ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಪ್ರವಾಸೋದ್ಯಮ ಸಚಿವಾಲಯದಿಂದ ರಾಷ್ಟ್ರೀಯ ಪ್ರವಾಸೋದ್ಯಮ ಸ್ಪಂದನಾ ಉಪಕ್ರಮ- ಪರ್ಯಟನ ಮಿತ್ರ ಮತ್ತು ಪಯರ್ಟನ ದೀದಿ ಆರಂಭ


Posted On: 27 SEP 2024 2:03PM by PIB Bengaluru

ವಿಶ್ವ ಪ್ರವಾಸೋದ್ಯಮ ದಿನವಾದ ಸೆಪ್ಟಂಬರ್ 27ರಂದು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ರಾಷ್ಟ್ರೀಯ ಪ್ರವಾಸೋದ್ಯಮ ಸ್ಪಂದನಾ ಉಪಕ್ರಮ- ‘ಪರ್ಯಟನ ಮಿತ್ರ ಮತ್ತು ಪಯರ್ಟನ ದೀದಿಯನ್ನು ಆರಂಭಿಸಿದೆ.

ಪ್ರವಾಸೋದ್ಯಮವನ್ನು ಸಾಮಾಜಿಕ ಸೇರ್ಪಡೆ, ಉದ್ಯೋಗ ಮತ್ತು ಆರ್ಥಿಕ ಪ್ರಗತಿಗೆ ಸಾಧನವನ್ನಾಗಿ ಮಾಡಿಕೊಳ್ಳಬೇಕೆಂಬ ಪ್ರಧಾನಮಂತ್ರಿ ಅವರ ದೂರದೃಷ್ಟಿಯನ್ನು ಆಧರಿಸಿ ಪ್ರವಾಸೋದ್ಯಮ ಸಚಿವಾಲಯ ಭಾರತ ದೇಶಾದ್ಯಂತ ಆರು ಪ್ರವಾಸಿ ತಾಣಗಳಲ್ಲಿ ಅಂದರೆ , ಓರ್ಚಾ(ಮಧ್ಯಪ್ರದೇಶ), ಗಂಡಿಕೋಟಾ(ಆಂಧ್ರಪ್ರದೇಶ), ಬೋಧ್‌ ಗಯಾ(ಬಿಹಾರ), ಐಜ್ವಾಲ್ (ಮಣಿಪುರ), ಜೋಧ್ ಪುರ್ (ರಾಜಸ್ಥಾನ) ಮತ್ತು ಶ್ರೀ ವಿಜಯಪುರಂ (ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪಗಳು) ಗಳಲ್ಲಿ ಪರ್ಯಟನ ಮಿತ್ರ ಮತ್ತು ಪಯರ್ಟನ ದೀದಿ’ ಯನ್ನುಪ್ರಯೋಗಿಕವಾಗಿ ಆರಂಭಿಸಿತ್ತು.

ಈ ಉಪಕ್ರಮದ ಮೂಲಕ, ಪ್ರವಾಸೋದ್ಯಮ ಸಚಿವಾಲಯವು ಪ್ರವಾಸಿಗರಿಗೆ ಒಟ್ಟಾರೆ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ತಮ್ಮ ಸ್ಥಾನವನ್ನು ಹೆಚ್ಚಿಸಿಕೊಳ್ಳಲು  ಹೆಮ್ಮೆಯ ರಾಯಭಾರಿಗಳು ಮತ್ತು ಕಥೆಗಾರರನ್ನು ಹೊಂದಿರುವ 'ಪ್ರವಾಸಿ ಸ್ನೇಹಿ' ಜನರನ್ನು ಭೇಟಿ ಮಾಡಲು ಅನುವು ಮಾಡಿಕೊಡಲಿದೆ.  ಪ್ರವಾಸಿಗರೊಂದಿಗೆ ಸಂವಹನ ನಡೆಸುವ ಮತ್ತು ತೊಡಗಿಸಿಕೊಳ್ಳುವ ಎಲ್ಲ ವ್ಯಕ್ತಿಗಳಿಗೆ ಪ್ರವಾಸೋದ್ಯಮ ಸಂಬಂಧಿತ ತರಬೇತಿ ಮತ್ತು ಜಾಗೃತಿಯನ್ನು ಒದಗಿಸುವ ಮೂಲಕ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ.

‘ಅತಿಥಿ ದೇವೋಭವ’ದ ಘೋಷವಾಕ್ಯದೊಂದಿಗೆ ಕ್ಯಾಬ್ ಚಾಲಕರು, ಆಟೋ ಚಾಲಕರು, ರೈಲ್ವೆ ನಿಲ್ದಾಣಗಳಲ್ಲಿನ ಸಿಬ್ಬಂದಿ, ವಿಮಾನ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿನ ಹೋಟೆಲ್ ಸಿಬ್ಬಂದಿ, ರೆಸ್ಟೋರೆಂಟ್ ಕೆಲಸಗಾರರು, ಹೋಂಸ್ಟೇ ಮಾಲೀಕರು, ಪ್ರವಾಸಿ ಮಾರ್ಗದರ್ಶಿಗಳು, ಪೊಲೀಸ್ ಸಿಬ್ಬಂದಿ, ಬೀದಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ವಿದ್ಯಾರ್ಥಿಗಳು ಮತ್ತು ಇತರರಿಗೆ ಪ್ರವಾಸೋದ್ಯಮದ ಪ್ರಾಮುಖ್ಯತೆ, ಸಾಮಾನ್ಯ ಶುಚಿತ್ವ, ಸುರಕ್ಷತೆ, ಸುಸ್ಥಿರತೆ ಮತ್ತು ಪ್ರವಾಸಿಗರಿಗೆ ಆತಿಥ್ಯ ಮತ್ತು ಆರೈಕೆಯ ಅತ್ಯುನ್ನತ ಗುಣಮಟ್ಟವನ್ನು ಒದಗಿಸುವ ಆದ್ಯತೆಯ ಕುರಿತು ತರಬೇತಿ ಮತ್ತು ಜಾಗೃತಿಯನ್ನು ನೀಡಲಾಯಿತು.

ಈ ವ್ಯಕ್ತಿಗಳು ಪ್ರವಾಸಿ ತಾಣಗಳ ಸ್ಥಳೀಯ ಕಥೆಗಳ ಜೊತೆಗೆ ಅದರ ಕಡಿಮೆ ಪ್ರಸಿದ್ದಿಯಾಗಿರುವ ಪ್ರವಾಸೋದ್ಯಮ ಅದ್ಭುತಗಳ ಬಗ್ಗೆಯೂ ಅರಿವು ಮೂಡಿಸಿದರು, ಇದರಿಂದಾಗಿ ಈ ಸ್ಥಳಗಳಲ್ಲಿ ಪ್ರವಾಸಿಗರು ಸಂವಹನ ನಡೆಸುವ ಪ್ರತಿಯೊಬ್ಬ ವ್ಯಕ್ತಿಯೂ ಸ್ಥಳೀಯ ರಾಯಭಾರಿಗಳು ಮತ್ತು ಕಥೆಗಾರರಾಗಿ ಹೊರಹೊಮ್ಮುತ್ತಾರೆ, ಅವರು ಪ್ರತಿಬಾರಿಯೂ ಸಾಧ್ಯವಾದ ಎಲ್ಲಾ ರೀತಿಗಳಲ್ಲಿ ಸಕಾರಾತ್ಮಕ ಪ್ರವಾಸಿ ಅನುಭವಗಳನ್ನು ನೀಡಲು ಶ್ರಮಿಸುತ್ತಾರೆ.

ಪರ್ಯಟನ್ ಮಿತ್ರ ಮತ್ತು ಪರ್ಯಟನ್ ದೀದಿ ಮೂಲಕ, ಮಹಿಳೆಯರು ಮತ್ತು ಯುವಜನರಿಗೆ  ಪ್ರವಾಸಿ ತಾಣದ ಸಾಮರ್ಥ್ಯಗಳನ್ನು ಆಧರಿಸಿ ಹೊಸ ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಪಾರಂಪರಿಕ ನಡಿಗೆಗಳು, ಆಹಾರ ಪ್ರವಾಸಗಳು, ಕರಕುಶಲ ಪ್ರವಾಸಗಳು, ಪ್ರಕೃತಿ ಚಾರಣಗಳು, ಹೋಂಸ್ಟೇ ಅನುಭವಗಳು ಮತ್ತು ಇತರ ನವೀನ ಪ್ರವಾಸೋದ್ಯಮ ಉತ್ಪನ್ನಗಳಂತಹ ಅನುಭವಗಳನ್ನು ಒದಗಿಸಲು ಅವರಿಗೆ ತರಬೇತಿ ನೀಡಲು ವಿಶೇಷ ಒತ್ತು ನೀಡಲಾಗುತ್ತಿದೆ. ಹೋಮ್‌ಸ್ಟೇ ಮಾಲೀಕರು, ಆಹಾರ ಮತ್ತು ಪಾಕಪದ್ಧತಿ ಅನುಭವ ಹೊಂದಿರುವವರು, ಸಾಂಸ್ಕೃತಿಕ ಮಾರ್ಗದರ್ಶಿಗಳು, ನೈಸರ್ಗಿಕ ಮಾರ್ಗದರ್ಶಕರು, ಸಾಹಸ ಮಾರ್ಗದರ್ಶಿಗಳು ಮತ್ತು ಪ್ರವಾಸೋದ್ಯಮದಲ್ಲಿ ಇತರ ಪಾತ್ರಗಳಾಗಿ ಲಾಭದಾಯಕ ಉದ್ಯೋಗವನ್ನು ಪಡೆಯಲು ಸ್ಥಳೀಯರು ಈ ಕೌಶಲ್ಯಗಳನ್ನು ಬಳಸಿಕೊಳ್ಳುತ್ತಾರೆಂದು ನಂಬಲಾಗಿದೆ.

