ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

‘ಕ್ರಿಯೇಟ್‌ ಇನ್‌ ಇಂಡಿಯಾ’ ಸವಾಲುಗಳ ಮೂಲಕ ನಿಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಿ


ಪ್ರತಿಭೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸಲು ವೇವ್ಸ್‌ಗೆ 25 ‘ಮೇಕ್‌ ಇನ್‌ ಇಂಡಿಯಾ’ ಸವಾಲುಗಳಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ಪ್ರೋತ್ಸಾಹ: ಮನ್‌ ಕಿ ಬಾತ್‌ ನ 114ನೇ ಆವೃತ್ತಿ

ಸಂಗೀತ, ಶಿಕ್ಷ ಣ ಮತ್ತು ಪೈರಸಿ ವಿರೋಧಿ ಕ್ಷೇತ್ರಗಳನ್ನು ಒಳಗೊಂಡ ಸವಾಲುಗಳ ಮೂಲಕ ಗೇಮಿಂಗ್‌, ಅನಿಮೇಷನ್‌, ರೀಲ್‌ ಮತ್ತು ಚಲನಚಿತ್ರ ತಯಾರಿಕೆಯಲ್ಲಿ ಸೃಷ್ಟಿಕರ್ತರಿಗೆ ಅಪಾರ ಅವಕಾಶ: ಶ್ರೀ ನರೇಂದ್ರ ಮೋದಿ

ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮವನ್ನು ಮುನ್ನಡೆಸಲು ಮತ್ತು ಸೃಷ್ಟಿಕರ್ತ ಆರ್ಥಿಕತೆಯನ್ನು ಉತ್ತೇಜಿಸಲು 2025ರ ಫೆಬ್ರವರಿ 5ರಿಂದ 9 ರವರೆಗೆ ವಿಶ್ವ ಆಡಿಯೊ ವಿಷುಯಲ್‌ ಮನರಂಜನಾ ಶೃಂಗಸಭೆಯನ್ನು ಆಯೋಜಿಸಲಾಗಿದೆ

Posted On: 29 SEP 2024 2:41PM by PIB Bengaluru

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 114th edition of Mann Ki Baat ಭಾಷಣದಲ್ಲಿ, ಉದ್ಯೋಗಗಳ ವೇಗವಾಗಿ ಬದಲಾಗುತ್ತಿರುವ ಸ್ವರೂಪ ಮತ್ತು ಗೇಮಿಂಗ್‌, ಚಲನಚಿತ್ರ ನಿರ್ಮಾಣ ಮುಂತಾದ ಸೃಜನಶೀಲ ಕ್ಷೇತ್ರಗಳಲ್ಲಿಹೆಚ್ಚುತ್ತಿರುವ ಅವಕಾಶಗಳನ್ನು ಒತ್ತಿ ಹೇಳಿದರು. ಭಾರತದ ಸೃಜನಶೀಲ ಪ್ರತಿಭೆಗಳ ಅಗಾಧ ಸಾಮರ್ಥ್ಯ‌ವನ್ನು ಒತ್ತಿಹೇಳಿದ ಪ್ರಧಾನಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆಯೋಜಿಸಿರುವ ‘ಭಾರತದಲ್ಲಿ ರಚಿಸಿ’ ಎಂಬ ವಿಷಯದ ಅಡಿಯಲ್ಲಿ  25 Challenges ಭಾಗವಹಿಸುವಂತೆ ಸೃಷ್ಟಿಕರ್ತರಿಗೆ ಕರೆ ನೀಡಿದರು.

