ಸಂಸ್ಕೃತಿ ಸಚಿವಾಲಯ

ಐತಿಹಾಸಿಕ 46ನೇ ವಿಶ್ವ ಪರಂಪರೆ ಸಮಿತಿ ಸಭೆಗೆ ಆತಿಥ್ಯ ವಹಿಸಿದ ಭಾರತ


ಪರಂಪರೆ ಸಂರಕ್ಷಣೆಯಲ್ಲಿ ಭಾರತ ಚಾಂಪಿಯನ್: ಯುನೆಸ್ಕೋಗೆ ಜಾಗತಿಕ ಪರಂಪರೆ ಸಂರಕ್ಷಣೆಗಾಗಿ 1 ದಶಲಕ್ಷ ಡಾಲರ್ ನೆರವು

ಭಾರತದ 43 ನೇ ತಾಣವಾಗಿ ಮೊಯಿದಮ್ಸ್, ಯುನೆಸ್ಕೋ ವಿಶ್ವಪರಂಪರೆಯ ತಾಣದ ಮಾನ್ಯತೆ

“ವಿರಾಸತ್ ಪರ್ ಗರ್ವ್” : ಕಳೆದ ದಶಕದಲ್ಲಿ 13 ವಿಶ್ವ ಪರಂಪರೆಯ ತಾಣಗಳಾಗಿ ಯಶಸ್ವಿಯಾಗಿ ಮನ್ನಣೆ

Posted On: 31 JUL 2024 3:58PM by PIB Bengaluru

ವಿಶ್ವ ಪರಂಪರೆಯ ಸಂರಕ್ಷಣೆಯ ಮೌಲ್ಯಗಳ ಪರ ವಕಾಲತ್ತು ವಹಿಸಿರುವ ಭಾರತ ತನ್ನ ಪರಂಪರೆ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. “ಗಡಿ ಮೀರಿ ನಮ್ಮ ಬದ್ಧತೆ ವಿಸ್ತರಣೆಯಾಗಿದ್ದು, ಇದು ವಿವಿಧ ಸಂರಕ್ಷಣೆಯಲ್ಲಿ ಪ್ರತಿಫಲನಗೊಂಡಿದೆ ಮತ್ತು ನಮ್ಮ ನೆರೆ ಹೊರೆ ರಾಷ್ಟ್ರಗಳೊಂದಿಗೆ ಸಾಮರ್ಥ್ಯ ನಿರ್ಮಾಣದ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದರು.

46 ನೇ ವಿಶ್ವ ಪಾರಂಪರಿಕ ಸಮಿತಿ ಸಭೆ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

2024 ರ ಜುಲೈ 21 ರಿಂದ ಜುಲೈ 31 ರ ವರೆಗೆ ವಿಶ್ವ ಪರಂಪರೆ ಸಮಿತಿ ಸಭೆಗೆ ಭಾರತ ಹೆಮ್ಮೆಯಿಂದ ಆತಿಥ್ಯ ವಹಿಸಿತ್ತು. ನವದೆಹಲಿಯ ಭಾರತ್ ಮಂಟಪಂನಲ್ಲಿ ಈ ಸಭೆ ಆಯೋಜಿಸಿದ್ದು, ವಿಶ್ವ ಪರಂಪರೆ ಸಮ್ಮೇಳನ 1977 ರಿಂದ ನಡೆಯುತ್ತಿದೆ. ಬಹು ಸಮಯದಿಂದ ಇದರೊಂದಿಗೆ ಸಹಭಾಗಿತ್ವ ಹೊಂದುವ ನಮ್ಮ ಪ್ರಯತ್ನ ಸಫಲವಾಗಿದ್ದು, ನಿರ್ಣಾಯಕವಾದ ಮೈಲಿಗಲ್ಲು ಸ್ಥಾಪಿಸಿದೆ. ವಿಶ್ವ ಪರಂಪರೆ ಸಮಿತಿಯಲ್ಲಿ ಭಾರತ ನಾಲ್ಕನೇ ಬಾರಿಗೆ  ಸಕ್ರಿಯವಾಗಿ ಭಾಗವಹಿಸಿದ್ದು, ಇದು ಅಂತಾರಾಷ್ಟ್ರೀಯ ಸಹಕಾರ ಮತ್ತು ಸಾಮರ್ಥ್ಯ ನಿರ್ಮಾಣದಲ್ಲಿ ಸಮರ್ಪಣಾ ಭಾವನೆಯನ್ನು ಹೊಂದಿದೆ ಎಂದು ಒತ್ತಿ ಹೇಳಿದರು.

2024 ರ ಜುಲೈ 21 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಮುಖ ಗಣ್ಯರ ಸಮ್ಮುಖದಲ್ಲಿ 46 ನೇ ಡಬ್ಲ್ಯು.ಎಚ್.ಸಿ ಅಧಿವೇಶನವನ್ನು ಉದ್ಘಾಟಿಸಿದರು. “ವಿಕಾಸ್ ಭಿ ವಿರಾಸತ್ ಭೀ” ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಪೂರಕವಾಗಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಪ್ರಧಾನಮಂತ್ರಿಯವರು ಯುನೆಸ್ಕೋ ವಿಶ್ವ ಪರಂಪರೆ ಸಮಿತಿಗೆ 1 ದಶಲಕ್ಷ ಡಾಲರ್ ಅನುದಾನವನ್ನು ಘೋಷಿಸಿದರು. ಈ ಕೊಡುಗೆಯಿಂದ ಸಾಮರ್ಥ್ಯ ವೃದ್ಧಿ, ತಾಂತ್ರಿಕ ನೆರವು ಮತ್ತು ಸಂರಕ್ಷಣಾ ಪ್ರಯತ್ನಗಳಿಗೆ, ನಿರ್ದಿಷ್ಟವಾಗಿ ಜಾಗತಿಕ ದಕ್ಷಿಣ ಭಾಗದ ದೇಶಗಳಿಗೆ ಅನುಕೂಲವಾಗಲಿದೆ ಎಂದರು.

“ಕಳೆದ ಹತ್ತು ವರ್ಷಗಳಲ್ಲಿ ಭಾರತ ಆಧುನಿಕ ಅಭಿವೃದ್ಧಿಯಲ್ಲಿ ಹೊಸ ಆಯಾಮಕ್ಕೆ ತಲುಪಿದೆ. ಅಲ್ಲದೇ “ವಿರಾಸತ್ ಪರ್ ಗರ್ವ್” ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಲಾಗಿದೆ” ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಕಾಶಿ ವಿಶ್ವನಾಥ್ ಕಾರಿಡಾರ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಪ್ರಾಚೀನ ನಳಂದಾ ವಿಶ್ವವಿದ್ಯಾಲಯದಲ್ಲಿ ಆಧುನಿಕ ಕ್ಯಾಂಪಸ್ ನಿರ್ಮಾಣ ಮಾಡುವ ಮೂಲಕ ಪರಂಪರೆ ಸಂರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಡಿ ಕಳೆದ ಒಂದು ದಶಕದಲ್ಲಿ 13 ತಾಣಗಳು ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಯಾಗಿದ್ದು, ವಿಶ್ವ ಪರಂಪರೆ ತಾಣಗಳ ಸಾಲಿನಲ್ಲಿ ಭಾರತ 6 ನೇ ಸ್ಥಾನಕ್ಕೇರಿದೆ ಎಂದು ಹೇಳಿದರು.

46 ನೇ ಡಬ್ಲ್ಯು.ಎಚ್.ಸಿಯಲ್ಲಿ 24 ಹೊಸ ವಿಶ್ವ ಪರಂಪರೆ ತಾಣಗಳು ಸೇರಿದ್ದು, ಇದರಲ್ಲಿ 19 ಸಾಂಸ್ಕೃತಿಕ, 4 ನೈಸರ್ಗಿಕ ಮತ್ತು ಒಂದು ಮಿಶ್ರ ತಾಣವಾಗಿದೆ. ಅಸ್ಸಾಂನ ಮೊಯಿದಮ್ಸ್ 43 ನೇ ವಿಶ್ವ ಪರಂಪರೆ ತಾಣವಾಗಿದೆ. ಅಸ್ಸಾಂನ ಮೊದಲ ಪರಂಪರೆ ತಾಣಕ್ಕೆ ಇಂತಹ ಮಹತ್ವದ ಮನ್ನಣೆ ದೊರೆತಿದೆ. ಚರೈಡಿಯೋ ಜಿಲ್ಲೆಯಲ್ಲಿ ಮೊಯಿದಮ್ಸ್ ಗಳು ಅಹೋಮ್ ರಾಜವಂಶದ ಪವಿತ್ರ ಸಮಾಧಿ ದಿಬ್ಬಗಳಾಗಿವೆ. ಇದು ಆರು ಶತಮಾನಗಳ ಸಾಂಸ್ಕೃತಿಕ ಮತ್ತು ವಾಸ್ತು ಶಿಲ್ಪದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.

