ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಅಬುಧಾಬಿ ಯುವರಾಜರ ಸ್ವಾಗತ


ಭಾರತ-ಯುಎಇ ಬಾಂಧವ್ಯ ಬಲವರ್ಧನೆ ಕುರಿತು ಉಭಯ ನಾಯಕರ ಫಲಪ್ರದ ಮಾತುಕತೆ

प्रविष्टि तिथि: 09 SEP 2024 8:40PM by PIB Bengaluru

ನವದೆಹಲಿಯಲ್ಲಿಂದು ಅಬುಧಾಬಿ ಯುವರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಉಭಯ ನಾಯಕರು ವಿವಿಧ ವಿಷಯಗಳ ಕುರಿತು ಫಲಪ್ರದ ಮಾತುಕತೆ ನಡೆಸಿದರು.

ಭಾರತ-ಯುಎಇ ಮೈತ್ರಿ ಬಲವರ್ಧನೆಯ ಶೇಖ್‌ ಖಲೀದ್ ಅವರ ಬಯಕೆಯನ್ನು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್‌ ಪೋಸ್ಟ್‌ ಹೀಗಿದೆ:

“ಅಬುಧಾಬಿಯ ಯುವರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸ್ವಾಗತಿಸಲು ಹರ್ಷವಾಯಿತು.  ವಿವಿಧ ವಿಷಯಗಳ ಬಗ್ಗೆ ನಾವು ಫಲಪ್ರದ ಮಾತುಕತೆ ನಡೆಸಿದ್ದೇವೆ.  ಸದೃಢ ಭಾರತ-ಯುಎಇ ಸ್ನೇಹದ ಅವರ ಬಯಕೆಯು ಸ್ಪಷ್ಟವಾಗಿ ಗೋಚರಿಸಿದೆ.”

 

 

*****


(रिलीज़ आईडी: 2053373) आगंतुक पटल : 75
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam