ಜವಳಿ ಸಚಿವಾಲಯ

2024 ರ ಆಗಸ್ಟ್ 7 ರಂದು 10 ನೇ ಕೈಮಗ್ಗ ದಿನ ಆಚರಣೆ


ನವದೆಹಲಿಯಲ್ಲಿ ಸಂತ ಕಬೀರ್ ಮತ್ತು ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿ ಪ್ರದಾನ ಮಾಡಲಿರುವ ಉಪರಾಷ್ಟ್ರಪತಿ

 ದೇಶಾದ್ಯಂತ ಕೈಮಗ್ಗ ದಿನ ಆಚರಣೆ

Posted On: 06 AUG 2024 2:05PM by PIB Bengaluru

2024 ಆಗಸ್ಟ್ 7 ರ ಬುಧವಾರದಂದು 10 ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಆಚರಿಸಲಾಗುತ್ತಿದೆ. ಗೌರವಾನ್ವಿತ ಉಪರಾಷ್ಟ್ರಪತಿಯವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳು ಮತ್ತು ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀ ಪವಿತ್ರಾ ಮಾರ್ಗರಿಟಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಸದರು, ಗಣ್ಯ ವ್ಯಕ್ತಿಗಳು, ವಿನ್ಯಾಸಕಾರರು, ಕೈಗಾರಿಕಾ ಪ್ರತಿನಿಧಿಗಳು ಮತ್ತು ರಫ್ತುದಾರರು, ಹಿರಿಯ ಅಧಿಕಾರಿಗಳು, ದೇಶಾದ್ಯಂತ 1000ಕ್ಕೂ ಅಧಿಕ ನೇಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  

ಕೈಮಗ್ಗ ವಲಯದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನೇಕಾರರಿಗೆ ಸಂತ ಕಬೀರ್ ಪ್ರಶಸ್ತಿಗಳು ಮತ್ತು ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಭಾರತದ ಉಪರಾಷ್ಟ್ರಪತಿಯವರು “ಭಾರತದ ಕೈಮಗ್ಗ ವಲಯದಲ್ಲಿ ಪರಂಪರೆ –ಸುಸ್ಥಿರತೆ” ಕುರಿತ ಕಾಫಿ ಟೇಬಲ್ ಪುಸ್ತಕ ಮತ್ತು ಪ್ರಶಸ್ತಿ ಪುರಸ್ಕತರ ಕಿರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನದಂತೆ ಸರ್ಕಾರ 2015 ರ ಆಗಸ್ಟ್ 7 ರಂದು ಮೊದಲ ಬಾರಿಗೆ ರಾಷ್ಟ್ರೀಯ ಕೈಮಗ್ಗ ದಿನ ಆಚರಣೆಯನ್ನು ಪ್ರಾರಂಭಿಸಿತು. 1905 ರಂದು ಆರಂಭವಾದ ಸ್ವದೇಶಿ ಚಳವಳಿಯ ದಿನದ ಸ್ಮರಣಾರ್ಥ ಮತ್ತು ದೇಶೀಯ ಕೈಗಾರಿಕೆಗಳು, ವಿಶೇಷವಾಗಿ ಕೈಮಗ್ಗ ನೇಕಾರರನ್ನು ಉತ್ತೇಜಿಸಲು ದಿನವನ್ನು ಆಚರಣೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಕೈಮಗ್ಗ ನೇಕಾರರನ್ನು ಗೌರವಿಸುವ ಮತ್ತು ಅವರಿಗೆ ಸ್ಫೂರ್ತಿ ನೀಡುವ ಹಾಗೂ ಕೈಮಗ್ಗ ಕೈಗಾರಿಕೆ ಬಗ್ಗೆ ಹೆಮ್ಮೆ ಮೂಡಿಸುವುದು, ಸಂಸ್ಕೃತಿ, ಸಂಪ್ರದಾಯ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವುದು ರಾಷ್ಟ್ರೀಯ ಕೈಮಗ್ಗ ದಿನದ ವಿಶೇಷವಾಗಿದೆ. ಕೈಮಗ್ಗ ವಲಯದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವುದು ಮತ್ತು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಉದ್ದೇಶದಿಂದ ಆಚರಣೆ ಮಾಡಲಾಗುತ್ತಿದೆ.