ಮೊಯಿದಮ್ಸ್ ಕುರಿತು ಹೆಚ್ಚಿನ ಮಾಹಿತಿ:

  1. Charaideo Moidams: India’s 43rd UNESCO World Heritage Site
  2. Moidams – The Mound-Burial System of Ahom Dynasty Inscribed in the UNESCO World Heritage List as India’s 43rd Entry

ಈ ಸಂದರ್ಭದಲ್ಲಿ ಭಾರತ – ಅಮೆರಿಕ ನಡುವೆ ಸಾಂಸ್ಕೃತಿಕ ಆಸ್ತಿ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು. ಇದರಿಂದ ಅಕ್ರಮವಾಗಿ ಸಾಂಸ್ಕೃತಿಕ ಆಸ್ತಿಯ ವ್ಯಾಪಾರ ಮಾಡುವುದನ್ನು ಈ ಒಡಂಬಡಿಕೆ ನಿಯಂತ್ರಿಸುತ್ತದೆ. ಭಾರತೀಯ ಪುರಾತತ್ವ ಇಲಾಖೆ [ಎಎಸ್ಐ] ಐಸಿಸಿಆರ್ ಒಎಂನೊಂದಿಗೆ ಸಾಮರ್ಥ್ಯ ನಿರ್ಮಾಣ ಮತ್ತು ಸ್ಪಷ್ಟವಾದ ಪರಂಪರೆಯ ಪರಿಶೋಧನೆಗಾಗಿ ಒಪ್ಪಂದ ಮಾಡಿಕೊಂಡಿದೆ. 46 ನೇ ಡಬ್ಲ್ಯು.ಎಚ್.ಸಿ ಅಧಿವೇಶನದಲ್ಲಿ ಯಂಗ್ ಹೆರಿಟೇಜ್ ಫ್ರೊಫೆಷನಲ್ಸ್ ಫೋರಂ  ಮತ್ತು ಸೈಟ್ ಮ್ಯಾನೇಜರ್ಸ್ ಫೋರಂ ಗಳನ್ನು ಸ್ಥಾಪಿಸುವ ಮೂಲಕ ಪರಂಪರೆ ಸಂರಕ್ಷಣೆಯಲ್ಲಿ ಜಾಗತಿಕ ಪರಿಣಿತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಜೊತೆಗೆ ಇತರೆ 33 ಸಭೆಗಳನ್ನು ಸಹ ಆಯೋಜಿಸಲಾಗಿದೆ.

ವಾಪಸ್ ತಂದ 25 ಐತಿಹಾಸಿಕ ವಸ್ತುಗಳನ್ನು 46 ನೇ ಡಬ್ಲ್ಯುಎಚ್‌ಸಿ ಸಭೆಯಲ್ಲಿ ಪ್ರದರ್ಶಿಸಲಾಗಿದ್ದು, ಈ ಕುರಿತು ಕೇಂದ್ರ ಸಚಿವರು ಗಮನಾರ್ಹ ಪ್ರದರ್ಶನದ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದರು. ಅದರ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಭಾರತದ ಸಮರ್ಪಣೆಯನ್ನು ಉಲ್ಲೇಖಿಸಿದರು.

ಜಾಗತಿಕ ಪರಂಪರೆ ಸಂರಕ್ಷಣೆಯಲ್ಲಿ ಭಾರತದ ಕೊಡುಗೆ ಕುರಿತು ಶ್ರೀ ಶೇಖಾವತ್ ಅವರು ಅಂಗೋರ್ ವಾಟ್, ಕಾಂಬೋಡಿಯಾ, ವಿಯೆಟ್ನಾಂನ ಚಾಮ್ ದೇವಾಲಯಗಳು ಮತ್ತು ಮ್ಯಾನ್ಮಾರ್‌ನ ಬಗಾನ್‌ನಲ್ಲಿರುವ ಸ್ತೂಪಗಳಲ್ಲಿ ಭಾರತದ ಪರಂಪರೆ ಸಂರಕ್ಷಣಾ ಪ್ರಯತ್ನಗಳಿವೆ ಎಂದು ಹೇಳಿದರು. ಭಾರತ 43ನೇ ವಿಶ್ವ ಪರಂಪರೆ ತಾಣಗಳನ್ನು ಹೊಂದಿದ್ದು, ಇದರ ಜೊತೆಗೆ ಮೊಯಿದಮ್ಸ್ ಸಹ ಸೇರಿದೆ. ಭಾರತ ಪರಂಪರೆ ಸಂರಕ್ಷಣೆಯಲ್ಲಿ ನಿರಂತರವಾಗಿ ಜಾಗತಿಕ ನಾಯಕನಾಗಿ ಹೊರ ಹೊಮ್ಮಿದೆ. 56 ಆಸ್ತಿಗಳ ವ್ಯಾಪಕವಾದ ತಾತ್ಕಾಲಿಕ ಪಟ್ಟಿಯು ಭಾರತದ ಸಾಂಸ್ಕೃತಿಕ ವರ್ಣಪಟಲದ ಸಮಗ್ರ ಪ್ರಾತಿನಿಧ್ಯವನ್ನು ಖಾತ್ರಿಗೊಳಿಸುತ್ತದೆ ಎಂದು ಅವರು ಹೇಳಿದರು.

