ಪ್ರಧಾನ ಮಂತ್ರಿಯವರ ಕಛೇರಿ
ಲುಕ್ಸೆಂಬರ್ಗ್ ಪ್ರಧಾನಮಂತ್ರಿ ಅವರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನಾ ಕರೆ
ಉಭಯ ನಾಯಕರಿಂದ ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಬದ್ಧತೆಯ ಪುನರುಚ್ಚಾರ
ಉಕ್ರೇನ್ ಸಂಘರ್ಷ ಶೀಘ್ರ ಕೊನೆಯಾಗಿಸುವಲ್ಲಿ ಭಾರತದ ಪಾತ್ರಕ್ಕೆ ಪ್ರಧಾನಮಂತ್ರಿ ಫ್ರೀಡೆನ್ ಮೆಚ್ಚುಗೆ
ಪ್ರಧಾನಮಂತ್ರಿ ಫ್ರೀಡೆನ್ ಮತ್ತು ಮುಖ್ಯಸ್ಥ ಗ್ರಾಂಡ್ ಡ್ಯೂಕ್ ಹೆನ್ರಿ ಅವರುಗಳಿಗೆ ಪ್ರಧಾನಮಂತ್ರಿಗಳಿಂದ ಭಾರತಕ್ಕೆ ಆಹ್ವಾನ
Posted On:
22 JUL 2024 10:04PM by PIB Bengaluru
ಲುಕ್ಸೆಂಬರ್ಗ್ ನ ಗ್ರಾಂಡ್ ಡಚಿಯ ಪ್ರಧಾನಮಂತ್ರಿ ಶ್ರೀ ಲುಕ್ ಫ್ರೀಡೆನ್ ಅವರು ಸತತ ಮೂರನೇ ಬಾರಿಗೆ ಚುನಾಯಿತರಾಗಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಗಳು ಪ್ರಧಾನಿ ಫ್ರೀಡೆನ್ ಅವರಿಗೆ ಧನ್ಯವಾದ ತಿಳಿಸಿ, ಉಭಯ ದೇಶಗಳ ನಡುವಿನ ಬಹು ಆಯಾಮದ ಸಹಕಾರಕ್ಕೆ ಇನ್ನಷ್ಟು ಚೈತನ್ಯ ಮತ್ತು ಚುರುಕು ನೀಡುವ ಆಶಯ ವ್ಯಕ್ತಪಡಿಸಿದರು.
ವ್ಯಾಪಾರ, ಹೂಡಿಕೆ, ಸುಸ್ಥಿರ ಹಣಕಾಸು, ಕೈಗಾರಿಕಾ ಉತ್ಪಾದನೆ, ಆರೋಗ್ಯ, ಬಾಹ್ಯಾಕಾಶ ಮತ್ತು ಜನರ ನಡುವಿನ ಸಂಪರ್ಕ ಸೇರಿದಂತೆ ವಿವಿಧ ವಲಯಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕೆ ಬಲವರ್ಧನೆಗೆ ಶ್ರಮಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಉಕ್ರೇನ್ ಸಂಘರ್ಷ ಸೇರಿದಂತೆ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಎರಡೂ ದೇಶಗಳ ನಾಯಕರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು. ಉಕ್ರೇನ್ ಸಂರ್ಘವನ್ನು ಶೀಘ್ರವಾಗಿ ಕೊನೆಗಾಣಿಸಲು ಹಾಗೂ ಅಲ್ಲಿ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗೆ ಭಾರತದ ಪಾತ್ರಕ್ಕೆ ಪ್ರಧಾನಿ ಫ್ರೀಡೆನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ಫ್ರೀಡೆನ್ ಮತ್ತು ಮುಖ್ಯಸ್ಥ ಗ್ರಾಂಡ್ ಡ್ಯೂಕೆ ಹೆನ್ರಿ ಅವರುಗಳು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಆಹ್ವಾನಿಸಿದರು.
ಉಭಯ ನಾಯಕರು ಪರಸ್ಪರ ಸಂಪರ್ಕದಲ್ಲಿರಲು ಸಮ್ಮತಿಸಿದರು.
*****
(Release ID: 2037367)
Visitor Counter : 31
Read this release in:
Urdu
,
English
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam