ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ದೇಶಾದ್ಯಂತ ಸರಕು ಸಾಗಣೆ ದಕ್ಷತೆ ಸುಧಾರಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಸಂಪರ್ಕ ಹೆಚ್ಚಿಸಲು ಒಟ್ಟು 50,655 ಕೋಟಿ ರೂ. ಬಂಡವಾಳ ವೆಚ್ಚದ ಒಟ್ಟು 936 ಕಿ.ಮೀ. ಉದ್ದದ 8 ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ರೋಡ್ ಕಾರಿಡಾರ್ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ
ಆಗ್ರಾ ಮತ್ತು ಗ್ವಾಲಿಯರ್ ನಡುವಿನ ಪ್ರಯಾಣ ಸಮಯ 50% ತಗ್ಗಲಿದೆ
ಖರಗ್‌ಪುರ - ಮೊರೆಗ್ರಾಮ್ ಕಾರಿಡಾರ್ ಯೋಜನೆಯು ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಆರ್ಥಿಕತೆ ಪರಿವರ್ತಿಸಲಿದೆ
ಕಾನ್ಪುರದ ಸುತ್ತಲಿನ ಹೆದ್ದಾರಿ ಜಾಲಗಳು ಕಾನ್ಪುರ ವರ್ತುಲ ರಸ್ತೆಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿವೆ
ರಾಯ್ಪುರ್-ರಾಂಚಿ ಕಾರಿಡಾರ್ ಪೂರ್ಣಗೊಳಿಸುವ ಮೂಲಕ ಜಾರ್ಖಂಡ್ ಮತ್ತು ಛತ್ತೀಸ್ ಗಢದ ಬೆಳವಣಿಗೆಯನ್ನು ಮುಕ್ತಗೊಳಿಸಲಾಗುವುದು
ಥರಾಡ್ ಮತ್ತು ಅಹಮದಾಬಾದ್ ನಡುವಿನ ಹೊಸ ಕಾರಿಡಾರ್ ಯೋಜನೆಯು ಗುಜರಾತ್‌ನಲ್ಲಿ ಹೈಸ್ಪೀಡ್ ರಸ್ತೆ ಜಾಲವನ್ನು ಪೂರ್ಣಗೊಳಿಸಲಿದೆ, ಅಲ್ಲದೆ ತಡೆರಹಿತ ಬಂದರು ಸಂಪರ್ಕ ಮತ್ತು ಕಡಿಮೆ ಸರಕು ಸಾಗಣೆ ವೆಚ್ಚಕ್ಕೆ ಕಾರಣವಾಗುತ್ತದೆ
ಗುವಾಹಟಿ ವರ್ತುಲ ರಸ್ತೆಯು ಈಶಾನ್ಯಕ್ಕೆ ಅಡೆತಡೆಯಿಲ್ಲದ ಪ್ರವೇಶ ಸುಲಭಗೊಳಿಸಲಿದೆ
ಅಯೋಧ್ಯೆಗೆ ಹೆಚ್ಚಿನ ವೇಗದ ಪ್ರಯಾಣ ಸಾಧ್ಯಯವಾಗಲಿದೆ
ಪುಣೆ ಮತ್ತು ನಾಸಿಕ್ ನಡುವಿನ 8-ಲೇನ್ ಎತ್ತರಿಸಿದ ಫ್ಲೈಓವರ್ ಕಾರಿಡಾರ್ ಯೋಜನೆಯು ಸರಕು ಸಾಗಣೆಯ ಎಲ್ಲಾ ದುಃಸ್ವಪ್ನಗಳನ್ನು ನಿವಾರಿಸುತ್ತದೆ
Posted On:
02 AUG 2024 8:42PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 936 ಕಿಮೀ ಉದ್ದದ 8 ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್ ಯೋಜನೆಗಳ ಅಭಿವೃದ್ಧಿಗೆ ಅನುಮೋದನೆ ನೀಡಿದೆ. ದೇಶಾದ್ಯಂತ 50,655 ಕೋಟಿ ರೂ. ವೆಚ್ಚದ ಈ 8 ಯೋಜನೆಗಳ ಅನುಷ್ಠಾನದಿಂದ ಅಂದಾಜು 4.42 ಕೋಟಿ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ.
ಯೋಜನೆಗಳ ಸಂಕ್ಷಿಪ್ತ ವಿವರ:
1. 6-ಲೇನ್ ಆಗ್ರಾ - ಗ್ವಾಲಿಯರ್ ರಾಷ್ಟ್ರೀಯ ಹೈ-ಸ್ಪೀಡ್ ಕಾರಿಡಾರ್:
88-ಕಿಮೀ ಹೈಸ್ಪೀಡ್ ಕಾರಿಡಾರ್ ಅನ್ನು ನಿರ್ಮಾಣ-ಕಾರ್ಯಾಚರಣೆ-ವರ್ಗಾವಣೆ(ಬಿಲ್ಡ್-ಆಪರೇಟ್-ಟ್ರಾನ್ಸ್ ಫರ್-ಬಿಒಟಿ) ಮಾದರಿಯಲ್ಲಿ ಸಂಪೂರ್ಣ ಪ್ರವೇಶ-ನಿಯಂತ್ರಿತ 6-ಲೇನ್ ಕಾರಿಡಾರ್ ಆಗಿ ಒಟ್ಟು 4,613 ಕೋಟಿ ರೂ. ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಉತ್ತರ ದಕ್ಷಿಣ ಕಾರಿಡಾರ್‌ನ (ಶ್ರೀನಗರ - ಕನ್ಯಾಕುಮಾರಿ) ಆಗ್ರಾ - ಗ್ವಾಲಿಯರ್ ವಿಭಾಗದಲ್ಲಿ ಸಂಚಾರ ಸಾಮರ್ಥ್ಯವನ್ನು 2 ಪಟ್ಟು ಹೆಚ್ಚಿಸಲು ಅಸ್ತಿತ್ವದಲ್ಲಿರುವ 4-ಲೇನ್ ರಾಷ್ಟ್ರೀಯ ಹೆದ್ದಾರಿಗೆ ಈ ಯೋಜನೆಯು ಪೂರಕವಾಗಿದೆ. ಕಾರಿಡಾರ್ ಉತ್ತರ ಪ್ರದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ (ಉದಾಹರಣೆಗೆ ತಾಜ್ ಮಹಲ್, ಆಗ್ರಾ ಕೋಟೆ ಇತ್ಯಾದಿ) ಮತ್ತು ಮಧ್ಯಪ್ರದೇಶ (ಉದಾಹರಣೆಗೆ ಗ್ವಾಲಿಯರ್ ಕೋಟೆ ಇತ್ಯಾದಿ) ರಸ್ತೆ ಸಂಪರ್ಕ ಹೆಚ್ಚಿಸುತ್ತದೆ. ಇದು ಆಗ್ರಾ ಮತ್ತು ಗ್ವಾಲಿಯರ್ ನಡುವಿನ ಅಂತರವನ್ನು 7% ಮತ್ತು ಪ್ರಯಾಣ ಸಮಯವನ್ನು 50% ಕಡಿಮೆ ಮಾಡುತ್ತದೆ, ಇದರಿಂದಾಗಿ ಸರಕು ಸಾಗಣೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ.
6 ಲೇನ್ ಪ್ರವೇಶ-ನಿಯಂತ್ರಿತ ಆಗ್ರಾ-ಗ್ವಾಲಿಯರ್ ಗ್ರೀನ್‌ಫೀಲ್ಡ್ ಹೆದ್ದಾರಿಯು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಕಿಮೀ 0.000 (ಜಿಲ್ಲೆಯ ದೇವೋರಿ ಗ್ರಾಮದ ಹತ್ತಿರ) ಕಿಮೀ 88-400 (ಗ್ವಾಲಿಯರ್ ಜಿಲ್ಲೆಯ ಸುಸೆರಾ ಗ್ರಾಮದ ಬಳಿ) ವಿನ್ಯಾಸ ಪ್ರಾರಂಭವಾಗುತ್ತದೆ. ಎನ್ಎಚ್-44ರ ಅಸ್ತಿತ್ವದಲ್ಲಿರುವ ಆಗ್ರಾ-ಗ್ವಾಲಿಯರ್ ವಿಭಾಗದಲ್ಲಿ ಮೇಲ್ಪದರ/ಬಲಪಡಿಸುವಿಕೆ ಮತ್ತು ಇತರ ರಸ್ತೆ ಸುರಕ್ಷತೆ ಮತ್ತು ಸುಧಾರಣೆ ಕಾರ್ಯಗಳನ್ನು ಒಳಗೊಂಡಿದೆ.
2. 4-ಲೇನ್ ಖರಗ್‌ಪುರ - ಮೊರೆಗ್ರಾಮ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್:
ಖರಗ್‌ಪುರ ಮತ್ತು ಮೊರೆಗ್ರಾಮ್ ನಡುವಿನ 231 ಕಿ.ಮೀ. 4-ಲೇನ್(ಚತುಷ್ಪಥ) ಪ್ರವೇಶ-ನಿಯಂತ್ರಿತ ಹೈಸ್ಪೀಡ್ ಕಾರಿಡಾರ್ ಅನ್ನು ಹೈಬ್ರಿಡ್ ಆನ್ಯೂಟಿ ಮಾದರಿ(ಎಚ್ಎಎಂ-ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜತೆಗೆ ಎಂಜಿನಿಯರಿಂಗ್ ಒಳಗೊಂಡಿರುವ ರಸ್ತೆ ನಿರ್ಮಾಣ ಮಾದರಿ)ಯಲ್ಲಿ ಅಭಿವೃದ್ಧಿಪಡಿಸಲಾಗುವುದು, ಇದರ ಒಟ್ಟು ಬಂಡವಾಳ ವೆಚ್ಚ 10,247 ಕೋಟಿ ರೂ. ಆಗಿದೆ. ಹೊಸ ಕಾರಿಡಾರ್ ಯೋಜನೆಯು ಅಸ್ತಿತ್ವದಲ್ಲಿರುವ 2-ಲೇನ್ ರಾಷ್ಟ್ರೀಯ ಹೆದ್ದಾರಿಗೆ ಪೂರಕವಾಗಿದ್ದು, ಖರಗ್‌ಪುರ ಮತ್ತು ಮೋರೆಗ್ರಾಮ್ ನಡುವೆ ಸಂಚಾರ ಸಾಮರ್ಥ್ಯವನ್ನು ಸುಮಾರು 5 ಪಟ್ಟು ಹೆಚ್ಚಿಸುತ್ತದೆ. ಇದು ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳ ನಡುವೆ ಒಂದು ತುದಿ ಮತ್ತು ದೇಶದ ಈಶಾನ್ಯ ಭಾಗದ ಸಂಚಾರಕ್ಕೆ ಸಮರ್ಥ ಸಂಪರ್ಕ ಒದಗಿಸುತ್ತದೆ. ಈ ಕಾರಿಡಾರ್ ಯೋಜನೆಯು ಖರಗ್‌ಪುರ ಮತ್ತು ಮೊರೆಗ್ರಾಮ್ ನಡುವಿನ ಸರಕು ಸಾಗಣೆ ವಾಹನಗಳಿಗೆ ಹಾಲಿ ಇರುವ 9-10 ತಾಸುಗಳಿಂದ 3-5 ತಾಸು ಪ್ರಯಾಣ ಸಮಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಸರಕು ಸಾಗಣೆ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ.
3. 6-ಲೇನ್ ತರಡ್ - ದೀಸಾ - ಮೆಹ್ಸಾನಾ - ಅಹಮದಾಬಾದ್ ರಾಷ್ಟ್ರೀಯ ಹೈ-ಸ್ಪೀಡ್ ಕಾರಿಡಾರ್:
214-ಕಿ.ಮೀ. ಉದ್ದದ 6-ಲೇನ್ ಹೈ-ಸ್ಪೀಡ್ ಕಾರಿಡಾರ್ ನಿರ್ಮಾಣ – ನಿರ್ವಹಣೆ – ವರ್ಗಾವಣೆ(ಬಿಒಟಿ) ಮಾದರಿಯಲ್ಲಿ ಒಟ್ಟು 10,534 ಕೋಟಿ ರೂ. ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಥರಾಡ್ - ಅಹಮದಾಬಾದ್ ಕಾರಿಡಾರ್ ಗುಜರಾತ್ ರಾಜ್ಯದ 2 ಪ್ರಮುಖ ರಾಷ್ಟ್ರೀಯ ಕಾರಿಡಾರ್‌ಗಳಾದ ಅಮೃತಸರ - ಜಾಮ್‌ನಗರ ಕಾರಿಡಾರ್ ಮತ್ತು ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಪಂಜಾಬ್, ಹರಿಯಾಣ ಮತ್ತು ಕೈಗಾರಿಕಾ ಪ್ರದೇಶಗಳಿಂದ ಬರುವ ಸರಕು ಸಾಗಣೆ ವಾಹನಗಳಿಗೆ ತಡೆರಹಿತ ಸಂಪರ್ಕ ಒದಗಿಸುತ್ತದೆ. ರಾಜಸ್ಥಾನವು ಮಹಾರಾಷ್ಟ್ರದ ಪ್ರಮುಖ ಬಂದರುಗಳಿಗೆ (ಜೆಎನ್ ಪಿಟಿ, ಮುಂಬೈ ಮತ್ತು ಹೊಸದಾಗಿ ಮಂಜೂರಾದ ವಧವನ್ ಬಂದರು). ಈ ಕಾರಿಡಾರ್ ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳಿಗೆ(ಉದಾಹರಣೆಗೆ ಮೆಹ್ರಾನ್‌ಗಡ್ ಕೋಟೆ, ದಿಲ್ವಾರಾ ದೇವಸ್ಥಾನ ಇತ್ಯಾದಿ) ಮತ್ತು ಗುಜರಾತ್‌ಗೆ (ಉದಾಹರಣೆಗೆ ರಾಣಿ ಕಾ ವಾವ್, ಅಂಬಾಜಿ ದೇವಸ್ಥಾನ ಇತ್ಯಾದಿ) ಸಂಪರ್ಕ ಕಲ್ಪಿಸುತ್ತದೆ. ಇದು ಥರಾಡ್ ಮತ್ತು ಅಹಮದಾಬಾದ್ ನಡುವಿನ ಅಂತರವನ್ನು 20% ಮತ್ತು ಪ್ರಯಾಣದ ಸಮಯವನ್ನು 60% ಕಡಿಮೆ ಮಾಡುತ್ತದೆ. ಇದರಿಂದಾಗಿ ಸರಕು ಸಾಗಣೆಯ ದಕ್ಷತೆ ಸುಧಾರಿಸುತ್ತದೆ.
