ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಐಜ್ವಾಲ್‌ ನ ಐಐಎಂಸಿಯಲ್ಲಿ ಭಾರತದ 500ನೇ ಸಮುದಾಯ ರೇಡಿಯೋ ಕೇಂದ್ರ - ಅಪ್ನಾ ರೇಡಿಯೋ 90.0 ಎಫ್‌ ಎಂ ಅನ್ನು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರು ಉದ್ಘಾಟಿಸಿದರು


10 ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಪ್ರಶಸ್ತಿಗಳ ವಿಜೇತರನ್ನು ಶ್ರೀ ವೈಷ್ಣವ್ ಅವರು ಪ್ರಕಟಿಸಿದರು

ಐಐಎಂಸಿಯ ಅಪ್ನಾ ರೇಡಿಯೋ ಕೇಂದ್ರ  ಭಾರತದ ʼಆಕ್ಟ್ ಈಸ್ಟ್ ಪಾಲಿಸಿʼ ಯಲ್ಲಿ ಮಹತ್ವದ ಮೈಲಿಗಲ್ಲು: ಶ್ರೀ ವೈಷ್ಣವ್

Posted On: 25 JUL 2024 1:03PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು 10 ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಪ್ರಶಸ್ತಿಗಳ ವಿಜೇತರನ್ನು ಪ್ರಕಟಿಸಿದರು. ಸಚಿವರು ಭಾರತದ 500ನೇ ಸಮುದಾಯ ರೇಡಿಯೋ ಕೇಂದ್ರವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ರವರು ಮತ್ತು ಮಿಜೋರಾಂ ಮುಖ್ಯಮಂತ್ರಿ ಶ್ರೀ ಲಾಲ್ದುಹೋಮ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು. ‘ಅಪ್ನಾ ರೇಡಿಯೊ 90.0 ಎಫ್‌ ಎಂ’ಕೇಂದ್ರವು ಐಜ್ವಾಲ್‌ ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್‌ ನಿಂದ ನಡೆಸಲ್ಪಡುತ್ತದೆ. 

ಭಾರತದ ಸಮುದಾಯ ರೇಡಿಯೋ ಪ್ರಯಾಣದಲ್ಲಿ ಈ ಮೈಲಿಗಲ್ಲನ್ನು ಪ್ರಕಟಿಸಿದ ಶ್ರೀ ವೈಷ್ಣವ್, ಈ ಉಪಕ್ರಮವು ಅಪ್ನಾ ರೇಡಿಯೊ ಕೇಂದ್ರದ ವ್ಯಾಪ್ತಿಯ ಜನರ ಜೀವನದಲ್ಲಿ ಗಣನೀಯ ಬದಲಾವಣೆಯನ್ನು ತರುತ್ತದೆ ಎಂದು ಹೇಳಿದರು. ಈ ರೇಡಿಯೊ ಕೇಂದ್ರದ ಆರಂಭವು ಸರ್ಕಾರದ  ʼಆಕ್ಟ್ ಈಸ್ಟ್ ಪಾಲಿಸಿʼ ಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಅವರು ಹೇಳಿದರು.

ರೈಲ್ವೆ ಬಜೆಟ್ ಅಡಿಯಲ್ಲಿ ಕೇಂದ್ರ ಬಜೆಟ್ ಈಶಾನ್ಯ ಪ್ರದೇಶಕ್ಕೆ ದಾಖಲೆಯ ಅನುದಾನ ಹಂಚಿಕೆ ಮಾಡಿದೆ ಎಂದು ಮಿಜೋರಾಂ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ ಸಚಿವರು, ಇದು ಮಿಜೋರಾಂಗೆ ಉತ್ತಮ ರೈಲು ಸಂಪರ್ಕವನ್ನು ಪಡೆಯುವ ಬಹುಕಾಲದ ಕನಸಿಗೆ ಪುಷ್ಟಿ ನೀಡಲಿದೆ ಎಂದು ಹೇಳಿದರು. 

