ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳ ಸ್ಪರ್ಧೆ-2024 ರಲ್ಲಿ ವಿಜೇತ ಗ್ರಾಮಗಳನ್ನು ಪ್ರಕಟಿಸಿದೆ


ದೇಶದಾದ್ಯಂತ 8 ವಿಭಾಗಗಳಲ್ಲಿ 36 ಗ್ರಾಮಗಳನ್ನು ವಿಜೇತರೆಂದು ಗುರುತಿಸಲಾಗಿದೆ

Posted On: 27 SEP 2024 2:38PM by PIB Bengaluru

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು 2024ರ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳ ಸ್ಪರ್ಧೆಯ ವಿಜೇತರನ್ನು ಇಂದು (ಸೆಪ್ಟೆಂಬರ್ 27, 2024 ರಂದು) ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ಘೋಷಿಸಿದೆ.

ಭಾರತದ ಹಳ್ಳಿಗಳು - ಭಾರತದ ಜೀವಾಳ (ಸೌಲ್ ಆಫ್ ಇಂಡಿಯಾ) ಎಂಬ ಪರಿಕಲ್ಪನೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, 2023 ರಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳ ಸ್ಪರ್ಧೆಯನ್ನು ಪರಿಚಯಿಸಲಾಯಿತು. ಸಮುದಾಯ ಆಧಾರಿತ ಮೌಲ್ಯಗಳು ಮತ್ತು ಸುಸ್ಥಿರತೆಗೆ ಒತ್ತುಕೊಟ್ಟು, ಬದ್ಧತೆಯ ಮೂಲಕ ಸಾಂಸ್ಕೃತಿಕ ಮತ್ತು ನೈಸರ್ಗಿಕ ಆಸ್ತಿಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಹಾಗೂ ಗ್ರಾಮಗಳನ್ನು ಗುರುತಿಸುವುದು ಮತ್ತು ಪರಿಚಯಿಸುವುದು ಮುಂತಾದ ಅಂಶಗಳನ್ನು ಕೇಂದ್ರೀಕೃತವಾಗಿ – ಈ ಪರಿಲ್ಪನೆಯನ್ನು ರೂಪಿಸಲಗಿತ್ತು.

2023 ರಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳ ಸ್ಪರ್ಧೆಯ ಮೊದಲ ಆವೃತ್ತಿಗೆ 795 ಹಳ್ಳಿಗಳಿಂದ ಅರ್ಜಿಗಳು ಬಂದವು. ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳ ಸ್ಪರ್ಧೆಯ ಎರಡನೇ ಆವೃತ್ತಿಯಲ್ಲಿ, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 991 ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಅದರಲ್ಲಿ 36 ಹಳ್ಳಿಗಳು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳ ಸ್ಪರ್ಧೆ 2024 ರ 8 ವಿಭಾಗಗಳಲ್ಲಿ ವಿಜೇತ ಗ್ರಾಮಗಳಾಗಿ ಗುರುತಿಸಲ್ಪಟ್ಟವು.

ಈ 36 ಈ ಕೆಳಗಿನಂತಿವೆ:

