ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಕ್ರೀಡಾಪಟುಗಳಾದ ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ
ಪ್ರಕಟಣಾ ದಿನಾಂಕ:
02 SEP 2024 11:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಮಿಶ್ರ ಕಾಂಪೌಂಡ್ ಓಪನ್ ಬಿಲ್ಲುಗಾರಿಕೆ ಈವೆಂಟ್ ನಲ್ಲಿ ಕಂಚಿನ ಪದಕ ಗೆದ್ದ ಕ್ರೀಡಾಪಟುಗಳಾದ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಅವರನ್ನು, ಅವರು ಪ್ರದರ್ಶಿಸಿದ ತಂಡದ ಮನೋಭಾವವನ್ನು ಶ್ಲಾಘಿಸಿ, ಅವರನ್ನು ಅಭಿನಂದಿಸಿದ್ದಾರೆ.
ಶ್ರೀ ಮೋದಿಯವರು Xನಲ್ಲಿ:
"ತಂಡದ ಒಗ್ಗಟ್ಟಿನ ಕೆಲಸಕ್ಕೆ ಗೆಲ್ಲುವು!
ಮಿಶ್ರ ಕಾಂಪೌಂಡ್ ಓಪನ್ ಬಿಲ್ಲುಗಾರಿಕೆಯಲ್ಲಿ ಕಂಚಿನ ಪದಕ ಗೆದ್ದ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಅವರಿಗೆ ಅಭಿನಂದನೆಗಳು. ಅವರಿಬ್ಬರೂ ಗಮನಾರ್ಹ ಕೌಶಲ್ಯ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿದ್ದಾರೆ. ಅವರ ಈ ಸಾಧನೆಯಿಂದ ಭಾರತಕ್ಕೆ ಬಹಳ ಸಂತೋಷವಾಗಿದೆ. ಎಂದು ಪೋಸ್ಟ್ ಮಾಡಿದ್ದಾರೆ. #Cheer4Bharat"
*****
(ಪ್ರಕಟಣೆ ಐ.ಡಿ.: 2051225)
ವಿಸಿಟರ್ ಕೌಂಟರ್ : 106
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam