ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಚೆಸ್ ಒಲಿಂಪಿಯಾಡ್ ವಿಜೇತರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂವಾದ

Posted On: 26 SEP 2024 4:30PM by PIB Bengaluru

ಚೆಸ್ ಒಲಿಂಪಿಯಾಡ್ ವಿಜೇತರೊಂದಿಗೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ ನಡೆಸಿದರು.

ಚೆಫ್-ಡಿ-ಮಿಷನ್, ದಿಬ್ಯೆಂದು ಬರುವಾ ಅವರು ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿ, ಭಾರತವು ಮೊದಲ ಬಾರಿಗೆ ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ಅಲ್ಲಿ ಬಾಲಕರ ತಂಡವು 22 ರಲ್ಲಿ 21 ಅಂಕಗಳನ್ನು ಪಡೆದುಕೊಂಡಿತು ಮತ್ತು ಬಾಲಕಿಯರ ತಂಡವು 22 ರಲ್ಲಿ 19 ಅಂಕಗಳನ್ನು ಗಳಿಸಿ ಒಟ್ಟು 40 ಅಂಕಗಳನ್ನು ಗಳಿಸಿತು. ಒಟ್ಟು 44 ಅಂಕಗಳು ನಿಗದಿಯಾಗಿತ್ತು ಎಂದರು.

ಕ್ರೀಡಾಂಗಣದಲ್ಲಿನ ವಾತಾವರಣದ ಬಗ್ಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಚಾರಿಸಿದಾಗ ಚೆಸ್ ಆಟಗಾರ್ತಿ ಹರಿಕಾ ದ್ರೋಣವಲ್ಲಿ ವಿಜಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು ಮತ್ತು ಅವರ ವಿರೋಧಿಗಳು ಸಹ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾಗಿ ಹೇಳಿದರು.

ಭಾರತದಲ್ಲಿ ಚೆಸ್‌ನ ಜನಪ್ರಿಯತೆ ಬೆಳೆಯುತ್ತಿರುವ ಕುರಿತು ವಿದಿತ್ ಗುಜರಾತಿ ಅನಾವರಣಗೊಳಿಸಿದರು ಮತ್ತು ಸಾಟಿಯಿಲ್ಲದ ಬೆಂಬಲದಿಂದಾಗಿ ಚದುರಂಗದ ಬಗ್ಗೆ ಉತ್ತಮ ಭಾವನೆಯಾಗಿದೆ ಎಂದು ಹೇಳಿದರು. ಚೆಸ್  ಒಲಿಂಪಿಯಾಡ್ ನಲ್ಲಿ 180 ದೇಶಗಳು ಭಾಗವಹಿಸಿದ್ದವು. ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನ ಕೊನೆಯ ಆವೃತ್ತಿಯನ್ನು ಅವರು ಸ್ಮರಿಸಿಕೊಂಡರು. ಅಲ್ಲಿ ಎರಡೂ ಭಾರತೀಯ ತಂಡಗಳು ಕಂಚು ಗೆದ್ದಿದ್ದವು ಮತ್ತು ಅಮೆರಿಕ ವಿರುದ್ಧದ ಸೋಲಿನ ನಂತರ ಮಹಿಳಾ ತಂಡದಿಂದ ಚಿನ್ನದ ಪದಕ ಲಭಿಸಿತು. ಹೆಚ್ಚಿನ ಪ್ರೇರಣೆಯೊಂದಿಗೆ ಈ ಆವೃತ್ತಿಯಲ್ಲಿ ಮತ್ತೆ ಆಡುವ ಮತ್ತು ಪಂದ್ಯವು ತುಂಬಾ ಹತ್ತಿರವಾಗಿದ್ದರೂ ಮತ್ತು ಡ್ರಾದಲ್ಲಿ ಕೊನೆಗೊಂಡರೂ ಅಂತಿಮವಾಗಿ ಚಿನ್ನ ಗೆದ್ದಿದ್ದನ್ನು ಅವರು ಪ್ರಸ್ತಾಪಿಸಿದರು. 

