ಸಂಪುಟ

ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಂದ ಇ-ಬಸ್ ಗಳ ಸಂಗ್ರಹಣೆ ಮತ್ತು ಕಾರ್ಯಾಚರಣೆಗಾಗಿ ಪಿ.ಎಂ-ಇಬಸ್ ಸೇವಾ-ಪಾವತಿ ಭದ್ರತಾ ಕಾರ್ಯವಿಧಾನ (ಪಿ.ಎಸ್.ಎಂ) ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ


ರೂ.3,435 ಕೋಟಿಗೂ ಅಧಿಕ ಮೊತ್ತದ 38,000 ಇ-ಬಸ್ ಗಳನ್ನು ರಸ್ತೆಗಿಳಿಸಲಿದೆ.

ಮೇಡ್ ಇನ್ ಇಂಡಿಯಾ ಯೋಜನೆಯಡಿಯಿರುವ “ಇ-ಬಸ್ಗಳು ಸೇವಾ ಪೇಮೆಂಟ್ ಸೆಕ್ಯುರಿಟಿ ಮೆಕ್ಯಾನಿಸಂ” - ಪ್ರಧಾನಮಂತ್ರಿಯವರ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ

ಮಾಲಿನ್ಯವನ್ನು ಕಡಿಮೆ ಮಾಡುವ ಮತ್ತು ಪರಿಸರವನ್ನು ರಕ್ಷಿಸುವಲ್ಲಿ ಮೈಲಿಗಲ್ಲು ಆಗಲಿದೆ

Posted On: 11 SEP 2024 8:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಸಾರ್ವಜನಿಕ ಸಾರಿಗೆ ಪ್ರಾಧಿಕಾರ(ಸಂಸ್ಥೆ)ಗಳಿಂದ (ಪಿಟಿಎ) ರೂ 3,435.33 ಕೋಟಿ ವೆಚ್ಚದಲ್ಲಿ ಇ-ಬಸ್ ಗಳ ಸಂಗ್ರಹಣೆ ಮತ್ತು ಕಾರ್ಯಾಚರಣೆ ಯಶಸ್ವಿಯಾಗಿ ಅನುಷ್ಠಾನ ಮಾಡುವ ಉದ್ಧೇಶದಿಂದ ನೂತನ "ಪಿಎಂ-ಇಬಸ್ ಸೇವಾ-ಪಾವತಿ ಭದ್ರತಾ ಕಾರ್ಯವಿಧಾನ (ಪಿಎಸ್ಎಂ) ಯೋಜನೆ"ಗೆ ಅನುಮೋದನೆ ನೀಡಿದೆ.

ಈ ಯೋಜನೆಯು ಆರ್ಥಿಕ ವರ್ಷ 2024-25 ರಿಂದ 2028-29 ರವರೆಗೆ 38,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳ (ಇ-ಬಸ್ ಗಳು) ನಿಯೋಜನೆಯನ್ನು ಬೆಂಬಲಿಸುತ್ತದೆ. ಈ ಕಾರ್ಯ ಯೋಜನೆಯ ನಿಯೋಜನೆಯ ದಿನಾಂಕದಿಂದ 12 ವರ್ಷಗಳವರೆಗೆ ಇ-ಬಸ್ ಗಳ ಕಾರ್ಯಾಚರಣೆಯನ್ನು ಪಿಎಂ-ಇಬಸ್ ಸೇವಾ-ಪಾವತಿ ಭದ್ರತಾ ಕಾರ್ಯವಿಧಾನ (ಪಿಎಸ್ಎಂ) ಯೋಜನೆ ಬೆಂಬಲಿಸುತ್ತದೆ.

