ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನವದೆಹಲಿಯ ತಮ್ಮ ನಿವಾಸದಲ್ಲಿ ಛತ್ತೀಸ್ ಗಢದ ನಕ್ಸಲ್ ಹಿಂಸಾಚಾರ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ​​​​​​​ ಶ್ರೀ ಅಮಿತ್ ಶಾ


ನಕ್ಸಲಿಸಂ ಮನುಕುಲ ಮತ್ತು ದೇಶದ ಆಂತರಿಕ ಭದ್ರತೆ ಎರಡಕ್ಕೂ ಅಪಾಯಕಾರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 2026ರ ಮಾರ್ಚ್ ನೊಳಗೆ ನಕ್ಸಲಿಸಂ ಸಂಪೂರ್ಣ ನಿರ್ಮೂಲನೆಗೆ  ಕೇಂದ್ರ ಸರ್ಕಾರ ಬದ್ಧ

ನಕ್ಸಲರ ಮಾನವ ಹಕ್ಕುಗಳನ್ನು ಪ್ರತಿಪಾದಿಸುವವರು ನಕ್ಸಲಿಸಂನಿಂದ ತೊಂದರೆಗೀಡಾಗುವವರ ಮಾನವ ಹಕ್ಕುಗಳ ಬಗ್ಗೆಯೂ ಪರಿಗಣಿಸಬೇಕು

ಎಡಪಂಥೀಯ ಬಂಡುಕೋರರ ಹಾವಳಿಯಿಂದ ಬಾಧಿತ ಜನರ ಸಮಗ್ರ ಅಭಿವೃದ್ಧಿಗೆ ನರೇಂದ್ರ ಮೋದಿ ಸರ್ಕಾರ ಮತ್ತು ‍ಛತ್ತೀಸ್ ಗಢ ಸರ್ಕಾರ ಮೂರು ತಿಂಗಳಲ್ಲಿ ಸಮಗ್ರ ಯೋಜನೆ ರೂಪಿಸಲಿದೆ

ನರೇಂದ್ರ ಮೋದಿ ಸರ್ಕಾರದ ನೀತಿಗಳ ಕಾರಣದಿಂದಾಗಿ ಎಡಪಂಥೀಯ ಬಂಡುಕೋರರ ಹಾವಳಿ ಛತ್ತೀಸಗಢದ ಕೆಲವು ಜಿಲ್ಲೆಗಳಿಗೆ ಸೀಮಿತ

2026ರ ಮಾರ್ಚ್ ನೊಳಗೆ ಎಲ್ ಡಬ್ಲೂ ಇ ಸಂಪೂರ್ಣ ನಿರ್ಮೂಲನೆ ನಂತರ ಬಸ್ತಾರ್ ಮತ್ತೊಮ್ಮೆ ಸುಂದರ, ಶಾಂತಿಯುತ ಮತ್ತು ಅಭಿವೃದ್ಧಿ ಹೊಂದಿದ ಪ್ರದೇಶವಾಗಲಿದೆ

ಎಲ್ ಡಬ್ಲೂಇ ಬಾಧಿತ ಪ್ರದೇಶಗಳಲ್ಲಿ ಅಭಿವೃದ್ಧಿಯ ಮೂಲಕ ನರೇಂದ್ರ ಮೋದಿ ಸರ್ಕಾರ ನಕ್ಸಲರಿಗೆ ಕೊಲ್ಲುವ ವ್ಯಕ್ತಿಗಿಂತ ಜೀವ ಉಳಿಸುವ ವ್ಯಕ್ರಿಯೇ ಶ್ರೇಷ್ಠ ಎಂಬ ಸಂದೇಶ ಸಾರುತ್ತಿದೆ

ಹಿಂಸಾಚಾರವನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಎಡಪಂಥೀಯ ಉಗ್ರಗಾಮಿಗಳಿಗೆ ಕೇಂದ್ರ ಗೃಹ ಸಚಿವರ ಮನವಿ

Posted On: 20 SEP 2024 12:30PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಛತ್ತೀಸ್‌ಗಢದ ನಕ್ಸಲೀಯರ ಹಿಂಸಾಚಾರದ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು. ಬಸ್ತಾರ್ ಶಾಂತಿ ಸಮಿತಿಯ ಆಶ್ರಯದಲ್ಲಿ ಛತ್ತೀಸ್‌ಗಢದ ಎಲ್‌ಡಬ್ಲ್ಯೂಇ ಬಾಧಿತ  ಪ್ರದೇಶಗಳಿಂದ ನಕ್ಸಲರ ಹಿಂಸಾಚಾರಕ್ಕೆ ಒಳಗಾದ 55 ಜನರು ಇವರಲ್ಲಿ ಸೇರಿದ್ದಾರೆ.