ಪ್ರಧಾನಮಂತ್ರಿಯವರು ತಮ್ಮ ಗೆಲುವಿನ ಮನಸ್ಥಿತಿಯನ್ನು ಅಪಾರ ಹೆಮ್ಮೆಯಿಂದ ಒಪ್ಪಿಕೊಂಡರು ಮತ್ತು ಕ್ರಮವಾಗಿ 22 ರಲ್ಲಿ 21 ಮತ್ತು 19 ಅಂಕಗಳನ್ನು ಗಳಿಸಿದ ನಂತರ ಸಂಘಟಕರ ಪ್ರತಿಕ್ರಿಯೆಯನ್ನು ಕೇಳಿದರು. ತಾನಿಯಾ ತಂಡದ ಗಮನಾರ್ಹ ಗೆಲುವನ್ನು ಪ್ರಸ್ತಾಪಿಸಿದರು. ವಿಶೇಷವಾಗಿ ತಂಡದ ಮುಕ್ರವಾಗಿ ಆಡಿದ ಹಿನ್ನೆಲೆಯಲ್ಲಿ ಯಾವುದೇ ಎದುರಾಳಿಯು ತಮ್ಮ ಸನಿಹಕ್ಕೆ ಬರಲು ಸಾಧ್ಯವಾಗಲಿಲ್ಲ. ಮೊದಲ ಏಳು ಪಂದ್ಯಗಳನ್ನು ಗೆದ್ದು, ಸಣ್ಣ ಹಿನ್ನೆಡೆಯನ್ನು ಎದುರಿಸಿ ಹೆಚ್ಚಿನ ಸ್ಥೈರ್ಯದೊಂದಿಗೆ ಬಲವಾಗಿ ಮರಳಿದ ಪ್ರಯಾಣದ ಬಗ್ಗೆ ಅವರು ಮಾತನಾಡಿದರು. 2022 ರ ಒಲಿಂಪಿಯಾಡ್‌ನಲ್ಲಿ ಉತ್ತಮ ಅಂತರದಿಂದ ಚಿನ್ನದ ಪದಕವನ್ನು ಕಳೆದುಕೊಂಡಿದ್ದರಿಂದ ಪ್ರತಿಯೊಬ್ಬ ಆಟಗಾರ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದರು ಮತ್ತು  ತಂಡದ ಉತ್ತಮ ಪ್ರಯತ್ನವನ್ನು ಗುಕೇಶ್ ದೊಮ್ಮರಾಜು ದಾಖಲಿಸಿದರು. ಪಂದ್ಯಾವಳಿಯ ಆರಂಭದಿಂದಲೂ ಇಡೀ ತಂಡವು ಹೆಚ್ಚು ಪ್ರೇರಣೆಯಿಂದ ಆಟ ಆಡಿದೆ ಎಂದು ಅವರು ಹೇಳಿದರು.

ತಮ್ಮ ಆಟದಲ್ಲಿನ ತಪ್ಪುಗಳನ್ನು ಸರಿಪಡಿಸಲು ಅಥವಾ ಎದುರಾಳಿಗಳ ಆಟದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಕೃತಕ ಬುದ್ಧಿಮತ್ತೆಯ ಅಳವಡಿಕೆಯ ಕುರಿತು ಪ್ರಧಾನ ಮಂತ್ರಿಯವರು ವಿಚಾರಿಸಿದಾಗ, ರಮೇಶ್ ಬಾಬು ಪ್ರಗ್ನಾನಂದ ಅವರು ಕೃತಕ ಬುದ್ದಿಮತ್ತೆ ಜೊತೆಗೆ ಚದುರಂಗದಾಟದ ವಿಕಾಸದ ಕುರಿತಂತೆ ಬೆಳಕು ಚೆಲ್ಲಿದರು. ಅಲ್ಲಿ ಹೊಸ ತಂತ್ರಜ್ಞಾನ ಮತ್ತು ಉತ್ತಮ ಕಂಪ್ಯೂಟರ್‌ಗಳು ಬಹಳಷ್ಟು ಹೊಸ ಆಲೋಚನೆಗಳನ್ನು ತರುತ್ತವೆ ಎಂದರು. ತಂತ್ರಜ್ಞಾನ ಬೆಳವಣಿಗೆಯ ಜೊತೆಗೆ ಸಾಕಷ್ಟು ಕಲಿಯಲು ಅವಕಾಶವಿರುತ್ತದೆ ಎಂದು ಹೇಳಿದರು. ವಿದಿತ್ ಗುಜ್ರಾಥಿ ಮಾತನಾಡಿ ಇದೀಗ ಪ್ರತಿಯೊಬ್ಬರಿಗೂ ಕೃತಕ ಬುದ್ದಿಮತ್ತೆಯು ಕ್ರೀಡೆಯಲ್ಲಿ ಸನ್ನದ್ಧಗೊಳ್ಳಲು  ಲಭ್ಯವಿರುವ ಅವಕಾಶವಾಗಿದೆ ಎಂದರು.

