ಳಲು ಮತ್ತು ಸ್ವಂತ ಉಪಕ್ರಮಗಳಿಗೆ ಸಮುದಾಯಗಳನ್ನು ಪ್ರೋತ್ಸಾಹಿಸುತ್ತದೆ: ಶ್ರೀಮತಿ. ಅನ್ನಪೂರ್ಣ ದೇವಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು
13.95 ಲಕ್ಷ ಎಬ್ಲ್ಯುಸಿ ಗಳಲ್ಲಿ 12 ಕೋಟಿಗೂ ಹೆಚ್ಚು ಸಂವೇದನಾಶೀಲ ಚಟುವಟಿಕೆಗಳನ್ನು ಪೋಷಣ್ ಮಾಸಾಚರಣೆ ಸಮಯದಲ್ಲಿ ವಿವಿಧ ಪೌಷ್ಟಿಕಾಂಶ-ಸಂಬಂಧಿತ ವಿಷಯಗಳ ಮೇಲೆ ನಡೆಸಲಾಗಿದೆ
ಪೋಷಣ್ ಮಾಸಾಚರಣೆಯಲ್ಲಿ ತಾಯಿ ಹೆಸರಲ್ಲಿ ಗಿಡ ನೆಡುವ ವಿಶೇಷ ಪರಿಸರ ಸ್ನೇಹಿ ಅಭಿಯಾನ
Posted On:
30 SEP 2024 3:32PM by PIB Bengaluru
ಜಾರ್ಖಂಡ್ ನ ರಾಂಚಿಯಲ್ಲಿ 7ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆಯ ಸಮಾರೋಪ ಸಮಾರಂಭ ನಡೆಯಿತು. ಜಾರ್ಖಂಡ್ ರಾಜ್ಯಪಾಲರಾದ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಜಾರ್ಖಂಡ್ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪೋಷಣ್ ಮಾಸಾಚರಣೆ ಸಂಭ್ರಮದ ಸಂದರ್ಭದಲ್ಲಿ ಪ್ರೇಕ್ಷಕರಿಗಾಗಿ ದೇಶಾದ್ಯಂತ ಹಲವಾರು ಸಾಮೂಹಿಕ ಸೂಕ್ಷ್ಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ಮಕ್ಕಳಿಗಾಗಿ ಅನ್ನಪ್ರಾಶನ ಹಾಗೂ ಗರ್ಭಿಣಿಯರಿಗಾಗಿ ದೇವರ ಭರಾಯಿ ಕಾರ್ಯಕ್ರಮ ನಡೆಯಿತು.
ಜಾರ್ಖಂಡ್ ನಲ್ಲಿ ಮಕ್ಕಳು, ಹದಿಹರೆಯದ ಹೆಣ್ಣು ಮಕ್ಕಳು, ಗರ್ಭೀಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಪೌಷ್ಟಿಕತೆ ಹೆಚ್ಚಿಸುವ ಮತ್ತು ಜೀವನ ವಿಧಾನವನ್ನು ಪ್ರತಿಬಿಂಬಿಸುವ ಸ್ಫೂರ್ತಿದಾಯಕ “ಆಯೋ ತೋಡನ್: ಕುಪೋಷಣ್ ಚಕ್ರ” ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು. ಈ ಪ್ರಮುಖ ಕಾರ್ಯಕ್ರಮದಲ್ಲಿ 20 ರಾಜ್ಯಗಳ 11 ಸಾವಿರಕ್ಕೂ ಅಧಿಕ ಸಕ್ಷಮ್ ಅಂಗನವಾಡಿ ಕೇಂದ್ರಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಲಾಯಿತು. ಈ ಸಾಕ್ಷ್ಯ ಚಿತ್ರವು ಸಕ್ಷಂ ಅಂಗನವಾಡಿಗಳ ಮೂಲಕ ಹೇಗೆ ಪೌಷ್ಟಿಕತೆಯನ್ನು ಸುಧಾರಿಸಬಹುದು, ಆರಂಭಿಕ ಮಕ್ಕಳ ಆರೈಕೆ ಮತ್ತು ಶಿಕ್ಷಣ ಒದಗಿಸುವುದನ್ನು [ಇಸಿಸಿಇ] ಈ ಕಿರು ಚಿತ್ರ ಪ್ರದರ್ಶಿಸಿದೆ.
ನಂತರ ಜಾರ್ಖಂಡ್ ರಾಜ್ಯಪಾಲರಾದ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್, ಭಾರತ ಸರ್ಕಾರದ ಕೇಂದ್ರ ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಬಿಹಾರದ ಜಮುಯಿ ಜಿಲ್ಲೆ ಮತ್ತು ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಸಕ್ಷಮ್ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಂವಾದ ನಡೆಸಿದರು.