ಬಸ್ತಾರ್ ಶಾಂತಿ ಸಮಿತಿಯು ಛತ್ತೀಸ್‌ಗಢದಲ್ಲಿ ನಕ್ಸಲಿಸಂನಿಂದ ಬಾಧಿತ ಜನರ ದುಃಸ್ಥಿತಿಯನ್ನು ಪ್ರಮುಖವಾಗಿ ಬಿಂಬಿಸುವ ಸಾಕ್ಷ್ಯಚಿತ್ರವನ್ನು ಸಹ ಪ್ರದರ್ಶಿಸಿತು. ಸಂತ್ರಸ್ತರಲ್ಲಿ ಕೆಲವರು ಗೃಹ ಸಚಿವರೊಂದಿಗೆ ತಮ್ಮ ಸಂಕಷ್ಟವನ್ನು ಹಂಚಿಕೊಂಡರು

ನಕ್ಸಲೀಯರ ಹಿಂಸಾಚಾರದಿಂದ ನರಳುತ್ತಿರುವ ಜನರೊಂದಿಗೆ ಸಂವಾದ ನಡೆಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2026ರ ಮಾರ್ಚ್ ನೊಳಗೆ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ನರೇಂದ್ರ ಮೋದಿ ಸರ್ಕಾರದ ನೀತಿಗಳಿಂದಾಗಿ ಎಡಪಂಥೀಯ ಉಗ್ರವಾದವನ್ನು ಈಗ ಛತ್ತೀಸ್‌ಗಢದ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದು ಅವರು ಹೇಳಿದರು. ನಕ್ಸಲಿಸಂ ಮಾನವೀಯತೆ ಮತ್ತು ದೇಶದ ಆಂತರಿಕ ಭದ್ರತೆ ಎರಡಕ್ಕೂ ಅಪಾಯಕಾರಿಯಾಗಿದೆ ಎಂದು ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರ ಮತ್ತು ಛತ್ತೀಸ್‌ಗಢ ಸರ್ಕಾರವು ಎಲ್‌ಡಬ್ಲ್ಯೂಇ ಬಾಧಿತ ಜನರ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ಮೂರು ತಿಂಗಳಲ್ಲಿ ಸಮಗ್ರ ಯೋಜನೆಯನ್ನು ರೂಪಿಸಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಯೋಜನೆಯ ಮೂಲಕ, ಛತ್ತೀಸ್‌ಗಢ ಸೇರಿದಂತೆ ದೇಶಾದ್ಯಂತ ಎಡಪಂಥೀಯ ಉಗ್ರವಾದದಿಂದ ಬಾಧಿತ ಜನರು ಆರೋಗ್ಯ ಸೌಲಭ್ಯಗಳು, ಉದ್ಯೋಗಾವಕಾಶಗಳು ಮತ್ತು ಇತರ ಕಲ್ಯಾಣ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ಅವರು ಹೇಳಿದರು.

ಎಡಪಂಥೀಯ ಉಗ್ರಗಾಮಿಗಳಿಂದ ಬಾಧಿತ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳ ಮೂಲಕ ನರೇಂದ್ರ ಮೋದಿ ಸರ್ಕಾರವು ನಕ್ಸಲೀಯರಿಗೆ ಕೊಲ್ಲುವವನಿಗಿಂತ ಉಳಿಸುವವನು ಶ್ರೇಷ್ಠ ಎಂಬ ಸಂದೇಶವನ್ನು ನೀಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನಕ್ಸಲೀಯರ ಮಾನವ ಹಕ್ಕುಗಳನ್ನು ಪ್ರತಿಪಾದಿಸುವವರು ನಕ್ಸಲಿಸಂನಿಂದ ಬಳಲುತ್ತಿರುವವರ ಮಾನವ ಹಕ್ಕುಗಳನ್ನೂ ಸಹ ಪರಿಗಣಿಸಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಹಿಂಸಾಚಾರದ ಮಾರ್ಗವನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಎಡಪಂಥೀಯ ಉಗ್ರಗಾಮಿಗಳಿಗೆ ಗೃಹ ಸಚಿವರು ಮನವಿ ಮಾಡಿದರು. 2026ರ ಮಾರ್ಚ್ ವೇಳೆಗೆ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದರೊಂದಿಗೆ ಬಸ್ತಾರ್ ಮತ್ತೊಮ್ಮೆ ಸುಂದರ, ಶಾಂತಿಯುತ ಮತ್ತು ಅಭಿವೃದ್ಧಿ ಹೊಂದಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

*****


(Release ID: 2056975) Visitor Counter : 51