ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ಮೂರು ದಿನಗಳ ಅಮೇರಿಕಾ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಭಿನಂದನೆ ತಿಳಿಸಿದ್ದಾರೆ


ಈ ಭೇಟಿಯು ಮೋದಿಯವರ ರಾಜತಾಂತ್ರಿಕ ನೀತಿಯನ್ನು ಮತ್ತಷ್ಟು ಬಲಪಡಿಸುತ್ತದೆ, ಇದು ಕಳೆದ 10 ವರ್ಷಗಳಲ್ಲಿ ಭಾರತವನ್ನು ಸುಸ್ಥಿರ ಅಭಿವೃದ್ಧಿಯ ಉದಾಹರಣೆಗಳ ಮೂಲಕ ಜಾಗತಿಕ ಬದಲಾವಣೆಗಾರನ  ಪಾತ್ರದಲ್ಲಿ ಮುನ್ನಡೆಸಿದೆ

ಯಶಸ್ವಿ ಕ್ವಾಡ್ ಶೃಂಗಸಭೆ, 'ಮೋದಿ ಮತ್ತು ಯುಎಸ್' ಮೆಗಾ ಸಮುದಾಯ ಕಾರ್ಯಕ್ರಮ ಮತ್ತು ವಿಶ್ವಸಂಸ್ಥೆ ಶೃಂಗಸಭೆಯು ಜಗತ್ತಿನಾದ್ಯಂತ ಪ್ರಧಾನಿ ಮೋದಿಯವರ ಸಾಟಿಯಿಲ್ಲದ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ

ಪ್ರಧಾನಿ ಮೋದಿಯವರ ನಾಯಕತ್ವವು ಒಂದು ರಾಷ್ಟ್ರವಾಗಿ ಭಾರತದ ಹಿರಿಮೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲ ಪ್ರತಿ ದೇಶವೂ  ಮನುಕುಲದ ಉನ್ನತಿಗೆ ಪಾಲುದಾರರಾಗಿ ಸ್ವೀಕರಿಸುವ ರಾಷ್ಟ್ರವನ್ನಾಗಿ ಮಾಡಿದೆ

Posted On: 24 SEP 2024 7:53PM by PIB Bengaluru

ಮೂರು ದಿನಗಳ ಅಮೇರಿಕಾ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀ ಅಮಿತ್ ಶಾ ಅವರು ಎಕ್ಸ್ ವೇದಿಕೆಯ ಪೋಸ್ಟ್‌ ನಲ್ಲಿ, “ಅಮೇರಿಕಾಗೆ ಮೂರು ದಿನಗಳ ಯಶಸ್ವಿ ಪ್ರವಾಸಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು.” ಎಂದು ಹೇಳಿದ್ದಾರೆ. ಈ ಭೇಟಿಯು ಮೋದಿಯವರ ರಾಜತಾಂತ್ರಿಕ ನೀತಿಯನ್ನು ಮತ್ತಷ್ಟು ಬಲಪಡಿಸುತ್ತದೆ, ಇದು ಕಳೆದ 10 ವರ್ಷಗಳಲ್ಲಿ ಭಾರತವನ್ನು ಸುಸ್ಥಿರ ಅಭಿವೃದ್ಧಿಯ ಉದಾಹರಣೆಗಳ ಮೂಲಕ ಜಾಗತಿಕ ಬದಲಾವಣೆಗಾರನ  ಪಾತ್ರದಲ್ಲಿ ಮುನ್ನಡೆಸಿದೆ. ಯಶಸ್ವಿ ಕ್ವಾಡ್ ಶೃಂಗಸಭೆ, 'ಮೋದಿ ಮತ್ತು ಯುಎಸ್' ಮೆಗಾ ಸಮುದಾಯ ಕಾರ್ಯಕ್ರಮ ಮತ್ತು ವಿಶ್ವಸಂಸ್ಥೆ ಶೃಂಗಸಭೆಯು ಜಗತ್ತಿನಾದ್ಯಂತ ಪ್ರಧಾನಿ ಮೋದಿಯವರ ಸಾಟಿಯಿಲ್ಲದ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿ ಮೋದಿಯವರ ನಾಯಕತ್ವವು ಒಂದು ರಾಷ್ಟ್ರವಾಗಿ ಭಾರತದ ಹಿರಿಮೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲ ಪ್ರತಿ ದೇಶವೂ ಮನುಕುಲದ ಉನ್ನತಿಗೆ ಪಾಲುದಾರರಾಗಿ ಸ್ವೀಕರಿಸುವ ರಾಷ್ಟ್ರವನ್ನಾಗಿ ಮಾಡಿದೆ ಎಂದು ಅವರು ಹೇಳಿದ್ದಾರೆ.

 

 

*****



(Release ID: 2058639) Visitor Counter : 5