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಶ್ರೀ ಲಾಲ್ದುಹೋಮ ಅವರು, ಐಐಎಂಸಿ ಐಜ್ವಾಲ್‌ ನಲ್ಲಿರುವ ಅಪ್ನಾ ರೇಡಿಯೋ ಕೇಂದ್ರವು ರಾಜ್ಯದ ಸಂವಹನ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ಹೇಳಿದರು. ಮಿಜೋರಾಂ ತನ್ನ ಗಮನಾರ್ಹ ಕೃಷಿ ಸಾಮರ್ಥ್ಯದಿಂದಾಗಿ ಪ್ರಾಥಮಿಕವಾಗಿ ಕೃಷಿ ರಾಜ್ಯವಾಗಿದೆ. ರೈತ ಸಮುದಾಯಕ್ಕಾಗಿ ಸಮುದಾಯ ರೇಡಿಯೊ ಕೇಂದ್ರವನ್ನು ಸ್ಥಾಪಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ, ಅವರಿಗೆ ದೈನಂದಿನ ಹವಾಮಾನ ವರದಿಗಳು, ಸರ್ಕಾರದ ಯೋಜನೆಗಳು ಮತ್ತು ಕೃಷಿ ಸಂಬಂಧಿತ ಮಾಹಿತಿಯನ್ನು ಇದು ಒದಗಿಸುತ್ತದೆ. ಈ ಯೋಜನೆಯನ್ನು ನನಸು ಮಾಡುವಲ್ಲಿ ಅಚಲವಾದ ಬೆಂಬಲ ಮತ್ತು ಬದ್ಧತೆ ತೋರಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಇತರ ಎಲ್ಲ ಭಾಗೀದಾರರನ್ನು ಅವರು ಶ್ಲಾಘಿಸಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಮಾತನಾಡಿ, ಖಾಸಗಿ ರೇಡಿಯೊ ಕೇಂದ್ರಗಳ ವಾಣಿಜ್ಯ ಸ್ವರೂಪಕ್ಕೆ ವಿರುದ್ಧವಾಗಿ ಇಂತಹ ಕೇಂದ್ರಗಳಿಂದ ಆಗುವ ಸಾಮಾಜಿಕ ಪ್ರಯೋಜನಗಳನ್ನು ವಿವರಿಸಿದರು. ಕೊನೆಯ ಮೈಲಿ ಮಾಹಿತಿ ಸಂವಹನದ ಬದ್ಧತೆಯಿಂದ ಸಮುದಾಯ ರೇಡಿಯೊ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ನೈಸರ್ಗಿಕ ವಿಕೋಪದ ಸಮಯದಲ್ಲಿ ಈ ಕೇಂದ್ರಗಳ ಪಾತ್ರವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ರವರು ಮಾತನಾಡಿ, ಸಮುದಾಯ ರೇಡಿಯೋ ಕೇಂದ್ರಗಳು ಕೃಷಿ ಸಂಬಂಧಿತ ಮಾಹಿತಿ, ರೈತರ ಕಲ್ಯಾಣಕ್ಕಾಗಿ ಸರ್ಕಾರದ ಯೋಜನೆಗಳು, ಹವಾಮಾನ ಮಾಹಿತಿ ಇತ್ಯಾದಿಗಳನ್ನು ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪರ್ಯಾಯ ಧ್ವನಿಗಳಿಗೆ ವಿಶಿಷ್ಟ ವೇದಿಕೆಯನ್ನು ನೀಡುತ್ತವೆ ಮತ್ತು ವಿಷಯವನ್ನು ಸ್ಥಳೀಯ ಉಪಭಾಷೆಗಳು ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಬಿತ್ತರಿಸುತ್ತವೆ ಎಂದರು. ಮುಖ್ಯವಾಹಿನಿಯ ಮಾಧ್ಯಮಗಳಿಗೆ ಪ್ರವೇಶವನ್ನು ಹೊಂದಿರದ ಸಮಾಜದ ಬಡ ಮತ್ತು ವಂಚಿತ ವರ್ಗಕ್ಕೆ ಈ ಸಮುದಾಯ ರೇಡಿಯೋಗಳು ವಿಶೇಷವಾಗಿ ಮುಖ್ಯವಾಗಿವೆ ಎಂದು ಅವರು ಹೇಳಿದರು.

