ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav g20-india-2023

ಇ-ಸಿನಿಪ್ರಮಾನ್‌ ನಲ್ಲಿ "ಬಳಕೆಗಾಗಿ ಪ್ರವೇಶಸಾಧ್ಯತೆಯ ಮಾನದಂಡಗಳು (ಆಕ್ಸೆಸಿಬಿಲಿಟಿ ಸ್ಟ್ಯಾಂಡರ್ಡ್ಸ್)" ಮಾದರಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ


ಫೀಚರ್ ಫಿಲ್ಮ್* ಪ್ರದರ್ಶನಗಳಲ್ಲಿ ಶ್ರವಣದೋಷವುಳ್ಳ ಮತ್ತು ದೃಷ್ಟಿಹೀನರಿಗಾಗಿ ಕನಿಷ್ಠ ಒಂದು ಪ್ರವೇಶ ವೈಶಿಷ್ಟ್ಯವನ್ನು  ಒದಗಿಸಲಾಗುವುದು 

Posted On: 16 SEP 2024 1:28PM by PIB Bengaluru

E-Cinepramaan ನಲ್ಲಿನ “ಬಳಕೆಗಾಗಿ ಪ್ರವೇಶಸಾಧ್ಯತೆಯ ಮಾನದಂಡಗಳ” ಮಾದರಿಗಳನ್ನು ನಿಗದಿತ ಅವಧಿಯಲ್ಲಿ , ಅಂದರೆ 15ನೇ ಸೆಪ್ಟೆಂಬರ್ 2024ಕ್ಕೆ ಸೂಚಿತ ರೀತಿಯ ಪ್ರಕಾರ ಯಶಸ್ವಿಯಾಗಿ ನಿಯೋಜಿಸಲಾಗಿದೆ. 

ಅರ್ಜಿದಾರರು ಈಗ ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಿರುವಂತೆ, ಕೇಳುವ ಸಮಸ್ಯೆ ಇರುವವರು ಮತ್ತು ದೃಷ್ಟಿಹೀನರಿಗೆ ಅಗತ್ಯವಿರುವ ಬಳಕೆಗಾಗಿ ಪ್ರವೇಶಸಾಧ್ಯತೆಯ ವೈಶಿಷ್ಟ್ಯಗಳೊಂದಿಗೆ ತಮ್ಮ ಚಲನಚಿತ್ರಗಳನ್ನು ಸಲ್ಲಿಸಬಹುದು.  

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 15ನೇ ಸೆಪ್ಟೆಂಬರ್ 2024 ಅನ್ನು ಈ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಅಂತಿಮ  ದಿನಾಂಕವನ್ನಾಗಿ ನಿಗದಿಪಡಿಸಿತ್ತು.

 ನೂತನ ಮಾರ್ಗಸೂಚಿಗಳು ಮತ್ತು ಬಳಕೆಗಾಗಿ ಪ್ರವೇಶಿಸುವಿಕೆಯ ವರ್ಧಿತ ಮಾನದಂಡಗಳು 

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿಕಲಾಂಗ ವ್ಯಕ್ತಿಗಳು ಸಿನಿಮಾ ವೀಕ್ಷಣೆಯಲ್ಲಿ ಹೆಚ್ಚು ಒಳಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.  

Office Memorandum dated March 15, 2024 ಮೂಲಕ, ಶ್ರವಣ ಸಮಸ್ಯೆಯುಳ್ಳ ಮತ್ತು ದೃಷ್ಟಿಹೀನ ವ್ಯಕ್ತಿಗಳಿಗಾಗಿ ಚಲನಚಿತ್ರ ಮಂದಿರಗಳಲ್ಲಿ ಚಲನಚಿತ್ರಗಳ ಸಾರ್ವಜನಿಕ ಪ್ರದರ್ಶನಕ್ಕಾಗಿ ನೂತನ ಮಾನದಂಡಗಳನ್ನು  /ಹೊಸ ಮಾರ್ಗಸೂಚಿಗಳನ್ನು ಸಚಿವಾಲಯವು ಹೊರಡಿಸಿದೆ.

ವಾಣಿಜ್ಯ ಉದ್ದೇಶಗಳಿಗಾಗಿ ಚಲನಚಿತ್ರ ಮಂದಿರಗಳು/ ಚಲನಚಿತ್ರ ಮಂದಿರಗಳಲ್ಲಿ ಸಾರ್ವಜನಿಕ ಪ್ರದರ್ಶನಕ್ಕಾಗಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿ.ಬಿ.ಎಫ್.ಸಿ.) ಪ್ರಮಾಣೀಕರಿಸಿದ ಚಲನಚಿತ್ರಗಳಿಗೆ ಈ ಮಾರ್ಗಸೂಚಿಗಳು ಕಡ್ಡಾಯವಾಗಿ ಅನ್ವಯಿಸುತ್ತವೆ. ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಮಾಣೀಕರಿಸಬೇಕಾದ ಎಲ್ಲಾ ಚಲನಚಿತ್ರಗಳು* ಸಾರ್ವಜನಿಕ ಪ್ರದರ್ಶನಕ್ಕಾಗಿ, ಶ್ರವಣದೋಷವುಳ್ಳ ಮತ್ತು ದೃಷ್ಟಿಹೀನರಿಗೆ ಪ್ರತಿಯೊಂದೂ ಕನಿಷ್ಠ ಒಂದು ಪ್ರವೇಶಿಸುವಿಕೆ ವೈಶಿಷ್ಟ್ಯವನ್ನು, ಅಂದರೆ ಮುಚ್ಚಿದ ಶೀರ್ಷಿಕೆ/ ಮುಕ್ತ ಶೀರ್ಷಿಕೆ ಮತ್ತು ಶಬ್ದವನ್ನು ಅಕ್ಷರದಲ್ಲಿ ವಿವರಣೆ ನೀಡುವುದು,ಮುಂತಾದ ವ್ಯವಸ್ಥೆ ಒದಗಿಸುವ ಅಗತ್ಯವಿದೆ.

 

*****



(Release ID: 2055436) Visitor Counter : 19