10 ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರಗಳು, ಕೈಮಗ್ಗ ಇಲಾಖೆಗಳ ನೇಕಾರರ ಸೇವಾ ಕೇಂದ್ರಗಳು, ಕೈಮಗ್ಗ ವಲಯದ ಉನ್ನತ ಕೇಂದ್ರಗಳು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವ್ಯಾಪ್ತಿಗೊಳಪಡುವ ಶಿಕ್ಷಣ ಸಂಸ್ಥೆಗಳು, ನ್ಯಾಷನಲ್ ಕ್ರಾಪ್ಟ್ ಮ್ಯೂಸಿಯಂ ಮತ್ತಿತರೆ ಸಂಘಟನೆಗಳಲ್ಲಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೆಲವು ಪ್ರಮುಖ ಚಟುವಟಿಕೆಗಳು ಕೆಳಕಂಡಂತೆ ಇವೆ.

  • ಸರ್ಕಾರದ ಪೋರ್ಟಲ್ ಮೈ ಗೌ ನಲ್ಲಿ ಸಾಮಾಜಿಕ ಮಾಧ್ಯಮ ಅಭಿಯಾನ: ಪ್ರತಿಜ್ಞೆ ಸ್ವೀಕಾರ, ಸೆಲ್ಪಿ, ಸ್ಮರಣಿಕೆ ಬಿಡುಗಡೆ, ರಸ ಪ್ರಶ್ನೆ ಆಯೋಜನೆ.
  • ವಿರಾಸತ್, ಕೈಮಗ್ಗ ಉತ್ಪನ್ನಗಳ ವಿಶೇಷ ಪ್ರದರ್ಶನ ಮತ್ತು ಮ್ಯಾಟಿಕ್ ಪ್ರದರ್ಶನ, ಕೈಮಗ್ಗ ವಸ್ತು ಪ್ರದರ್ಶನವು ಹ್ಯಾಂಡ್ ಲೂಮ್‌ ಹಾತ್ (Handloom Haat) ನವದೆಹಲಿಯಲ್ಲಿ [ಆಗಸ್ಟ್ 3 ರಿಂದ 16 ರ ವರೆಗೆ] ನಡೆಯಲಿದೆ.
  • ವಿರಾಸತ್ – ದೆಹಲಿ ಹಾತ್ ಐಎನ್ಎ ವಿಶೇಷ ಪ್ರದರ್ಶನ [ಆಗಸ್ಟ್ 1 ರಿಂದ 15 ರ ವರೆಗೆ]
  • ವಾರಣಸಿಯಲ್ಲಿ ಕೈಮಗ್ತ ರಫ್ತು ಉತ್ತೇಜನ ಮಂಡಳಿಯಿಂದ ವಿಶೇಷ ಪ್ರದರ್ಶನ [ಬಿ2ಬಿ] ಆಯೋಜನೆ [ಆಗಸ್ಟ್ 7 ರಿಂದ 9 ರ ವರೆಗೆ]
  • ನಿಮ್ಮ ನೇಕಾರರ ಬಗ್ಗೆ ತಿಳಿಯಿರಿ ಕರಕುಶಲ ಸಂಗ್ರಹಾಲಯ [ಆಗಸ್ಟ್ 1 ರಿಂದ 14 ರವರೆಗೆ] – ಕೈಮಗ್ಗ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಉಪಕ್ರಮದ ಉದ್ದೇಶವಾಗಿದೆ. ದೆಹಲಿಯಾದ್ಯಂತ ಸುಮಾರು 10,000 ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
  • ಕೈಮಗ್ಗ ಪ್ರದರ್ಶನ, ದೇಶಾದ್ಯಂತ ಕೈಮಗ್ಗ ನೇಕಾರ ಕೇಂದ್ರಗಳ  ಮೂಲಕ ಕಾಲೇಜಗಳಲ್ಲಿ ಜಾಗೃತಿ ಚಟುವಟಿಕೆಗಳ ಆಯೋಜನೆ
  • ವಿಷಯಾಧಾರಿತ ಪ್ರದರ್ಶನ/ನೇಕಾರಿಕೆಯ ಪ್ರದರ್ಶನ, ಗುಂಪು ಚರ್ಚೆ, ಕೈಮಗ್ಗ ಕುರಿತಂತೆ ರಸಪ್ರಶ್ನೆ, ನಿಪ್ಟ್ ಮತ್ತು ಐ ಐ ಎಚ್ ಟಿ ಗಳಿಂದ ಪ್ಯಾಶನ್ ಪ್ರಸ್ತುತಿಗಳು.

 

*****

 



(Release ID: 2042108) Visitor Counter : 59