ದೇಶಾದ್ಯಂತ ಸಮುದಾಯ ರೇಡಿಯೋ ಕೇಂದ್ರಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಸಚಿವಾಲಯವು ಬದ್ಧವಾಗಿದೆ ಎಂದು ಅವರು ಹೇಳಿದರು.

ಐಐಎಂಸಿಯ ಉಪಕುಲಪತಿ ಡಾ.ಅನುಪಮಾ ಭಟ್ನಾಗರ್ ಮಾತನಾಡಿ, 'ಅಪ್ನಾ ರೇಡಿಯೊ 90.0 ಎಫ್‌ ಎಂ' ಉದ್ಘಾಟನೆಯು ಮಿಜೋರಾಂ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿದೆ, ಇದು ಸಂವಾದದ ಮೂಲಕ ಸಮುದಾಯಗಳನ್ನು ಒಟ್ಟುಗೂಡಿಸುತ್ತದೆ, ಸ್ಥಳೀಯ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ, ನಾಗರಿಕರನ್ನು ಪ್ರೋತ್ಸಾಹಿಸುತ್ತದೆ ಮತ್ತು ಸಬಲೀಕರಣಗೊಳಿಸುತ್ತದೆ ಎಂದು ಹೇಳಿದರು.

10 ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಪ್ರಶಸ್ತಿಗಳ ವಿಜೇತರು

ವರ್ಗ: ವಿಷಯಾಧಾರಿತ ಪ್ರಶಸ್ತಿ

•    ಪ್ರಥಮ ಬಹುಮಾನ: ರೇಡಿಯೋ ಮಯೂರ್, ಜಿಲ್ಲಾ ಸರನ್, ಬಿಹಾರ. ಕಾರ್ಯಕ್ರಮ: ಟೆಕ್ ಸಖಿ
•    ದ್ವಿತೀಯ ಬಹುಮಾನ: ರೇಡಿಯೋ ಕೊಚ್ಚಿ, ಕೇರಳ. ಕಾರ್ಯಕ್ರಮ: ನಿರಂಗಲ್
•    ಮೂರನೇ ಬಹುಮಾನ: ಹಲೋ ಡೂನ್, ಡೆಹ್ರಾಡೂನ್, ಉತ್ತರಾಖಂಡ್. ಕಾರ್ಯಕ್ರಮ: ಮೇರಿ ಬಾತ್

ವರ್ಗ: ಅತ್ಯಂತ ನವೀನ ಸಮುದಾಯ ಭಾಗವಹಿಸುವಿಕೆಯ ಪ್ರಶಸ್ತಿ

•    ಪ್ರಥಮ ಬಹುಮಾನ: ಎರ್ಲವಾನಿ ಸಾಂಗ್ಲಿ, ಮಹಾರಾಷ್ಟ್ರ. ಕಾರ್ಯಕ್ರಮ: ಕಹಾನಿ ಸುನಂದಾಚಿ
•    ಎರಡನೇ ಬಹುಮಾನ: ವೈಲಗಾ ವನೋಲಿ, ಮಧುರೈ, ತಮಿಳುನಾಡು. ಕಾರ್ಯಕ್ರಮ: ಹೊಸ ರೂಢಿಯನ್ನು ನಿರ್ಮಿಸೋಣ
•    ತೃತೀಯ ಬಹುಮಾನ: ಸಲಾಂ ನಮಸ್ತೆ ನೋಯ್ಡಾ, ಉತ್ತರ ಪ್ರದೇಶ. ಕಾರ್ಯಕ್ರಮ: ಮೈದ್ ದೀದಿ

