ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

1037 ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಮತ್ತು ಸುಧಾರಣಾ ಸೇವೆಗಳ ಸಿಬ್ಬಂದಿಗೆ ಸ್ವಾತಂತ್ರ್ಯ ದಿನ-2024ರ ಸಂದರ್ಭದಲ್ಲಿ ಶೌರ್ಯ/ಸೇವಾ ಪದಕಗಳನ್ನು ನೀಡಲಾಗಿದೆ

Posted On: 14 AUG 2024 9:25AM by PIB Bengaluru

2024ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಒಟ್ಟು 1037 ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣೆ (HG&CD) ಮತ್ತು ಸುಧಾರಣಾ ಸೇವೆಗಳ ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳನ್ನು ನೀಡಲಾಗಿದೆ. ವಿವರಗಳು ಈ ಕೆಳಗಿನಂತಿವೆ:

1. ಶೌರ್ಯ ಪದಕಗಳು

ಪದಕಗಳ ಹೆಸರು

ನೀಡಲಾದ ಪದಕಗಳ ಸಂಖ್ಯೆ

ರಾಷ್ಟ್ರಪತಿಯವರ ಶೌರ್ಯ ಪದಕ (ಪಿಎಂಜಿ)

01

ಶೌರ್ಯ ಪದಕ (ಜಿಎಂ)

213*

* ಪೊಲೀಸ್ ಸೇವೆ-208, ಅಗ್ನಿಶಾಮಕ ಸೇವೆ-04, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ-01

ರಾಷ್ಟ್ರಪತಿಯವರ ಶೌರ್ಯ ಪದಕ (ಪಿಎಂಜಿ) ಮತ್ತು ಶೌರ್ಯ ಪದಕ (ಜಿಎಂ) ಗಳನ್ನು ಅನುಕ್ರಮವಾಗಿ ಅಪರೂಪದ ಎದ್ದುಕಾಣುವ ಶೌರ್ಯ ಮತ್ತು ಎದ್ದುಕಾಣುವ ಶೌರ್ಯದ ಪ್ರದರ್ಶನ ತೊರುವ ಮೂಲಕ ಜೀವ ಮತ್ತು ಆಸ್ತಿಯನ್ನು ಉಳಿಸುವಲ್ಲಿ ಅಥವಾ ಅಪರಾಧವನ್ನು ತಡೆಗಟ್ಟುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ, ಸಂಬಂಧಪಟ್ಟ ಅಧಿಕಾರಿಯ ಹೊಣೆಗಾರಿಕೆ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಉಂಟಾಗುವ ಅಪಾಯದ ಅಂದಾಜು ಆಧಾರದ ಮೇಲೆ ನೀಡಲಾಗುತ್ತದೆ.

ರಾಷ್ಟ್ರಪತಿಯವರ ಶೌರ್ಯ ಪದಕ (ಪಿಎಂಜಿ)

ಶೌರ್ಯ ಪದಕಗಳನ್ನು ಪಡೆದ ಸಿಬ್ಬಂದಿಗಳಲ್ಲಿ, 25.07.2022 ರಂದು ನಡೆದ ದರೋಡೆ ಪ್ರಕರಣದಲ್ಲಿ ಅಪರೂಪದ ಶೌರ್ಯ ಪ್ರದರ್ಶಿಸಿದ ತೆಲಂಗಾಣ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಶ್ರೀ ಚದುವು ಯಾದಯ್ಯ ಅವರಿಗೆ ರಾಷ್ಟ್ರಪತಿಯವರ ಶೌರ್ಯ ಪದಕ ನೀಡಲಾಗಿದೆ. ಇಬ್ಬರು ಕುಖ್ಯಾತ ವ್ಯಕ್ತಿಗಳಾದ ಇಶಾನ್ ನಿರಂಜನ್ ನೀಲಮನಳ್ಳಿ ಮತ್ತು ರಾಹುಲ್ ಸರಗಳ್ಳತನ ಮತ್ತು ಶಸ್ತ್ರಾಸ್ತ್ರ ದಂಧೆಯಲ್ಲಿ ತೊಡಗಿದ್ದರು. 26.07.2022 ರಂದು, ಸೈಬರಾಬಾದ್ ಪೊಲೀಸರು ಈ ಅಪರಾಧಿಗಳನ್ನು ಬಂಧಿಸಿದರು, ಆದಾಗ್ಯೂ, ಆ ಇಬ್ಬರೂ ಕುಖ್ಯಾತರು ಹೆಡ್ ಕಾನ್ಸ್‌ಟೇಬಲ್ ಶ್ರೀ ಚದುವು ಯಾದಯ್ಯ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದರು ಮತ್ತು ಅವರ ದೇಹದ ವಿವಿಧ ಭಾಗಗಳಲ್ಲಿ ಅಂದರೆ ಎದೆ, ಬೆನ್ನು, ಎಡಗೈ ಮತ್ತು ಹೊಟ್ಟೆಗೆ ಪದೇ ಪದೇ ಇರಿದಿದ್ದರು. ಇದು ತೀವ್ರ ರಕ್ತಸ್ರಾವಕ್ಕೆ ಕಾರಣವಾಯಿತು. ತೀವ್ರತರವಾದ ಗಾಯಗಳ ಹೊರತಾಗಿಯೂ, ಇಬ್ಬರು ಅಪರಾಧಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು, ಇದರಿಂದ ಅವರ ಬಂಧನ ಸಾಧ್ಯವಾಯಿತು. ಶ್ರೀ ಚದುವು ಯಾದಯ್ಯ ಅವರು 17 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು.

