ಗೃಹ ವ್ಯವಹಾರಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನದ ಪರಿಕಲ್ಪನೆಯನ್ನು ಅನುಸರಿಸುವ ಮೂಲಕ ದೇಶದಲ್ಲಿ ಸುರಕ್ಷಿತ ಸೈಬರ್ ವ್ಯವಸ್ಥೆಯನ್ನು ರಚಿಸಲು ಕೇಂದ್ರ ಗೃಹ ಸಚಿವಾಲಯವು ಸಂಕಲ್ಪ ಮಾಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದ್ದಾರೆ
ಭಾರತವನ್ನು ಸೈಬರ್ ಸುರಕ್ಷಿತ ದೇಶವನ್ನಾಗಿ ಮಾಡಲು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (ಐ4ಸಿ) ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ
ಸೈಬರ್-ಸುರಕ್ಷಿತ ಭಾರತ ನಿರ್ಮಾಣದ ಧ್ಯೇಯವನ್ನು ವೇಗಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಖ್ಯಾತ ನಟ ಶ್ರೀ ಅಮಿತಾಭ್ ಬಚ್ಚನ್ ಅವರಿಗೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಧನ್ಯವಾದ ಅರ್ಪಿಸಿದರು
ಶ್ರೀ ಅಮಿತಾಭ್ ಬಚ್ಚನ್ ತಮ್ಮ ವಿಡಿಯೊ ಸಂದೇಶದಲ್ಲಿ ದೇಶದಲ್ಲಿ ಸೈಬರ್ ಅಪರಾಧವನ್ನು ನಿಗ್ರಹಿಸಲು ಐ4ಸಿ ಕೇಂದ್ರವು ಅಹರ್ನಿಶಿ ಶ್ರಮವಹಿಸಿ ಪಟ್ಟುಬಿಡದೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಕೋರಿಕೆಯ ಮೇರೆಗೆ ನಾನು ಈ ಅಭಿಯಾನಕ್ಕೆ ಸೇರಿದೆ ಎಂದು ಶ್ರೀ ಅಮಿತಾಭ್ ಬಚ್ಚನ್ ಹೇಳಿದ್ದಾರೆ
Posted On:
11 SEP 2024 3:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದ ಪರಿಕಲ್ಪನೆಯನ್ನು ಅನುಸರಿಸುವ ಮೂಲಕ, ಕೇಂದ್ರ ಗೃಹ ಸಚಿವಾಲಯವು ದೇಶದಲ್ಲಿ ಸುರಕ್ಷಿತ ಸೈಬರ್ ವ್ಯವಸ್ಥೆಯನ್ನು ರಚಿಸಲು ಸಂಕಲ್ಪ ಮಾಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಈ ದಿಕ್ಕಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು 'ಎಕ್ಸ್' ವೇದಿಕೆಯ ಸಂದೇಶದಲ್ಲಿ ಶ್ರೀ ಅಮಿತ್ ಶಾ ಅವರು ಹೇಳಿದ್ದಾರೆ. ಸೈಬರ್-ಸುರಕ್ಷಿತ ಭಾರತವನ್ನು ನಿರ್ಮಿಸುವ ಧ್ಯೇಯವನ್ನು ವೇಗಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಖ್ಯಾತ ನಟ ಶ್ರೀ ಅಮಿತಾಭ್ ಬಚ್ಚನ್ ಅವರಿಗೆ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಧನ್ಯವಾದ ಅರ್ಪಿಸಿದರು.
ಮಹಾನ್ ಕಲಾವಿದ ಶ್ರೀ ಅಮಿತಾಭ್ ಬಚ್ಚನ್ ಅವರು ತಮ್ಮ ವಿಡಿಯೋ ಸಂದೇಶದಲ್ಲಿ “ದೇಶ ಮತ್ತು ಪ್ರಪಂಚದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧವು ಕಳವಳಕಾರಿ ಸಂಗತಿಯಾಗಿದೆ” ಎಂದು ಹೇಳಿದ್ದಾರೆ. “ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (ಐ4ಸಿ) ಸೈಬರ್ ಅಪರಾಧವನ್ನು ನಿಗ್ರಹಿಸಲು ಅವಿರತವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಕೋರಿಕೆಯ ಮೇರೆಗೆ ಈ ಅಭಿಯಾನಕ್ಕೆ ಸೇರ್ಪಡೆಗೊಂಡಿದ್ದೇನೆ” ಎಂದು ಶ್ರೀ ಅಮಿತಾಭ್ ಬಚ್ಚನ್ ಅವರು ಹೇಳಿದರು.
“ಈ ಸಮಸ್ಯೆಯಿಂದ ದೇಶವನ್ನು ಮುಕ್ತಗೊಳಿಸಲು ನಾವೆಲ್ಲರೂ ಒಂದಾಗಬೇಕು. ನಮ್ಮ ಜಾಗರೂಕತೆ ಮತ್ತು ಮುನ್ನೆಚ್ಚರಿಕೆಗಳು, ನಮ್ಮನ್ನು ಸೈಬರ್ ಅಪರಾಧಿಗಳಿಂದ ರಕ್ಷಿಸಬಹುದು” ಎಂದು ಶ್ರೀ ಅಮಿತಾಭ್ ಬಚ್ಚನ್ ಅವರು ಹೇಳಿದರು.
*****
(Release ID: 2053772)
Visitor Counter : 38
Read this release in:
Telugu
,
Khasi
,
English
,
Urdu
,
Hindi
,
Marathi
,
Assamese
,
Manipuri
,
Gujarati
,
Odia
,
Tamil
,
Malayalam