ಸಂಸ್ಕೃತಿಯ ಜಾಗತಿಕ ಪ್ರಾಮುಖ್ಯತೆಯನ್ನು ಹೆಚ್ಚಿಸಲು ಭಾರತದ ವಿಶಿಷ್ಟ ಕೊಡುಗೆಯನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, ಭಾರತದ ಜಿ20 ಅಧ್ಯಕ್ಷತೆಯಲ್ಲಿ, ನವದೆಹಲಿ ನಾಯಕರ ಘೋಷಣೆ 2023 (ಎನ್.ಡಿ.ಎಲ್.ಡಿ)ಯಡಿ ಸಂಸ್ಕೃತಿಯನ್ನು 2030 ರ ನಂತರದ ಅಭಿವೃದ್ಧಿ ಚೌಕಟ್ಟಿನಲ್ಲಿ ಸ್ವತಂತ್ರ ಗುರಿಯಾಗಿ ರೂಪಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ಇದು ಜಾಗತಿಕ ಅಭಿವೃದ್ಧಿ ಕಾರ್ಯತಂತ್ರದಲ್ಲಿ ಮಾದರಿ ಬದಲಾವಣೆಯನ್ನು ಗುರುತಿಸುತ್ತದೆ. ಈ ಮೈಲಿಗಲ್ಲಿನ ತೀರ್ಮಾನದಿಂದಾಗಿ ಸಾಂಸ್ಕೃತಿಕ ವಲಯದಲ್ಲಿ ಪರಿವರ್ತನೆ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ, ಸಣ್ಣ ಸಮುದಾಯಗಳಿಗೆ ಬೆಂಬಲ ನೀಡುವ ಮತ್ತು ದುರ್ಬಲ ತಾಣಗಳನ್ನು ರಕ್ಷಿಸುವ ಗುರಿ ಹೊಂದಲಾಗಿದೆ. ಕಾಶಿ ಸಂಸ್ಕೃತಿಯ ಮಾರ್ಗ ಮತ್ತು ಎನ್.ಡಿ.ಎಲ್.ಡಿ 2023, ಸಂಸ್ಕೃತಿಯ ಗುರಿಯು ಬಲವಾದ ಅಭಿವ್ಯಕ್ತಿಯೊಂದಿಗೆ ವಿಶ್ವದ ಮೊದಲ ಮತ್ತು ಏಕೈಕ ದಾಖಲೆಯಾಗಿದೆ, ಇದು ದೃಢವಾದ ನೀಲನಕ್ಷೆಗಳು, ಜಾಗತಿಕ ಸಂಸ್ಕೃತಿ ವಲಯದ ಪ್ರವಚನವನ್ನು ಮುನ್ನಡೆಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು.

ಸಂರಕ್ಷಣೆ, ಅಂತಾರಾಷ್ಟ್ರೀಯ ನೆರವು ಮತ್ತು ವಿವಿಧ ದೇಶಗಳು ಹಾಗೂ ಸಂಘಟನೆಗಳೊಂದಿಗೆ  ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಮೂಲಕ 46 ನೇ ವಿಶ್ವ ಪರಂಪರೆ ಸಮಿತಿ ಸಭೆ ಸಂಪನ್ನಗೊಂಡಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾರತದ ಶ್ರೀಮಂತ ಪರಂಪರೆ ಮತ್ತು ಭವಿಷ್ಯದ ಜಾಗತಿಕ ಸಂರಕ್ಷಣೆಯ ಪ್ರಯತ್ನಗಳ ಗುರಿಯನ್ನು ನಿಗದಿಪಡಿಸಿದೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

 

 

*****

 

 



(Release ID: 2039758) Visitor Counter : 36