4. 4-ಲೇನ್ ಅಯೋಧ್ಯೆ ರಿಂಗ್ ರೋಡ್:
68 ಕಿ.ಮೀ. ಉದ್ದದ 4-ಲೇನ್ ಪ್ರವೇಶ-ನಿಯಂತ್ರಿತ ಅಯೋಧ್ಯಾ ರಿಂಗ್ ರಸ್ತೆಯನ್ನು ಹೈಬ್ರಿಡ್ ಆನ್ಯುಟಿ ಮಾದರಿ(ಎಚ್ಎಎಂ)ಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯ ಒಟ್ಟು ಬಂಡವಾಳ ವೆಚ್ಚ 3,935 ಕೋಟಿ ರೂ. ಆಗಿದೆ. ವರ್ತುಲ ರಸ್ತೆಯು ನಗರದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುತ್ತದೆ. ಅಂದರೆ, ಎನ್ಎಚ್ 27 (ಪೂರ್ವ ಪಶ್ಚಿಮ ಕಾರಿಡಾರ್), ಎನ್ಎಚ್ 227ಎ, ಎನ್ಎಚ್ 227ಬಿ, ಎನ್ಎಚ್ 330, ಎನ್ಎಚ್ 330ಎ ಮತ್ತು ಎನ್ಎಚ್ 135ಎ ಮೂಲಕ ರಾಮಮಂದಿರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ವೇಗದ ಸಂಚಾರವನ್ನು ಸಕ್ರಿಯಗೊಳಿಸುತ್ತದೆ. ವರ್ತುಲ ರಸ್ತೆಯು ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಯೋಧ್ಯಾ ವಿಮಾನ ನಿಲ್ದಾಣ ಮತ್ತು ನಗರದ ಪ್ರಮುಖ ರೈಲು ನಿಲ್ದಾಣಗಳಿಂದ ಆಗಮಿಸುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ತಡೆರಹಿತ ಸಂಪರ್ಕ ಕಲ್ಪಿಸುತ್ತದೆ.
5. ರಾಯ್‌ಪುರ-ರಾಂಚಿ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್‌ನ ಪಥಲ್‌ಗಾಂವ್ ಮತ್ತು ಗುಮ್ಲಾ ನಡುವಿನ 4-ಲೇನ್ ವಿಭಾಗ:
137 ಕಿ.ಮೀ. ಉದ್ದದ 4-ಲೇನ್ ಪ್ರವೇಶ-ನಿಯಂತ್ರಿತ ಪಥಲ್ಗಾಂವ್ - ರಾಯ್‌ಪುರ - ರಾಂಚಿ ಕಾರಿಡಾರ್‌ನ ಗುಮ್ಲಾ ವಿಭಾಗವನ್ನು ಹೈಬ್ರಿಡ್ ಆನ್ಯೂಟಿ ಮಾದರಿ(ಎಚ್ಎಎಂ)ಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯ ಸಂಪೂರ್ಣ ಕಾರಿಡಾರ್ ಪೂರ್ಣಗೊಳಿಸಲು ತಗುಲುವ ಒಟ್ಟು ಬಂಡವಾಳ ವೆಚ್ಚ 4,473 ಕೋಟಿ ರೂ. ಆಗಿದೆ. ಇದು ಗುಮ್ಲಾ, ಲೋಹರ್ದಾಗಾ, ರಾಯ್‌ಗಢ್, ಕೊರ್ಬಾ ಮತ್ತು ಧನ್‌ಬಾದ್‌ನಲ್ಲಿ ಗಣಿಗಾರಿಕೆ ಪ್ರದೇಶಗಳ ನಡುವೆ ಸಂಪರ್ಕ ಹೆಚ್ಚಿಸುತ್ತದೆ. ಜತೆಗೆ, ರಾಯ್‌ಪುರ, ದುರ್ಗ್, ಕೊರ್ಬಾ, ಬಿಲಾಸ್‌ಪುರ್, ಬೊಕಾರೊ ಮತ್ತು ಧನ್‌ಬಾದ್‌ನಲ್ಲಿರುವ ಕೈಗಾರಿಕಾ ಮತ್ತು ಉತ್ಪಾದನಾ ವಲಯಗಳ ನಡುವೆ ಸಂಪರ್ಕ ಹೆಚ್ಚಿಸುತ್ತದೆ.
