ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ತ್ರಿಪುರಾದಲ್ಲಿ ಪ್ರವಾಹ ಪೀಡಿತ ಜನರಿಗೆ ಪರಿಹಾರ ಒದಗಿಸಲು ಎಸ್.ಡಿ.ಆರ್.ಎಫ್. ನಿಂದ ನೀಡಲಾಗುವ ಕೇಂದ್ರದ ಪಾಲು ರೂ.40 ಕೋಟಿಯನ್ನು ಮುಂಗಡವಾಗಿ ಬಿಡುಗಡೆ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಅನುಮೋದಿಸಿದೆ


ವಿಷಯ ಏನೇ ಆಗಲಿ, ನಮ್ಮ ಈ ಕಷ್ಟದ ಸಮಯದಲ್ಲಿ ಹೋರಾಡಲು ಮೋದಿ ಸರ್ಕಾರವು ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದನ್ನು ತ್ರಿಪುರಾದ ನಮ್ಮ ಸಹೋದರಿಯರು ಮತ್ತು ಸಹೋದರರು ಕಂಡುಕೊಳ್ಳುತ್ತಾರೆ - ಶ್ರೀ ಅಮಿತ್ ಶಾ

11 ಎನ್.ಡಿ.ಆರ್.ಎಫ್ ತಂಡಗಳು, ಸೇನೆಯ 3 ಪಡೆಗಳು ಮತ್ತು ಕೇಂದ್ರದಿಂದ ನಿಯೋಜಿಸಲಾದ ವಾಯುಪಡೆಯ 4 ಹೆಲಿಕಾಪ್ಟರ್ಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ವಿಷಯಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುತ್ತಿವೆ

Posted On: 23 AUG 2024 1:47PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ತ್ರಿಪುರಾದಲ್ಲಿ ಪ್ರವಾಹ ಪೀಡಿತ ಜನರಿಗೆ ಪರಿಹಾರ ಒದಗಿಸಲು ಎಸ್.ಡಿ.ಆರ್.ಎಫ್. ನಿಂದ ಕೇಂದ್ರದ ಪಾಲು 40 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲು ಅನುಮೋದಿಸಿದೆ.

ಎಕ್ಸ್ ಖಾತೆಯಲ್ಲಿನ ಸಂದೇಶದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು “ತ್ರಿಪುರಾದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೋದಿ ಜೀ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಸಂತ್ರಸ್ತ ಜನರಿಗೆ ಪರಿಹಾರ ಒದಗಿಸಲು ಎಸ್.ಡಿ.ಆರ್.ಎಫ್. ನಿಂದ ಕೇಂದ್ರದ ಪಾಲು 40 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಕೇಂದ್ರವು ನಿಯೋಜಿಸಿರುವ 11 ಎನ್.ಡಿ.ಆರ್.ಎಫ್ ತಂಡಗಳು, ಸೇನೆಯ 3 ಪಡೆಗಳು ಮತ್ತು ವಾಯುಪಡೆಯ 4 ಹೆಲಿಕಾಪ್ಟರ್ಗಳು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ವಿಷಯಗಳಲ್ಲಿ ಸಹಾಯ ಮಾಡುತ್ತಿವೆ. ವಿಷಯ ಏನೇ ಇರಲಿ, ತ್ರಿಪುರಾದಲ್ಲಿರುವ ನಮ್ಮ ಸಹೋದರಿಯರು ಮತ್ತು ಸಹೋದರರು ಈ ಕಷ್ಟದ ಸಮಯದಲ್ಲಿ ಹೋರಾಡಲು ಮೋದಿ ಸರ್ಕಾರವು ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದನ್ನು ಕಂಡುಕೊಳ್ಳುತ್ತಾರೆ.

 

 

*****


(Release ID: 2048170) Visitor Counter : 42