ಕ್ರ.ಸಂ

ಗ್ರಾಮದ ಹೆಸರು

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ

ವರ್ಗ

1

ಧುದ್ಮರಸ್

ಛತ್ತೀಸ್‌ಗಢ

ಸಾಹಸ ಪ್ರವಾಸೋದ್ಯಮ

2

ಅರು

ಜಮ್ಮು ಮತ್ತು ಕಾಶ್ಮೀರ

ಸಾಹಸ ಪ್ರವಾಸೋದ್ಯಮ

3

ಕುತ್ಲೂರು

ಕರ್ನಾಟಕ

ಸಾಹಸ ಪ್ರವಾಸೋದ್ಯಮ

4

ಜಾಖೋಲ್

ಉತ್ತರಾಖಂಡ

ಸಾಹಸ ಪ್ರವಾಸೋದ್ಯಮ

6

ಕುಮಾರಕೋಮ್

ಕೇರಳ

ಕೃಷಿ ಪ್ರವಾಸೋದ್ಯಮ

7

ಕಾರ್ಡೆ

ಮಹಾರಾಷ್ಟ್ರ

ಕೃಷಿ ಪ್ರವಾಸೋದ್ಯಮ

8

ಹಂಸಲಿ

ಪಂಜಾಬ್

ಕೃಷಿ ಪ್ರವಾಸೋದ್ಯಮ

9

ಸೂಪಿ

ಉತ್ತರಾಖಂಡ

ಕೃಷಿ ಪ್ರವಾಸೋದ್ಯಮ

5

ಬಾರಾನಗರ

ಪಶ್ಚಿಮ ಬಂಗಾಳ

ಕೃಷಿ ಪ್ರವಾಸೋದ್ಯಮ

10

ಚಿತ್ರಕೋಟೆ

ಛತ್ತೀಸ್‌ಗಢ

ಸಮುದಾಯ ಆಧಾರಿತ ಪ್ರವಾಸೋದ್ಯಮ

11

ಮಿನಿಕಾಯ್ ದ್ವೀಪ

ಲಕ್ಷದ್ವೀಪ

ಸಮುದಾಯ ಆಧಾರಿತ ಪ್ರವಾಸೋದ್ಯಮ

12

ಸಿಯಾಲ್ಸುಕ್

ಮಿಜೋರಾಂ

ಸಮುದಾಯ ಆಧಾರಿತ ಪ್ರವಾಸೋದ್ಯಮ

14

ಡಿಯೋಮಾಲಿ

ರಾಜಸ್ಥಾನ

ಸಮುದಾಯ ಆಧಾರಿತ ಪ್ರವಾಸೋದ್ಯಮ

13

ಅಲ್ಪನಾ ಗ್ರಾ

ತ್ರಿಪುರಾ

ಸಮುದಾಯ ಆಧಾರಿತ ಪ್ರವಾಸೋದ್ಯಮ

15

ಸುಲ್ಕುಚಿ

ಅಸ್ಸಾಂ

ಕರಕುಶಲ / ಕ್ರಾಫ್ಟ್

17

ಪ್ರಾಣಪುರ

ಮಧ್ಯಪ್ರದೇಶ

ಕರಕುಶಲ / ಕ್ರಾಫ್ಟ್

18

ಉಮ್ಡೆನ್

ಮೇಘಾಲಯ

ಕರಕುಶಲ / ಕ್ರಾಫ್ಟ್

16

ಮಣಿಯಬಂಧ

ಒಡಿಶಾ

ಕರಕುಶಲ / ಕ್ರಾಫ್ಟ್

19

ನಿರ್ಮಲ್

ತೆಲಂಗಾಣ

ಕರಕುಶಲ / ಕ್ರಾಫ್ಟ್

20

ಹಫೇಶ್ವರ

ಗುಜರಾತ್

ಪರಂಪರೆ

21

ಆಂಡ್ರೊ

ಮಣಿಪುರ

ಪರಂಪರೆ

22

ಮಾಫ್ಲಾಂಗ್

ಮೇಘಾಲಯ

ಪರಂಪರೆ

23

ಕೀಲಾಡಿ

ತಮಿಳುನಾಡು

ಪರಂಪರೆ

24

ಪುರ ಮಹಾದೇವ

ಉತ್ತರ ಪ್ರದೇಶ

ಪರಂಪರೆ

25

ದುಧಾನಿ

ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು

ಜವಾಬ್ದಾರಿಯುತ ಪ್ರವಾಸೋದ್ಯಮ

26

ಕಡಲುಂಡಿ

ಕೇರಳ

ಜವಾಬ್ದಾರಿಯುತ ಪ್ರವಾಸೋದ್ಯಮ

27

ತಾರ್ ಗ್ರಾಮ

ಲಡಾಖ್

ಜವಾಬ್ದಾರಿಯುತ ಪ್ರವಾಸೋದ್ಯಮ

28

ಸಬರ್ವಾಣಿ

ಮಧ್ಯಪ್ರದೇಶ

ಜವಾಬ್ದಾರಿಯುತ ಪ್ರವಾಸೋದ್ಯಮ

29

ಲಾಡಪುರ ಖಾಸ್

ಮಧ್ಯಪ್ರದೇಶ

ಜವಾಬ್ದಾರಿಯುತ ಪ್ರವಾಸೋದ್ಯಮ

34

ಅಹೋಬಿಲಂ

ಆಂಧ್ರಪ್ರದೇಶ

ಆಧ್ಯಾತ್ಮಿಕ ಮತ್ತು ಸ್ವಾಸ್ಥ್ಯ

30

ಬಂದೋರಾ

ಗೋವಾ

ಆಧ್ಯಾತ್ಮಿಕ ಮತ್ತು ಸ್ವಾಸ್ಥ್ಯ

31

ರಿಖಿಯಾಪೀಠ

ಜಾರ್ಖಂಡ್

ಆಧ್ಯಾತ್ಮಿಕ ಮತ್ತು ಸ್ವಾಸ್ಥ್ಯ

32

ಮೇಲ್ಕಲಿಂಗಂ ಪಟ್ಟಿ

ತಮಿಳುನಾಡು

ಆಧ್ಯಾತ್ಮಿಕ ಮತ್ತು ಸ್ವಾಸ್ಥ್ಯ

33

ಸೋಮಸಿಲ

ತೆಲಂಗಾಣ

ಆಧ್ಯಾತ್ಮಿಕ ಮತ್ತು ಸ್ವಾಸ್ಥ್ಯ

35

ಹರ್ಸಿಲ್

ಉತ್ತರಾಖಂಡ

ರೋಮಾಂಚಕ / ಆಕರ್ಷಕ ಗ್ರಾಮ

36

ಗುಂಜಿ

ಉತ್ತರಾಖಂಡ

ರೋಮಾಂಚಕ / ಆಕರ್ಷಕ ಗ್ರಾಮ

 

*****



(Release ID: 2060245) Visitor Counter : 19