ರಾಷ್ಟ್ರಪತಿಗಳ ಕಾರ್ಯಾಲಯ
78ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಭಾರತದ ರಾಷ್ಟ್ರಪತಿಯವರು ನಾಳೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ
Posted On:
13 AUG 2024 6:09PM by PIB Bengaluru
ಭಾರತದ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರು ನಾಳೆ (ಆಗಸ್ಟ್ 14, 2024) 78ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಭಾಷಣವನ್ನು ಸಂಜೆ 7 ಗಂಟೆಯಿಂದ ಪ್ರಸಾರ ಮಾಡಲಾಗುವುದು. ಆಕಾಶವಾಣಿಯ ಸಂಪೂರ್ಣ ರಾಷ್ಟ್ರೀಯ ಜಾಲದಲ್ಲಿ ಮತ್ತು ದೂರದರ್ಶನದ ಎಲ್ಲಾ ಚಾನೆಲ್ ಗಳಲ್ಲಿ ಹಿಂದಿಯಲ್ಲಿ ಪ್ರಸಾರ ಮಾಡಲಾಗುವುದು. ನಂತರ ಈ ಭಾಷಣದ ಇಂಗ್ಲಿಷ್ ಆವೃತ್ತಿಯನ್ನು ಇದೇ ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಗುವುದು. ತದನಂತರ ದೂರದರ್ಶನದ ಪ್ರಾದೇಶಿಕ ಚಾನೆಲ್ ಗಳು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಿವೆ. ಆಕಾಶವಾಣಿಯು ಪ್ರಾದೇಶಿಕ ಭಾಷಾ ಆವೃತ್ತಿಗಳನ್ನು ಆಯಾ ಪ್ರಾದೇಶಿಕ ನೆಟ್ ವರ್ಕ್ ಗಳಲ್ಲಿ ರಾತ್ರಿ 9:30 ಗಂಟೆಗೆ ಪ್ರಸಾರ ಮಾಡಲಿದೆ.
*****
(Release ID: 2045117)
Visitor Counter : 44