213 ಶೌರ್ಯ ಪದಕಗಳಲ್ಲಿ 208 ಶೌರ್ಯ ಪದಕಗಳನ್ನು ಪೊಲೀಸ್ ಸಿಬ್ಬಂದಿಗೆ ನೀಡಲಾಗಿದೆ, ಅವರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ 31, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ತಲಾ 17, ಛತ್ತೀಸಗಢದ 15, ಮಧ್ಯಪ್ರದೇಶದ 12, ಜಾರ್ಖಂಡ್‌, ಪಂಜಾಬ್ ಮತ್ತು ತೆಲಂಗಾಣದ ತಲಾ 07 ಸಿಬ್ಬಂದಿ, ಸಿ ಆರ್‌ ಪಿ ಎಫ್‌ ನ 52, ಎಸ್‌ ಎಸ್‌ ಬಿ ಯ 14 ಸಿಬ್ಬಂದಿ, ಸಿ ಐ ಎಸ್‌ ಎಫ್‌ ನ 10, ಬಿ ಎಸ್‌ ಎಫ್‌ ನ 06 ಸಿಬ್ಬಂದಿ ಮತ್ತು ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಸಿಬ್ಬಂದಿ ಮತ್ತು ಸಿ ಎ ಪಿ ಎಫ್‌ ಸಿಬ್ಬಂದಿಗೆ ನೀಡಲಾಗಿದೆ. ಇದಲ್ಲದೆ, ದೆಹಲಿ ಮತ್ತು ಜಾರ್ಖಂಡ್ ಅಗ್ನಿಶಾಮಕ ಸೇವಾ ಸಿಬ್ಬಂದಿಗೆ ಕ್ರಮವಾಗಿ 03 ಶೌರ್ಯ ಪದಕ ಮತ್ತು 01 ಶೌರ್ಯ ಪದಕ ಮತ್ತು ಉತ್ತರ ಪ್ರದೇಶದ ಗೃಹರಕ್ಷಕ ಮತ್ತು ನಾಗರಿಕ ರಕ್ಷಣೆ ಸಿಬ್ಬಂದಿಗೆ 01 ಶೌರ್ಯ ಪದಕ ನೀಡಲಾಗಿದೆ.

ಸೇವಾ ಪದಕಗಳು

ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ (ಪಿ ಎಸ್‌ ಎಂ) ಗಳನ್ನು ಸೇವೆಯಲ್ಲಿನ ವಿಶಿಷ್ಟ ದಾಖಲೆಗಾಗಿ ನೀಡಲಾಗುತ್ತದೆ ಮತ್ತು ಪ್ರಶಂಸನೀಯ ಸೇವಾ ಪದಕ (ಎಂ ಎಸ್‌ ಎಂ) ಗಳನ್ನು ಶ್ರದ್ಧಾಪೂರ್ವಕ ಕರ್ತವ್ಯ ನಿರ್ವಹಿಸಿದ ಮೌಲ್ಯಯುತ ಸೇವೆಗಾಗಿ ನೀಡಲಾಗುತ್ತದೆ.

94 ರಾಷ್ಟ್ರಪತಿಯವರ ವಿಶೇಷ ಸೇವಾ ಪದಕ (ಪಿ ಎಸ್‌ ಎಂ) ಗಳಲ್ಲಿ, 75 ಪೊಲೀಸ್ ಸೇವೆಗೆ, 08 ಅಗ್ನಿಶಾಮಕ ಸೇವೆಗೆ, 08 ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ಸೇವೆಗೆ ಮತ್ತು 03 ಸುಧಾರಣಾ ಸೇವೆಗೆ ನೀಡಲಾಗಿದೆ. 729 ಪ್ರಶಂಸನೀಯ ಸೇವಾ ಪದಕ (ಎಂ ಎಸ್‌ ಎಂ) ಗಳಲ್ಲಿ, 624 ಪೊಲೀಸ್ ಸೇವೆಗೆ, 47 ಅಗ್ನಿಶಾಮಕ ಸೇವೆಗೆ, 47 ಪದಕಗಳು ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ಸೇವೆಗೆ ಮತ್ತು 11 ಪದಕಗಳನ್ನು ಸುಧಾರಣಾ ಸೇವೆಗೆ ನೀಡಲಾಗಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರಗಳು ಈ ಕೆಳಗಿನಂತಿವೆ:

ಕ್ರ.ಸಂ.

ವಿಷಯ

ಪ್ರಶಸ್ತಿ ಪುರಸ್ಕೃತರ ಸಂಖ್ಯೆ

ಅನುಬಂಧ

1

ರಾಷ್ಟ್ರಪತಿಯವರ ಶೌರ್ಯ ಪದಕ (ಪಿಎಂಜಿ)

01

ಪಟ್ಟಿ-I

2

ಶೌರ್ಯ ಪದಕ (ಜಿಎಂ)

213

ಪಟ್ಟಿ-II

3

ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ (ಪಿ ಎಸ್‌ ಎಂ)

94

ಪಟ್ಟಿ-III

 

4

ಪ್ರಶಂಸನೀಯ ಸೇವಾ ಪದಕ (ಎಂ ಎಸ್‌ ಎಂ)

729

ಪಟ್ಟಿ-IV

 

5

ಪದಕ ಪ್ರಶಸ್ತಿ ಪುರಸ್ಕೃತರ ರಾಜ್ಯವಾರು/ ಇಲಾಖಾವಾರು ಪಟ್ಟಿ

ಪಟ್ಟಿಯ ಪ್ರಕಾರ

ಪಟ್ಟಿ-V

 

Click here to view List-I

Click here to view List-II

Click here to view List-III

Click here to view List-IV

Click here to view List-V

ವಿವರಗಳು www.mha.gov.in ಮತ್ತು https://awards.gov.in ನಲ್ಲಿ ಲಭ್ಯವಿವೆ.

 

*****


(Release ID: 2045134) Visitor Counter : 77