ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಐದು ರಾಷ್ಟ್ರಗಳ ರಾಯಭಾರಿಗಳಿಂದ ಭಾರತದ ರಾಷ್ಟ್ರಪತಿಗಳಿಗೆ ಪರಿಚಯ ಪತ್ರ ಸಲ್ಲಿಕೆ

Posted On: 06 SEP 2024 1:51PM by PIB Bengaluru

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಇಂದು (2024 ರ ಸೆಪ್ಟೆಂಬರ್ 6) ನಡೆದ ಕಾರ್ಯಕ್ರಮದಲ್ಲಿ ಸೊಲೊಮನ್ ದ್ವೀಪ, ನೌರು, ಇಟಲಿ, ಐಸ್‌ಲ್ಯಾಂಡ್ ಮತ್ತು ಇಸ್ರೇಲ್‌ನ ಹೈಕಮಿಷನರ್‌ಗಳು/ ರಾಯಭಾರಿಗಳಿಂದ ಪರಿಚಯ ಪತ್ರಗಳನ್ನು ಸ್ವೀಕರಿಸಿದರು. ತಮ್ಮ ತಮ್ಮ  ಪರಿಚಯ ಪತ್ರಗಳನ್ನು ಸಲ್ಲಿಸಿದವರು:  

1.    ಶ್ರೀ ಆ್ಯಂಟೊನಿ ಮಕಾಬೋ, ಸೊಲೊಮಾನ್ ದ್ವೀಪ ರಾಷ್ಟ್ರದ ಹೈಕಮಿಷನರ್ 

2.     ಕೇನ್ ಅಮಂಡಸ್, ನೌರು ಗಣರಾಜ್ಯದ ಹೈ ಕಮಿಷನರ್

3.    ಶ್ರೀ ಆಂಟೋನಿಯೊ ಎನ್ರಿಕೊ ಬಾರ್ಟೊಲಿ, ಇಟಲಿ ಗಣರಾಜ್ಯದ ರಾಯಭಾರಿ

4.    ಶ್ರೀ ಬೆನೆಡಿಕ್ಟ್ ಹೊಸ್ಕುಲ್ಡ್ಸನ್, ಐಸ್ಲ್ಯಾಂಡ್  ರಾಯಭಾರಿ

5.    ಶ್ರೀ ರೆಯುವೆನ್ ಅಜ಼ರ್, ಇಸ್ರೇಲ್ ರಾಯಭಾರಿ

 

*****


(Release ID: 2052567) Visitor Counter : 39