ತಂಡ ಫೈನಲ್ ಪ್ರವೇಶಿಸಲು ಇಡೀ ತಂಡ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವನೆಯಿಂದ ಆಟ ಆಡಿತು. ಆಟಗಾರರ ಕೌಟುಂಬಿಕ ಹಿನ್ನಲೆಯನ್ನು ಪ್ರಧಾನಮಂತ್ರಿಯವರು ಮತ್ತಷ್ಟು ಕೆದಕಿದಾಗ ಹೆಚ್ಚಿನ ಆಟಗಾರರ ಪೋಷಕರು ವೈದ್ಯರಾಗಿರುವುದನ್ನು ಗಮನಿಸಿದರು. ವಿದಿತ್ ಗುಜರಾತಿ ಅವರು ತಮ್ಮ ಸಹೋದರಿ ಕೂಡ ವೈದ್ಯರಾಗಿದ್ದಾರೆ ಎಂದು ದೃಢಪಡಿಸಿದರು. ತಾನಿಯಾ ಸಚ್‌ದೇವ್ ಅವರು ದೇಶದ ಪ್ರತಿಯೊಬ್ಬ ಕ್ರೀಡಾಪಟುವಿಗೆ ಅಪಾರ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಕ್ರೀಡೆಯೊಂದಿಗೆ ಅವರ ಆಸಕ್ತಿಯ ಬಗ್ಗೆ ಮಾಹಿತಿ ಕೇಳಿದರು.  ಆಗ ಪ್ರಧಾನಮಂತ್ರಿಯವರು ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಸಂಪತ್ತು, ಕೈಗಾರಿಕೆ ಮತ್ತು ಜಿಡಿಪಿಯಷ್ಟೇ ಅಲ್ಲದೇ ಪ್ರತಿಯೊಬ್ಬರೂ ಕೈಗಾರಿಕೆ, ವಿಜ್ಞಾನ ಅಥವಾ ಕ್ರೀಡೆ ಒಳಗೊಂಡಂತೆ ಪ್ರತಿಯೊಂದು ವಲಯದಲ್ಲಿ ಪರಿಣಿತರಾಗಬೇಕು. ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಲಕ್ಷಾಂತರ ಮಕ್ಕಳ ಪಾಲ್ಗೊಳ್ಳುವಿಕೆ ಮೂಲಕ ಕ್ರೀಡೆಯ ಮಹಾ ಕುಂಭಕ್ಕೆ ಸಾಕ್ಷಿಯಾಗಿತ್ತು. ಮಕ್ಕಳಲ್ಲಿ ಕ್ರೀಡಾ ಪ್ರತಿಭೆ ಮೂಡುತ್ತಿರುವ ಕುರಿತು ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಯುವ ಸಮೂಹದ ಪ್ರತಿಯೊಬ್ಬರಲ್ಲಿ ಸಾಮರ್ಥ್ಯವಿದೆ ಎಂದು ನಂಬಿರುವುದಾಗಿ ಪ್ರಧಾನಮಂತ್ರಿಯವರು ಹೇಳಿದರು. ದೇಶದಲ್ಲಿ ಸಾಮಾಜಿಕ ಜೀವನಕ್ಕೆ ಉತ್ತಮ ವಾತಾವರಣವನ್ನು ಸೃಷ್ಟಿಸಲು ಕ್ರೀಡಾ ಸ್ಫೂರ್ತಿ ಆಟಗಾರರಲ್ಲಿ ಮಾತ್ರವಲ್ಲದೆ ಸಾಮಾಜಿಕ ಜೀವನದಲ್ಲಿ ಒಂದು ಸಂಸ್ಕೃತಿಯಾಗಿ ಕ್ರೀಡಾ ಮನೋಭಾವವನ್ನು ಬೆಳೆಸಲು ಒತ್ತು ನೀಡಬೇಕು ಎಂದರು.  