ಉದ್ಯೋಗ ಮಾರುಕಟ್ಟೆಯನ್ನು ಮರುರೂಪಿಸಲು ಉದಯೋನ್ಮುಖ ಸೃಜನಶೀಲ ಕ್ಷೇತ್ರಗಳು

ತಮ್ಮ ಭಾಷಣದಲ್ಲಿ, ಉದ್ಯೋಗ ಮಾರುಕಟ್ಟೆಯನ್ನು ಮರುರೂಪಿಸುತ್ತಿರುವ ಉದಯೋನ್ಮುಖ ಕ್ಷೇತ್ರಗಳನ್ನು ಬಿಂಬಿಸಿದ ಪ್ರಧಾನಮಂತ್ರಿ, ‘‘ಬದಲಾಗುತ್ತಿರುವ ಈ ಸಮಯದಲ್ಲಿ, ಉದ್ಯೋಗಗಳ ಸ್ವರೂಪ ಬದಲಾಗುತ್ತಿದೆ ಮತ್ತು ಗೇಮಿಂಗ್‌, ಅನಿಮೇಷನ್‌, ರೀಲ್‌ ತಯಾರಿಕೆ, ಚಲನಚಿತ್ರ ತಯಾರಿಕೆ ಅಥವಾ ಪೋಸ್ಟರ್‌ ತಯಾರಿಕೆಯಂತಹ ಹೊಸ ಕ್ಷೇತ್ರಗಳು ಹೊರಹೊಮ್ಮುತ್ತಿವೆ. ಈ ಯಾವುದೇ ಕೌಶಲ್ಯಗಳಲ್ಲಿನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾದರೆ... ನಿಮ್ಮ ಪ್ರತಿಭೆಗೆ ದೊಡ್ಡ ವೇದಿಕೆ ಸಿಗಬಹುದು,’’ ಎಂದರು. ಬ್ಯಾಂಡ್‌ಗಳು, ಸಮುದಾಯ ರೆಡಿಯೋ ಉತ್ಸಾಹಿಗಳು ಮತ್ತು ಸೃಜನಶೀಲ ವೃತ್ತಿಪರರಿಗೆ ಹೆಚ್ಚುತ್ತಿರುವ ಅವಕಾಶವನ್ನು ಅವರು ಗಮನಿಸಿದರು.

ಈ ಸಾಮರ್ಥ್ಯ‌ವನ್ನು ಬಳಸಿಕೊಳ್ಳಲು ಮತ್ತು ಪೋಷಿಸಲು, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸಂಗೀತ, ಶಿಕ್ಷ ಣ ಮತ್ತು ಕಡಲ್ಗಳ್ಳತನ ವಿರೋಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ 25 ಸವಾಲುಗಳನ್ನು ಪ್ರಾರಂಭಿಸಿದೆ. wavesindia.org ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೃಷ್ಟಿಕರ್ತರನ್ನು ಪ್ರಧಾನಮಂತ್ರಿ ಪ್ರೋತ್ಸಾಹಿಸಿದರು.‘‘ಈ ಸವಾಲುಗಳಲ್ಲಿ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಸೃಜನಶೀಲತೆಯನ್ನು ಮುನ್ನೆಲೆಗೆ ತರಲು ನಾನು ವಿಶೇಷವಾಗಿ ದೇಶದ ಸೃಷ್ಟಿಕರ್ತರನ್ನು ಒತ್ತಾಯಿಸುತ್ತೇನೆ,’’ ಎಂದು ಅವರು ಹೇಳಿದರು.

 


ಕ್ರಿಯೇಟ್‌ ಇನ್‌ ಇಂಡಿಯಾ ಚಾಲೆಂಜ್‌ ದಿ ಸೀಸನ್‌ 1

2024ರ ಆಗಸ್ಟ್‌ 22ರಂದು ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್‌ ಅವರು ನವದೆಹಲಿಯಲ್ಲಿ ಕ್ರಿಯೇಟ್‌ ಇನ್‌ ಇಂಡಿಯಾ ಚಾಲೆಂಜ್‌ ದಿ ಸೀಸನ್‌ 1 ಅನ್ನು ಅನಾವರಣಗೊಳಿಸಿದ್ದರು. ಈ ಸವಾಲುಗಳು ಮುಂಬರುವ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆಗೆ (ವೇವ್ಸ್‌) ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಲಿದ್ದು, 78ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವ್ಯಕ್ತಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾರತದಲ್ಲಿ ವಿನ್ಯಾಸ, ವಿಶ್ವಕ್ಕಾಗಿ ವಿನ್ಯಾಸ ಎಂಬ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ.

 

*****


(Release ID: 2060123) Visitor Counter : 31