ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಧಿಕೃತ ಭೇಟಿಗಾಗಿ ಬ್ರೂನೈ ತಲುಪಿದ ಪ್ರಧಾನಮಂತ್ರಿ

प्रविष्टि तिथि: 03 SEP 2024 3:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೊರೆ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಬ್ರೂನೈಗೆ ಅಧಿಕೃತ ಭೇಟಿ ಕೈಗೊಂಡಿದ್ದು ರಾಜಧಾನಿ ಬಂದರ್ ಸೆರಿ ಬೆಗವಾನ್ ಇಂದು ತಲುಪಿದ್ದಾರೆ.

ಇದು ಬ್ರೂನೈಗೆ ಭಾರತದ ಪ್ರಧಾನಿಯೊಬ್ಬರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತ ಮತ್ತು ಬ್ರೂನೈ ನಡುವಣ ರಾಜತಾಂತ್ರಿಕ ಸಂಬಂಧಗಳ 40ನೇ ವರ್ಷಾಚರಣೆ ವೇಳೆ ಪ್ರಧಾನಮಂತ್ರಿಯವರ ಈ ಐತಿಹಾಸಿಕ ಭೇಟಿ ನಡೆದಿದೆ. 

ಬಂದರ್ ಸೆರಿ ಬೆಗವಾನ್ಗೆ ತಲುಪಿದ ಪ್ರಧಾನಮಂತ್ರಿಯವರನ್ನು ವಿಧ್ಯುಕ್ತವಾಗಿ ಸ್ವಾಗತಿಸಲಾಯಿತು ಹಾಗೂ ದೊರೆ ಹಾಜಿ ಅಲ್-ಮುಹ್ತದಿ ಬಿಲ್ಲಾಹ್ ಮತ್ತು ಬ್ರೂನೈಯ ಪ್ರಧಾನಿ ಕಚೇರಿಯ ಹಿರಿಯ ಸಚಿವರು ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಭಾರತದ “ಆಕ್ಟ್ ಈಸ್ಟ್' ನೀತಿ ಮತ್ತು ಇಂಡೋ-ಪೆಸಿಫಿಕ್ ವಿಷನ್ ನಲ್ಲಿ  ಬ್ರೂನೈ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಭಾರತ ಮತ್ತು ಬ್ರೂನೈ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳಲ್ಲಿ ಪರಸ್ಪರ ಗೌರವ ಮತ್ತು ಅರ್ಥೈಸುವಿಕೆಯೊಂದಿಗೆ ಅತ್ಯಂತ ಸೌಹಾರ್ದ ಸಂಬಂಧಗಳನ್ನು ಹೊಂದಿವೆ. ಎರಡೂ ದೇಶಗಳೂ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಪಾರಂಪರಿಕವಾಗಿ ಸಾವಿರಾರು ವರ್ಷಗಳ ಸಂಪರ್ಕ ಹೊಂದಿವೆ.

 

*****


(रिलीज़ आईडी: 2051512) आगंतुक पटल : 94
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu , Malayalam