ವಿಶೇಷ ಭಾಷಣ ಮಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ, “13.95 ಲಕ್ಷ ಎಬ್ಲ್ಯುಸಿ ಗಳಲ್ಲಿ 12 ಕೋಟಿಗೂ ಹೆಚ್ಚು ಸಂವೇದನಾಶೀಲ ಚಟುವಟಿಕೆಗಳನ್ನು ಪೋಷಣ್ ಮಾಸಾಚರಣೆ ಸಮಯದಲ್ಲಿ ವಿವಿಧ ಪೌಷ್ಟಿಕಾಂಶ-ಸಂಬಂಧಿತ ವಿಷಯಗಳ ಮೇಲೆ ನಡೆಸಲಾಗಿದೆ. ಇದರ ಜೊತೆಗೆ ಪೌಷ್ಟಿಕತೆಗೆ ಸಂಬಂಧಿಸಿದ ಜನಾಂದೋಲನ ಇಡೀ ದೇಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸುಸ್ಥಿರ ಪರಿಸರ ಅಭಿವೃದ್ಧಿ ದೃಷ್ಟಿಯಿಂದ ತಾಯಿ ಹೆಸರಿನಲ್ಲಿ ಒಂದು ಗಿಡ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಎಕ್ ಪೆಡ್ ಮಾ ಕೆ ನಾಮ್ ಅಭಿಯಾನದಡಿ 86 ಲಕ್ಷಕ್ಕೂ ಅಧಿಕ ಚಟುವಟಿಕೆಗಳನ್ನು ಪೋಷಣ್ ಅಭಿಯಾನದ ಸಂದರ್ಭದಲ್ಲಿ ಫಲಾನುಭವಿಗಳು ಮತ್ತು ಸಮುದಾಯಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ಅಸ್ಸಾಂನಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಿದ್ದು, ಇಂತಹವರಿಗೆ “ಹಿಮೋಗ್ಲೋಬಿನ್ ರಾಣಿ” ಮಾನ್ಯತೆ ನೀಡಲಾಗಿದೆ. ಇದು ಹದಿಹರೆಯದ ಬದುದೊಡ್ಡ ಸಮುದಾಯದಲ್ಲಿ ಸೂಕ್ಷ್ಮತೆಯಷ್ಟೇ ಅಲ್ಲದೇ ಸ್ಫೂರ್ತಿಯನ್ನು ಸಹ ತಂದಿದೆ “ ಎಂದು ಹೇಳಿದರು. "ಭಾರತವನ್ನು ಸುಪೋಷಿತ್ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದೊಂದಿಗೆ ಪೋಷಣ್ 2.0 ರ ಉಪಕ್ರಮಗಳಲ್ಲಿ ಭಾಗವಹಿಸಲು, ತೊಡಗಿಸಿಕೊಳ್ಳಲು ಮತ್ತು ಹೊಂದಿಕೊಳ್ಳಲು ಸಮುದಾಯಗಳನ್ನು ಪ್ರೋತ್ಸಾಹಿಸುವ ಸಕ್ಷಮ್ ಅಂಗನವಾಡಿಗಳ ಮೂಲಕ ತ್ವರಿತ ವೇಗದೊಂದಿಗೆ ಬಹುವಿಧದ ಬೆಳವಣಿಗೆಗಳನ್ನು ಮುಂಚೆಯೇ ನೋಡಬಹುದಾಗಿದೆ" ಎಂದು ಅವರು ಹೇಳಿದರು.
ಸಮಾರೋಪ ಭಾಷಣ ಮಾಡಿದ ಜಾರ್ಖಂಡ್ ರಾಜ್ಯಪಾಲರಾದ ಶ್ರೀ ಸಂತೋಷ್ ಗಂಗ್ವಾರ್, ಅಪೌಷ್ಟಿಕತೆ ಮುಕ್ತ ಭಾರತದ ಕಡೆಗೆ ಸಮಗ್ರ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಎಲ್ಲಾ ಇಲಾಖೆಗಳು ಮತ್ತು ಇತರ ಪಾಲುದಾರರ ನಡುವೆ ಏಕಮುಖ ಮತ್ತು ಸಹಭಾಗಿತ್ವದ ಪ್ರಾಮುಖ್ಯತೆಯತ್ತ ಪ್ರೇಕ್ಷಕರ ಗಮನ ಸೆಳೆದರು. ಇದಲ್ಲದೆ, ಅಂಗನವಾಡಿ ಕಾರ್ಯಕರ್ತೆಯರ ಮಹತ್ವದ ಪಾತ್ರದ ಬಗ್ಗೆ ಅವರು ಒತ್ತಿ ಹೇಳಿದರು. "ಈ ಮುಂಚೂಣಿ ಕಾರ್ಯಕರ್ತೆಯರು, ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ ಭಿ ಪಧೈ ಭಿ”ಯಂತಹ ಪರಿಕಲ್ಪನೆಗಳ ಸಹಾಯದಿಂದ ನಾವು ಬಲಿಷ್ಠ ಮತ್ತು ಸ್ವಾವಲಂಬಿ ದೇಶದತ್ತ ಸಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ". ನಾವೆಲ್ಲರೂ ನಮ್ಮ ದೈನಂದಿನ ಆಹಾರದಲ್ಲಿ ಹಸಿರು ತರಕಾರಿಗಳು, ಧಾನ್ಯಗಳು ಮತ್ತು ರಾಗಿ ಬಳಕೆಯನ್ನು ಉತ್ತೇಜಿಸಬೇಕು ಎಂದು ಅವರು ಹೇಳಿದರು.
ಪೋಶನ್ ಭಿ ಪಧೈ ಭೀ, ಇಸಿಸಿಇ, ಪಾಲನ ಗೃಹ, ಮನೆಗೆ ಆಹಾರ ಧಾನ್ಯಗಳು/ಆಹಾರ ಕೊಂಡೊಯ್ಯುವ, ಆರೋಗ್ಯ ಶಿಬಿರ ಮತ್ತು ರಕ್ತಹೀನತೆ ಪರೀಕ್ಷೆ, ಮಕ್ಕಳ ರಕ್ಷಣೆ, ಸ್ವಸಹಾಯ ಗುಂಪುಗಳು, ಸಾಮಾಜಿಕ ಭದ್ರತಾ ಯೋಜನೆಗಳು, ಸಿಎಂಎಎಂ ಶಿಷ್ಟಾಚಾರದಂತಹ ವಿಭಿನ್ನ ವಿಷಯಗಳ ಮೇಲೆ ಕೇಂದ್ರೀಕರಿಸುವ ವಿವಿಧ ಮಳಿಗೆಗಳೊಂದಿಗೆ ಪ್ರದರ್ಶನವನ್ನು ಸ್ಥಳದಲ್ಲಿ ಆಯೋಜಿಸಲಾಗಿತ್ತು. ಜಾರ್ಖಂಡ್ ಅನ್ನು ಅಪೌಷ್ಟಿಕತೆ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವ ಪ್ರಮುಖ ಕಾರ್ಯತಂತ್ರಗಳ ಮೇಲೆ ಕೇಂದ್ರೀಕರಿಸುವ ಪೋಷಣ್ ಧಾರಾ ವೃತ್ತಪತ್ರಿಕೆಯ ಮೂರನೇ ಆವೃತ್ತಿಯನ್ನು ಸಹ ಈ ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾಯಿತು.
13.95 ಲಕ್ಷ ಎಬ್ಲ್ಯುಸಿ ಗಳಲ್ಲಿ 12 ಕೋಟಿಗೂ ಹೆಚ್ಚು ಸಂವೇದನಾಶೀಲ ಚಟುವಟಿಕೆಗಳನ್ನು ಎಲ್ಲಾ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೋಶನ್ ಮಾಸಾಚರಣೆ ಸಮಯದಲ್ಲಿ ವಿವಿಧ ಪೌಷ್ಟಿಕಾಂಶ-ಸಂಬಂಧಿತ ವಿಷಯಗಳ ಮೇಲೆ ನಡೆಸಲಾಗಿದೆ. ವಿವಿಧ ವಿಷಯಗಳಲ್ಲಿ ಒಟ್ಟು 2.4 ಕೋಟಿ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಈ ಪೈಕಿ 2 ಕೋಟಿ ಚಟುವಟಿಕೆಗಳು ಕ್ರಮವಾಗಿ ರಕ್ತ ಹೀನತೆ ಮತ್ತು ಬೆಳವಣಿಗೆಗೆ ಸಂಬಂಧಪಟ್ಟಿದ್ದವು.
ಪೋಷಣ್ ಮಾಸಾಚರಣೆ – 2024 ವಿವಿಧ ಪಾಲುದಾರರ ಸಾಮೂಹಿಕ ಪ್ರಯತ್ನದ ಮೂಲಕ, ಆರೋಗ್ಯಪೂರ್ಣ ಮತ್ತು ಪೌಷ್ಟಿಕತೆಯುಕ್ತ ಭಾರತ ನಿರ್ಮಿಸುವ ಗುರಿಯೊಂದಿಗೆ ನಡೆಯಿತು.
ಇದು ಭಾಗವಹಿಸುವ ಎಲ್ಲಾ ರಾಜ್ಯಗಳ ಸಮರ್ಪಣೆಯನ್ನು ಗುರುತಿಸುವುದಲ್ಲದೆ, ಸಕ್ಷಮ್ ಅಂಗನವಾಡಿ ಕೇಂದ್ರಗಳ ಮೂಲಕ ಪಾಲುದಾರರ ಉತ್ತಮ ಮಾನ್ಯತೆಯನ್ನು ಖಾತ್ರಿಪಡಿಸುವ, ನಿರಂತರ ಜನಾಂದೋಲನಗಳ ಜೊತೆಗೆ ತಳಮಟ್ಟದ ಚಳುವಳಿಗಳನ್ನು ಬಲಪಡಿಸುವ ಪ್ರಮುಖ ಪಾತ್ರವನ್ನು ಇದು ಒತ್ತಿ ಹೇಳಿದೆ.
*****
(Release ID: 2060476)
Visitor Counter : 33