ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಭಾರತದ ರಾಷ್ಟ್ರಪತಿಗಳು ಐಸಿಎಆರ್ - ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ ನ ಶತಮಾನೋತ್ಸವದ ಸಮಾರಂಭದಲ್ಲಿ ಭಾಗವಹಿಸಿದರು

Posted On: 20 SEP 2024 2:32PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 20, 2024) ಜಾರ್ಖಂಡ್ ನ ರಾಂಚಿಯಲ್ಲಿ ಐಸಿಎಆರ್ -ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಅಡ್ವಾನ್ಸ್ಡ್ ಪ್ರೊಸೆಸಿಂಗ್ (ಎನ್ ಐಎಸ್ ಎ) ನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡುವುದರ ಜೊತೆಗೆ 21ನೇ ಶತಮಾನದಲ್ಲಿ ಕೃಷಿಯ ಮುಂದೆ ಮೂರು ಪ್ರಮುಖ ಸವಾಲುಗಳಿವೆ. ಇವುಗಳಲ್ಲಿ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ನಿರ್ವಹಿಸುವುದು, ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸುವುದು ಸೇರಿವೆ. ಈ ಸವಾಲುಗಳನ್ನು ಮೆಟ್ಟಿ ನಿಲ್ಲಲು  ಸೆಕೆಂಡರಿ  ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು ಸಹಕಾರಿಯಾಗಲಿವೆ ಎಂದು ರಾಷ್ಟ್ರಪತಿಗಳು ಹೇಳಿದರು.   ಸೆಕೆಂಡರಿ ಕೃಷಿಯು ಪ್ರಾಥಮಿಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಜೇನುಸಾಕಣೆ, ಕೋಳಿ ಸಾಕಣೆ, ಕೃಷಿ ಪ್ರವಾಸೋದ್ಯಮ ಮುಂತಾದ ಇತರ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಸೆಕೆಂಡರಿ ಕೃಷಿ ಚಟುವಟಿಕೆಗಳ ಮೂಲಕ ಕೃಷಿ ತ್ಯಾಜ್ಯವನ್ನು ಸರಿಯಾಗಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು. ಉಪಯುಕ್ತ ಮತ್ತು ಅಮೂಲ್ಯವಾದ ವಸ್ತುಗಳನ್ನು ಮಾಡಲು ಅವುಗಳನ್ನು ಸಂಸ್ಕರಿಸಬಹುದು. ಈ ಮೂಲಕ ಪರಿಸರವನ್ನು ಸಂರಕ್ಷಿಸಬಹುದು ಮತ್ತು ರೈತರ ಆದಾಯವನ್ನು ಹೆಚ್ಚಿಸಬಹುದು ಎಂದು ಹೇಳಿದರು.

ಭಾರತದಲ್ಲಿ ಮುಖ್ಯವಾಗಿ ಬುಡಕಟ್ಟು ಸಮುದಾಯದಿಂದ ಅರಗು (ಲ್ಯಾಕ್) ಉತ್ಪಾದನೆಯಾಗುತ್ತದೆ ಎಂದು ರಾಷ್ಟ್ರಪತಿಗಳು  ಹೇಳಿದರು. ಇದು ಅವರ ಆದಾಯದ ಪ್ರಮುಖ ಮೂಲವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್  ಸಂಸ್ಥೆಯು  ಅರಗು, ನ್ಯಾಚುರಲ್ ರೆಸಿನ್ಗಳು ಮತ್ತು ಗೋಂದುಗಳ  ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಾಣಿಜ್ಯ ಅಭಿವೃದ್ಧಿಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಸಣ್ಣ ಅರಗು ಸಂಸ್ಕರಣಾ ಘಟಕ ಮತ್ತು ಸಮಗ್ರ ಅರಗು ಸಂಸ್ಕರಣಾ ಘಟಕದ ಅಭಿವೃದ್ಧಿಯನ್ನು ಒಳಗೊಂಡಿದೆ; ಅರಗು ಆಧಾರಿತ ನೈಸರ್ಗಿಕ ಬಣ್ಣಗಳು, ವಾರ್ನಿಷ್ಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಅಭಿವೃದ್ಧಿ; ಹಣ್ಣುಗಳು, ತರಕಾರಿಗಳು ಮತ್ತು ಮಸಾಲೆಗಳ ಶೆಲ್ಫ್-ಲೈಫ್ ಅನ್ನು ಹೆಚ್ಚಿಸಲು ಲ್ಯಾಕ್ ಆಧಾರಿತ ಲೇಪನಗಳ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಕ್ರಮಗಳು ಬುಡಕಟ್ಟು ಸಹೋದರ ಸಹೋದರಿಯರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಂದಿನ ಯುಗ ಕ್ರಾಂತಿಕಾರಿ ತಂತ್ರಜ್ಞಾನಗಳ ಯುಗವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಈ ತಂತ್ರಜ್ಞಾನಗಳ ಲಾಭವನ್ನು ನಾವು ಪಡೆದುಕೊಳ್ಳಬೇಕು. ಅದೇ ಸಮಯದಲ್ಲಿ, ನಾವು ಅವರ ಅಡ್ಡಪರಿಣಾಮಗಳನ್ನು ತಪ್ಪಿಸಬೇಕು. ರೊಬೊಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಕೃತಕ ಬುದ್ಧಿಮತ್ತೆಯಿಂದ ಸಮರ್ಥಗೊಂಡ  ಉಪಕರಣಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಎನ್ ಐ ಎಸ್ ಎಯಲ್ಲಿ ಆಟೋಮೇಷನ್ ಮತ್ತು ಪ್ಲಾಂಟ್ ಎಂಜಿನಿಯರಿಂಗ್ ವಿಭಾಗವನ್ನು ಸ್ಥಾಪಿಸಲಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಅರಗು ಕೃಷಿಯಲ್ಲಿ ಎನ್ ಐಎಸ್ ಎ ಉತ್ತಮ ಕೆಲಸ ಮಾಡಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಆದರೆ, ನಾವು ಮುಂದೆ ಸಾಗಬೇಕಾದ  ಹಲವು ಕ್ಷೇತ್ರಗಳಿವೆ. ಉದಾಹರಣೆಗೆ, ಔಷಧಿ ಮತ್ತು ಕಾಸ್ಮೆಟಿಕ್ಸ್ ಉದ್ಯಮಗಳಲ್ಲಿ ಉತ್ತಮ ಗುಣಮಟ್ಟದ ಅರಗುವಿಗೆ ಬೇಡಿಕೆಯಿದೆ. ಭಾರತೀಯ ಅರುಗಿನ   ಗುಣಮಟ್ಟ, ಪೂರೈಕೆ ಸರಪಳಿ ಮತ್ತು ಮಾರುಕಟ್ಟೆಯನ್ನು ಸುಧಾರಿಸಿದರೆ, ನಮ್ಮ ರೈತರು ಅದನ್ನು ದೇಶ ಮತ್ತು ವಿದೇಶಗಳಲ್ಲಿ ಸರಬರಾಜು ಮಾಡಲು  ಸಾಧ್ಯವಾಗುತ್ತದೆ ಮತ್ತು ಉತ್ತಮ ಬೆಲೆಯನ್ನು ಪಡೆಯುತ್ತಾರೆ.

ರಾಷ್ಟ್ರಪತಿಗಳು ಪೂರ್ಣ ಭಾಷಣವನ್ನು ಓದಲು ದಯವಿಟ್ಟು ಕ್ಲಿಕ್ ಮಾಡಿ

Please click to see the President's Speech

 

*****



(Release ID: 2058186) Visitor Counter : 8