ಸಂಪುಟ
azadi ka amrit mahotsav g20-india-2023

ಮಾಧ್ಯಮ ಮತ್ತು ಮನರಂಜನಾ ವಲಯವು ಗಮನಾರ್ಹ ಅಭಿವೃದ್ದಿಗೆ ಸಿದ್ಧವಾಗಿದೆ


ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ (ಎವಿಜಿಸಿ-ಎಕ್ಸ್.ಆರ್) ಗಾಗಿ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಎನ್.ಸಿ.ಒ.ಇ) ಸ್ಥಾಪನೆಯನ್ನು ಸಚಿವ ಸಂಪುಟವು ಅನುಮೋದಿಸಿದೆ.

ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಾವಕಾಶವನ್ನು ಖಚಿತಪಡಿಸಿಕೊಳ್ಳಲು ಸೃಷ್ಟಿಕರ್ತರ ಆರ್ಥಿಕತೆಯನ್ನು ಮುನ್ನಡೆಸುವ ಕಡೆಗೆ ಸರ್ಕಾರದ ಉತ್ತೇಜನವಾಗುತ್ತದೆ

ಜಾಗತಿಕವಾಗಿ ಭಾರತದ ಅಂತರ್ಗತ ಶಕ್ತಿಯನ್ನು ಹೆಚ್ಚಿಸಲು ಮತ್ತು ಅತ್ಯಾಧುನಿಕ ವಿಷಯವನ್ನು ಒದಗಿಸಲು ಭಾರತವನ್ನು ಕಂಟೆಂಟ್ ಹಬ್ ಆಗಿ ಮುಂದುವರಿಸುವ ಮೂಲಕ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಎನ್.ಸಿ.ಒ.ಇ ಪ್ರಯತ್ನಿಸುತ್ತಿದೆ

Posted On: 18 SEP 2024 3:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ (ಎವಿಜಿಸಿ-ಎಕ್ಸ್.ಆರ್) ಗಾಗಿ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಎನ್.ಸಿ.ಒ.ಇ) ಅನ್ನು ಕಂಪನಿಗಳ ಕಾಯಿದೆ, 2013 ಅಡಿಯಲ್ಲಿ ಸೆಕ್ಷನ್ 8 ಕಂಪನಿಯಾಗಿ ಸ್ಥಾಪಿಸಲು ಅನುಮೋದನೆ ನೀಡಿದೆ. ಭಾರತದಲ್ಲಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯೊಂದಿಗೆ ಜೊತೆಗೂಡಿ ಭಾರತ ಸರ್ಕಾರದೊಂದಿಗೆ ಪಾಲುದಾರರಾಗಿ ಉದ್ಯಮ ಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ. ಎನ್.ಸಿ.ಒ.ಇ ಅನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಸ್ಥಾಪಿಸಲಾಗುವುದು ಮತ್ತು ದೇಶದಲ್ಲಿ ಎವಿಜಿಸಿ ಟಾಸ್ಕ್ ಫೋರ್ಸ್ ಅನ್ನು ಸ್ಥಾಪಿಸಲು 2022-23 ರ ಹಣಕಾಸು ಮತ್ತು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವರ ಬಜೆಟ್ ಘೋಷಣೆಯ ಅನುಸಾರವಾಗಿ ನಡೆಯುತ್ತದೆ.   