ರಾಯಪುರ-ಧನ್‌ಬಾದ್ ಆರ್ಥಿಕ ಕಾರಿಡಾರ್‌ನ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ-43ರ 4-ಲೇನ್ ಪಾತಾಳಗಾಂವ್-ಕುಂಕುನ್-ಛತ್ತೀಸ್‌ಗಢ/ಜಾರ್ಖಂಡ್ ಬಾರ್ಡರ್-ಗುಮ್ಲಾ-ಭಾರ್ದಾ ವಿಭಾಗವು ತುರುವಾ ಅಮಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-130ಎರ ಕೊನೆಯ ಬಿಂದುವಿನಿಂದ ಪ್ರಾರಂಭವಾಗಿ ಭರ್ದಾ ಗ್ರಾಮದ ಬಳಿ ಪಾಲ್ಮಾ-ಗುಮ್ಲಾ ರಸ್ತೆಯ ಚೈನೇಜ್ 82+150ರಲ್ಲಿ ಕೊನೆಗೊಳ್ಳುತ್ತದೆ.
6. 6-ಲೇನ್ ಕಾನ್ಪುರ್ ವರ್ತುಲ ರಸ್ತೆ:
ಕಾನ್ಪುರ್ ವರ್ತುಲ ರಸ್ತೆಯ 47 ಕಿ.ಮೀ. 6-ಲೇನ್ ಪ್ರವೇಶ-ನಿಯಂತ್ರಿತ ವಿಭಾಗವು ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ ಮಾದರಿ(ಇಪಿಸಿ)ಯಲ್ಲಿ ಒಟ್ಟು 3,298 ಕೋಟಿ ರೂ. ಬಂಡವಾಳದಲ್ಲಿಅಭಿವೃದ್ಧಿಪಡಿಸಲಾಗುತ್ತದೆ. ಈ ವಿಭಾಗವು ಕಾನ್ಪುರದ ಸುತ್ತಲೂ 6-ಲೇನ್ ರಾಷ್ಟ್ರೀಯ ಹೆದ್ದಾರಿ ವರ್ತುಲ ರಸ್ತೆಯನ್ನು ಪೂರ್ಣಗೊಳಿಸುತ್ತದೆ. ವರ್ತುಲ ರಸ್ತೆಯು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ ಎನ್ಎಚ್ 19 - ಗೋಲ್ಡನ್ ಚತುಷ್ಪಥ, ಎನ್ಎಚ್ 27 - ಈಸ್ಟ್ ವೆಸ್ಟ್ ಕಾರಿಡಾರ್, ಎನ್ಎಚ್ 34 ಮತ್ತು ಮುಂಬರುವ ಲಕ್ನೋ - ಕಾನ್ಪುರ ಎಕ್ಸ್‌ಪ್ರೆಸ್‌ವೇ ಮತ್ತು ಗಂಗಾ ಎಕ್ಸ್ ಪ್ರೆಸ್‌ವೇಗಳಲ್ಲಿ ದೂರದ ದಟ್ಟಣೆಯನ್ನು ನಗರಕ್ಕೆ ಹೋಗುವ ಟ್ರಾಫಿಕ್‌ನಿಂದ ಪ್ರತ್ಯೇಕಿಸಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಉತ್ತರ ಪ್ರದೇಶ, ದೆಹಲಿ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ನಡುವೆ ಸರಕು ಸಾಗಣೆಯ ದಕ್ಷತೆ ಸುಧಾರಿಸುತ್ತದೆ.
