ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಅಮೃತ್ ಉದ್ಯಾನವು ನಾಳೆ ಕೇವಲ ಶಿಕ್ಷಕರಿಗಾಗಿ ತೆರೆದಿರುತ್ತದೆ

Posted On: 04 SEP 2024 5:42PM by PIB Bengaluru

ಶಿಕ್ಷಕರ ದಿನದಂದು ನಾಳೆ (ಸೆಪ್ಟೆಂಬರ್ 5, 2024) ಎಲ್ಲಾ ಶಿಕ್ಷಕರಿಗೆ ಅಮೃತ್ ಉದ್ಯಾನವನವು ವಿಶೇಷವಾಗಿ ತೆರೆದಿರುತ್ತದೆ. ಅವರು ನಾರ್ತ್ ಅವೆನ್ಯೂ ರಸ್ತೆಯ ಬಳಿ  ಇರುವ ರಾಷ್ಟ್ರಪತಿ ಭವನದ ಗೇಟ್ ಸಂಖ್ಯೆ 35 ರಿಂದ ಪ್ರವೇಶಿಸಬಹುದು. ಅವರ ಅನುಕೂಲಕ್ಕಾಗಿ ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣದಿಂದ ಗೇಟ್ ನಂ.35 ರವರೆಗೆ ಉಚಿತ ಶಟಲ್ ಬಸ್ ಸೇವೆಯೂ ಲಭ್ಯವಿರುತ್ತದೆ.

ಅಮೃತ್ ಉದ್ಯಾನ್ ಬೇಸಿಗೆ ವಾರ್ಷಿಕ ಆವೃತ್ತಿ, 2024 ಸಾರ್ವಜನಿಕರಿಗೆ ಆಗಸ್ಟ್ 16 ರಿಂದ ಸೆಪ್ಟೆಂಬರ್ 15, 2024 ರವರೆಗೆ, ಸೋಮವಾರ ಹೊರತುಪಡಿಸಿ ಬೆಳಿಗ್ಗೆ 10:00  ರಿಂದ ಸಂಜೆ 6:00 ರವರೆಗೆ (ಕೊನೆಯ ಪ್ರವೇಶದ ಅವಕಾಶ – ಸಂಜೆ 5:15 ಕ್ಕೆ) ತೆರೆದಿರುತ್ತದೆ.

ಪ್ರವೇಶವು ಉಚಿತವಾಗಿದೆ. ಸಂದರ್ಶಕರು ರಾಷ್ಟ್ರಪತಿ ಭವನದ ಜಾಲತಾಣದಲ್ಲಿ (https://visit.rashtrapatibhavan.gov.in/) ಆನ್ಲೈನ್ನಲ್ಲಿ ತಮ್ಮ ಸ್ಲಾಟ್ ಅನ್ನು ಬುಕ್ ಮಾಡಬಹುದು. ನೇರವಾಗಿ ಬರುವ ಸಂದರ್ಶಕರು ಗೇಟ್ ಸಂಖ್ಯೆ 35 ರ ಹೊರಗೆ ಇರಿಸಲಾಗಿರುವ ಸ್ವಯಂ ಸೇವಾ ಕಿಯೋಸ್ಕ್ಗಳ ಮೂಲಕ  ನೋಂದಾಯಿಸಿಕೊಳ್ಳಬಹುದು.

ಇಲ್ಲಿಯವರೆಗೆ, ಅಮೃತ್ ಉದ್ಯಾನ್ ಬೇಸಿಗೆ ವಾರ್ಷಿಕ ಆವೃತ್ತಿ, 2024 ರ ಸಮಯದಲ್ಲಿ 1.5 ಲಕ್ಷಕ್ಕೂ ಹೆಚ್ಚು ಸಂದರ್ಶಕರು ಅಮೃತ್ ಉದ್ಯಾನಕ್ಕೆ ಭೇಟಿ ನೀಡಿದ್ದಾರೆ. ಪ್ರವಾಸದ ಸಮಯದಲ್ಲಿ, ಸಂದರ್ಶಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಬೀಜಗಳಿಂದ ತಯಾರಿಸಿದ ಕಾಗದವನ್ನು ನೀಡಲಾಗುತ್ತಿದೆ.

 

*****




(Release ID: 2051980) Visitor Counter : 33