ವರ್ಗ: ಸ್ಥಳೀಯ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಶಸ್ತಿ

•    ಮೊದಲ ಬಹುಮಾನ: ರೇಡಿಯೋ ಬ್ರಹ್ಮಪುತ್ರ, ದಿಬ್ರುಗಢ, ಅಸ್ಸಾಂ. ಕಾರ್ಯಕ್ರಮ ಇಗರೆಕುನ್
•    ಎರಡನೇ ಬಹುಮಾನ: ರೇಡಿಯೋ ಕೋಟಗಿರಿ, ನೀಲಗಿರಿ, ತಮಿಳುನಾಡು. ಕಾರ್ಯಕ್ರಮ: ಎನ್ ಮಕ್ಕಳೂದನ್ ಒರು ಪಯಣಂ
•    ಮೂರನೇ ಬಹುಮಾನ: ರೇಡಿಯೋ ಆಕ್ಟಿವ್, ಭಾಗಲ್ಪುರ್, ಬಿಹಾರ. ಕಾರ್ಯಕ್ರಮ: ಆಂಗ್ ಪ್ರದೇಶ್ ಕಿ ಅದ್ಬುತ್ ಧರೋಹರ್

ವರ್ಗ: ಸುಸ್ಥಿರತೆಯ ಮಾದರಿ ಪ್ರಶಸ್ತಿ
•    ಪ್ರಥಮ ಬಹುಮಾನ: ಕೇರಳದ ಕೊಲ್ಲಂನ ಬಿಷಪ್ ಬೆಂಜಿಗರ್ ಆಸ್ಪತ್ರೆ ಸೊಸೈಟಿ ನಡೆಸುತ್ತಿರುವ ರೇಡಿಯೋ ಬೆಂಜಿಗರ್
•    ಎರಡನೇ ಬಹುಮಾನ: ಯಂಗ್ ಇಂಡಿಯಾ ನಡೆಸುತ್ತಿರುವ ರೇಡಿಯೋ ನಮಸ್ಕಾರ್, ಕೊನಾರ್ಕ್, ಒಡಿಶಾ
•    ತೃತೀಯ ಬಹುಮಾನ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ರೇಡಿಯೋ ಅಂತರವಾಣಿ, ಗುಲ್ಬರ್ಗ, ಕರ್ನಾಟಕ

ಸಮುದಾಯ ರೇಡಿಯೊ ಕೇಂದ್ರಗಳಲ್ಲಿ (ಸಿ ಆರ್‌ ಎಸ್) ನಾವೀನ್ಯತೆ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲು ಸಚಿವಾಲಯವು 2011-12ನೇ ವರ್ಷದಲ್ಲಿ ರಾಷ್ಟ್ರೀಯ ಸಮುದಾಯ ರೇಡಿಯೊ ಪ್ರಶಸ್ತಿಗಳನ್ನು ಸ್ಥಾಪಿಸಿತು.

ರಾಷ್ಟ್ರೀಯ ಸಮುದಾಯ ರೇಡಿಯೋ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ನೀಡಲಾಗುತ್ತದೆ. ಈ ಸರಣಿಯಲ್ಲಿ, ಸಚಿವಾಲಯವು ಈ ಕೆಳಗಿನ 4 ವರ್ಗಗಳಲ್ಲಿ 10 ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಪ್ರಶಸ್ತಿಗಳ ವಿಜೇತರನ್ನು ಇಂದು ಪ್ರಕಟಿಸಿತು.

1. ವಿಷಯಾಧಾರಿತ ಪ್ರಶಸ್ತಿ

2. ಅತ್ಯಂತ ನವೀನ ಸಮುದಾಯ ಭಾಗವಹಿಸುವಿಕೆಯ ಪ್ರಶಸ್ತಿ

3. ಸ್ಥಳೀಯ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಶಸ್ತಿ

4. ಸುಸ್ಥಿರತೆಯ ಮಾದರಿ ಪ್ರಶಸ್ತಿ

ಪ್ರತಿ ವರ್ಗವು ಕ್ರಮವಾಗಿ 1.0 ಲಕ್ಷ, 75,000 ಮತ್ತು Rs 50,000 ರೂ. ಮೊತ್ತದ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಹೊಂದಿದೆ.

 

*****
 



(Release ID: 2036828) Visitor Counter : 13