ವಿದಿತ್ ಗುಜರಾತಿ ಮತ್ತು ತಾನಿಯಾ ಸಚೇದೇವ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಧಾನಮಂತ್ರಿಯವರು ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಅದೇ ಸಮಯದಲ್ಲಿ ಒತ್ತಡವನ್ನು ನಿಭಾಯಿಸುವ ಬಗ್ಗೆ, ದೈಹಿಕವಾಗಿ ಸದೃಢವಾಗಿರಲು ಮತ್ತು ಕಾರ್ಯಕ್ಷಮತೆಗೆ ಸಹಾಯ ಮಾಡುವ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. “ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಸಕಾರಾತ್ಮಕತೆ ಮತ್ತು ನಕಾರಾತ್ಮಕತೆ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಂಡಿರಬೇಕು. ಆಹ್ಲಾದಕರವಾದದ್ದನ್ನು ಮಾತ್ರ ಕೇಳಲು ಬಯಸುವುದು ಮಾನವನ ಸ್ವಭಾವ, ಆದರೆ ಅದು ನಿರ್ಧಾರಗಳಲ್ಲಿ ತಪ್ಪುಗಳಿಗೆ ಕಾರಣವಾಗಬಹುದು. ಎಲ್ಲಾ ರೀತಿಯ ಮಾಹಿತಿಯನ್ನು ವಿಶ್ಲೇಷಿಸಲು, ವಿಭಿನ್ನ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹಿಂಜರಿಕೆಯಿಲ್ಲದೆ ತಜ್ಞರಿಂದ ವಿವರ ಪಡೆಯುವಂತೆ ಅವರು ಸಲಹೆ ನೀಡಿದರು. “ಸವಾಲುಗಳನ್ನು ಸುಲಭವಾಗಿ ಎದುರಿಸುವ ಕುರಿತು ಮಾರ್ಗವನ್ನು ಕಂಡುಕೊಳ್ಳಬೇಕು. ಕೆಲವು ನಿಮಗೆ ಅನುಭವದಿಂದ ಬರಲಿದೆ ಮತ್ತು ನಾನು ಹಿಂದೆಯೇ ಹೇಳಿದಂತೆ ಯೋಗ ಮತ್ತು ಧ್ಯಾನಕ್ಕೆ ನೈಜ ಶಕ್ತಿಯಿದೆ” ಎಂದರು. ಒಬ್ಬ ವ್ಯಕ್ತಿ ಯಾವುದರಿಂದಲೂ ತೃಪ್ತನಾಗಬಾರದು ಎಂದು ಪ್ರಧಾನಮಂತ್ರಿ ಹೇಳಿದರು. ಏಕೆಂದರೆ ಆಗ ಆತ್ಮತೃಪ್ತಿ ಹೊರಹೊಮ್ಮಲು ಪ್ರಾರಂಭಿಸುತ್ತದೆ. "ಹೊಸದನ್ನು ಮಾಡಲು, ಹೆಚ್ಚಿನದನ್ನು ಪಡೆಯಲು ನಮ್ಮೊಳಗೆ ಯಾವಾಗಲೂ ಹಸಿವು ಇರಬೇಕು" ಎಂದು ಅವರು ಕಿವಿ ಮಾತು ಹೇಳಿದರು.

