ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿ 2020ರ 4ನೇ ವಾರ್ಷಿಕೋತ್ಸವವನ್ನು "ಶಿಕ್ಷಾ ಸಪ್ತಾಹ" ಎಂಬ ವಾರದ ಅವಧಿಯ ಅಭಿಯಾನದೊಂದಿಗೆ ಆಚರಿಸುತ್ತಿದೆ


ಶಿಕ್ಷಾ ಸಪ್ತಾಹ”ದ 7ನೇ ದಿನದಂದು ರಾಷ್ಟ್ರಾದ್ಯಂತ ಶಾಲೆಗಳಲ್ಲಿ “ವಿದ್ಯಾಂಜಲಿ ಮತ್ತು ತಿಥಿ ಭೋಜನ" ಕಾರ್ಯಕ್ರಮ ನಡೆಯಲಿವೆ

Posted On: 28 JUL 2024 10:37AM by PIB Bengaluru

ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿ 2020 ರ 4 ನೇ ವಾರ್ಷಿಕೋತ್ಸವದ ಅಂಗವಾಗಿ ಏಳು ದಿನಗಳ 'ಶಿಕ್ಷಾ ಸಪ್ತಾಹ' ಆಚರಿಸುತ್ತಿದೆ. ಶಿಕ್ಷಾ ಸಪ್ತಾಹದ ಕೊನೆಯ ದಿನದಂದು, ದೇಶಾದ್ಯಂತ ಶಾಲೆಗಳು 'ವಿದ್ಯಾಂಜಲಿ ಮತ್ತು ತಿಥಿ ಭೋಜನ' ಕಾರ್ಯಕ್ರಮಗಳ ಮೂಲಕ ಶಿಕ್ಷಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಿವೆ.‌

Image

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಡೆಸುವ ಶಾಲಾ ಸ್ವಯಂಸೇವಕ ನಿರ್ವಹಣಾ ಕಾರ್ಯಕ್ರಮವಾದ ವಿದ್ಯಾಂಜಲಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 7, 2021 ರಂದು ಪ್ರಾರಂಭಿಸಿದರು. ಸಮುದಾಯಗಳು,, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR), ಮತ್ತು ಖಾಸಗಿ ವಲಯದ ಪಾಲ್ಗೊಳ್ಳುವಿಕೆಯ ಮೂಲಕ ದೇಶಾದ್ಯಂತ ಶಾಲೆಗಳನ್ನು ಬಲಪಡಿಸುವ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

ಶಿಕ್ಷಾ ಸಪ್ತಾಹ ಅಭಿಯಾನದ ಭಾಗವಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಾಲೆಗಳು ಕೈಗೊಳ್ಳಬೇಕಾದ ಚಟುವಟಿಕೆಗಳ ಪಟ್ಟಿಯನ್ನು ಒದಗಿಸಿದೆ. ಶಾಲೆಗಳು ವಿದ್ಯಾಂಜಲಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದರ ಜೊತೆಗೆ ತಮಗೆ ಸಹಾಯ ಮಾಡುವ ಸ್ಥಳೀಯ ಸ್ವಯಂ ಸೇವಕರನ್ನು ಗುರುತಿಸುವುದರತ್ತ ಗಮನ ಹರಿಸಿವೆ. ತಮಗೆ ಸಕ್ರಿಯವಾಗಿ ಸಹಾಯ ಮಾಡುವ ಸ್ವಯಂಸೇವಕರ ಹೆಸರನ್ನು ಈ ಶಾಲೆಗಳು ತಮ್ಮ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಿಸುತ್ತವೆ. ಇದರ ಜೊತೆಗೆ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಸ್ವಯಂಸೇವಕರಿಗೆ ಕೃತಜ್ಞತೆ ಸೂಚಿಸಿ ಪತ್ರಗಳನ್ನು ಸಹ ಬರೆಯುತ್ತಾರೆ.

ಸ್ವಯಂಸೇವಕ ಚಟುವಟಿಕೆಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಜಾಥಾಗಳು, ಬೀದಿ ನಾಟಕಗಳು, ಪೋಸ್ಟರ್ ತಯಾರಿಕೆ ಮತ್ತು ಚಾರ್ಟ್ ತಯಾರಿಕೆಯಂತಹ ಚಟುವಟಿಕೆಗಳನ್ನು ಸಹ ಶಾಲೆಗಳು ಆಯೋಜಿಸಬೇಕು. ಈ ಅಭಿಯಾನದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಶಿಕ್ಷಣದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಗುರಿಯೊಂದಿಗೆ ಈ ಪ್ರಯತ್ನಗಳು ಹೊಂದಿಕೆಯಾಗುತ್ತವೆ.

ವಿದ್ಯಾಂಜಲಿ ಪೋರ್ಟಲ್ ಮೂಲಕ ಶಾಲೆಗಳು, ಸ್ವಯಂಸೇವಕರು ಮತ್ತು ಸಮುದಾಯವನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬೆಂಬಲ ನೀಡುವ ಹಾಗೂ ಉತ್ತಮ ಕಲಿಕೆಯ ವಾತಾವರಣವನ್ನು ಸೃಷ್ಟಿಸುವುದು ಈ ಕಾರ್ಯಗಳ ಗುರಿಯಾಗಿದೆ. (https://vidyanjali.education.gov.in/)

 

*****


(Release ID: 2038175) Visitor Counter : 125