ಎವಿಜಿಸಿ-ಎಕ್ಸ್.ಆರ್ ವಲಯವು ಇಂದು ಚಲನಚಿತ್ರ ನಿರ್ಮಾಣ, ಓವರ್ ದಿ ಟಾಪ್ (ಒಟಿಟಿ) ಪ್ಲಾಟ್ಫಾರ್ಮ್ಗಳು, ಗೇಮಿಂಗ್, ಜಾಹೀರಾತುಗಳು ಮತ್ತು ಆರೋಗ್ಯ, ಶಿಕ್ಷಣ ಮತ್ತು ಇತರ ಸಾಮಾಜಿಕ ಕ್ಷೇತ್ರಗಳನ್ನು ಹಾಗೂ ಹಲವಾರು ಇತರ ಕ್ಷೇತ್ರಗಳನ್ನು ಒಳಗೊಂಡಂತೆ ಇಡೀ ಮಾಧ್ಯಮ ಮತ್ತು ಮನರಂಜನೆಯ ಕ್ಷೇತ್ರದಲ್ಲಿ ಅನಿವಾರ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಿಂದಾಗಿ ಈ ಸಂಸ್ಥೆಯು ಒಟ್ಟಾರೆ ದೇಶದ ಬೆಳವಣಿಗೆಯ ಕಥೆಯನ್ನು ಸಾಂಸ್ಥಿಕ ರಚನೆಯಲ್ಲಿ ಒಳಗೊಂಡಿರುತ್ತದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಮತ್ತು ದೇಶಾದ್ಯಂತ ಹೆಚ್ಚುತ್ತಿರುವ ಇಂಟರ್ನೆಟ್ ಅಭಿವೃದ್ದಿಯೊಂದಿಗೆ, ಅಗ್ಗದ ಡೇಟಾ ದರಗಳಲ್ಲಿ, ಜಾಗತಿಕವಾಗಿ ಎವಿಜಿಸಿ-ಎಕ್ಸ್.ಆರ್ ಬಳಕೆಯು ತೀವ್ರ ವೇಗದಲ್ಲಿ ಅಭಿವೃದ್ಧಿ ಹೊಂದಲು ಸಿದ್ಧವಾಗಿದೆ.

ಎವಿಜಿಸಿ-ಎಕ್ಸ್.ಆರ್. ವಲಯದ ಅಭಿವೃದ್ಧಿಗೆ/ಬೆಳವಣಿಗೆಗೆ ಚಾಲನೆ

ಈ ಅತಿವೇಗದ ತೀವ್ರತೆಯಲ್ಲಿ ಮುಂದುವರಿಸಲು, ದೇಶದಲ್ಲಿ ಎವಿಜಿಸಿ-ಎಕ್ಸ್.ಆರ್ ಪರಿಸರ ವ್ಯವಸ್ಥೆಯನ್ನು ಪ್ರತಿನಿಧಿಸಲು ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಲಾಗುತ್ತಿದೆ. ಅತ್ಯಾಧುನಿಕ ಎವಿಜಿಸಿ-ಎಕ್ಸ್.ಆರ್ ತಂತ್ರಜ್ಞಾನಗಳಲ್ಲಿ ಇತ್ತೀಚಿನ ಕೌಶಲ್ಯ ಗಣಗಳೊಂದಿಗೆ ಹವ್ಯಾಸಿಗಳು ಮತ್ತು ವೃತ್ತಿಪರರನ್ನು ಸಜ್ಜುಗೊಳಿಸಲು ವಿಶೇಷ ತರಬೇತಿ-ಕಲಿಕೆ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ, ಈ ಎನ್.ಸಿ.ಒ.ಇ ಸಂಸ್ಥೆಯು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಕಂಪ್ಯೂಟರ್ ವಿಜ್ಞಾನದಂತಹ ವಿವಿಧ ಕ್ಷೇತ್ರಗಳ ತಜ್ಞರನ್ನು ಒಟ್ಟುಗೂಡಿಸುತ್ತದೆ. ಎಂಜಿನಿಯರಿಂಗ್, ವಿನ್ಯಾಸ ಮತ್ತು ಕಲೆ ಎವಿಜಿಸಿ-ಎಕ್ಸ್.ಆರ್ ಕ್ಷೇತ್ರದಲ್ಲಿ ಪ್ರಮುಖ ಪ್ರಗತಿಗೆ ಎನ್.ಸಿ.ಒ.ಇ ಸಂಸ್ಥೆಯು ಕಾರಣವಾಗಬಹುದು. 