ದಿಬ್ಯೆಂದು ಬರುವಾ ಅವರು ಪ್ರಧಾನಿಯವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಭಾರತವು ಎರಡು ಐತಿಹಾಸಿಕ ಚಿನ್ನದ ಪದಕಗಳನ್ನು ಗೆದ್ದಿರುವ ಬಗ್ಗೆ ಪ್ರಧಾನ ಮಂತ್ರಿಯವರು ಈ ಕುರಿತು ಮಾಡಿದ ಘೋಷಣೆಯ ಕುರಿತಂತೆಯೂ ಸಂತಸ ವ್ಯಕ್ತಪಡಿಸಿದರು. ಬಳಿಕ ಬಸ್ಸಿನಲ್ಲಿ ಹಿಂದಿರುಗುವಾಗ ಪ್ರಯಾಣದಲ್ಲಿ ಪ್ರಧಾನಿಯವರ ಭಾಷಣವನ್ನು ವೀಕ್ಷಿಸಿದ್ದಾಗಿ ಅವರು ಮಾಹಿತಿ ನೀಡಿದರು. 1998ರಲ್ಲಿ ತಮ್ಮ ಮೊದಲ ಚೆಸ್ ಒಲಿಂಪಿಯಾಡ್‌ನಲ್ಲಿ ಗ್ಯಾರಿ ಕಾಸ್ಪರೋವ್ ಮತ್ತು ಕಾರ್ಪೋವ್‌ರಂತಹ ಆಟಗಾರರ ಹಸ್ತಾಕ್ಷರಗಳನ್ನು ಹಾಕಿದ ಬಗ್ಗೆ ಕೇಳಿದ್ದನ್ನು ನೆನಪಿಸಿಕೊಂಡ ಶ್ರೀ ಬರುವಾ, ಈ ಆವೃತ್ತಿಯಲ್ಲಿ ಗುಕೇಶ್, ಬ್ರಹ್ಮಾನಂದ, ಅರ್ಜುನ್, ದಿವ್ಯಾ, ಹರಿಕಾ ಮತ್ತು ಇತರರು ಹಸ್ತಾಕ್ಷರವನ್ನು ಹಸ್ತಾಂತರಿಸುವುದನ್ನು ನೋಡಿ ಅಪಾರ ಸಂತೋಷವಾಯಿತು ಎಂದರು. ಹೊಸ ತಲೆಮಾರಿನ ಆಟಗಾರರ ಆತ್ಮವಿಶ್ವಾಸದ ಪರಿವರ್ತನೆಗೆ ಪ್ರಧಾನಿಯವರ ದೂರದೃಷ್ಟಿ ಸಲ್ಲುತ್ತದೆ ಎಂದರು.

ಇವರೆಲ್ಲರ ಮೌಲ್ಯವು ಎಲ್ಲಾ ಆಟಗಾರರಲ್ಲಿದೆ ಎಂದು ಒತ್ತಿ ಹೇಳಿದ ಪ್ರಧಾನಿ ಅವರು ಚದುರಂಗ ಆಡುವ ಇತರರಿಗೆ ಅವರು ಸ್ಫೂರ್ತಿಯ ಉತ್ತಮ ಮೂಲವಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಜರಾತ್ ಮುಖ್ಯಮಂತ್ರಿಯಾಗಿ 20,000 ಚೆಸ್ ಆಟಗಾರರು ಭಾಗವಹಿಸುವ ಬೃಹತ್ ಚೆಸ್ ಕ್ರೀಡಾಕೂಟವನ್ನು ಆಯೋಜಿಸಿದ್ದ ಬಗ್ಗೆ ಅವರು ಮಾಹಿತಿ ನೀಡಿದರು ಮತ್ತು ಇತರರ ಯಶಸ್ಸು ಕೆಲವೊಮ್ಮೆ ಪ್ರೇರಕ ಅಂಶವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಚೆಸ್ ಆಟಗಾರ್ತಿ ವಂತಿಕಾ ಅಗರವಾಲ್ ಅವರು ಆ ಸಮಾರಂಭದಲ್ಲಿ ಪ್ರಧಾನಿಯವರಿಗೆ ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು ಮತ್ತು ಪ್ರಧಾನಮಂತ್ರಿಯವರ  ಪ್ರೋತ್ಸಾಹವು ಭಾರತಕ್ಕೆ ಹೆಚ್ಚಿನ ಪದಕಗಳನ್ನು ಗೆಲ್ಲಲು ಪ್ರೇರೇಪಿಸಿತು ಎಂದು ಹೇಳಿದರು. ಪ್ರಧಾನಮಂತ್ರಿಯವರು ತನಗೆ ಪ್ರಶಸ್ತಿ ನೀಡುವುದನ್ನು ನೋಡಬಹುದಾದ ಕಾರ್ಯಕ್ರಮದ ವರದಿಯನ್ನು ಅವರು ಪ್ರಸ್ತಾಪಿಸಿದರು. ಭವಿಷ್ಯಕ್ಕಾಗಿ ತಮ್ಮ ಶುಭ ಹಾರೈಕೆಗಳನ್ನು ತಿಳಿಸುವ ಮೂಲಕ ಪ್ರಧಾನಮಂತ್ರಿಯವರು ಸಂವಾದವನ್ನು ಮುಕ್ತಾಯಗೊಳಿಸಿದರು.

 

 

 

*****

 



(Release ID: 2060163) Visitor Counter : 12