6-ಲೇನ್ ಗ್ರೀನ್‌ಫೀಲ್ಡ್ ಕಾನ್ಪುರ್ ರಿಂಗ್ ರೋಡ್ ಡಿಸೈನ್ ಚೈನೇಜ್ (ಚ.) 23+325 ರಿಂದ ಪ್ರಾರಂಭವಾಗಲಿದೆ. ಚೈನೇಜ್ 68+650 (ಉದ್ದ = 46.775 ಕಿಮೀ) ಏರ್‌ಪೋರ್ಟ್ ಲಿಂಕ್ ರಸ್ತೆಯೊಂದಿಗೆ(ಉದ್ದ = 1.45 ಕಿಮೀ).
7. 4-ಲೇನ್ ಉತ್ತರ ಗುವಾಹಟಿ ಬೈಪಾಸ್ ಮತ್ತು ಅಸ್ತಿತ್ವದಲ್ಲಿರುವ ಗುವಾಹಟಿ ಬೈಪಾಸ್‌ನ ಅಗಲೀಕರಣ/ಸುಧಾರಣೆ:
121 ಕಿ.ಮೀ. ಉದ್ದದ ಗುವಾಹಟಿ ವರ್ತುಲ ರಸ್ತೆಯನ್ನು ಬಿಲ್ಡ್ ಆಪರೇಟ್ ಟೋಲ್ (ಬಿಒಟಿ) ಮಾದರಿಯಲ್ಲಿ ಒಟ್ಟು 5,729 ಕೋಟಿ ರೂ. ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. 4-ಲೇನ್ ಪ್ರವೇಶ-ನಿಯಂತ್ರಿತ ಉತ್ತರ ಗುವಾಹಟಿ ಬೈಪಾಸ್ (56 ಕಿಮೀ), ಎನ್ಎಚ್ 27ರಿಂದ 6 ಲೇನ್‌ಗಳಲ್ಲಿ (8 ಕಿಮೀ) ಅಸ್ತಿತ್ವದಲ್ಲಿರುವ 4-ಲೇನ್ ಬೈಪಾಸ್‌ನ ವಿಸ್ತರಣೆ ಮತ್ತು ಎನ್ಎಚ್ 27ರಲ್ಲಿ ಅಸ್ತಿತ್ವದಲ್ಲಿರುವ ಬೈಪಾಸ್‌ನ ಸುಧಾರಣೆ (8 ಕಿಮೀ) 3 ವಿಭಾಗಗಳಲ್ಲಿ 58 ಕಿಮೀ). ಯೋಜನೆಯ ಭಾಗವಾಗಿ ಬ್ರಹ್ಮಪುತ್ರ ನದಿಯ ಮೇಲೆ ಪ್ರಮುಖ ಸೇತುವೆ ಸಹ ನಿರ್ಮಿಸಲಾಗುವುದು. ಗುವಾಹಟಿ ರಿಂಗ್ ರೋಡ್ ರಾಷ್ಟ್ರೀಯ ಹೆದ್ದಾರಿ 27(ಪೂರ್ವ ಪಶ್ಚಿಮ ಕಾರಿಡಾರ್)ನಲ್ಲಿ ಸಂಚರಿಸುವ ದೂರದ ಸಂಚಾರಕ್ಕೆ ತಡೆರಹಿತ ಸಂಪರ್ಕ ಒದಗಿಸುತ್ತದೆ. ಇದು ದೇಶದ ಈಶಾನ್ಯ ಪ್ರದೇಶದ ಹೆಬ್ಬಾಗಿಲು. ವರ್ತುಲ ರಸ್ತೆಯು ಗುವಾಹಟಿಯ ಸುತ್ತಲಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುತ್ತದೆ. ಅಲ್ಲದೆ, ಈ ಪ್ರದೇಶದ ಪ್ರಮುಖ ನಗರಗಳು, ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಅವುಗಳೆಂದರೆ – ಸಿಲಿಗುರಿ, ಸಿಲ್ಚಾರ್, ಶಿಲ್ಲಾಂಗ್, ಜೋರ್ಹತ್, ತೇಜ್‌ಪುರ, ಜೋಗಿಗೋಫಾ ಮತ್ತು ಬಾರ್ಪೇಟಾ.
