ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ಯಾರಿಸ್ ಒಲಂಪಿಕ್ಸ್ 2024 ರಲ್ಲಿ ಪುರುಷರ 50 ಮೀ ರೈಫಲ್ 3 ಪೊಸಿಷನ್‌ಗಳಲ್ಲಿ ಸ್ವಪ್ನಿಲ್ ಕುಸಾಲೆ ಅವರಿಂದ ಕಂಚಿನ ಪದಕವನ್ನು ಪ್ರಧಾನ ಮಂತ್ರಿಯವರು ಸಂಭ್ರಮಿಸಿದರು

Posted On: 01 AUG 2024 2:38PM by PIB Bengaluru

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ಸ್ಪಪ್ನಿಲ್ ಕುಸಾಲೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.  

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

“ಸ್ಪಪ್ನಿಲ್ ಕುಸಾಲೆ ಅವರಿಂದ ಅಮೋಘ ಪ್ರದರ್ಶನ! ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ನಲ್ಲಿ ಕಂಚಿನ‌ ಪದಕ ಗೆದ್ದಿರುವ ಅವರಿಗೆ ಅಭಿನಂದನೆಗಳು. 

ಅವರು ಅಪ್ರತಿಮ ಸ್ಥಿತಿಸ್ಥಾಪಕತ್ವ ಮತ್ತು ಕೌಶಲ್ಯಗಳನ್ನು ತೋರಿರುವುದರಿಂದ ಅವರ ಪ್ರದರ್ಶನ ವಿಶೇಷವಾಗಿದೆ.

ಪ್ರತಿಯೊಬ್ಬ ಭಾರತೀಯರೂ ಹರ್ಷಭರಿತರಾಗಿದ್ದಾರೆ.“ ಎಂದು ಬರೆದುಕೊಂಡಿದ್ದಾರೆ.

 

 

*****


(Release ID: 2040487) Visitor Counter : 64