ಪ್ರವಾಸೋದ್ಯಮ-ಕೇಂದ್ರಿತ ತರಬೇತಿಯನ್ನು ಡಿಜಿಟಲ್ ಸಾಕ್ಷರತೆ ಮತ್ತು ಡಿಜಿಟಲ್ ಪರಿಕರಗಳಲ್ಲಿ ಸಾಮಾನ್ಯ ತರಬೇತಿಯ ಮೂಲಕ ನೀಡಲಾಗುತ್ತಿದೆ, ಅವರು ಕಟ್ಟಿಕೊಡುವ ಅನುಭವಗಳನ್ನು ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಪ್ರವಾಸಿಗರಿಗೆ ಹೊಸ ಅನ್ವೇಷಣೆಗೆ ದಾರಿ ಮಾಡಿಕೊಡುವುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ. ಈ ವರ್ಷದ ಆಗಸ್ಟ್ 15 ರಂದು ಈ ಕಾರ್ಯಕ್ರಮದ ಪ್ರಾಯೋಗಿಕವಾಗಿ, ಪ್ರವಾಸಿಗರಿಗೆ ಸಕಾರಾತ್ಮಕ ಅನುಭವವನ್ನು ಸೃಷ್ಟಿಸುವ ಪ್ರಾಮುಖ್ಯತೆಯ ಕುರಿತು 6 ಪ್ರಾಯೋಗಿಕ ಸ್ಥಳಗಳಲ್ಲಿ ಸುಮಾರು 3,000 ಜನರಿಗೆ  ಪ್ರವಾಸಮಿತ್ರರನ್ನಾಗಿ ತರಬೇತಿ ನೀಡಲಾಗಿದೆ.

ಪರಿಣಾಮ

ಪರ್ಯಟನ್ ಮಿತ್ರ ಮತ್ತು ಪರ್ಯಟನ್ ದೀದಿ ಅವರ ಪ್ರಯತ್ನದಿಂದಾಗಿ, ಪ್ರವಾಸೋದ್ಯಮ ತರಬೇತಿ ಕಾರ್ಯಕ್ರಮಗಳ ಭಾಗವಾಗಲು ಮತ್ತು ಪ್ರವಾಸೋದ್ಯಮ ಪೂರಕ ವ್ಯವಸ್ಥೆಯ ಭಾಗವಾಗಲು ಸ್ಥಳೀಯರಲ್ಲಿ ಉತ್ಸಾಹ ಗೋಚರವಾಗುತ್ತಿರುವುದು ಕಂಡು ಬಂದಿದೆ.

ಮುಂದುವರಿದು, ಸಚಿವಾಲಯ ಪರ್ಯಟನ್ ಮಿತ್ರ ಮತ್ತು ಪರ್ಯಟನ್ ದೀದಿ ಅವರನ್ನು ಗುರುತಿಸಿ ಅವರಿಗೆ ನಿರ್ದಿಷ್ಟ ಬ್ಯಾಡ್ಜ್ ಅನ್ನು ನೀಡುವುದಲ್ಲದೆ, ಪರ್ಯಟನ ಮಿತ್ರರೊಂದಿಗೆ ಇರುವಾಗ ಪ್ರವಾಸಿಗರಿಗೆ ವಿಶ್ವಾಸಾರ್ಹ ಅನುಭವನ್ನು ನೀಡುತ್ತದೆ.

ವಿಶ್ವ ಪ್ರವಾಸೋದ್ಯಮ ದಿನ 2024 ಅಂಗವಾಗಿ ಪ್ರವಾಸೋದ್ಯಮ ಸಚಿವಾಲಯ ದೇಶಾದ್ಯಂತ ಈ ಕೆಳಗಿನ 50 ಪ್ರವಾಸಿ ತಾಣಗಳಲ್ಲಿ ಪರ್ಯಟನ್ ಮಿತ್ರ ಮತ್ತು ಪರ್ಯಟನ್ ದೀದಿ ಉಪಕ್ರಮಕ್ಕೆ ಚಾಲನೆ ನೀಡಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಸ್ಥಳ 1

ಸ್ಥಳ 2

ಅಂಡಮಾನ್ & ನಿಕೋಬಾರ್ ದ್ವೀಪಗಳು

ಶ್ರೀವಿಜಯಪುರಂ

 

ಆಂಧ್ರಪ್ರದೇಶ

ಗಂಡಿಕೋಟಾ

ತಿರುಪತಿ

ಅರುಣಾಚಲ ಪ್ರದೇಶ

ತೈವಾಂಗ್

 

ಅಸ್ಸಾಂ

ಗುವಾಹಟಿ

 

ಬಿಹಾರ

ಬೋಧಗಯಾ

ನಳಂದಾ

ಚಂಡೀಗಢ

ಚಂಡೀಗಢ

 

ಛತ್ತೀಸ್ ಗಢ

ರಾಯ್ ಪುರ

 

ದಾದ್ರ & ನಗರ ಹವೇಲಿ ಮತ್ತು ದಾಮನ್ & ದಿಯು

ದಾಮನ್

 

ದೆಹಲಿ

ದೆಹಲಿ

 

ಗೋವಾ

ಗೋವಾ

 

ಗುಜರಾತ್

ಅಹಮದಾಬಾದ್

ಕೇವಾಡಿಯಾ

ಹರಿಯಾಣ

ಕುರುಕ್ಷೇತ್ರ

 

ಹಿಮಾಚಲ ಪ್ರದೇಶ

ಶಿಮ್ಲಾ

 

ಜಮ್ಮು & ಕಾಶ್ಮೀರ

ಶ್ರೀನಗರ

 

ಜಾರ್ಖಂಡ್

ರಾಂಚಿ

 

ಕರ್ನಾಟಕ

ಹಂಪಿ

ಮೈಸೂರು

ಕೇರಳ

ತಿರುವನಂತರಪುರ

ಕೊಚ್ಚಿ

ಲಡಾಖ್

ಲೇಹ್

 

ಲಕ್ಷದ್ವೀಪ

ಕವರಟ್ಟಿ

 

ಮಧ್ಯಪ್ರದೇಶ

ಓರ್ಚಾ

ಉಜ್ಜೈಯಿನಿ

ಮಹಾರಾಷ್ಟ್ರ

ಔರಂಗಾಬಾದ್

ನಾಸಿಕ್

ಮಣಿಪುರ

ಇಂಫಾಲ್

 

ಮೇಘಾಲಯ

ಶಿಲ್ಲಾಂಗ್

 

ಮಿಜೋರಾಂ  

ಐಜ್ವಾಲ್

 

ನಾಗಾಲ್ಯಾಂಡ್

ದಿಮಾಪುರ್

 

ಒಡಿಶಾ

ಪುರಿ

 

ಪುದುಚೇರಿ

ಪುದುಚೇರಿ

 

ಪಂಜಾಬ್

ಅಮೃತಸರ

ಪಟಿಯಾಲ

ರಾಜಸ್ತಾನ್

ಜೋಧ್‌ ಪುರ

ಜೈಪುರ

ಸಿಕ್ಕಿಂ

ಗ್ಯಾಂಗ್ ಟಾಕ್

 

ತಮಿಳುನಾಡು

ಮಹಾಬಲಿಪುರಂ

ತಂಜಾವೂರು

ತ್ರಿಪುರಾ

ಅಗರ್ತಕಲಾ

 

ತೆಲಂಗಾಣ

ಹೈದರಾಬಾದ್

 

ಉತ್ತರ ಪ್ರದೇಶ

ವಾರಾಣಾಸಿ

ಆಗ್ರಾ

ಉತ್ತರ ಪ್ರದೇಶ

ಅಯೋಧ್ಯೆ

 

ಉತ್ತರಾಖಂಡ್

ಹರಿದ್ವಾರ

ಋಷಿಕೇಶ

ಪಶ್ಚಿಮ ಬಂಗಾಳ

ಡಾರ್ಜಲಿಂಗ್

ಕೋಲ್ಕತ್ತಾ

ಇನ್‌ಕ್ರೆಡಿಬಲ್ ಇಂಡಿಯನ್ಸ್ ಮೂಲಕ ಇನ್ಕ್ರೆಡಿಬಲ್ ಇಂಡಿಯಾದ ಅನುಭವವೊಂದಿಗೆ ಪ್ರತಿಯೊಬ್ಬರನ್ನು ಸ್ವಾಗತಿಸುವುದು, ಆ ಮೂಲಕ ಭಾರತದಲ್ಲಿದ್ದಾಗ ಪ್ರವಾಸಿಗರಿಗೆ ಆತ್ಮೀಯ ಸ್ವಾಗತ, ಆತಿಥ್ಯ ಮತ್ತು ಸ್ಮರಣೀಯ ಅನುಭವವನ್ನು ಸೃಷ್ಟಿಸುವುದು ಪರ್ಯಟನ ಮಿತ್ರ ಮತ್ತು ಪರ್ಯಟನ ದೀದಿ ಉಪಕ್ರಮದ ದೂರದೃಷ್ಟಿಯಾಗಿದೆ.

 

*****


 


(Release ID: 2060168) Visitor Counter : 37