ಪ್ರಸ್ತುತ, ಸಾರ್ವಜನಿಕ ಸಾರಿಗೆ ಪ್ರಾಧಿಕಾರ/ಸಂಸ್ಥೆಗಳು (ಪಿಟಿಎ) ನಿರ್ವಹಿಸುವ ಬಹುಪಾಲು ಬಸ್ ಗಳು ಡೀಸೆಲ್ /ಸಿ.ಎನ್.ಜಿ.ಯಿಂದ ಚಲಿಸುತ್ತವೆ. ಇದು ಪ್ರತಿಕೂಲ ಪರಿಸರ ಪರಿಣಾಮವನ್ನು ಉಂಟುಮಾಡುತ್ತದೆ. ಮತ್ತೊಂದೆಡೆ, ಇ-ಬಸ್ ಗಳು ಪರಿಸರ ಸ್ನೇಹಿ ಮತ್ತು ಕಡಿಮೆ ಕಾರ್ಯಾಚರಣೆಯ ವೆಚ್ಚವನ್ನು ಹೊಂದಿವೆ. ಆದರೆ, ಇ-ಬಸ್ಗಳ ಹೆಚ್ಚಿನ ಮುಂಗಡ ವೆಚ್ಚ ಮತ್ತು ಕಾರ್ಯಾಚರಣೆಗಳಿಂದ ಬರುವ ಕಡಿಮೆ ಆದಾಯದ ಕಾರಣಗಳಿಂದಾಗಿ ಇ-ಬಸ್ಗಳನ್ನು ಸಂಗ್ರಹಿಸುವುದು ಮತ್ತು ನಿರ್ವಹಿಸುವುದು ಸಾರ್ವಜನಿಕ ಸಾರಿಗೆ ಪ್ರಾಧಿಕಾರ/ಸಂಸ್ಥೆಗಳಿಗೆ (ಪಿಟಿಎ) ಸವಾಲಾಗಿ ಪರಿಣಮಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಇ-ಬಸ್ ಗಳ ಹೆಚ್ಚಿನ ಬಂಡವಾಳ ವೆಚ್ಚವನ್ನು ಪರಿಹರಿಸಲು, ಇ-ಬಸ್ ಗಳುನ್ನು ಒಟ್ಟು ವೆಚ್ಚದ ಒಪ್ಪಂದದ (ಜಿಸಿಸಿ) ಮಾದರಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಸಾರ್ವಜನಿಕ ಸಾರಿಗೆ ಪ್ರಾಧಿಕಾರ/ ಸಂಸ್ಥೆಗಳು (ಪಿಟಿಎ) ಸಾಮಾನ್ಯವಾಗಿ ನಡೆಸುತ್ತವೆ. ಜಿಸಿಸಿ ಮಾದರಿಯ ಅಡಿಯಲ್ಲಿ ಬಸ್ ನ ಮುಂಗಡ ವೆಚ್ಚವನ್ನು ಸಾರ್ವಜನಿಕ ಸಾರಿಗೆ ಪ್ರಾಧಿಕಾರ/ಸಂಸ್ಥೆಗಳು (ಪಿಟಿಎ) ಪಾವತಿಸುವ ಅಗತ್ಯವಿಲ್ಲ, ಬದಲಿಗೆ ಒ.ಇ.ಎಂ.ಗಳು/ನಿರ್ವಾಹಕ ಸಂಸ್ಥೆಗಳು ಇ-ಬಸ್ ಗಳನ್ನು ಸಂಗ್ರಹಿಸಿಸುತ್ತವೆ ಮತ್ತು ನಿರ್ವಹಿಸುತ್ತವೆ ಹಾಗೂ ಸಾರ್ವಜನಿಕ ಸಾರಿಗೆ ಪ್ರಾಧಿಕಾರ/ಸಂಸ್ಥೆಗಳಿಗೆ (ಪಿಟಿಎ) ಮಾಸಿಕ ಮೊತ್ತ ಪಾವತಿಸುತ್ತವೆ.  ಆದರೆ, ಸಂಭಾವ್ಯ ಪಾವತಿ ಡೀಫಾಲ್ಟ್ ಆಗುವ ಕಾರಣಗಳ ಬಗ್ಗೆ ತೀವ್ರ ಕಳವಳದಿಂದಾಗಿ ಒ.ಇ.ಎಂ.ಗಳು/ನಿರ್ವಾಹಕ ಸಂಸ್ಥೆಗಳು ಈ ಮಾದರಿಯಲ್ಲಿ ತೊಡಗಿಸಿಕೊಳ್ಳಲು ಸಾಮಾನ್ಯವಾಗಿ ಹಿಂಜರಿಯುತ್ತವೆ.

ಮೀಸಲಾದ ನಿಧಿಯ ಮೂಲಕ ಒ.ಇ.ಎಂ.ಗಳು/ನಿರ್ವಾಹಕ ಸಂಸ್ಥೆಗಳಿಗೆ ಸಕಾಲಿಕ ಪಾವತಿಗಳನ್ನು ಮಾಡುವ ಖಾತ್ರಿಪಡಿಸುವ ಮೂಲಕ ನೂತನ ಯೋಜನೆಯು ಈ ಕಾಳಜಿಯನ್ನು ಕೂಡಾ ಪರಿಹರಿಸುತ್ತದೆ. ಸಾರ್ವಜನಿಕ ಸಾರಿಗೆ ಪ್ರಾಧಿಕಾರ/ ಸಂಸ್ಥೆ (ಪಿಟಿಎ) ಗಳಿಂದ ಪಾವತಿಗಳು ಡೀಫಾಲ್ಟ್ ಆಗುವ ಸಂದರ್ಭಗಳಲ್ಲಿ, ಯೋಜನೆಯ ಅನುಷ್ಠಾನ ಸಂಸ್ಥೆಯಾದ ಸಿ.ಇ.ಎಸ್..ಎಲ್., ಯೋಜನೆ ನಿಧಿಯಿಂದ ಅಗತ್ಯ ಮೊತ್ತ ಪಾವತಿ ಮಾಡುತ್ತದೆ, ಅದನ್ನು ನಂತರ ಸಾರ್ವಜನಿಕ ಸಾರಿಗೆ ಪ್ರಾಧಿಕಾರ/ಸಂಸ್ಥೆಗಳು(ಪಿಟಿಎ) /ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಂದ ಈ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ.

ಈ ಉಪಕ್ರಮವು ಖಾಸಗಿ ವಲಯದ ಸಹಭಾಗಿತ್ವವನ್ನು ಉತ್ತೇಜಿಸುವ ಮೂಲಕ ಇ-ಬಸ್ಗಳ ಅಳವಡಿಕೆಯನ್ನು ಸುಲಭಗೊಳಿಸಲು ಪ್ರಯತ್ನಿಸುತ್ತದೆ. ಈ ಯೋಜನೆಯು ವಾತಾವರಣದ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ ಮತ್ತು ಪಳೆಯುಳಿಕೆ ಇಂಧನದ ಬಳಕೆಯನ್ನು ಕಡಿಮೆ ಮಾಡುತ್ತದೆ. ಈ ನೂತನ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಲ್ಲಿ ಇರುವ ಎಲ್ಲಾ ಸಾರ್ವಜನಿಕ ಸಾರಿಗೆ ಪ್ರಾಧಿಕಾರ/ಸಂಸ್ಥೆ(ಪಿಟಿಎ)ಗಳಿಗೆ ಈ ನೂತನ ಯೋಜನೆಯು ಉತ್ತಮ ಪ್ರಯೋಜನಗಳನ್ನು ಒದಗಿಸುತ್ತದೆ.

 
*****



(Release ID: 2054016) Visitor Counter : 20