8. 8-ಲೇನ್ ಎಲಿವೇಟೆಡ್ ನಾಸಿಕ್ ಫಾಟಾ - ಪುಣೆ ಬಳಿಯ ಖೇಡ್ ಕಾರಿಡಾರ್:
30 ಕಿಮೀ ಉದ್ದದ 8-ಲೇನ್ ಎತ್ತರಿಸಿದ(ಎಲಿವೇಟೆಡ್) ನ್ಯಾಷನಲ್ ಹೈ-ಸ್ಪೀಡ್ ಕಾರಿಡಾರ್ ಅನ್ನು ನಾಸಿಕ್ ಫಾಟಾದಿಂದ ಪುಣೆ ಬಳಿಯ ಖೇಡ್‌ಗೆ ನಿರ್ಮಾಣ-ನಿರ್ವಹಣೆ-ವರ್ಗಾವಣೆ(ಬಿಒಟಿ) ಮಾದರಿಯಲ್ಲಿ ಒಟ್ಟು 7,827 ಕೋಟಿ ರೂ. ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಎತ್ತರಿಸಿದ(ಎಲಿವೇಟೆಡ್) ಕಾರಿಡಾರ್ ಪುಣೆ ಮತ್ತು ನಾಸಿಕ್ ನಡುವೆ ಎನ್ಎಚ್-60ರಲ್ಲಿ ಚಕನ್, ಭೋಸಾರಿ ಇತ್ಯಾದಿ ಕೈಗಾರಿಕಾ ಕೇಂದ್ರಗಳಿಂದ ಹುಟ್ಟುವ/ಮುಖ್ಯವಾದ ಸಂಚಾರಕ್ಕೆ ತಡೆರಹಿತ ಹೈ-ಸ್ಪೀಡ್ ಸಂಪರ್ಕ ಒದಗಿಸುತ್ತದೆ. ಕಾರಿಡಾರ್ ಪಿಂಪ್ರಿ-ಚಿಂಚ್‌ವಾಡ್ ಸುತ್ತಮುತ್ತಲಿನ ಗಂಭೀರ ಸಂಚಾರ ದಟ್ಟಣೆಯನ್ನು ಸಹ ನಿವಾರಿಸುತ್ತದೆ.
ನಾಸಿಕ್ ಫಾಟಾದಿಂದ ಖೇಡ್‌ಗೆ ಎರಡೂ ಬದಿಗಳಲ್ಲಿ 2 ಲೇನ್ ಸರ್ವಿಸ್ ರಸ್ತೆಯೊಂದಿಗೆ ಅಸ್ತಿತ್ವದಲ್ಲಿರುವ ರಸ್ತೆಯನ್ನು 4/6 ಲೇನ್‌ಗೆ ನವೀಕರಿಸುವುದು ಸೇರಿದಂತೆ ಸಿಂಗಲ್ ಪೈರ್‌ನಲ್ಲಿ ಶ್ರೇಣಿ - 1 ರಲ್ಲಿ 8-ಲೇನ್ ಎಲಿವೇಟೆಡ್ ಫ್ಲೈಓವರ್ (ಪ್ಯಾಕೇಜ್ -1: ಕಿಮೀ 12.190 ರಿಂದ ಕಿಮೀ ವರೆಗೆ 28.925 ಕಿಮೀ ವರೆಗೆ ಪೂರ್ಣಗೊಳ್ಳುತ್ತದೆ. ಪ್ಯಾಕೇಜ್ -2: ಕಿ.ಮೀ. 28.925 ರಿಂದ ಕಿ.ಮೀ. 42.113) ಮಹಾರಾಷ್ಟ್ರ ರಾಜ್ಯದಲ್ಲಿ ಎನ್ಎಚ್-60 ರ ವಿಭಾಗ.
ಹಿನ್ನೆಲೆ:
ಮೂಲಸೌಕರ್ಯ ಅಭಿವೃದ್ಧಿಯು ದೇಶದ ಆರ್ಥಿಕ ಸಮೃದ್ಧಿಗೆ ಅಡಿಪಾಯವಾಗಿದೆ. ಇದು ನಾಗರಿಕರ ಜೀವನ ಗುಣಮಟ್ಟ ಸುಧಾರಿಸಲು ನಿರ್ಣಾಯಕವಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಖರ್ಚು ಮಾಡುವ ಪ್ರತಿ ರೂಪಾಯಿಯು ಜಿಡಿಪಿ ಮೇಲೆ ಸುಮಾರು 2.5-3.0 ಪಟ್ಟು ಗುಣಕ ಪರಿಣಾಮ ಬೀರುತ್ತದೆ.
ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯಲ್ಲಿ ಮೂಲಸೌಕರ್ಯಗಳ ಪ್ರಾಮುಖ್ಯತೆ ಅರಿತುಕೊಂಡ ಭಾರತ ಸರ್ಕಾರವು ಕಳೆದ 10 ವರ್ಷಗಳಿಂದ ದೇಶದಲ್ಲಿ ವಿಶ್ವ ದರ್ಜೆಯ ರಸ್ತೆ ಮೂಲಸೌಕರ್ಯ ನಿರ್ಮಿಸಲು ಭಾರಿ ಹೂಡಿಕೆ ಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿ(ಎನ್ಎಚ್)ಗಳ ಉದ್ದವು 2013-14ರಲ್ಲಿ ಇದ್ದ 0.91 ಲಕ್ಷ ಕಿ.ಮೀ.ನಿಂದ ಪ್ರಸ್ತುತ 1.46 ಲಕ್ಷ ಕಿ.ಮೀ.ಗೆ ಅಂದರೆ 6 ಪಟ್ಟು ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ವೇಗದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಉದಾಹರಣೆಗೆ, 2004-14ರಲ್ಲಿ ಇದ್ದ ಸುಮಾರು 4,000 ಕಿ.ಮೀ.ಗಳಿಂದ 2014-24ರಲ್ಲಿ 11,000 ಕಿ.ಮೀ.ಗೆ ಹೆಚ್ಚಾಗಿದ್ದು, ಎನ್ಎಚ್ ಗುತ್ತಿಗೆ ಒಪ್ಪಂದಗಳ ಸರಾಸರಿ ವಾರ್ಷಿಕ ವೇಗ 2.75 ಪಟ್ಟು ಹೆಚ್ಚಾಗಿದೆ. ಅದೇ ರೀತಿ, ರಾಷ್ಟ್ರೀಯ ಹೆದ್ದಾರಿಗಳ ಸರಾಸರಿ ವಾರ್ಷಿಕ ನಿರ್ಮಾಣವು 2004-14 ರಲ್ಲಿ ಇದ್ದ ಸುಮಾರು 4,000 ಕಿಮೀಗಳಿಂದ 2014-24 ರಲ್ಲಿ ಸುಮಾರು 9,600 ಕಿಮೀಗೆ ಹೆಚ್ಚಿದ್ದು, ಸುಮಾರು 2.4 ಪಟ್ಟು ಹೆಚ್ಚಾಗಿದೆ. ಖಾಸಗಿ ಹೂಡಿಕೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಒಟ್ಟು ಬಂಡವಾಳ ಹೂಡಿಕೆಯು 6 ಪಟ್ಟು ಹೆಚ್ಚಾಗಿದೆ. ಅಂದರೆ 2013-14ರಲ್ಲಿ ಇದ್ದ 50.000 ಕೋಟಿ ರೂ.ನಿಂದ 2023-24ರಲ್ಲಿ 3.1 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ.
ಇದಲ್ಲದೆ, ಸ್ಥಳೀಯ ಸಂಚಾರ ದಟ್ಟಣೆಯ ವಿಸ್ತಾರವನ್ನು ಪರಿಹರಿಸುವಲ್ಲಿ ಕೇಂದ್ರೀಕರಿಸಿದ ಹಿಂದಿನ ಯೋಜನಾ-ಆಧಾರಿತ ಅಭಿವೃದ್ಧಿ ವಿಧಾನಕ್ಕೆ ಹೋಲಿಸಿದರೆ, ಸ್ಥಿರವಾದ ಮಾನದಂಡಗಳು, ಬಳಕೆದಾರರ ಅನುಕೂಲತೆ ಮತ್ತು ಸರಕು ಸಾರಣೆ ದಕ್ಷತೆ ಖಾತ್ರಿಪಡಿಸುವ ಮೇಲೆ ಗಮನ ಕೇಂದ್ರೀಕರಿಸುವ ಕಾರಿಡಾರ್ ಆಧಾರಿತ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯವಿಧಾನವನ್ನು ಸರ್ಕಾರ ಅಳವಡಿಸಿಕೊಂಡಿದೆ. ಈ ಕಾರಿಡಾರ್ ವಿಧಾನವು ಜಿಎಸ್ ಟಿಎನ್ ಮತ್ತು ಟೋಲ್ ದತ್ತಾಂಶದ ಆಧಾರದ ಮೇಲೆ ವೈಜ್ಞಾನಿಕ ಸಾರಿಗೆ ಅಧ್ಯಯನದ ಮೂಲಕ 50,000 ಕಿಮೀ ಹೈ-ಸ್ಪೀಡ್ ಹೈವೇ ಕಾರಿಡಾರ್‌ಗಳ ಜಾಲವನ್ನು ಗುರುತಿಸಲು ಕಾರಣವಾಯಿತು. ಅಲ್ಲದೆ, 2047ರ ವೇಳೆಗೆ ಭಾರತವನ್ನು 30+ ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಪರಿವರ್ತಿಸುವುದನ್ನು ಇದು ಬೆಂಬಲಿಸಲಿದೆ.
*****
(Release ID: 2041064)
Visitor Counter : 71
Read this release in:
Bengali
,
English
,
Urdu
,
Marathi
,
Hindi
,
Hindi_MP
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam