ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹುಟ್ಟು ಹಬ್ಬದ ಶುಭ ಕೋರಿದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳಿಗೆ ಪ್ರಧಾನಮಂತ್ರಿ ಅವರಿಂದ ಕೃತಜ್ಞತೆ ಸಲ್ಲಿಕೆ


ಜನ್ಮದಿನದ ಶುಭಾಶಯಗಳನ್ನು ತಿಳಿಸಿದ ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿಗಳಿಂದ ಕೃತಜ್ಞತೆ ಸಲ್ಲಿಕೆ

Posted On: 17 SEP 2024 8:59PM by PIB Bengaluru

ಜನುಮ ದಿನದ ಶುಭ ಕೋರಿದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿಗಳಿಗೆ ಪ್ರಧಾನಮಂತ್ರಿಗಳ ಪ್ರತಿಕ್ರಿಯೆ ಹೀಗಿದೆ: 

“ಮಾನ್ಯ @ rashtrapatibhvn ಅವರೇ, ನಿಮ್ಮ ಶುಭ ಹಾರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು! ನಿಮ್ಮ ಪ್ರೇರಣಾದಾಯಕ ಮಾರ್ಗದರ್ಶನವು ಸ್ವಾವಲಂಬಿ ಮತ್ತು ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ಸ್ಫೂರ್ತಿ ನೀಡಲಿದೆ. ದೇಶ ಮತ್ತು ದೇಶದ ಜನರಿಗಾಗಿ ನಮ್ಮ ಜವಾಬ್ದಾರಿಗಳನ್ನು  ನಿಭಾಯಿಸಲು ನಾವು ಯಾವುದೇ ಅವಕಾಶವನ್ನೂ ಕೈಚೆಲ್ಲುವುದಿಲ್ಲ.”
 

ಉಪರಾಷ್ಟ್ರಪತಿಗಳಿಗೆ ಪ್ರಧಾನಮಂತ್ರಿಗಳು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ: 

“ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರೇ ನಿಮ್ಮ ಶುಭ ಹಾರೈಕೆಗಳಿಗೆ ನಾನು ಆಭಾರಿಯಾಗಿದ್ದೇನೆ. ವಿವಿಧ ವಿಷಯಗಳ ಕುರಿತಂತೆ ನಿಮ್ಮ ಮಾರ್ಗದರ್ಶನ ಮತ್ತು ಒಳನೋಟಗಳನ್ನ ನಾನು ಗೌರವಿಸುತ್ತೇನೆ.”

 

ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ: “ನನಗೆ ಜನುಮ ದಿನದ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಜನರಿಗಾಗಿ ನಾನು ಹೆಚ್ಚು ಶ್ರಮಿಸಲು ಈ ಆತ್ಮೀಯತೆಯು ನನಗೆ ಅಪಾರ ಬಲವನ್ನು ನೀಡಲಿದೆ”

ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ಜನರಿಂದ ಇಷ್ಟೊಂದು ಆತ್ಮೀಯತೆ ಪಡೆದು ನಾನು ವಿನೀತನಾಗಿದ್ದೇನೆ ಮತ್ತು ಧನ್ಯನಾಗಿದ್ದೇನೆ.

ಜನುಮದಿನದ ಶುಭ ಕೋರಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ಈ ಪ್ರೀತಿಯು ಜನರಿಗಾಗಿ ನಾನು ಹೆಚ್ಚು ಹೆಚ್ಚು ಶ್ರಮಿಸಲು ನನಗೆ ಅಪಾರ ಬಲವನ್ನು ನೀಡಲಿದೆ. 

ಮೂರನೇ ಅವಧಿಯ ಆಡಳಿತದಲ್ಲಿ ನೂರು ದಿನಗಳನ್ನು ಪೂರೈಸಿದ ಸುಸಂದರ್ಭವೂ ಇದಾಗಿದೆ. ಕಳೆದ 100 ವರ್ಷಗಳಲ್ಲಿ ಅನೇಕ ಜನಪರ ಮತ್ತು ಅಭಿವೃದ್ಧಿ ಆಧಾರಿತ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಇವು ವಿಕಸಿತ ಭಾರತದ ನಿರ್ಮಾಣದ ನಮ್ಮ ಯತ್ನಕ್ಕೆ ಬಲ ನೀಡಲಿದೆ ಎಂಬುದು ನನಗೆ ಸಂತಸ ತಂದಿದೆ. 

ಇಂದು ಸಮಾಜ ಸೇವಾ ಚಟುವಟಿಕೆಗಳಲ್ಲಿ ಅನೇಕರು ತೊಡಗಿಸಿಕೊಂಡಿದ್ದಾರೆ. ಅವರ ಉತ್ಸಾಹಕ್ಕೆ ನಾನು ವಂದಿಸುತ್ತೇನೆ ಮತ್ತು ಅವರ ಈ ಪ್ರಯತ್ನಗಳಿಗೆ ನನ್ನ ಮೆಚ್ಚುಗೆಯನ್ನು ತಿಳಿಸುತ್ತಿದ್ದೇನೆ.”


 

 

*****

 


(Release ID: 2056053) Visitor Counter : 39