ಈ ರಾಷ್ಟ್ರೀಯ ಉತ್ಕೃಷ್ಟತೆಯ ಕೇಂದ್ರವು ದೇಶೀಯ ಬಳಕೆ ಮತ್ತು ಜಾಗತಿಕ ಪ್ರಭಾವ ಎರಡಕ್ಕೂ ಭಾರತದ ಐಪಿ ರಚನೆಯ ಮೇಲೆ ವ್ಯಾಪಕವಾಗಿ ಗಮನಹರಿಸುತ್ತದೆ, ಒಟ್ಟಾರೆಯಾಗಿ ಭಾರತದ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಆಧಾರದ ಮೇಲೆ ಕಂಟೆಂಟ್ ರಚನೆಗೆ ಕಾರಣವಾಗುತ್ತದೆ. ಇದಲ್ಲದೆ, ಎವಿಜಿಸಿ-ಎಕ್ಸ್.ಆರ್ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ಗಳು ಮತ್ತು ಆರಂಭಿಕ ಹಂತದ ಕಂಪನಿಗಳನ್ನು ಪೋಷಿಸಲು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಎನ್.ಸಿ.ಒ.ಇ ಒಂದು ಪ್ರೇರಣಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಎನ್.ಸಿ.ಒ.ಇ ಶೈಕ್ಷಣಿಕ ಮಾತ್ರವಲ್ಲದೆ ಉತ್ಪಾದನೆ / ಉದ್ಯಮ ಕ್ಷೇತ್ರಕ್ಕೂ ವೇಗವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ.

ಎವಿಜಿಸಿ-ಎಕ್ಸ್.ಆರ್ ಉದ್ಯಮದ ಬೆಳವಣಿಗೆಗೆ ಪ್ರೇರಕ ಶಕ್ತಿಯಾಗಿ ಈ ಎನ್.ಸಿ.ಒ.ಇ ಸಂಸ್ಥೆಯನ್ನು   ಇರಿಸುವ ಮೂಲಕ ಇದು ದೇಶದ ಎಲ್ಲಾ ಭಾಗಗಳ ಯುವಜನರಿಗೆ ಉದ್ಯೋಗದ ಅತಿದೊಡ್ಡ ಮೂಲಗಳಲ್ಲಿ ಒಂದಾಗಿ ಕಾರ್ಯನಿರ್ವಹಿಸಲಿದೆ. ಇದು ಸೃಜನಶೀಲ ಕಲೆ ಮತ್ತು ವಿನ್ಯಾಸ ಕ್ಷೇತ್ರಕ್ಕೆ ಅಗಾಧವಾದ ಅವಕಾಶವನ್ನು ನೀಡಲಿದೆ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮದ ಗುರಿಗಳನ್ನು ಹೆಚ್ಚಿಸುವ ಎವಿಜಿಸಿ-ಎಕ್ಸ್.ಆರ್ ಚಟುವಟಿಕೆಗಳಿಗೆ ಭಾರತವನ್ನು ಮೂಲ ಆಧಾರ ಕೇಂದ್ರವನ್ನಾಗಿ ಮಾಡಲಿದೆ. 

ಎವಿಜಿಸಿ-ಎಕ್ಸ್.ಆರ್. ಗಾಗಿ ಎನ್.ಸಿ.ಒ.ಇ. ಸಂಸ್ಥೆಯು ಅತ್ಯಾಧುನಿಕ ವಿಷಯ/ಬರಹಗಳನ್ನು ಒದಗಿಸಲು ಭಾರತದ ಕಂಟೆಂಟ್ ಹಬ್ ಆಗಿ ಪ್ರವರ್ತಿಸುತ್ತದೆ. ಇದರಿಂದಾಗಿ ಜಾಗತಿಕವಾಗಿ ಭಾರತದ ಅಂತರ್ಗತ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಾಧ್ಯಮ ಮತ್ತು ಮನರಂಜನಾ ವಲಯಕ್ಕೆ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ. 
 

*****



(Release ID: 2056341) Visitor Counter : 32